ದೀಪಾವಳಿ ಸ್ಪೆಷಲ್- ಎಸ್‌ಯುವಿ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ
ಭಾರತೀಯ ಮಾರುಕಟ್ಟೆಯಲ್ಲಿ ಹಬ್ಬದ ಪ್ರಯುಕ್ತ ಕಾರು ಉತ್ಪಾದಕರು ಎಸ್‌ಯುವಿ ಮಾದರಿಗಳ ಮೇಲೆ ಭರ್ಜರಿ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡಿದ್ದಾರೆ.
ದೇಶಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಆಚರಣೆ ಜೋರಾಗಿದೆ. ಇದೇ ವೇಳೆ ಆಟೋ ಉದ್ಯಮದ ವ್ಯವಹಾರವು ಜೋರಾಗಿದ್ದು, ಗ್ರಾಹಕರ ತಮ್ಮ ನೆಚ್ಚಿನ ವಾಹನಗಳ ಖರೀದಿಯಲ್ಲಿ ತಲ್ಲಿಣರಾಗಿದ್ದಾರೆ. ಹೀಗಾಗಿ ಭಾರತೀಯ ಮಾರುಕಟ್ಟೆಯಲ್ಲಿ ಹಬ್ಬದ ಪ್ರಯುಕ್ತ ಕಾರು ಉತ್ಪಾದಕರು ಭರ್ಜರಿ ಡಿಸ್ಕೌಂಟ್‌ಗಳನ್ನು ಘೋಷಣೆ ಮಾಡಿದ್ದಾರೆ.

ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಸಾಧಿಸಿರುವ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಾದ ಮಹೀಂದ್ರಾ, ಫೋರ್ಡ್, ಹ್ಯುಂಡೈ , ರೆನಾಲ್ಟ್, ನಿಸ್ಸಾನ್, ಹೋಂಡಾ, ವೊಲ್ಪೋ ಸಂಸ್ಥೆಗಳು ಇದೀಗ ಗ್ರಾಹಕರಿಗೆ ವಿಶೇಷ ರಿಯಾಯ್ತಿ ದರಗಳಲ್ಲಿ ಎಸ್‌ಯುವಿ ಕಾರು ಮಾದರಿಗಳನ್ನು ಒದಗಿಸುತ್ತಿದ್ದು, ರೂ. 50 ಸಾವಿರದಿಂದ ರೂ. 8 ಲಕ್ಷದ ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ.

ಮಹೀಂದ್ರಾ ಸ್ಕಾರ್ಪಿಯೋ
ಎಸ್‌ಯುವಿ ಮಾದರಿಯಲ್ಲೇ ಸಾಕಷ್ಟು ಜನಪ್ರಿಯತೆ ಸಾಧಿಸಿರುವ ಸ್ಕಾರ್ಪಿಯೋ ಖರೀದಿ ಮೇಲೆ ಅತ್ಯುತ್ತಮ ಡಿಸ್ಕೌಂಟ್ ದರಗಳನ್ನು ಘೋಷಣೆ ಮಾಡಲಾಗಿದ್ದು, ಸ್ಕಾರ್ಪಿಯೋ ಎಲ್ಲಾ ಮಾದರಿಗಳ ಖರೀದಿ ಮೇಲೆ ರೂ.50 ಸಾವಿರ ರಿಯಾಯ್ತಿ ದೊರೆಯಲಿದೆ.

ಆಡಿ ಕ್ಯೂ3
ಐಷಾರಾಮಿ ವೈಶಿಷ್ಟ್ಯತೆಗಳ ಕ್ಯೂ3 ಸರಣಿ ಮೇಲೆ ಆಡಿ ಸಂಸ್ಥೆಯು ಕೂಡಾ ರೂ.50 ಸಾವಿರ ಡಿಸ್ಕೌಂಟ್ ಘೋಷಣೆ ಮಾಡಿದ್ದು, 2.0 -ಲೀಟರ್ ನಾಲ್ಕು ಸಿಲಿಂಡರ್‌ನ ಟರ್ಬೋ ಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದುವ ಮೂಲಕ ಬಲಿಷ್ಠ ಎಸ್‌ಯುವಿ ಎನ್ನಿಸಿಕೊಂಡಿದೆ.

ಫೋರ್ಡ್ ಇಕೋ ಸ್ಪೋರ್ಟ್
ಇಕೋ ಸ್ಪೋರ್ಟ್ ಖರೀದಿ ಮೇಲೆ 55 ಸಾವಿರ ರೂಪಾಯಿ ಡಿಸ್ಕೌಂಟ್ ಘೋಷಣೆ ಮಾಡಿರುವ ಫೋರ್ಡ್ ಸಂಸ್ಥೆಯು 10 ಸಾವಿರ ರೂಪಾಯಿ ಮೌಲ್ಯದ ಗಿಫ್ಟ್ ವೊಚರ್ ಅನ್ನು ಕೂಡಾ ನೀಡುತ್ತಿದೆ. ಹೀಗಾಗಿ ಕಾರು ಖರೀದಿಗೆ ಇದೊಂದು ಉತ್ತಮ ಅವಕಾಶ ಎನ್ನಬಹುದು.

ಮಹೀಂದ್ರಾ ಎಕ್ಸ್‌ಯುವಿ 500
ಎಸ್‌ಯುವಿಗಳಲ್ಲೇ ಅತಿಹೆಚ್ಚು ಮಾರಾಟಗೊಳ್ಳುತ್ತಿರುವ ಎಕ್ಸ್‌ಯುವಿ500 ಆವೃತ್ತಿಯು ಮಹೀಂದ್ರಾ ಸಂಸ್ಥೆಗೆ ಸಾಕಷ್ಟು ಲಾಭಾಂಶ ತಂದುಕೊಟ್ಟಿದ್ದು, ಈ ಹಿನ್ನೆಲೆ ದೀಪಾವಳಿ ಆಚರಣೆಗಾಗಿ 65 ಸಾವಿರ ರೂಪಾಯಿ ಡಿಸ್ಕೌಂಟ್ ಘೋಷಣೆ ಮಾಡಿದೆ.

ಹ್ಯುಂಡೈ ಟಕ್ಸನ್
ದೇಶದ 2ನೇ ಅತಿ ದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾದ ಹ್ಯುಂಡೈ ಸಂಸ್ಥೆಯು ಟಕ್ಸನ್ ಆವೃತ್ತಿಯ ಮೇಲೆ 70 ಸಾವಿರ ಡಿಸ್ಕೌಂಟ್ ಘೋಷಣೆ ಮಾಡಿದ್ದು, 4 ಡಬ್ಲ್ಯುಡಿ ಸೌಲಭ್ಯವನ್ನು ಹೊಂದಿರುವ ಇದರ ಬೆಲೆಯು ರೂ.21.64 ಲಕ್ಷದಿಂದ ಆರಂಭಗೊಳ್ಳುತ್ತವೆ.

ರೆನಾಲ್ಟ್ ಡಸ್ಟರ್
ಡಸ್ಟರ್ ಕಾರು ಆವೃತ್ತಿ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿರುವ ರೆನಾಲ್ಟ್ ಸಂಸ್ಥೆಯು 77 ಸಾವಿರ ರೂಪಾಯಿ ಡಿಸ್ಕೌಂಟ್ ನೀಡುತ್ತಿದೆ. ಜೊತೆಗೆ ಉಚಿತ ಕಾರು ವಿಮೆ, ಉಚಿತ ಅಕ್ಸೆಸರಿಸ್, ಕಡಿಮೆ ಬಡ್ಡಿದರ ಸಾಲಗಳನ್ನು ಒದಗಿಸುತ್ತಿದೆ.
ಓದಿರಿ-

ಮಹೀಂದ್ರಾ ನುವೊ ಸ್ಪೋರ್ಟ್
ನುವೊ ಸ್ಪೋರ್ಟ್ ಕೂಡಾ ಎಸ್‌ಯುವಿ ಪ್ರಿಯರ ಆಯ್ಕೆಯಲ್ಲಿ ಸ್ಥಾನ ಪಡೆದಿದ್ದು, ನುವೊ ಖರೀದಿದಾರರಿಗೆ ಮಹೀಂದ್ರಾ ಸಂಸ್ಥೆಯು ರೂ. 85 ಸಾವಿರ ಡಿಸ್ಕೌಂಟ್ ನೀಡುತ್ತಿದೆ. ಇದರ ಬೆಲೆಯು ಸದ್ಯ ಮಾರುಕಟ್ಟೆ ಬೆಲೆಗಳ ಪ್ರಕಾರ ರೂ 7.69 ಲಕ್ಷದಿಂದ ರೂ.10.16 ಲಕ್ಷಕ್ಕೆ ಲಭ್ಯವಿದೆ.

ನಿಸ್ಸಾನ್ ಟೆರಾನೋ
ನಿನ್ಸಾಸ್ ಉತ್ಪಾದನೆಯ ಟೆರಾನೋ ಕೂಡಾ ಇತರೆ ಎಸ್‌ಯುವಿ ಮಾದರಿಗಳಿಂತ ಉತ್ತಮ ಆಕರ್ಷಣೆ ಹೊಂದಿದ್ದು, ಟೊರಾನೋ ಆವೃತ್ತಿಯ ಖರೀದಿಯ ಮೇಲೆ "ಬಿಗೆಸ್ಟ್ ದಿವಾಲಿ ಕಾರ್ನಿವಾಲ್ " ಕಾರ್ಯಕ್ರಮದಡಿ ರೂ.87 ಸಾವಿರ ಡಿಸ್ಕೌಂಟ್ ಘೋಷಣೆ ಮಾಡಿದೆ.

ಹೋಂಡಾ ಬಿಆರ್-ವಿ
ಬಿಎರ್-ವಿ ಎಸ್‌ಯುವಿ ಮೇಲೆ ರೂ. 1 ಲಕ್ಷ ಡಿಸ್ಕೌಂಟ್ ಘೋಷಣೆ ಮಾಡುವ ಮೂಲಕ ಭಾರೀ ಪ್ರಮಾಣದ ಕಾರು ಮಾರಾಟ ಗುರಿ ಹೊಂದಿರುವ ಹೋಂಡಾ ಸಂಸ್ಥೆಯು ಇದೇ ಮೊದಲ ಬಾರಿ ಎಸ್‌ಯುವಿ ಆವೃತ್ತಿಗಳ ಮೇಲೆ ಇಷ್ಟೊಂದು ದೊಡ್ಡ ಮೊತ್ತದ ಡಿಸ್ಕೌಂಟ್ ನೀಡುತ್ತಿದೆ.

ವೊಲ್ವೋ ಎಕ್ಸ್‌ಸಿ60
ಐಷಾರಾಮಿ ಕಾರು ಆವೃತ್ತಿಯಾದ ನ್ಯೂ ಜನರೇಷನ್ ವೊಲ್ವೋ ಎಕ್ಸ್‌ಸಿ60 ಖರೀದಿ ಮೇಲೆ ಬರೋಬ್ಬರಿ 8 ಲಕ್ಷ ರೂಪಾಯಿ ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, ಉಚಿತ ಕಾರು ವಿಮೆ, ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕೂಡಾ ಸಿಗಲಿದೆ.
Trending on DriveSpark Kannada
ಪತ್ರಕರ್ತೆ ಗೌರಿ ಹತ್ಯೆಗೂ ಹೊಸ ನಂಬರ್ ಪ್ಲೇಟ್ ನಿಯಮ ಬದಲಾವಣೆಗೂ ಏನು ಸಂಬಂಧ?


Click it and Unblock the Notifications








