ಸಂಚಾರಿ ನಿಯಮ ಉಲ್ಲಂಘನೆ- ಬೈಕ್ ಸವಾರನಿಗೆ ನಮಸ್ಕರಿಸಿದ ಸರ್ಕಲ್ ಇನ್ಸ್‌ಪೆಕ್ಟರ್

Written By:

ಮೊನ್ನೆಯಷ್ಟೇ ಬೈಕ್ ಸವಾರನೊಬ್ಬ ಸ್ವಪರಿವಾರ ಕುಟುಂಬ ಸಮೇತರಾಗಿ ಬೈಕ್ ನಲ್ಲಿ ಸವಾರಿ ಹೋಗುತ್ತಿದ್ದುದ್ದನ್ನು ಕಂಡ ಸರ್ಕಲ್ ಇನ್ಸ್ ಪೆಕ್ಟರ್ ಒಬ್ಬರು ಬೈಕ್ ಸವಾರನ ಕಾರ್ಯಕ್ಕೆ ನಮಸ್ಕರಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸಂಚಾರಿ ನಿಯಮ ಉಲ್ಲಂಘನೆ- ಬೈಕ್ ಸವಾರನಿಗೆ ನಮಸ್ಕರಿಸಿದ ಪೊಲೀಸ್

ಅಂದಹಾಗೆ ಇದೆಲ್ಲಾ ನಡೆದಿರುವುದು ಆಂಧ್ರಪ್ರದೇಶದ ಆನಂತಪುರ ಜಿಲ್ಲೆಯ ಮಡಕಶಿರ ಸರ್ಕಲ್ ನಲ್ಲಿ. ಕಳೆದ 2 ದಿನಗಳ ಹಿಂದೆ ಬೈಕ್ ಸವಾರನೊಬ್ಬ ಹೆಲ್ಮೆಟ್ ಹಾಕದೆ ನಾಲ್ಪರೊಂದಿಗೆ ಬೈಕ್ ನಲ್ಲಿ ಪ್ರಯಾಣಿಸುತ್ತಿರುವುದನ್ನು ತಡೆದ ಸರ್ಕಲ್ ಇನ್ಸ್ ಪೆಕ್ಟರ್ ಬಿ ಶುಭಾ ಕುಮಾರ್ ಅವರು, ನಿನ್ನ ಕಾರ್ಯಕ್ಕೆ ನನ್ನ ದೊಡ್ಡ ನಮಸ್ಕಾರ ಎಂದು ಹೇಳಿದ್ದು ಈ ಫೋಟೋ ಇದೀಗ ವೈರಲ್ ಆಗಿದೆ.

ಸಂಚಾರಿ ನಿಯಮ ಉಲ್ಲಂಘನೆ- ಬೈಕ್ ಸವಾರನಿಗೆ ನಮಸ್ಕರಿಸಿದ ಪೊಲೀಸ್

ಇದಲ್ಲದೇ ಸಂಚಾರಿ ನಿಮಯ ಉಲ್ಲಂಘಿಸಿದ್ದ ಈ ಬೈಕ್ ಸವಾರ ತನ್ನ ಇಬ್ಬರು ಮಕ್ಕಳನ್ನು ಪೆಟ್ರೋಲ್ ಟ್ಯಾಂಕ್ ಮೇಲೆ ಕೂರಿಸಿದ್ದ ಹಾಗೂ ತನ್ನ ಹೆಂಡಿಯನ್ನು ಬೈಕ್ ಹಿಂಬದಿ ಕೂರಿಸಿದ್ದು ಇವರಿಬ್ಬರ ಮಧ್ಯೆ ಬಾಲಕಿಯೊಬ್ಬಳನ್ನು ಕೂರಿಸಿದ್ದು ಒಟ್ಟಾರೆ ಒಂದು ಬೈಕ್ ನಲ್ಲಿ ಐವರು ಪ್ರಯಾಣಿಸುತ್ತಿದ್ದರು.

Recommended Video - Watch Now!
TVS Wego Diwali Ride |
ಸಂಚಾರಿ ನಿಯಮ ಉಲ್ಲಂಘನೆ- ಬೈಕ್ ಸವಾರನಿಗೆ ನಮಸ್ಕರಿಸಿದ ಪೊಲೀಸ್

ಆಗ ಬೈಕ್ ತಡೆದ ಶುಭಾ ಕುಮಾರ್ ಅವರು ಸುರಕ್ಷತೆ ಬಗ್ಗೆ ಯಾವುದೇ ಪರಿವೇ ಇಲ್ಲದೆ ಈ ರೀತಿ ಪ್ರಯಾಣ ಮಾಡುತ್ತಿರುವುದು ಅಪಾಯದ ಸಂಕೇತ ಇನ್ನು ಮುಂದಾದರೂ ಸಂಚಾರಿ ನಿಮಯ ಪಾಲಿಸಿವಂತೆ ಬುದ್ದಿ ಮಾತು ಹೇಳಿದ್ದಾರೆ.

ಸಂಚಾರಿ ನಿಯಮ ಉಲ್ಲಂಘನೆ- ಬೈಕ್ ಸವಾರನಿಗೆ ನಮಸ್ಕರಿಸಿದ ಪೊಲೀಸ್

ಇನ್ನೊಂದು ವಿಪರ್ಯಾಸ ಎಂದರೇ ಈ ಘಟನೆಗೂ ಮುನ್ನ ಬೈಕ್ ಸವಾರ ಅದಾಗಲೇ ಒಂದೂವರೆ ಗಂಟೆಗಳ ಕಾಲ ಸಂಚಾರಿ ಸುರಕ್ಷತೆ ಬಗ್ಗೆ ಸೆಮಿನಾರ್ ನಲ್ಲಿ ಭಾಗವಹಿಸಿ ನಂತರ ಐವರನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋಗಿದ್ದಾನೆ ಎನ್ನಲಾಗಿದೆ.

ಸಂಚಾರಿ ನಿಯಮ ಉಲ್ಲಂಘನೆ- ಬೈಕ್ ಸವಾರನಿಗೆ ನಮಸ್ಕರಿಸಿದ ಪೊಲೀಸ್

ಇನ್ನು ಪದೇ ಪದೇ ಸಂಚಾರಿ ನಿಯಮ ಉಲ್ಲಂಘನೆ ಮಾಡುತ್ತಿದ್ದ ಬೈಕ್ ಸವಾರನಿಗೆ ಇದಕ್ಕೂ ಮೊದಲೇ ಪೊಲೀಸರು ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಆದರು ಬೈಕ್ ಸವಾರ ಮಾತ್ರ ಎಚ್ಚೆತ್ತುಕೊಂಡಿಲ್ಲ ಎನ್ನಲಾಗಿದೆ.

English summary
Read in Kannada: Police officer frustrated due to careless riding.
Story first published: Wednesday, October 11, 2017, 11:35 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark