'ಹೊಸ ಕಾರನ್ನು ರೀಪೇರಿ ಮಾಡ್ತೀವಿ' ಅಂದ ಮಾರುತಿ ಕಂಪನಿಗೆ 1 ಲಕ್ಷ ದಂಡ !!

Posted By: Staff

"ಮೋಸ ಹೋಗುವವರು ಇರುವವರೆಗೂ ಮೋಸ ಮಾಡುವವರು ಇರುತ್ತಾರೆ" ಎಂಬುದು ಸತ್ಯ ಸಂಗತಿ. 'ವ್ಯಾಪಾರಂ ದ್ರೋಹ ಚಿಂತನಂ' ಎನ್ನುವ ಹಾಗೆ, ಪ್ರಪಂಚದಲ್ಲಿ ಎಲ್ಲಾ ಕಡೆ ಮೋಸ ಎಂಬುದು ನಿಯತ್ತಿಗೆ ಸೆಡ್ಡು ಹೊಡೆದು ಹೆಮ್ಮರವಾಗಿ ಬೆಳೆದು ನಿಂತಿದೆ.

'ಹೊಸ ಕಾರನ್ನು ರೀಪೇರಿ ಮಾಡ್ತೀವಿ' ಅಂದ ಮಾರುತಿ ಕಂಪನಿಗೆ ಬಿತ್ತು 1 ಲಕ್ಷ ದಂಡ !!

ನಾವೇನಾದರೂ ನೆಡೆಯುತ್ತಿರುವ ಮೋಸದ ವಿರುದ್ಧ ಸೆಡ್ಡು ಹೊಡೆದು ನಿಲ್ಲದಿದ್ದರೆ, ಖಂಡಿತ ನಮ್ಮ ಮೂರ್ಖತನದ ಪರಮಾವಧಿ ಎನ್ನಬಹುದು. ಯಾಕಪ್ಪ ಇಷ್ಟೆಲ್ಲಾ ಪೀಠಿಕೆ ಕೊಡ್ತಾ ಇದ್ದಾರೆ ? ಅನ್ಕೊಂಡ್ರಾ... ವಿಚಾರ ಇದೆ ಓದುಗರೇ. ತಮಿಳುನಾಡಿನ ಚೆನ್ನೈ ನಗರದಲ್ಲಿ ನೆಡೆದಿರುವ ಈ ಘಟನೆ ನಿಮ್ಮನ್ನು ಅಚ್ಚರಿಗೊಳಿಸದೇ ಇರಲಾರದು.

Recommended Video - Watch Now!
Shocking Car Accident That Happened In Karunagappally, Kerala
'ಹೊಸ ಕಾರನ್ನು ರೀಪೇರಿ ಮಾಡ್ತೀವಿ' ಅಂದ ಮಾರುತಿ ಕಂಪನಿಗೆ ಬಿತ್ತು 1 ಲಕ್ಷ ದಂಡ !!

ಹೌದು, ನಮಗೆಲ್ಲರಿಗೂ ತಿಳಿದಿರುವಂತೆ ಮಾರುತಿ ಕಾರು ಉತ್ಪಾದಕ ಕಂಪನಿ ಶ್ರೇಷ್ಠ ರೀತಿಯ ಸರ್ವಿಸ್‌ಗೆ ಹೆಸರುವಾಸಿಯಾಗಿದೆ. ಆದ್ರೆ, ಇತ್ತೀಚೆಗೆ ನೆಡೆಯುತ್ತಿರುವ ಕೆಲವು ಕಹಿ ಘಟನೆಗಳು ಈ ನಂಬಿಕೆಯನ್ನು ಕಡಿಮೆಗೊಳಿಸಿರುವುದಂತೂ ಖಂಡಿತ.

'ಹೊಸ ಕಾರನ್ನು ರೀಪೇರಿ ಮಾಡ್ತೀವಿ' ಅಂದ ಮಾರುತಿ ಕಂಪನಿಗೆ ಬಿತ್ತು 1 ಲಕ್ಷ ದಂಡ !!

ಘಟನೆ ವಿವರ :

ಕಳೆದ ವರ್ಷದ ಫೆಬ್ರವರಿ 11ರಂದು ಚೆನ್ನೈನ ಹಸ್ತಿನಾಪುರಂದ ದುರ್ಗಾದೇವಿ ಎಂಬುವವರು ಮಾರುತಿ ಸುಜುಕಿ ಡಿಜೈರ್ ಟೂರ್ ಕಾರನ್ನು ಖರೀದಿಸಿದ್ದರು. ಖರೀದಿಸುವ ಸಮಯದಲ್ಲಿ ಮುಂಗಡ ಹಣವಾಗಿ ರೂ.10000ವನ್ನು ಪಾವತಿಸಿದ್ದರೂ ಕೂಡ.

'ಹೊಸ ಕಾರನ್ನು ರೀಪೇರಿ ಮಾಡ್ತೀವಿ' ಅಂದ ಮಾರುತಿ ಕಂಪನಿಗೆ ಬಿತ್ತು 1 ಲಕ್ಷ ದಂಡ !!

ಪಾಲಿಕರಾಣಿ ಎಂಬ ಹೆಸರಿನ ಅಧಿಕೃತ ಡೀಲರ್, ಡಿಜೈರ್ ಟೂರ್ ಕಾರಿನ ಒಟ್ಟು ವೆಚ್ಚದ ಬಗ್ಗೆ ಕೊಟೇಷನ್ ನೀಡಿದ್ದರು. ಈ ಲೆಕ್ಕದ ಪ್ರಕಾರ ಖರೀದಿದಾರನಿಗೆ ರೂ.7,20,244 ವೆಚ್ಚ ತಗುಲುತ್ತಿತ್ತು. ಇದರಲ್ಲಿ ರೂ.6,13,943 ಲಕ್ಷ ಕಾರಿಗೆ,ರೂ.25,873 ವಿಮೆ ಮತ್ತು ರೂ.80,428 ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕ ನಮೂದಿಸಲಾಗಿತ್ತು.

'ಹೊಸ ಕಾರನ್ನು ರೀಪೇರಿ ಮಾಡ್ತೀವಿ' ಅಂದ ಮಾರುತಿ ಕಂಪನಿಗೆ ಬಿತ್ತು 1 ಲಕ್ಷ ದಂಡ !!

2015ರ ಫೆಬ್ರವರಿ 18ರಂದು ಗ್ರಾಹಕರಾದ ದುರ್ಗಾದೇವಿಯವರು ರೂ.2,77,500 ರೂಪಾಯಿಯ ಮೊತ್ತವನ್ನು ವಾಹನ ಸಾಲದ ಮುಖಾಂತರ ಪಾವತಿಸಿದ್ದರು. ಈ ಮೊತ್ತದ ಹೊರತಾಗಿ, ನೋಂದಣಿಯ ಅಫಿಡವಿಟ್ ಶುಲ್ಕವಾಗಿ ಗ್ರಾಹಕರಿಂದ ರೂ.1,500 ಹೆಚ್ಚುವರಿ ಶುಲ್ಕವನ್ನು ಪಡೆದುಕೊಂಡಿದ್ದರು.

Trending On DriveSpark Kannada:

ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ 2018ರ ಮಾರುತಿ ಸುಜುಕಿ ಸ್ವಿಫ್ಟ್ ಬೆಲೆ ಎಷ್ಟು ಗೊತ್ತಾ?

ವಾಹನಗಳ ನಂಬರ್‌ಪ್ಲೇಟ್ ಮೇಲೆ IND ಎಂದು ಏಕೆ ಬರೆಯುತ್ತಾರೆ ಗೊತ್ತೆ?

'ಹೊಸ ಕಾರನ್ನು ರೀಪೇರಿ ಮಾಡ್ತೀವಿ' ಅಂದ ಮಾರುತಿ ಕಂಪನಿಗೆ ಬಿತ್ತು 1 ಲಕ್ಷ ದಂಡ !!

ಆದ್ರೆ, ಫೆಬ್ರುವರಿ 25ರಂದು ಕಾರಿನ ಡೆಲಿವರಿ ತೆಗೆದುಕೊಳ್ಳುವ ಸಮಯದಲ್ಲಿ ಗ್ರಾಹಕರಿಗೆ ಶಾಕ್ ಕಾದಿತ್ತು. ಮೊದಲು ಕೊಟೇಷನ್‌ನಲ್ಲಿ ನೀಡಿದ ಮೊತ್ತಕ್ಕೂ ವಾಹನವನ್ನು ಡಿಲಿವರಿ ತೆಗೆದುಕೊಳ್ಳುವ ಮೊತ್ತಕ್ಕೂ ಸರಿ ಸುಮಾರು ರೂ.20000 ವ್ಯತ್ಯಾಸವಿರುವುದು ಕಂಡು ಬಂದಿತ್ತು.

'ಹೊಸ ಕಾರನ್ನು ರೀಪೇರಿ ಮಾಡ್ತೀವಿ' ಅಂದ ಮಾರುತಿ ಕಂಪನಿಗೆ ಬಿತ್ತು 1 ಲಕ್ಷ ದಂಡ !!

ದುರ್ಗಾದೇವಿಯವರು ತಮ್ಮ ನೋಂದಣಿ ಪ್ರಮಾಣ ಪತ್ರವನ್ನು ಸ್ವೀಕರಿಸಿದಾಗ ರೂ.61,796 ನೋಂದಣಿ ಶುಲ್ಕದ ಜೊತೆಗೆ ಹೆಚ್ಚುವರಿ ರೂ.18630 ಹೆಚ್ಚುವರಿ ಶುಲ್ಕ ಹಾಕಿ, ಒಟ್ಟು ಮೊತ್ತ ರೂ.80,428 ಗೆ ತಂದು ನಿಲ್ಲಿಸಿರುವುದು ಕಂಡು ಬಂದಿತ್ತು.

'ಹೊಸ ಕಾರನ್ನು ರೀಪೇರಿ ಮಾಡ್ತೀವಿ' ಅಂದ ಮಾರುತಿ ಕಂಪನಿಗೆ ಬಿತ್ತು 1 ಲಕ್ಷ ದಂಡ !!

ರಿಜಿಸ್ಟ್ರೇಶನ್ ಶುಲ್ಕದಲ್ಲಿ ವ್ಯತ್ಯಾಸವಾಗಿರಲು ಕಾರಣವೇನು ಎಂದು ವಿಚಾರಿಸಲಾಗಿ, 'ನಿರ್ವಹಣೆ ಮತ್ತು ದುರಸ್ತಿ'ಯ ಕಾರಣಕ್ಕೆ ಹೆಚ್ಚುವರಿ ಶುಲ್ಕ ಗ್ರಾಹಕರು ಪಾವತಿಸಬೇಕು ಎಂಬ ಉತ್ತರ ಡೀಲರ್ ಕಡೆ ಇಂದ ಬಂದಿತು.

'ಹೊಸ ಕಾರನ್ನು ರೀಪೇರಿ ಮಾಡ್ತೀವಿ' ಅಂದ ಮಾರುತಿ ಕಂಪನಿಗೆ ಬಿತ್ತು 1 ಲಕ್ಷ ದಂಡ !!

ಡೀಲರ್ ನೀಡಿದ ವಿವರಣೆಯೊಂದಿಗೆ ತೃಪ್ತಿಯಾಗದ ದುರ್ಗಾದೇವಿಯವರು ಚೆನ್ನೈ ಜಿಲ್ಲೆಯ ಉತ್ತರ ಭಾಗದ ಗ್ರಾಹಕರ ವೇದಿಕೆಯ ಅಧ್ಯಕ್ಷರಾದ ಕೆ.ಜಯಬಲಾನ್, ಎಂ. ಎಂ.ರೈರೋಳಿ ಕಣ್ಣನ್ ಅವರನ್ನು ಭೇಟಿ ಮಾಡಿ ಆಗಿರುವ ಮೋಸಕ್ಕೆ ನ್ಯಾಯ ದೊರಕಿಸುವಂತೆ ಕೇಳಿಕೊಂಡರು.

'ಹೊಸ ಕಾರನ್ನು ರೀಪೇರಿ ಮಾಡ್ತೀವಿ' ಅಂದ ಮಾರುತಿ ಕಂಪನಿಗೆ ಬಿತ್ತು 1 ಲಕ್ಷ ದಂಡ !!

ವಿಚಾರಣೆಯನ್ನು ಆಲಿಸಿದ ಕೋರ್ಟ್, ಮೋಸದ ವ್ಯಾವಹಾರ ನೆಡೆದಿದೆ ಎಂದು ತೀರ್ಪು ನೀಡಿದೆ ಹಾಗು ದುರ್ಗಾದೇವಿಯವರಿಗೆ ಪರಿಹಾರದ ಮೊತ್ತವಾಗಿ ರೂ.1 ಲಕ್ಷವನ್ನು ಪಾವತಿಸಲು ಮಾರುತಿ ಸುಜುಕಿ ಡೀಲರ್‌ಗೆ ನಿರ್ದೇಶನ ನೀಡಿದೆ.

'ಹೊಸ ಕಾರನ್ನು ರೀಪೇರಿ ಮಾಡ್ತೀವಿ' ಅಂದ ಮಾರುತಿ ಕಂಪನಿಗೆ ಬಿತ್ತು 1 ಲಕ್ಷ ದಂಡ !!

ಕಳೆದ ಒಂದು ತಿಂಗಳ ಅವಧಿಯಲ್ಲಿ ಮಾರುತಿ ಕಂಪನಿ ನೆಡೆಸಿದ ಮೂರನೇ ಮೋಸದ ಪ್ರಕರಣ ಇದಾಗಿದೆ. ಭಾರತದಲ್ಲಿ ಬಹುತೇಕ ಕಾರು ಡೀಲರ್‌ಗಳು ನಿರ್ವಹಣಾ ಶುಲ್ಕವನ್ನು ಚಾರ್ಜ್ ಮಾಡುತ್ತಿವೆ. ಕಾರು ಮೌಲ್ಯವನ್ನು ಅವಲಂಬಿಸಿ ಈ ಮೊತ್ತ 5,000 ರಿಂದ 50,000ವರೆಗೆ ಇರುತ್ತದೆ.

'ಹೊಸ ಕಾರನ್ನು ರೀಪೇರಿ ಮಾಡ್ತೀವಿ' ಅಂದ ಮಾರುತಿ ಕಂಪನಿಗೆ ಬಿತ್ತು 1 ಲಕ್ಷ ದಂಡ !!

2012ರಲ್ಲಿ ಭಾರತ ಸರ್ಕಾರ ಈ ರೀತಿಯ ಶುಲ್ಕವನ್ನು ವಿಧಿಸುವುದನ್ನು ನಿಷೇದಿಸಿತ್ತು. ಆದರೂ ಸಹ, ಯಾವುದೇ ರೀತಿಯ ನಿಯಮಗಳನ್ನು ಪಾಲಿಸದೆ ಗ್ರಾಹಕರಿಗೆ ಈ ರೀತಿಯ ಶುಲ್ಕ ವಿಧಿಸುತ್ತಿರುವುದು ದುಃಖಕರ ಸಂಗತಿಯಾಗಿದೆ.

Trending on DriveSpark Kannada:

ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

English summary
Consumer Court says handling charges are illegal – Orders Maruti dealer to pay Rs 1 lakh fine.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark