ವಿಂಟೇಜ್ ವಾಹನಗಳ ನಿಯಂತ್ರಣಕ್ಕೆ ಹೊಸ ಮಾನದಂಡ ಜಾರಿ ತಂದ ಸಾರಿಗೆ ಇಲಾಖೆ

ವಿಂಟೇಜ್ ವಾಹನಗಳ ನೋಂದಣಿ ಕುರಿತಾದ ಗೊಂದಲಗಳಿಗೆ ಹೊಸ ಮಾರ್ಗಸೂಚಿ ಪಾಲನೆಗೆ ಅಸ್ತು ಎಂದಿರುವ ಕೇಂದ್ರ ಸಾರಿಗೆ ಸಚಿವಾಲಯವು ಹಲವು ಹೊಸ ಮಾನದಂಡಗಳನ್ನು ನಿಗದಿಪಡಿಸಿದೆ.

ವಿಂಟೇಜ್ ವಾಹನಗಳ ನಿಯಂತ್ರಣಕ್ಕೆ ಹೊಸ ಮಾನದಂಡ ಜಾರಿ ತಂದ ಸಾರಿಗೆ ಇಲಾಖೆ

ಭಾರತದಲ್ಲಿ ವಿಂಟೇಜ್ ವಾಹನಗಳ ನೋಂದಣಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿರುವ ಕೇಂದ್ರ ಸಾರಿಗೆ ಇಲಾಖೆಯು ವಿಂಟೇಜ್ ವಾಹನ ಮಾಲೀಕರು ಹಲವಾರು ವಿನಾಯ್ತಿಗಳನ್ನು ನಿಡುವುದರ ಜೊತೆಗೆ ವಿಂಟೇಜ್ ವಾಹನಗಳ ಬಳಕೆಯ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಿದ್ದು, ಹೊಸ ವಿಂಟೇಜ್ ವಾಹನ ನೋಂದಣೆ ಪ್ರಕ್ರಿಯೆ ಮತ್ತು ಮರುನೊಂದಣಿ ಕುರಿತಾದ ಮತ್ತಷ್ಟು ಮಾಹಿತಿಗಳನ್ನು ಇಲ್ಲಿ ತಿಳಿಯೋಣ.

ವಿಂಟೇಜ್ ವಾಹನಗಳ ನಿಯಂತ್ರಣಕ್ಕೆ ಹೊಸ ಮಾನದಂಡ ಜಾರಿ ತಂದ ಸಾರಿಗೆ ಇಲಾಖೆ

50ವರ್ಷಕ್ಕಿಂತ ಹಳೆಯ ವಾಹನಗಳು ಮಾತ್ರ ಅರ್ಹ

ವಿಂಟೇಜ್ ವಾಹನಗಳ ನೋಂದಣಿಗಾಗಿ ಜಾರಿಗೆ ತರಲಾದ ಹೊಸ ನಿಯಮಗಳ ಪ್ರಕಾರ, ಹಳೆಯ ವಾಹನವನ್ನು ವಿಂಟೇಜ್ ಎಂದು ಪರಿಗಣಿಸಲು ನೋಂದಣಿ ದಿನಾಂಕದಿಂದ ಇಂದಿನವರಗೆ ಕನಿಷ್ಠ 50 ವರ್ಷ ಪೂರೈಸಿರಬೇಕು.

ವಿಂಟೇಜ್ ವಾಹನಗಳ ನಿಯಂತ್ರಣಕ್ಕೆ ಹೊಸ ಮಾನದಂಡ ಜಾರಿ ತಂದ ಸಾರಿಗೆ ಇಲಾಖೆ

ಜೊತೆಗೆ ವಿಂಟೇಜ್ ಕಾರು ಮಾಲೀಕರು ತಮ್ಮ ಹಳೆಯ ವಾಹನಗಳ ಸಂಖ್ಯೆಯನ್ನೇ ಮುಂದುವರಿಸಬಹುದಾಗಿದ್ದು ಅಥವಾ ಹೊಸ ನೋಂದಣಿ ಸಂಖ್ಯೆಗೂ ಅರ್ಜಿ ಸಲ್ಲಿಸುವ ಅವಕಾಶ ನೀಡಿದ್ದು, ವಿಂಟೇಜ್ ವಾಹನಗಳನ್ನು ಯಾವುದೇ ಕಾರಣಕ್ಕೂ ವಾಣಿಜ್ಯ ಬಳಕೆ ಮಾಡುವುದಾಗಲಿ ಅಥವಾ ಸಾರ್ವಜನಿಕವಾಗಿ ಸಂಚಾರ ಮಾಡಲು ಯಾವುದೇ ಅವಕಾಶ ನೀಡಲಾಗಿಲ್ಲ.

ವಿಂಟೇಜ್ ವಾಹನಗಳ ನಿಯಂತ್ರಣಕ್ಕೆ ಹೊಸ ಮಾನದಂಡ ಜಾರಿ ತಂದ ಸಾರಿಗೆ ಇಲಾಖೆ

ವಿಂಟೇಜ್ ವಾಹನಗಳನ್ನು ಕೇವಲ ಪ್ರದರ್ಶನ ಉದ್ದೇಶಗಳಿಗೆ ಮಾತ್ರ ಬಳಕೆ ಮಾಡುವ ಅವಕಾಶವಿದ್ದು, ಯಾವುದೇ ಕಾರಣಕ್ಕೂ ನಿಗದಿತ ಪ್ರದೇಶದಿಂದ ಹೊರಗೆ ತೆಗೆದುಕೊಂಡು ಹೋಗುವಂತಿಲ್ಲ.

ವಿಂಟೇಜ್ ವಾಹನಗಳ ನಿಯಂತ್ರಣಕ್ಕೆ ಹೊಸ ಮಾನದಂಡ ಜಾರಿ ತಂದ ಸಾರಿಗೆ ಇಲಾಖೆ

ಇಂಧನ ತುಂಬಿಸಲು ಮಾತ್ರ ಕೆಲವು ವಿನಾಯ್ತಿಯನ್ನು ನೀಡಲಾಗಿದ್ದು, ಇಂಧನ ತುಂಬಿಸಿದ ನಂತರ ಸೂಕ್ತ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ. ಇದನ್ನು ಹೊರತುಪಡಿಸಿ ಸಾರ್ವಜನಿಕವಾಗಿ ಓಡಾಟ ಮತ್ತು ವಾಣಿಜ್ಯ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ವಿಂಟೇಜ್ ವಾಹನಗಳ ನಿಯಂತ್ರಣಕ್ಕೆ ಹೊಸ ಮಾನದಂಡ ಜಾರಿ ತಂದ ಸಾರಿಗೆ ಇಲಾಖೆ

ವಾಹನ ಸ್ಕ್ರಾಪೇಜ್ ನೀತಿ ಜಾರಿಗೆ ಬರುತ್ತಿರುವುದರಿಂದ ಹಳೆಯ ವಾಹನಗಳಿಗೆ ಮುಕ್ತಿ ಹಾಡಲು ಮುಂದಾಗಿರುವ ಕೇಂದ್ರ ಸರ್ಕಾರವು ವಿಂಟೇಜ್ ವಾಹನಗಳ ಪ್ರಿಯರ ಮನವಿಗಳ ಮೇರೆಗೆ ಹೊಸ ಕರಡು ನೀತಿ ರೂಪಿಸಿದ್ದು, 50 ವರ್ಷಕ್ಕಿಂತ ಕಡಿಮೆ ನೋಂದಣಿ ಅವಧಿ ಹೊಂದಿರುವ ವಾಹನಗಳು ಇದೀಗ ಅವಶ್ಯವಾಗಿ ಸ್ಕ್ರಾಪೇಜ್ ನೀತಿ ಅಡಿಯಲ್ಲಿ ಬರಲಿವೆ.

ವಿಂಟೇಜ್ ವಾಹನಗಳ ನಿಯಂತ್ರಣಕ್ಕೆ ಹೊಸ ಮಾನದಂಡ ಜಾರಿ ತಂದ ಸಾರಿಗೆ ಇಲಾಖೆ

ವಿಂಟೇಜ್ ವಾಹನಗಳ ಹೊಸ ನೋಂದಣಿಯ ಪ್ರಕಾರ, ಹಳೆಯ ವಾಹನಗಳನ್ನು ವಿಂಟೇಜ್ ಮಾದರಿಯಾಗಿ ನೋಂದಾಯಿಸಲು ರೂ. 20 ಸಾವಿರ ಶುಲ್ಕ ನಿಗದಿಪಡಿಸಲಾಗಿದ್ದು, ಮರುನೋಂದಣಿಯಾಗಲಿರುವ ವಿಂಟೇಜ್ ವಾಹನಗಳಿಗೆ ರೂ. 5 ಸಾವಿರ ಶುಲ್ಕ ನಿಗದಿಪಡಿಸಲಾಗಿದೆ.

ವಿಂಟೇಜ್ ವಾಹನಗಳ ನಿಯಂತ್ರಣಕ್ಕೆ ಹೊಸ ಮಾನದಂಡ ಜಾರಿ ತಂದ ಸಾರಿಗೆ ಇಲಾಖೆ

ವಿಂಟೇಜ್ ವಾಹನಗಳಾಗಿ ಗುರುತಿಸಿಕೊಳ್ಳುವ ದ್ವಿಚಕ್ರ ವಾಹನಗಳು ಅಥವಾ ಕಾರುಗಳು ಕಡ್ಡಾಯವಾಗಿ ಮೂಲ ರೂಪದಲ್ಲಿ ನಿರ್ವಹಿಸಲ್ಪಡಬೇಕಿದ್ದು, ಕೆಲವು ತಾಂತ್ರಿಕ ಅಂಶಗಳನ್ನು ಹೊರತುಪಡಿಸಿ ಯಾವುದೇ ಗಮನಾರ್ಹ ಮಾರ್ಪಾಡುಗಳನ್ನು ಮಾಡುವಂತಿಲ್ಲವೆಂದು ಸ್ಪಷ್ಟಪಡಿಸಲಾಗಿದೆ.

ವಿಂಟೇಜ್ ವಾಹನಗಳ ನಿಯಂತ್ರಣಕ್ಕೆ ಹೊಸ ಮಾನದಂಡ ಜಾರಿ ತಂದ ಸಾರಿಗೆ ಇಲಾಖೆ

ಹೊಸದಾಗಿ ನೋಂದಣಿಯಾಗುವ ವಿಂಟೇಜ್ ವಾಹನಗಳ ಮಾಲೀಕರು ವಿಶೇಷ ಶ್ರೇಣಿಯ ನೋಂದಣಿ ಸಂಖ್ಯೆಯನ್ನು ಸ್ವೀಕರಿಸಲಿದ್ದು, ವಿಎ(ವಿಂಟೇಜ್ ವೆಹಿಕಲ್) ಮತ್ತು ಸರಣಿಯಲ್ಲಿ ನೋಂದಣಿಗಳು ಲಭ್ಯವಾಗಲಿವೆ.

Most Read Articles

Kannada
English summary
New Registration Rules Announced For Vintage Vehicles. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X