ಯುವಕನ ಬದುಕನ್ನೇ ಬದಲಿಸಿತು ಅಂದು ನಡೆದಿದ್ದ ಭೀಕರ ಬೈಕ್ ಅಪಘಾತ !! ವಿಡಿಯೋ ನೋಡಿ

By Praveen

ಕೆಲವೊಮ್ಮೆ ಅನುಭವ ಕಲಿಸುವ ಪಾಠ ಎಲ್ಲವನ್ನೂ ಬದಲಿಸಿ ಬಿಡುತ್ತದೆ. ನಾವು ನಡೆಯುವ ದಾರಿ ಮತ್ತು ಸೇರಬೇಕಾದ ಗುರಿಯನ್ನು ನಿರ್ಧಾರ ಮಾಡೋದು ಕೂಡ ಕಾಲವೇ. ಅನುಭವದ ಪಾಠಕ್ಕಿಂತ ಮಿಗಿಲಾದ ಪಾಠ ಬೇರೆ ಯಾವುದೂ ಕೂಡ ಇರೋದಿಕ್ಕೆ ಸಾಧ್ಯವಿಲ್ಲ. ಇದೆಲ್ಲಾ ಅನುಭವಕ್ಕೆ ಬಂದಿದ್ದು ನೇಪಾಳದಲ್ಲಿ ನಡೆದ ಕೆಟಿಎಂ ಡ್ಯೂಕ್ 390 ಬೈಕ್ ಅಪಘಾತ ಪ್ರಕರಣ ಎಂದ್ರೆ ನೀವೆಲ್ಲಾ ನಂಬಲೇಬೇಕು.

ಯುವಕನ ಬದುಕನ್ನೇ ಬದಲಿಸಿತು ಅಂದು ನಡೆದಿದ್ದ ಭೀಕರ ಬೈಕ್ ಅಪಘಾತ

ಹೌದು.. ನೇಪಾಳದಲ್ಲಿ ನಡೆದ ಕೆಟಿಎಂ 390 ಡ್ಯೂಕ್ ಅಪಘಾತ ಪ್ರಕರಣವು ಯುವಕನೊಬ್ಬನ ಜೀವನ ಶೈಲಿಯನ್ನೇ ಬದಲಿಸಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ಅಪಘಾತಧ ಸಂದರ್ಭದಲ್ಲಿ ಬದುಕು ಸಾಕು ಎಂದು ಕಣ್ಣೀರಿಟ್ಟಿದ್ದ ಆ ಯುವಕ ಇಂದು ಲಕ್ಷಾಂತರ ಮಂದಿಗೆ ಸ್ಪೂರ್ತಿ ಆಗಿದ್ದಾನೆ.

ಯುವಕನ ಬದುಕನ್ನೇ ಬದಲಿಸಿತು ಅಂದು ನಡೆದಿದ್ದ ಭೀಕರ ಬೈಕ್ ಅಪಘಾತ

ಅಂದಹಾಗೆ ನಾವು ಹೇಳ ಹೊರಟಿರುವ ಕಥೆ ಬೇರೆ ಯಾರದ್ದು ಅಲ್ಲ. ಸದ್ಯ ಅಂತರ್‌ರಾಷ್ಟ್ರೀಯ ಮಟ್ಟದ ಬಾಡಿ ಬಿಲ್ಡಿಂಗ್ ವಿಭಾಗದಲ್ಲಿ ಸಾಕಷ್ಟು ಹೆಸರುವಾಸಿಯಾಗಿರುವ 23 ವರ್ಷದ ಸುಖದೇವ್ ಕರ್ಕಿ ಬಗ್ಗೆ ನೀವೆಲ್ಲಾ ತಿಳಿದುಕೊಳ್ಳಬೇಕಾದ ಹಲವಾರು ಇಂಟ್ರಸ್ಟಿಂಗ್ ಸ್ಪೋರಿಗಳಿವೆ.

ಯುವಕನ ಬದುಕನ್ನೇ ಬದಲಿಸಿತು ಅಂದು ನಡೆದಿದ್ದ ಭೀಕರ ಬೈಕ್ ಅಪಘಾತ

ಸುಖದೇವ್ ಅವರು ಬಾಡಿ ಬಿಲ್ಡಿಂಗ್ ಕ್ಷೇತ್ರಕ್ಕೆ ಬರುವುದಕ್ಕೂ ಮುನ್ನ ಬೈಕ್ ರೇಸಿಂಗ್‌ನಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದರು. ಆದ್ರೆವಿಧಿ ಲಿಖಿತ ಮೀರುವುದು ಅಸಾಧ್ಯ ಎನ್ನುವ ಹೇಳಿಕೆಯಂತೆ ಕೆಟಿಎಂ ಬೈಕ್‌ ಸವಾರಿ ಮಾಡುವಾಗ ಭೀಕರ ಅಪಘಾತ ಒಂದರಲ್ಲಿ ತೀವ್ರವಾಗಿ ಗಾಯಗೊಂಡಿದ್ದರು.

Recommended Video - Watch Now!
Kawasaki Z900RS And Ninja 400 Unveiled In 2017 Tokyo Motor Show - DriveSpark
ಯುವಕನ ಬದುಕನ್ನೇ ಬದಲಿಸಿತು ಅಂದು ನಡೆದಿದ್ದ ಭೀಕರ ಬೈಕ್ ಅಪಘಾತ

ಅಚ್ಚರಿ ವಿಚಾರ ಅಂದ್ರೆ ಭೀಕರ ಅಪಘಾತದಲ್ಲಿ ಬರೋಬ್ಬರಿ 18 ಮೂಳೆಗಳು ಮುರಿದ್ದರು ಫಿನಿಕ್ಸ್‌ನಂತೆ ಮತ್ತೆ ಎದ್ದು ಬಂದಿದ್ದ ಸುಖದೇವ್, ಸತತ 1 ವರ್ಷಗಳ ತಂದೆ-ತಾಯಿ ಆರೈಕೆ ಹಾಗೂ ಸ್ನೇಹಿತರ ಪ್ರೀತಿಯಿಂದ ಮೊದಲಿನಂತೆ ನಲೆದಾಟು ಶಕ್ತಿ ಪಡೆದುಕೊಂಡಿದ್ದರು.

ಯುವಕನ ಬದುಕನ್ನೇ ಬದಲಿಸಿತು ಅಂದು ನಡೆದಿದ್ದ ಭೀಕರ ಬೈಕ್ ಅಪಘಾತ

ಇದಲ್ಲದೇ ವೈದ್ಯರ ಸಲಹೆಯಂತೆ ಜಿಮ್ ಸೇರಿಕೊಂಡಿದ್ದ ಸುಖದೇವ್ ಮೊದಮೊದಲು ಮೊಳೆಗಳ ಮುರಿತವನ್ನು ಸರಿದೂಗಿಸಲು ಮಾಡಿದ ಪ್ರಯತ್ನ ಹೊಸ ಜೀವನಕ್ಕೆ ನಾಂದಿ ಹಾಡಿತು. ಕೇವಲ ಆರೋಗ್ಯಕ್ಕಾಗಿ ಮೈಗೂಡಿಸಿಕೊಂಡ ಜಿಮ್ ಸಹವಾಸ ಇಂದು ಅವರನ್ನು ಅಂತರ್‌ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ.

ತಪ್ಪದೇ ಓದಿ-ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ ಕೇವಲ 13 ಲೀಟರ್, ಆದ್ರೆ ಬಂಕ್ ಸಿಬ್ಬಂದಿ 17 ಲೀಟರ್ ತುಂಬಿಸಿದ್ರು !!

ಸದ್ಯ ಸುಖದೇವ್ ಅವರು ವೃತ್ತಿಪರ ಬಾಡಿಬಿಲ್ಡರ್ ಆಗಿ ಜನಪ್ರಿಯತೆ ಗಳಿಸುತ್ತಿದ್ದು, ಇದರ ಜೊತೆ ಜೊತೆಗೆ ವೈಲ್ಡ್ ಲೈಫ್ ಫೋಟೋಗ್ರಾಫಿ, ಬೈಕ್‌ರ್ ಮತ್ತು ಡ್ರೋನ್ ಫೈಲೆಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಯುವಕನ ಬದುಕನ್ನೇ ಬದಲಿಸಿತು ಅಂದು ನಡೆದಿದ್ದ ಭೀಕರ ಬೈಕ್ ಅಪಘಾತ

ಇನ್ನು ಅಪಘಾತ ಸಂದರ್ಭದಲ್ಲಿ ಸುಖದೇವ್ ಅವರನ್ನು ಉಳಿಸಿಕೊಳ್ಳುವ ಬಗ್ಗೆ ಕೈಚೆಲ್ಲಿ ಕುಳಿತಿದ್ದ ವೈದ್ಯರಿಗೆ ಇಂದು ಆತನ ಸಾಧನೆ ನಿಬ್ಬೆರಗಾಗುವಂತೆ ಮಾಡಿದ್ದು, ಜೀವನದಲ್ಲಿ ಎದುರಾಗುವ ಸಮಸ್ಯೆಗಳಿಗೆ ತಲೆಬಾಗದೇ ಮುನ್ನುಗ್ಗುವ ಪರಿಯನ್ನ ಸುಖದೇವ್ ಸಾಧನೆಯಿಂದಲೇ ತಿಳಿಯಬೇಕು.

Trending on DriveSpark Kannada:

ಬೈಕ್ ಮತ್ತು ಕಾರುಗಳಲ್ಲಿ ಕಡ್ಡಾಯಗೊಳ್ಳಲಿದೆ ಎಬಿಎಸ್ ಟೆಕ್ನಾಲಜಿ..!!

'ಹೊಸ ಕಾರನ್ನು ರೀಪೇರಿ ಮಾಡ್ತೀವಿ' ಅಂದ ಮಾರುತಿ ಕಂಪನಿಗೆ 1 ಲಕ್ಷ ದಂಡ !!

Kannada
Read more on ಅಪಘಾತ accident
English summary
KTM Duke 390 rider crashes into car while cornering – 18 fractures, 2 yrs later, here’s how he turned his life around.
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more