ಟ್ರಾಫಿಕ್ ಸಿಗ್ನಲ್ ನಲ್ಲಿ ಅಭಿಮಾನಿ ಜೊತೆ ಸೆಲ್ಫೀ- ಇಕ್ಕಟ್ಟಿಗೆ ಸಿಲುಕಿದ ನಟ ವರುಣ್ ಧವನ್

Written By:

ಬಾಲಿವುಡ್‌ನಲ್ಲಿ ಸದ್ಯ ಹಿಟ್ ಚಿತ್ರಗಳನ್ನು ನೀಡುವ ಮೂಲಕ ಯಶಸ್ವಿ ಹಾದಿಯಲ್ಲಿರುವ ನಟ ಮಹಾಶಯನೊಬ್ಬನಿಗೆ ಮುಂಬೈ ಪೊಲೀಸರು ಶಾಕ್ ನೀಡಿದ್ದಾರೆ. ಟ್ರಾಫಿಕ್ ಸಿಗ್ನಲ್‌ನಲ್ಲೇ ಅಭಿಮಾನಿ ಜೊತೆಗೆ ತೆಗೆಸಿಕೊಂಡ ಸೇಲ್ಫಿ ವಿರೋಧಕ್ಕೆ ಕಾರಣವಾಗಿದೆ.

ಟ್ರಾಫಿಕ್ ಸಿಗ್ನಲ್ ನಲ್ಲಿ ಅಭಿಮಾನಿ ಜೊತೆ ಸೆಲ್ಫೀ- ಇಕ್ಕಟ್ಟಿಗೆ ಸಿಲುಕಿದ ನಟ ವರುಣ್ ಧವನ್

ಹೌದು.. ವರುಣ್ ಧವನ್ ಜುಡ್ವಾ-2 ಚಿತ್ರದ ಯಶಸ್ಸಿನಲ್ಲಿ ತೇಲಾಡುತ್ತಿದ್ದಾರೆ. ಹೀಗಿರುವಾಗಲ್ಲೇ ಮುಂಬೈ ಪೊಲೀಸರು ಅವರಿಗೆ ಒಂದು ಶಾಕ್ ಕೊಟ್ಟಿದ್ದಾರೆ. ಟ್ರಾಫಿಕ್ ಸಿಗ್ನಲ್ ನಲ್ಲಿ ಅಭಿಮಾನಿ ಜೊತೆ ಸೆಲ್ಫೀ ಕ್ಲಿಕ್ಕಿಸಿದ್ದಕ್ಕೆ ಮುಂಬೈ ಪೊಲೀಸರು ವರುಣ್ ಗೆ ದಂಡ ಕಟ್ಟಲು ತಿಳಿಸಿದ್ದಾರೆ.

ಟ್ರಾಫಿಕ್ ಸಿಗ್ನಲ್ ನಲ್ಲಿ ಅಭಿಮಾನಿ ಜೊತೆ ಸೆಲ್ಫೀ- ಇಕ್ಕಟ್ಟಿಗೆ ಸಿಲುಕಿದ ನಟ ವರುಣ್ ಧವನ್

ಕಾರಿನಲ್ಲಿ ಹೋಗುತ್ತಿರುವಾಗ ಟ್ರಾಫಿಕ್ ಸಿಗ್ನಲ್ ನಲ್ಲಿ ಪಕ್ಕದಲ್ಲಿದ್ದ ಆಟೋರಿಕ್ಷಾದಲ್ಲಿದ್ದ ಅಭಿಮಾನಿವೊಬ್ಬರು ವರಣ್ ಧವನ್ ಜೊತೆ ಸೆಲ್ಫೀ ತೆಗೆದುಕೊಳ್ಳಲು ಕೇಳಿಕೊಂಡಿದ್ರು. ಅಭಿಮಾನಿಗೆ ನಿರಾಶೆ ಆಗಬಾರದೆಂದು ವರುಣ್ ಕಾರಿನ ಕಿಟಕಿಯಿಂದ ತಲೆಯನ್ನು ಹೊರ ಹಾಕಿ ಸೆಲ್ಫೀ ತೆಗೆದುಕೊಂಡಿದ್ದಾರೆ.

ಟ್ರಾಫಿಕ್ ಸಿಗ್ನಲ್ ನಲ್ಲಿ ಅಭಿಮಾನಿ ಜೊತೆ ಸೆಲ್ಫೀ- ಇಕ್ಕಟ್ಟಿಗೆ ಸಿಲುಕಿದ ನಟ ವರುಣ್ ಧವನ್

ಇದನ್ನ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಮುಂಬೈ ಪೊಲೀಸರ ಗಮನಕ್ಕೆ ತಂದಿದ್ದಾನೆ. ಜೊತೆಗೆ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಇಂತಹ ಹುಚ್ಚು ಸಾಹಸಗಳಿಗೆ ಕಡಿವಾಣ ಹಾಕುವಂತೆ ಆಗ್ರಹಸಿದ್ದರು.

ಟ್ರಾಫಿಕ್ ಸಿಗ್ನಲ್ ನಲ್ಲಿ ಅಭಿಮಾನಿ ಜೊತೆ ಸೆಲ್ಫೀ- ಇಕ್ಕಟ್ಟಿಗೆ ಸಿಲುಕಿದ ನಟ ವರುಣ್ ಧವನ್

ಇದಕ್ಕೆ ಪ್ರಕ್ರಿಯೆಸಿದ ಮುಂಬೈ ಪೊಲೀಸರು, ಇಂತಹ ಸಾಹಸಗಳು ಬೆಳ್ಳಿ ತೆರೆಯ ಮೇಲೆ ಕೆಲಸ ಮಾಡುತ್ತವೆ, ಆದ್ರೆ ಮುಂಬೈನ ರಸ್ತೆಗಳಲ್ಲಿ ಅಲ್ಲ. ನಿಮ್ಮ, ನಿಮ್ಮ ಅಭಿಮಾನಿಗಳ ಹಾಗೂ ಇತರೆ ಕೆಲವರ ಪ್ರಾಣದ ಜೊತೆ ಆಟವಾಡಿದ್ದೀರ. ನಿಮ್ಮಂತಹ ಯೂತ್ ಐಕಾನ್ ಹಾಗೂ ಜವಾಬ್ದಾರಿಯುತ ಮುಂಬೈ ನಿವಾಸಿಯಿಂದ ಒಳ್ಳೆಯದನ್ನು ನಿರೀಕ್ಷಿಸುತ್ತೇವೆ. ಎಂದಿದ್ದಾರೆ.

ಟ್ರಾಫಿಕ್ ಸಿಗ್ನಲ್ ನಲ್ಲಿ ಅಭಿಮಾನಿ ಜೊತೆ ಸೆಲ್ಫೀ- ಇಕ್ಕಟ್ಟಿಗೆ ಸಿಲುಕಿದ ನಟ ವರುಣ್ ಧವನ್

ಜೊತೆಗೆ ಮಾಡಿದ ತಪ್ಪಿಗೆ ಇ-ಚಲನ್ ನಿಮ್ಮ ಮನೆ ತಲುಪಲಿದೆ. ಮುಂದಿನ ಬಾರಿ ಇನ್ನೂ ಕಠಿಣವಾಗಿರುತ್ತೀವಿ ಎಂದು ಟ್ವೀಟ್ ಮಾಡಿದ್ದಾರೆ.

ತಪ್ಪದೇ ಓದಿ-ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ

ಟ್ರಾಫಿಕ್ ಸಿಗ್ನಲ್ ನಲ್ಲಿ ಅಭಿಮಾನಿ ಜೊತೆ ಸೆಲ್ಫೀ- ಇಕ್ಕಟ್ಟಿಗೆ ಸಿಲುಕಿದ ನಟ ವರುಣ್ ಧವನ್

ಹೀಗಾಗಿ ಮುಂಬೈ ಪೊಲೀಸರ ಟ್ವಿಟ್ಟರ್ ಪೊಸ್ಟ್‌ಗೆ ಪ್ರತಿಕ್ರಿಯಿಸಿದ ವರುಣ್ ಕ್ಷಮೆ ಕೇಳಿದ್ದಾರೆ. "ನನ್ನನ್ನು ಕ್ಷಮಿಸಿ. ನಮ್ಮ ವಾಹನಗಳು ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದವು ಹಾಗೂ ನನಗೆ ಅಭಿಮಾನಿಗಳ ಭಾವನೆಗಳಿಗೆ ನೋವು ಮಾಡವುದಕ್ಕೆ ಇಷ್ಟವಿರಲಿಲ್ಲ. ಮುಂದಿನ ಬಾರಿ ನಾನು ಸುರಕ್ಷತೆಯನ್ನ ಗಮನದಲ್ಲಿಟ್ಟುಕೊಳ್ತೀನಿ. ಇದನ್ನ ಪ್ರೋತ್ಸಾಹಿಸಲ್ಲ" ಎಂದು ವರುಣ್ ಟ್ವೀಟ್ ಮಾಡಿದ್ದಾರೆ.

ಟ್ರಾಫಿಕ್ ಸಿಗ್ನಲ್ ನಲ್ಲಿ ಅಭಿಮಾನಿ ಜೊತೆ ಸೆಲ್ಫೀ- ಇಕ್ಕಟ್ಟಿಗೆ ಸಿಲುಕಿದ ನಟ ವರುಣ್ ಧವನ್

ಇದಕ್ಕೆ ಪುನಃ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸರು ನೀವು ನಮ್ಮ ಟ್ವೀಟ್ ಒಳ್ಳೆಯ ರೀತಿಯಲ್ಲಿ ತೆಗೆದುಕೊಂಡಿದ್ದು ನಮಗೆ ಖುಷಿಯಾಗಿದೆ ಎಂದು ಮತ್ತೆ ಟ್ವೀಟ್ ಮಾಡಿದ್ದಾರೆ.

ತಪ್ಪದೇ ಓದಿ-ಯುವಕನ ಬದುಕನ್ನೇ ಬದಲಿಸಿತು ಅಂದು ನಡೆದಿದ್ದ ಭೀಕರ ಬೈಕ್ ಅಪಘಾತ !! ವಿಡಿಯೋ ನೋಡಿ

English summary
Read in Kannada about Actor Varun Dhawan Gets A Surprise From Mumbai Police For Not Wearing Seat Belt.
Story first published: Saturday, November 25, 2017, 11:18 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark