ಈ ವರ್ಷ ಬಿಡುಗಡೆಗೊಳ್ಳುತ್ತಿರುವ ಅತ್ಯುತ್ತಮ ಕಾರುಗಳು ಯಾವವು ಗೊತ್ತಾ?

ಭಾರತೀಯ ಮಾರುಕಟ್ಟೆಯಲ್ಲಿ ಜಿಎಸ್‌ಟಿ ಜಾರಿಯಾದ ನಂತರ ಕಾರು ಮಾರಾಟದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತಿದ್ದು, ಈ ನಡುವೆ ಪ್ರಮುಖ ಆಟೋ ಉತ್ಪಾದಕರು ತಮ್ಮ ಬಹುನೀರಿಕ್ಷಿತ ಕಾರು ಮಾದರಿಗಳನ್ನು ಪರಿಚಯಿಸಲು ಸಜ್ಜುಗೊಳ್ಳುತ್ತಿವೆ.

By Praveen

ರೆನಾಲ್ಟ್ ಕ್ಯಾಪ್ಚರ್

ಈ ವರ್ಷದ ಉತ್ಸವ ಋತುವಿನಲ್ಲಿ ರೆನಾಲ್ಟ್ ಕಾಪ್ಟರ್ ಕ್ರಾಸ್‌ಓವರ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದಲ್ಲಿ ಅನಾವರಣ ಮಾಡಲು ಸಜ್ಜಾಗಿದೆ.

ಬಿಡುಗಡೆ ದಿನಾಂಕ (ಅಂದಾಜು)- ಅಕ್ಟೋಬರ್ ಕೊನೆಯ ವಾರ

ಈ ವರ್ಷ ಬಿಡುಗಡೆಗೊಳ್ಳುತ್ತಿರುವ ಅತ್ಯುತ್ತಮ ಕಾರುಗಳು ಯಾವವು ಗೊತ್ತಾ?

ಭಾರತದಲ್ಲಿ ಡಸ್ಟರ್ ಕಾರಿಗಿಂತ ಒಂದು ಮಟ್ಟದಲ್ಲಿ ಹೆಚ್ಚು ಲೈನ್ ಅಪ್ ಹೊಂದಿರುವ ಕಾರು ಇದಾಗಿರಲಿದೆ ಮತ್ತು 1.5 ಲೀಟರ್ ಕೆ9ಕೆ ಡೀಸೆಲ್ ಎಂಜಿನ್ ಹಾಗು 1.5 ಲೀಟರ್ ಪೆಟ್ರೋಲ್ ಇಂಜಿನ್ ಅಳವಡಿಕೆಯೊಂದಿಗೆ ಬಿಡುಗಡೆಯಾಗಲಿದೆ.

ಈ ವರ್ಷ ಬಿಡುಗಡೆಗೊಳ್ಳುತ್ತಿರುವ ಅತ್ಯುತ್ತಮ ಕಾರುಗಳು ಯಾವವು ಗೊತ್ತಾ?

ಫೋರ್ ವೀಲ್ಹ್ ಡ್ರೈವಿಂಗ್ ಸೌಲಭ್ಯ ಮತ್ತು ಸ್ವಯಂಚಾಲಿತ ಗೇರ್‌ಬಾಕ್ಸ್ ಆಯ್ಕೆಗಳನ್ನು ಈ ಕಾರು ಪಡೆದುಕೊಳ್ಳಲಿದೆ ಎಂಬ ಉಹಾಪೋಹವಿದ್ದು, ಹೊಸ ಕಾರುಗಳ ಬೆಲೆಗಳು ರೂ.13 ರಿಂದ ರೂ. 16 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Recommended Video

2017 Mercedes New GLA India Launch Kannada - DriveSpark ಕನ್ನಡ
ಈ ವರ್ಷ ಬಿಡುಗಡೆಗೊಳ್ಳುತ್ತಿರುವ ಅತ್ಯುತ್ತಮ ಕಾರುಗಳು ಯಾವವು ಗೊತ್ತಾ?

ಫೋರ್ಡ್ ಇಕೋ ಸ್ಪೋರ್ಟ್ ಫೇಸ್‌ಲಿಫ್ಟ್

2016ರಲ್ಲಿ ಲಾಸ್ ಏಂಜಲೀಸ್‌ ಆಟೋ ಮೇಳದಲ್ಲಿ ಪ್ರದರ್ಶನಗೊಳ್ಳುವ ಮೂಲಕ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಫೋರ್ಡ್ ಇಕೋ ಸ್ಪೋರ್ಟ್ ಫೇಸ್‌ಲಿಫ್ಟ್ ಆವೃತ್ತಿಯು ಇದೀಗ ಗ್ರಾಹಕರ ಕೈ ಸೇರುತ್ತಿದ್ದು, ಉತ್ಸವ ದಿನಗಳಲ್ಲಿ ಬಿಡುಗಡೆಗೊಳ್ಳುವುದು ಖಚಿತವಾಗಿದೆ.

ಈ ವರ್ಷ ಬಿಡುಗಡೆಗೊಳ್ಳುತ್ತಿರುವ ಅತ್ಯುತ್ತಮ ಕಾರುಗಳು ಯಾವವು ಗೊತ್ತಾ?

ಎಂಜಿನ್

ಪೆಟ್ರೋಲ್ ಮತ್ತು ಡೀಸೆಲ್ ಎರಡು ಆವೃತ್ತಿಯಲ್ಲೂ ಲಭ್ಯವಿರಲಿರುವ ಇಕೋ ಸ್ಪೋರ್ಟ್ ಫೇಸ್‌ಲಿಫ್ಟ್, ಡೀಸೆಲ್ ಮಾದರಿಯಲ್ಲಿ 1.5-ಲೀಟರ್ ಎಂಜಿನ್ ಮತ್ತು ಪೆಟ್ರೋಲ್ ಮಾದರಿಯಲ್ಲಿ 1.5-ಲೀಟರ್ ಎಂಜಿನ್‌ನೊಂದಿಗೆ ಅಭಿವೃದ್ಧಿ ಹೊಂದಿವೆ.

ಈ ವರ್ಷ ಬಿಡುಗಡೆಗೊಳ್ಳುತ್ತಿರುವ ಅತ್ಯುತ್ತಮ ಕಾರುಗಳು ಯಾವವು ಗೊತ್ತಾ?

ಸ್ಪೋರ್ಟ್ ಕಂಪ್ಯಾಕ್ಟ್ ಎಸ್‌ಯುವಿ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಫೋರ್ಡ್ ಇಕೋ ಸ್ಪೋರ್ಟ್ ಫೇಸ್‌ಲಿಫ್ಟ್ ಆವೃತ್ತಿಯು ಮಾರುತಿ ಸುಜುಕಿ ವಿಟಾರಾ ಬ್ರೇಝಾ ಆವೃತ್ತಿಯ ಪ್ರತಿಸ್ಪರ್ಧಿಯಾಗಿದ್ದು, ಬೆಲೆಗಳು 6ರಿಂದ 9 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಹೆಚ್ಚು ಓದಿದ ಸುದ್ದಿ-

ಈ ವರ್ಷ ಬಿಡುಗಡೆಗೊಳ್ಳುತ್ತಿರುವ ಅತ್ಯುತ್ತಮ ಕಾರುಗಳು ಯಾವವು ಗೊತ್ತಾ?

ಮಹೀಂದ್ರಾ ಸ್ಕಾರ್ಪಿಯೋ ಫೇಸ್‌ಲಿಫ್ಟ್

2014 ಪ್ರಥಮ ಬಾರಿಗೆ ಎಸ್‌ಯುವಿ ಮಾದರಿಯನ್ನು ಬಿಡುಗಡೆಗೊಳಿಸಿದ್ದ ಮಹೀಂದ್ರಾ ಸಂಸ್ಥೆಯು, ಸ್ಕಾರ್ಪಿಯೋ ಆವೃತ್ತಿಯ ಮೂಲಕ ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಭರವಸೆ ಹುಟ್ಟುಹಾಕಿತ್ತು.

ಈ ವರ್ಷ ಬಿಡುಗಡೆಗೊಳ್ಳುತ್ತಿರುವ ಅತ್ಯುತ್ತಮ ಕಾರುಗಳು ಯಾವವು ಗೊತ್ತಾ?

ಪ್ರಸ್ತುತ ಗ್ರಾಹಕರ ಬೇಡಿಕೆಗಳಿಗೆ ಅನುಗುಣವಾಗಿ ಹೊಸ ಮಾದರಿಯನ್ನು ಅಭಿವೃದ್ಧಿ ಮಾಡಲಾಗಿದ್ದು, ಹೊರ ಭಾಗ ನೋಟದಲ್ಲಿ ವಿಶೇಷ ವಿನ್ಯಾಸಗಳನ್ನು ಸೇರಿಸಲಾಗಿದೆ. ಜೊತೆಗೆ ಸ್ಕಾರ್ಪಿಯೋ ಫೇಸ್‌ಲಿಫ್ಟ್ ಮಾದರಿ ಕೂಡಾ 2.2-ಲೀಟರ್ ಎಂ-ಹಾಕ್ ಡೀಸೆಲ್ ಎಂಜಿನ್ ಹೊಂದಿದ್ದು, ಜೊತೆಗೆ 138-ಬಿಎಚ್‌ಪಿ ಉತ್ಪಾದನಾ ಶಕ್ತಿ ಪಡೆದುಕೊಂಡಿದೆ.

ಬಿಡುಗಡೆಯ ದಿನಾಂಕ (ಅಂದಾಜು)- ಜನವರಿ 2018

ಬೆಲೆ(ಅಂದಾಜು) - ರೂ.11 ರಿಂದ ರೂ. 15 ಲಕ್ಷ

ಈ ವರ್ಷ ಬಿಡುಗಡೆಗೊಳ್ಳುತ್ತಿರುವ ಅತ್ಯುತ್ತಮ ಕಾರುಗಳು ಯಾವವು ಗೊತ್ತಾ?

ಮಹೀಂದ್ರಾ ಎಕ್ಸ್‌ಯುವಿ 500 ಫೇಸ್‌ಲಿಫ್ಟ್

ಭಾರತೀಯ ಆಟೋ ವಲಯದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಹಿನ್ನೆಲೆ ತನ್ನದೇ ಛಾಪು ಮೂಡಿಸಿರುವ ಮಹೀಂದ್ರಾ ಎಕ್ಸ್‌ಯುವಿ 500 ಫೇಸ್‌ಲಿಫ್ಟ್ ಕಾರು ಆವೃತ್ತಿಯು ಪ್ರಸ್ತುತ ಬೇಡಿಕೆಗೆ ಅನುಗುಣವಾಗಿ ಪವರ್ ಫುಲ್ ಎಂಜಿನ್ ಸೌಲಭ್ಯವನ್ನು ಪಡೆದುಕೊಂಡಿದೆ.

ಈ ವರ್ಷ ಬಿಡುಗಡೆಗೊಳ್ಳುತ್ತಿರುವ ಅತ್ಯುತ್ತಮ ಕಾರುಗಳು ಯಾವವು ಗೊತ್ತಾ?

ಹೀಗಾಗಿ ಭಾರೀ ನೀರಿಕ್ಷೆ ಹುಟ್ಟುಹಾಕಿರುವ ಎಕ್ಸ್‌ಯುವಿ 500 ಫೇಸ್‌ಲಿಫ್ಟ್ ಕಾರು ಮಾದರಿಯೂ 2.2-ಲೀಟರ್ ಟರ್ಬೋಚಾರ್ಜ್ಡ್ ಎಂ-ಹೋಕ್ ಡೀಸೆಲ್ ಎಂಜಿನ್ ಹೊಂದಿದೆ.

ಬೆಲೆ (ಅಂದಾಜು)- ರೂ.12 ರಿಂದ ರೂ.16 ಲಕ್ಷ

ಬಿಡುಗಡೆಯ ದಿನಾಂಕ- (ಅಂದಾಜು) ಜನವರಿ 2018

ಈ ವರ್ಷ ಬಿಡುಗಡೆಗೊಳ್ಳುತ್ತಿರುವ ಅತ್ಯುತ್ತಮ ಕಾರುಗಳು ಯಾವವು ಗೊತ್ತಾ?

ಮಾರುತಿ ಸುಜುಕಿ ಸ್ವಿಫ್ಟ್ ಸ್ಪೋರ್ಟ್

ಸ್ಪೋರ್ಟ್ ಕಾರು ಆವೃತ್ತಿಗಳಲ್ಲಿ ಭಾರೀ ಸಂಚಲನ ಮೂಡಿಸಿರುವ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯು ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಹ್ಯುಂಡೈ ಐ30 ಆವೃತ್ತಿಗೆ ತೀವ್ರ ಪೈಪೋಟಿ ನೀಡುವ ತವಕದಲ್ಲಿದೆ.

ಈ ವರ್ಷ ಬಿಡುಗಡೆಗೊಳ್ಳುತ್ತಿರುವ ಅತ್ಯುತ್ತಮ ಕಾರುಗಳು ಯಾವವು ಗೊತ್ತಾ?

ಈಗಾಗಲೇ ಮುಂದುವರಿದ ಕೆಲವು ರಾಷ್ಟ್ರಗಳಲ್ಲಿ ಬಿಡುಗಡೆಯಾಗಿ ಭರ್ಜರಿಯಾಗಿ ಮಾರಾಟಗೊಳ್ಳುತ್ತಿರುವ ಸುಜುಕಿ ಸ್ವಿಫ್ಟ್ ಸ್ಪೋರ್ಟ್ ಆವೃತ್ತಿಯು 2018ರ ಜನವರಿಯಲ್ಲಿ ಭಾರತದಲ್ಲೂ ಬಿಡುಗಡೆಯಾಗುತ್ತಿದ್ದು, ಕಾರು ರೇಸ್ ಪ್ರಿಯರ ಗಮನ ಸೆಳೆಯುತ್ತಿದೆ.

ಈ ವರ್ಷ ಬಿಡುಗಡೆಗೊಳ್ಳುತ್ತಿರುವ ಅತ್ಯುತ್ತಮ ಕಾರುಗಳು ಯಾವವು ಗೊತ್ತಾ?

ಹ್ಯುಂಡೈ ಐ20 ಫೇಸ್‌ಲಿಫ್ಟ್

ಹ್ಯಾಚ್‌ಬ್ಯಾಕ್ ವೈಶಿಷ್ಟ್ಯತೆಗಳೊಂದಿಗೆ ಭಾರೀ ಸದ್ದು ಮಾಡುತ್ತಿರುವ ಹ್ಯುಂಡೈ ಐ20 ಫೇಸ್‌ಲಿಫ್ಟ್ ಕಾರು ಸದ್ಯ ಮಾರುಕಟ್ಟೆಯಲ್ಲಿ ಅತಿಹೆಚ್ಚು ಸದ್ದು ಮಾಡುತ್ತಿದ್ದು, ಗ್ರಿಲ್ ಡಿಸೈನ್ ವಿಭಾಗದಲ್ಲಿ ಗಮನಸೆಳೆಯುತ್ತಿದೆ.

ಈ ವರ್ಷ ಬಿಡುಗಡೆಗೊಳ್ಳುತ್ತಿರುವ ಅತ್ಯುತ್ತಮ ಕಾರುಗಳು ಯಾವವು ಗೊತ್ತಾ?

1.0-ಲೀಟರ್ ಟರ್ಬೋ ಚಾರ್ಜ್ಡ್ ಎಂಜಿನ್ ಕೂಡಾ ಹೊಂದಿದ್ದು, 2018 ರ ಮೊದಲ ತ್ರೈಮಾಸಿಕ ವೇಳೆಗೆ ಖರೀದಿಗೆ ಲಭ್ಯವಿರಲಿದ್ದು, ರೂ.5.5 ಲಕ್ಷದಿಂದ ರೂ.9 ಲಕ್ಷದವರಿಗೆ ಇರಬಹುದೆಂದು ಅಂದಾಜಿಸಲಾಗಿದೆ.

Trending On DriveSpark Kannada:

ಸಂಚಾರಿ ನಿಯಮ ಉಲ್ಲಂಘನೆ- ಬೈಕ್ ಸವಾರನಿಗೆ ನಮಸ್ಕರಿಸಿದ ಸರ್ಕಲ್ ಇನ್ಸ್‌ಪೆಕ್ಟರ್

Most Read Articles

Kannada
Read more on ಟಾಪ್ 10 top 10
English summary
Read in Kannada about Upcoming Car Launches In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X