ಭಾರತದಲ್ಲಿ ಬಿಡುಗಡೆಗೆ ಸಜ್ಜುಗೊಂಡಿರುವ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಯಾವವು?

Written By:

ದೇಶಿಯವಾಗಿ ಕಾರು ಉತ್ಪಾದನೆ ಮತ್ತು ಮಾರಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸದ್ಯದಲ್ಲೇ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಮಧ್ಯಮ ಗಾತ್ರದ ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿವೆ.

ಈ ಹಿನ್ನೆಲೆ ಬೇಡಿಕೆಯಲ್ಲಿರುವ ಪ್ರಮುಖ ಕಾರು ಮಾದರಿಗಳನ್ನು ಆಯ್ದುಕೊಳ್ಳಲಾಗಿದ್ದು, ಬೆಲೆ, ಬಿಡುಗಡೆ ದಿನಾಂಕ ಮತ್ತು ತಾಂತ್ರಿಕ ಅಂಶಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

To Follow DriveSpark On Facebook, Click The Like Button
ಭಾರತದಲ್ಲಿ ಬಿಡುಗಡೆಯಾಗಲಿರುವ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಯಾವವು?

ಟಾಟಾ ನೆಕ್ಸನ್

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಜ್ಜುಗೊಂಡಿರುವ ಪ್ರಮುಖ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲಿ ಟಾಟಾ ನೆಕ್ಸನ್ ಪ್ರಮುಖವಾಗಿದ್ದು, ವಿಶೇಷ ವಿನ್ಯಾಸಗಳ ಜೊತೆ 1.5-ಲೀಟರ್ ಡಿಸೇಲ್, 1.2-ಲೀಟರ್ ಪೆಟ್ರೋಲ್ ಟರ್ಬೋ ಚಾರ್ಜ್ಡ್ ಎಂಜಿನ್ ಕಾರು ಪ್ರಿಯರನ್ನು ಸೆಳೆಯಲು ಸಜ್ಜುಗೊಂಡಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಯಾವವು?

ಜೊತೆಗೆ 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದುಕೊಂಡಿರುವ ಟಾಟಾ ನೆಕ್ಸನ್, 6.5 ಲಕ್ಷದಿಂದ 8.5 ಲಕ್ಷದ ತನಕ ಖರೀದಿ ಲಭ್ಯವಾಗುವ ಸಾಧ್ಯತೆಗಳಿವೆ.

ಬಿಡುಗಡೆ- ಸೆಪ್ಟೆಂಬರ್,2017

ಭಾರತದಲ್ಲಿ ಬಿಡುಗಡೆಯಾಗಲಿರುವ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಯಾವವು?

ಫೋರ್ಡ್ ಇಕೋ ಸ್ಪೋರ್ಟ್

ಸಬ್ ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ಸಿದ್ಧಗೊಂಡಿರುವ ಫೋರ್ಡ್ ಇಕೋ ಸ್ಪೋರ್ಟ್ ಫೇಸ್‌ಲೀಫ್ಟ್ ಆವೃತ್ತಿಯು 6 ಏರ್‌ಬ್ಯಾಗ್ ಸೌಲಭ್ಯದೊಂದಿಗೆ ಲಭ್ಯವಾಗಲಿದ್ದು, ಡ್ರ್ಯಾಗನ್ ಫ್ಯಾಮಲಿ ಪೆಟ್ರೋಲ್ ಎಂಜಿನ್ ಜೊತೆ ಅಭಿವೃದ್ಧಿಯಾಗಿದೆ.

Recommended Video - Watch Now!
2018 Hyundai Verna Indian Model Unveiled | In Kannada - DriveSpark ಕನ್ನಡ
ಭಾರತದಲ್ಲಿ ಬಿಡುಗಡೆಯಾಗಲಿರುವ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಯಾವವು?

ಮಹೀಂದ್ರಾ ಟಿಯುವಿ 300, ಮಾರುತಿ ಸುಜುಕಿ ಬ್ರೇಝಾ ಆವೃತ್ತಿಗಳನ್ನು ಹಿಂದಿಕ್ಕುವ ಉದ್ದೇಶದಿಂದ ಸಿದ್ಧಗೊಂಡಿರುವ ಫೋರ್ಡ್ ಇಕೋ ಸ್ಪೋರ್ಟ್ ಫೇಸ್‌ಲೀಫ್ಟ್ ಆವೃತ್ತಿಯು, 7 ರಿಂದ 10 ಲಕ್ಷದ ತನಕ ಬೆಲೆ ನಿಗದಿಯಾಗುವ ಸಾಧ್ಯತೆಗಳಿವೆ.

ಬಿಡುಗಡೆ- ಸೆಪ್ಟೆಂಬರ್,2017

ಭಾರತದಲ್ಲಿ ಬಿಡುಗಡೆಯಾಗಲಿರುವ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಯಾವವು?

ರೆನಾಲ್ಟ್ ಕಾಪ್ಟರ್

ದೇಶಿಯ ಆಟೋ ಉದ್ಯಮ ವಲಯದಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿರುವ ರೆನಾಲ್ಟ್ ಕಪ್ಟಾರ್ ಎಸ್‌ಯುವಿ ಆವೃತ್ತಿಯು ಮಹೀಂದ್ರಾ ಎಕ್ಸ್‌ಯುವಿ 500, ಹ್ಯುಂಡೈ ಕ್ರೇಟಾ ಮತ್ತು ಜೀಪ್ ಕಂಪಾಸ್ ಆವೃತ್ತಿಗಳಿಗೆ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಸಿದ್ಧಗೊಂಡಿದ್ದು, 2.0-ಲೀಟರ್ ಎಂಜಿನ್‌ನೊಂದಿಗೆ ಲಭ್ಯವಾಗಲಿವೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಯಾವವು?

ಉನ್ನತ ಮಟ್ಟದ ಎಂಜಿನ್ ಸೌಲಭ್ಯ ಹಿನ್ನೆಲೆ ರೆನಾಲ್ಟ್ ಕಾಪ್ಟರ್ ಬೆಲೆಯು ತುಸು ದುಬಾರಿಯಾಗುವ ಸಾಧ್ಯತೆಗಳಿದ್ದು, 15 ರಿಂದ 18 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಬಿಡುಗಡೆ- ಡಿಸೆಂಬರ್,2017

ಭಾರತದಲ್ಲಿ ಬಿಡುಗಡೆಯಾಗಲಿರುವ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಯಾವವು?

ಮಾರುತಿ ಸುಜುಕಿ ಎಸ್ ಕ್ರಾಸ್

ದೇಶದ ನಂ.1 ಕಾರು ಉತ್ಪಾದನಾ ಸಂಸ್ಥೆ ಮಾರುತಿ ಸುಜುಕಿ ನಿರ್ಮಾಣದ ಎಸ್ ಕ್ರಾಸ್ ಫೇಸ್‌ಲಿಫ್ಟ್ ಆವತ್ತಿ ಕೂಡಾ ಬಿಡುಗಡೆ ನಿಟ್ಟಿನಲ್ಲಿ ಸಜ್ಜುಗೊಂಡಿದ್ದು, ಈ ಹಿಂದಿನ ಆವೃತ್ತಿಯಂತೆಯೇ 1.3-ಲೀಟರ್ ಮತ್ತು 1.6-ಲೀಟರ್ ಡಿಸೇಲ್ ಎಂಜಿನ್‌ನೊಂದಿಗೆ ಲಭ್ಯವಾಗಲಿದೆ.

ಭಾರತದಲ್ಲಿ ಬಿಡುಗಡೆಯಾಗಲಿರುವ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಯಾವವು?

ಹೀಗಾಗಿ ಎಸ್ ಕ್ರಾಸ್ ಫೇಸ್‌ಲಿಫ್ಟ್ ಆವೃತ್ತಿಯಲ್ಲಿ ವಿನ್ಯಾಸಗಳ ಬದಲಾವಣೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, 8 ರಿಂದ 10 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಬಿಡುಗಡೆ- ಅಕ್ಟೋಬರ್,2017

ಭಾರತದಲ್ಲಿ ಬಿಡುಗಡೆಯಾಗಲಿರುವ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಯಾವವು?

ಈ ಮೇಲಿನ ಕಾರು ಮಾದರಿಗಳನ್ನು ಹೊರತುಪಡಿಸಿ ಇನ್ನು ಹಲವು ಎಸ್‌ಯುವಿ ಕಾರು ಮಾದರಿಗಳು ಬಿಡುಗಡೆ ಸಜ್ಜುಗೊಂಡಿದ್ದು, ಮಹೀಂದ್ರಾ ಕೆಯುವಿ 100 ಫೇಸ್‌ಲಿಫ್ಟ್, ಹ್ಯುಂಡೈ ಎಸ್‌ಯುವಿ ಮತ್ತು ದಟ್ಸನ್ ಎಸ್‌ಯಿ ಆವೃತ್ತಿಗಳು ಕೂಡಾ 2017ರ ಅಂತ್ಯಕ್ಕೆ ಮತ್ತು 2018ರ ಆರಂಭದಲ್ಲಿ ಬಿಡುಗಡೆಯಾಗಲಿವೆ.

English summary
Read in Kannada about Upcoming Compact SUVs In India.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark