'ಪ್ರಿಯಸ್' ಹೆಸರಿಗಾಗಿ ನಡೆದ ಕಾನೂನು ಹೋರಾಟದಲ್ಲಿ ಮುಗ್ಗರಿಸಿದ ಟೊಯೊಟಾ

ಟೊಯೊಟಾ ನಿರ್ಮಾಣದ ಹೈಬ್ರಿಡ್ ಕಾರು ಮಾದರಿಯಾದ ಪ್ರಿಯಸ್ ಕಾರು ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗಳಲ್ಲಿ ಹೊಸ ಅಧ್ಯಾಯ ಶುರುಮಾಡುವ ತವಕದಲ್ಲಿತ್ತು.ಆದ್ರೆ ಪ್ರಿಯಸ್ ಹೆಸರಿಗಾಗಿ ನಡೆದ ಕಾನೂನು ಹೋರಾಟದಲ್ಲಿ ಟೊಯೊಟಾ ಹಿನ್ನಡೆ ಅನುಭವಿಸಿದೆ.

By Praveen

ಟೊಯೊಟಾ ನಿರ್ಮಾಣದ ಹೈಬ್ರಿಡ್ ಕಾರು ಮಾದರಿಯಾದ ಪ್ರಿಯಸ್ ಕಾರು ಮುಂಬರುವ ದಿನಗಳಲ್ಲಿ ಭಾರತೀಯ ಮಾರುಕಟ್ಟೆಗಳಲ್ಲಿ ಹೊಸ ಅಧ್ಯಾಯ ಶುರುಮಾಡುವ ತವಕದಲ್ಲಿತ್ತು. ಆದ್ರೆ ಪ್ರಿಯಸ್ ಹೆಸರಿಗಾಗಿ ನಡೆದ ಕಾನೂನು ಹೋರಾಟದಲ್ಲಿ ಟೊಯೊಟಾ ಹಿನ್ನಡೆ ಅನುಭವಿಸಿದೆ.

'ಪ್ರಿಯಸ್' ಹೆಸರಿಗಾಗಿ ನಡೆದ ಕಾನೂನು ಹೋರಾಟದಲ್ಲಿ ಮುಗ್ಗರಿಸಿದ ಟೊಯೊಟಾ

ಈ ಹಿಂದೆ ಯುರೋಪ್ ಮಾರುಕಟ್ಟೆಗಳಲ್ಲಿ ಪ್ರಿಯಸ್ ಹೈಬ್ರಿಡ್ ಕಾರುಗಳ ಮಾರಾಟದಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ಟೊಯೊಟಾ ಸಂಸ್ಥೆಯು ಅದೇ ಮಾದರಿಯನ್ನು ಭಾರತದಲ್ಲೂ ಬಿಡುಗಡೆಗೊಳಿಸಲು ಎದರು ನೋಡುತ್ತಿದೆ. ಆದ್ರೆ ಪ್ರಿಯಸ್ ಟ್ರೇಡ್ ಮಾರ್ಕ್‌ಗಾಗಿ ನಡೆದ ಕಾನೂನು ಹೋರಾಟದಲ್ಲಿ ಹಿನ್ನಡೆ ಕಂಡಿದ್ದು, ಅನಿವಾರ್ಯವಾಗಿ ಪ್ರಿಯಸ್ ಹೆಸರು ಕೈ ಬಿಡಬೇಕಾದ ಪರಿಸ್ಥಿತಿ ಎದುರಾಗಿದೆ.

'ಪ್ರಿಯಸ್' ಹೆಸರಿಗಾಗಿ ನಡೆದ ಕಾನೂನು ಹೋರಾಟದಲ್ಲಿ ಮುಗ್ಗರಿಸಿದ ಟೊಯೊಟಾ

ಇದಕ್ಕೆ ಕಾರಣ ಹರಿಯಾಣ ಮೂಲದ 'ಪ್ರಿಯಸ್ ಆಟೋ ಇಂಡಸ್ಟ್ರಿ ಆ್ಯಂಡ್ ಆರ್ಗನೈಷನ್' ಎಂಬ ಸಂಸ್ಥೆ ಈಗಾಗಲೇ ಚಾಲ್ತಿಯಲ್ಲಿದ್ದು, ಟೊಯೊಟಾ ಬಿಡುಗಡೆಗೊಳಿಸುತ್ತಿರುವ ಪ್ರಿಯಸ್ ಕಾರಿನ ಹೆಸರನ್ನು ಕೈಬಿಡುವಂತೆ ಉನ್ನತ ನ್ಯಾಯಾಲಯದ ಮೊರೆ ಹೋಗಿತ್ತು.

Recommended Video

Honda CR-V Crashes Into A Wall
'ಪ್ರಿಯಸ್' ಹೆಸರಿಗಾಗಿ ನಡೆದ ಕಾನೂನು ಹೋರಾಟದಲ್ಲಿ ಮುಗ್ಗರಿಸಿದ ಟೊಯೊಟಾ

ಪ್ರಕರಣ ಹಿನ್ನೆಲೆಯನ್ನು ವಿಚಾರಣೆ ನಡೆಸಿದ ಸುಪ್ರಿಂಕೋರ್ಟ್, 'ಪ್ರಿಯಸ್ ಟ್ರೇಡ್ ಮಾರ್ಕ್ 2001ರಲ್ಲೇ ಭಾರತದಲ್ಲಿ ನೋಂದಣಿಯಾಗಿದ್ದು ಮುಂಬರುವ ದಿನಗಳಲ್ಲಿ ಟೊಯೊಟಾ ಇಂಡಿಯಾ ಸಂಸ್ಥೆಯು ಪ್ರಿಯಸ್ ಹೆಸರನ್ನು ಯಾವುದೇ ಕಾರಣಕ್ಕೂ ಬಳಸುವಂತಿಲ್ಲ' ಎಂಬ ತೀರ್ಪು ನೀಡಿದೆ.

'ಪ್ರಿಯಸ್' ಹೆಸರಿಗಾಗಿ ನಡೆದ ಕಾನೂನು ಹೋರಾಟದಲ್ಲಿ ಮುಗ್ಗರಿಸಿದ ಟೊಯೊಟಾ

ಹೀಗಾಗಿ ಭಾರತದಲ್ಲಿ ಬಿಡುಗಡೆಯಾಗಬೇಕಿರುವ ಪ್ರಿಯಸ್ ಕಾರು ಹೊಸ ಹೆಸರಿನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಗಳಿದ್ದು, ಹೊಸ ವಿವಾದದಿಂದ ಹೊಸ ಕಾರು ಮಾರಾಟಕ್ಕೆ ಸ್ವಲ್ಪಮಟ್ಟಿಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.

'ಪ್ರಿಯಸ್' ಹೆಸರಿಗಾಗಿ ನಡೆದ ಕಾನೂನು ಹೋರಾಟದಲ್ಲಿ ಮುಗ್ಗರಿಸಿದ ಟೊಯೊಟಾ

ಇನ್ನು ಪ್ರಿಯಸ್ ಹೆಸರನ್ನು ಅಂತಾರಾಷ್ಟ್ರೀಯ ಆಟೋ ಮಾರುಕಟ್ಟೆಗಳಲ್ಲಿ 1990ರಲ್ಲೇ ನೋಂದಣಿ ಮಾಡಿದ್ದ ಟೊಯೊಟಾ ಸಂಸ್ಥೆಯು ಭಾರತದಲ್ಲಿ 2009ರಲ್ಲಿ ನೋಂದಣಿ ಮಾಡಿತ್ತು. ಆದ್ರೆ ಅದಕ್ಕೂ ಮೊದಲೇ ಪ್ರಿಯಸ್ ಹೆಸರಿನ ಆಟೋ ಇಂಡಸ್ಟ್ರಿ ಆ್ಯಂಡ್ ಆರ್ಗನೈಷನ್ ಕಾರ್ಯನಿರ್ವಹಣೆಯಲ್ಲಿರುವುದು ಹಿನ್ನಡೆಗೆ ಕಾರಣವಾಗಿದೆ.

ತಪ್ಪದೇ ಓದಿ-ಮೊದಲನೇ ಗೇರ್ ಹಾಕಿ ಕಾರನ್ನು ಪಾರ್ಕ್ ಮಾಡುವವರು ಈ ಲೇಖನವನ್ನು ತಪ್ಪದೆ ಓದಿ !!

'ಪ್ರಿಯಸ್' ಹೆಸರಿಗಾಗಿ ನಡೆದ ಕಾನೂನು ಹೋರಾಟದಲ್ಲಿ ಮುಗ್ಗರಿಸಿದ ಟೊಯೊಟಾ

ಇನ್ನು ಪ್ರಿಯಸ್ ಕಾರಿನ ಬಗ್ಗೆ ಹೇಳುವುದಾರರೇ ಆಕ್ರಣಮಕಾರಿ ಆಕಾರ ಹೊಂದಿರುವ ಪ್ರಿಯಸ್ ಹೈಬ್ರಿಡ್ ಎಂಜಿನ್ ಹೊಂದಿದ್ದು, 1.8-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್‌ನೊಂದಿಗೆ ವಿದ್ಯುತ್ ಚಾಲಿತ ಮೋಟಾರ್ ಹೊಂದಿದಲಿದೆ.

'ಪ್ರಿಯಸ್' ಹೆಸರಿಗಾಗಿ ನಡೆದ ಕಾನೂನು ಹೋರಾಟದಲ್ಲಿ ಮುಗ್ಗರಿಸಿದ ಟೊಯೊಟಾ

ಜೊತೆಗೆ ಟೊಯೊಟಾ ಪ್ರಿಯಸ್ 132ಬಿಎಚ್‌ಪಿ ಉತ್ಪಾದನಾ ಶಕ್ತಿಯನ್ನು ಪಡೆದುಕೊಂಡಿದ್ದು, ಸಿವಿಟಿ ಗೇರ್‌ಬಾಕ್ಸ್ ಹೊಂದಿರುವ ಈ ಕಾರು ಪ್ರತಿ ಲೀಟರ್‌ಗೆ 26.27ಕಿಮಿ ಮೈಲೇಜ್ ನೀಡುತ್ತದೆ.

'ಪ್ರಿಯಸ್' ಹೆಸರಿಗಾಗಿ ನಡೆದ ಕಾನೂನು ಹೋರಾಟದಲ್ಲಿ ಮುಗ್ಗರಿಸಿದ ಟೊಯೊಟಾ

ನಾಲ್ಕನೇ ತಲೆಮಾರಿನ ವೈಶಿಷ್ಟ್ಯತೆಗಳನ್ನು ಹೊಂದಿರುವ ಹೈಬ್ರಿಡ್ ಪ್ರಿಯಸ್ ಕಾರಿನ ಬೆಲೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 38.96 ಲಕ್ಷಕ್ಕೆ ಲಭ್ಯವಿದ್ದು, ಭಾರತದಲ್ಲಿ Z8 ಮಾದರಿ ಮಾತ್ರ ಲಭ್ಯವಿದೆ.

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
Read more on toyota ಟೊಯೊಟಾ
English summary
Toyota 'Prius' Name Cannot Be Used In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X