ಮೊಟ್ಟ ಮೊದಲ 'ಉಬರ್ ಸೆಂಟ್ರಲ್' ಸೇವೆ ಆರಂಭಿಸಿದ ಉಬರ್ ಸಂಸ್ಥೆ
ಉಬರ್ ಕಂಪನಿ ತನ್ನ 'ಉಬರ್ ಫಾರ್ ಬಿಸಿನೆಸ್' ವೇದಿಕೆಯಡಿಯಲ್ಲಿ ಹೊಸ ಸೇವೆಯೊಂದನ್ನು ಬಿಡುಗಡೆಗೊಳಿಸಿದೆ.
'ಉಬರ್ ಫಾರ್ ಬಿಸಿನೆಸ್' ವೇದಿಕೆಯ ಭಾಗವಾಗಿ ಹೊಚ್ಚ ಹೊಸ ಸೇವೆಯನ್ನು ಪ್ರಪಂಚದ ಕ್ಯಾಬ್ ಸೇವೆ ದೈತ್ಯ ಉಬರ್ ಕಂಪನಿ ಬಿಡುಗಡೆಗೊಳಿಸಿದ್ದು, ಇದರಿಂದಾಗಿ ಕಂಪನಿಗಳಿಗೆ ಕ್ಯಾಬ್‌ಗಳನ್ನು ತನ್ನ ಗ್ರಾಹಕರಿಗೆ, ಅತಿಥಿಗಳಿಗೆ ಮತ್ತು ಬಾಡಿಗೆಗೆ ನೀಡಬಹುದಾಗಿದೆ.

ಉಬರ್ ತನ್ನ ಉಬರ್ ಫಾರ್ ಬಿಸಿನೆಸ್ (U4B) ಪ್ಲ್ಯಾಟ್‌ಫಾರಂ ಅಡಿಯಲ್ಲಿ 'ಉಬರ್ ಸೆಂಟ್ರಲ್' ಎಂಬ ಹೊಸ ಸೇವೆಯನ್ನು ಭಾರತದಲ್ಲಿ ಆರಂಭಿಸಿದ್ದು, ಇದರಿಂದಾಗಿ ಪಟ್ಟಿ ಮಾಡಲಾದ ಸೇವೆಗಳನ್ನು ತಮ್ಮ ಗ್ರಾಹಕರಿಗೆ ಮತ್ತು ಅತಿಥಿಗಳಿಗೆ ನೀಡಲಿದೆ.

ಉದಾಹರಣೆಗೆ, ಸಾಮಾನ್ಯವಾಗಿ ಐಷಾರಾಮಿ ಹೋಟೆಲ್‌ಗಳು ಹತ್ತಿರದ ವಿಮಾನ ನಿಲ್ದಾಣಕ್ಕೆ ತಮ್ಮ ಗ್ರಾಹಕರಿಗೆ ಉಚಿತ ಡ್ರಾಪ್ ಅಥವಾ ಪಿಕ್ಅಪ್ ಮಾಡುತ್ತವೆ.

ಈ ಡ್ರಾಪ್ ಅಥವಾ ಪಿಕ್ಅಪ್ ಸೇವೆಗೆ ಸಂಬಂಧಿಸಿದಂತೆ, ಹೋಟೆಲ್ ತನ್ನದೇ ತಂಡ ಒಂದನ್ನು ನೇಮಿಸಬೇಕಾದ ಅವಶ್ಯಕತೆ ಇರುತ್ತದೆ.

ಆದರೆ ಈ ಕಾರ್ಯನ್ನು ಹೋಟೆಲ್‌ಗಳು ಇನ್ನು ಮುಂದೆ ಮಾಡಬೇಕಾದ ಅನಿವಾರ್ಯತೆ ಇರುವುದಿಲ್ಲ, ಏಕೆ ಗೊತ್ತೇ ? ಉಬೆರ್ ಇಂತಹ ಸೇವೆ ಒದಗಿಸಲು ವಿಶೇಷ 'ಉಬರ್ ಸೆಂಟ್ರಲ್' ಸೇವೆಯನ್ನು ಬಿಡುಗಡಗೊಳಿಸಿದ್ದು, ಉಬರ್ ಸಂಸ್ಥೆ ಹೋಟೆಲ್ ಮತ್ತಿತರ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ.

ಈ ಸೇವೆಯಿಂದಾಗಿ ಹೋಟೆಲ್ ಉದ್ದಿಮೆಗೆ, ದೊಡ್ಡ ಸಂಘ ಸಂಸ್ಥೆಗಳಿಗೆ ಮತ್ತಿತರ ಕಂಪನಿಗಳಿಗೆ ಹೆಚ್ಚಿನ ಮಟ್ಟದ ಸಹಾಯವಾಗಲಿದ್ದು, ಇದರಿಂದಾಗಿ ಬಹಳಷ್ಟು ಹಣ ಉಳಿತಾಯವಾಗಲಿದೆ.

ಒಂದೇ ಬಾರಿಗೆ ಹಲವು ಪ್ರಯಾಣಗಳನ್ನು ಬುಕ್ಕಿಂಗ್ ಮಾಡಬಹುದಾಗಿದ್ದು, ಈ ರೀತಿಯ ಸೇವೆ ಕ್ಯಾಬ್ ಉದ್ದಿಮೆಯಲ್ಲಿಯೇ ಮೊದಲ ಬಾರಿಗೆ ಎನ್ನಲಾಗಿದೆ.

ಈ ಸೇವೆ, ಒಂದೇ ಸಮಯದಲ್ಲಿ ಹಲವಾರು ಪ್ರವಾಸಗಳನ್ನು ನಿರ್ವಹಿಸಲು ಅನುಮತಿಸುತ್ತಿದ್ದು, ಈ ಎಲ್ಲಾ ಅನುಮತಿಗಳನ್ನೂ ಒಂದೇ ಡ್ಯಾಶ್‍ಬೋರ್ಡ್ ಮೂಲಕ ಕಾರ್ಯಗತಗೊಳಿಸಲಾಗುವುದು.

ಒಬ್ಬ ನಿಯಂತ್ರಕ ತನ್ನ ಎಲ್ಲಾ ಗ್ರಾಹಕರು ಅಥವಾ ಅತಿಥಿಗಳ ಸಂಪೂರ್ಣ ವಿವರಗಳನ್ನು ಒಂದೇ ಬಾರಿ ನಮೂದಿಸಿ, ಪಿಕ್ಅಪ್ ಮತ್ತು ಡ್ರಾಪ್ ತಿಳಿಸಿದರೆ ಕೆಲಸ ಮುಗಿದಂತೆ. ಉಬೆರ್ ಸೆಂಟ್ರಲ್ ಡ್ಯಾಶ್‌ಬೋರ್ಡ್ ಪ್ರತಿಯೊಂದನ್ನೂ ಕೂಲಂಕುಷವಾಗಿ ಗಮನಿಸಿ ಪ್ರಯಾಣ ನಿಗದಿಪಡಿಸಿದೆ.

ಒಮ್ಮೆ ಕ್ಯಾಬ್ ಬುಕ್ ಆದ ನಂತರ ಆಪರೇಟರ್ ಕೂಡ ವಾಹನವನ್ನು ಟ್ರ್ಯಾಕ್ ಮಾಡಬಹುದಾಗಿದ್ದು, ಇದರಿಂದಾಗಿ ಕ್ಯಾಬ್ ಎಷ್ಟು ಗಂಟೆಗೆ ಬಂದು ತಲುಪಲಿದೆ ಎಂಬ ನಿಖರ ಮಾಹಿತಿ ತಿಳಿಯಲಿದೆ.


Click it and Unblock the Notifications








