ಕ್ಲಾಸಿಕ್ ಹಾಗೂ ವೀಟೆಂಜ್ ಕಾರು ಮಾಲೀಕರಿಗೆ ಸಿಹಿಸುದ್ದಿ ನೀಡಿದ ಎನ್‌ಜಿಟಿ
ಮಾಲಿನ್ಯ ತಡೆ ಉದ್ದೇಶದಿಂದ ಈ ಹಿಂದೆ 15 ವರ್ಷಗಳ ಮೇಲ್ಪಟ್ಟ ಕಾರುಗಳ ನಿಷೇಧದಿಂದ ಸಂಕಷ್ಟಕ್ಕೆ ಸಿಲುಕಿದ್ದ ಕ್ಲಾಸಿಕ್ ಮತ್ತು ವೀಟೆಂಜ್ ಕಾರು ಮಾಲೀಕರಿಗೆ ರಾಷ್ಟ್ರೀಯ ಹಸಿರು ಪೀಠ ಸಿಹಿಸುದ್ಧಿ ನೀಡಿದ್ದು, ನಿಷೇಧದಿಂದ ಶಾಶ್ವತ ವಿನಾಯ್ತಿ ನೀಡಿದೆ.
ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ ಈ ಹಿಂದೆ 15 ವರ್ಷಗಳ ಮೇಲ್ಪಟ್ಟ ಕಾರುಗಳ ನಿಷೇಧದಿಂದ ಸಂಕಷ್ಟಕ್ಕೆ ಸಿಲುಕಿದ್ದ ಕ್ಲಾಸಿಕ್ ಮತ್ತು ವೀಟೆಂಜ್ ಕಾರು ಮಾಲೀಕರಿಗೆ ರಾಷ್ಟ್ರೀಯ ಹಸಿರು ಪೀಠ ಸಿಹಿಸುದ್ಧಿ ನೀಡಿದ್ದು, ನಿಷೇಧದಿಂದ ಶಾಶ್ವತ ವಿನಾಯ್ತಿ ನೀಡಿದೆ.

ಈ ಹಿಂದೆ ರಾಜಧಾನಿ ದೆಹಲಿಯಲ್ಲಿ ಪರಿಸರ ಮಾಲಿನ್ಯ ತಡೆ ಉದ್ದೇಶದಿಂದ 15 ವರ್ಷ ಮೇಲ್ಪಟ್ಟ ಡೀಸೆಲ್ ಕಾರುಗಳನ್ನು ನಿಷೇಧ ಮಾಡಿ ಮಹತ್ವದ ಆದೇಶ ನೀಡಿದ್ದ ಎನ್‌ಜಿಟಿ, ರಾಜಧಾನಿಯಲ್ಲಿ ಹೆಚ್ಚಿದ ಪರಿಸರ ಮಾಲಿನ್ಯಕ್ಕೆ ಕೊಂಚ ಬ್ರೇಕ್ ಹಾಕಿತ್ತು.

ಆದ್ರೆ ಹೊಸ ಆದೇಶದಿಂದ 15 ವರ್ಷ ಮೇಲ್ಪಟ್ಟ ಡೀಸೆಲ್ ಕಾರುಗಳಿಗೆ ಬ್ರೇಕ್ ಬಿದ್ದಿತ್ತಾದರೂ ವೀಟೆಂಜ್ ಮತ್ತು ಕ್ಲಾಸಿಕ್ ಕಾರುಗಳ ಮಾಲೀಕರಿಗೆ ಶಾಕ್ ಕಾದಿತ್ತು. ಯಾಕೇಂದ್ರೆ ಎನ್‌ಜಿಟಿ ಆದೇಶದಿಂದ ವೀಟೆಂಜ್ ಮತ್ತು ಕ್ಲಾಸಿಕ್ ಕಾರುಗಳು ರಸ್ತೆಗಿಳಿಯಲು ಅವಕಾಶ ಕಳೆದುಕೊಂಡಿದ್ದವು.
Recommended Video


ಹೀಗಾಗಿ ಕ್ಲಾಸಿಕ್ ಮತ್ತು ವೀಟೆಂಜ್ ಕಾರು ಮಾಲೀಕರು ಎನ್‌ಜಿಟಿ ಆದೇಶದಲ್ಲಿ ಕೆಲವು ವಿನಾಯ್ತಿ ನೀಡಬೇಕಾಗಿ ಉನ್ನತ ನ್ಯಾಯಾಲಯಗಳ ಮೆಟ್ಟಿಲೇರಿದ್ದವು. ಕೊನೆಯದಾಗಿ ವೀಟೆಂಜ್ ಮತ್ತು ಕ್ಲಾಸಿಕ್ ಮಾಲೀಕರ ಹೋರಾಟಕ್ಕೆ ಜಯ ಸಿಕ್ಕಿದೆ.

ನ್ಯಾಯಮೂರ್ತಿ ಸ್ವಾತಂತರ್ ಕುಮಾರ್ ಅವರಿದ್ದ ಪೀಠವು ವೀಟೆಂಜ್ ಮತ್ತು ಕ್ಲಾಸಿಕ್ ಕಾರು ಮಾಲೀಕರ ಬೇಡಿಕೆಗೆ ಒಪ್ಪಿಗೆ ಸೂಚಿಸಿದ್ದು, ಕೇಂದ್ರ ಮೋಟಾರ್ ವಾಹನ ವಾಹನಗಳ ನಿಯಮಗಳ ನಿಯಮ 92 (2) (ಸಿ) ಮತ್ತು 1989 ರ ಮೋಟರ್ ವೆಹಿಕಲ್ಸ್ ಆಕ್ಟ್, 1988 ರ ಸೆಕ್ಷನ್ 59 ಅಡಿ "ಪುರಾತನ ಅಥವಾ ವಿಂಟೇಜ್" ವಾಹನಗಳಿಗೆ ವಿನಾಯಿತಿ ನೀಡಿದ್ದಾರೆ.

ಹೀಗಾಗಿ ಹೊಸ ಆದೇಶದಿಂದ ನಿಟ್ಟುಸಿರುವ ಬಿಟ್ಟಿರುವ ವೀಟೆಂಜ್ ಮತ್ತು ಕ್ಲಾಸಿಕ್ ಕಾರುಗಳ ಮಾಲೀಕರು ಕಾರುಗಳ ರ‍್ಯಾಲಿ ಮತ್ತು ಪ್ರದರ್ಶನ ಕೈಗೊಳ್ಳಬಹುದಾಗಿದ್ದು, ಹಸಿರು ಪೀಠ ಆದೇಶದಂತೆ ಪರಿಸರ ಮಾಲಿನ್ಯ ತಡೆಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸಲಹೆ ನೀಡಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಹೆಚ್ಚುತ್ತಿರುವ ಕಾರುಗಳ ಸಂಖ್ಯೆಯಿಂದ ರಾಜಧಾನಿ ದೆಹಲಿ ಪರಿಸರ ಸಾಕಷ್ಟು ಮಲಿನಗೊಳ್ಳುತ್ತಿದ್ದು, ಈ ಹಿನ್ನೆಲೆ ಎನ್‌ಜಿಟಿ 15 ವರ್ಷ ಮೇಲ್ಪಟ್ಟ ಕಾರುಗಳನ್ನು ನಿಷೇಧ ಮಾಡಿತ್ತು. ಆದ್ರೆ ಕಾರುಗಳ ಉತ್ಪಾದನೆ ಕುರಿತು ಇತಿಹಾಸ ತಿಳಿಸಬಲ್ಲ ವಿಟೇಂಜ್ ಮತ್ತು ಕ್ಲಾಸಿಕ್ ಕಾರುಗಳಿಗೆ ಷರತ್ತುಬದ್ಧ ಅವಕಾಶ ನೀಡಿರುವುದು ಸಂತಸದ ವಿಚಾರ.
Trending DriveSpark YouTube Videos
Subscribe To DriveSpark Kannada YouTube Channel - Click Here


Click it and Unblock the Notifications








