ವೊಲ್ವೋ ಪ್ರಿಮಿಯಂ ಎಸ್‌ಯುವಿ ಎಕ್ಸ್‌ಸಿ 40 ಕಾರಿನ ರಹಸ್ಯ ಚಿತ್ರಗಳು ಸೋರಿಕೆ

ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ ವೊಲ್ಪೋ ಬಹುನೀರಿಕ್ಷಿತ ಎಕ್ಸ್‌ಸಿ 40 ಕಾರು ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಟೀಸರ್ ಬಿಡುಗಡೆಗೂ ಮುನ್ನ ಹೊಸ ಕಾರಿನ ರಹಸ್ಯ ಚಿತ್ರಗಳು ಸೋರಿಕೆಯಾಗಿವೆ.

By Praveen

ಮಧ್ಯಮ ಗಾತ್ರದ ಪ್ರಿಮಿಯಂ ಎಸ್‌ಯುವಿ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೆ ಸಿದ್ಧಗೊಳ್ಳುತ್ತಿರುವ ವೊಲ್ಪೋ ಬಹುನೀರಿಕ್ಷಿತ ಎಕ್ಸ್‌ಸಿ 40 ಕಾರು ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಟೀಸರ್ ಬಿಡುಗಡೆಗೂ ಮುನ್ನ ಹೊಸ ಕಾರಿನ ರಹಸ್ಯ ಚಿತ್ರಗಳು ಸೋರಿಕೆಯಾಗಿವೆ.

ವೊಲ್ವೋ ಎಕ್ಸ್‌ಸಿ 40 ಕಾರಿನ ರಹಸ್ಯ ಚಿತ್ರಗಳು ಸೋರಿಕೆ

ಸ್ವೀಡಿಷ್ ಕಾರು ತಯಾರಕ ಸಂಸ್ಥೆಯಾಗಿರುವ ವೊಲ್ಪೋ ಪ್ರಸ್ತುತ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಿಮಿಯಂ ಎಸ್‌ಯುವಿ ಮಾದರಿಯ ಎಕ್ಸ್‌ಸಿ 40 ಕಾರನ್ನು ಇದೇ ಮುಂದಿನ ತಿಂಗಳು 21ರಂದು ಬಿಡುಗಡೆಗೊಳಿಸುತ್ತಿದ್ದು, ಎಸ್‌ಯುವಿ ವಿಭಾಗಕ್ಕೆ ಅತ್ಯುತ್ತಮ ಕಾರು ಮಾದರಿಯೊಂದನ್ನು ಪರಿಚಯಿಸುತ್ತಿದೆ.

ವೊಲ್ವೋ ಎಕ್ಸ್‌ಸಿ 40 ಕಾರಿನ ರಹಸ್ಯ ಚಿತ್ರಗಳು ಸೋರಿಕೆ

ಆದ್ರೆ ಬಿಡುಗಡೆ ಮುನ್ನ ಹೊಸ ಕಾರಿನ ಚಿತ್ರಗಳು ಸೋರಿಕೆಯಾಗಿದ್ದು, ವಿಶಿಷ್ಟ ಮಾದರಿಯ ಬಾಹ್ಯ ಮತ್ತು ಆಂತರಿಕ ಬಣ್ಣ ಸಂಯೋಜನೆಯೊಂದಿಗೆ ಅಭಿವೃದ್ಧಿಯಾಗಿರುವ ವೊಲ್ವೋ ಎಕ್ಸ್‌ಸಿ 40 ಕಾರು ಐಷಾರಾಮಿ ವಿನ್ಯಾಸಗಳಿಂದಾಗಿ ಆಕರ್ಷಣೆಯ ಕೇಂದ್ರವಾಗಿದೆ ತಪ್ಪಾಗಲಾರದು.

ವೊಲ್ವೋ ಎಕ್ಸ್‌ಸಿ 40 ಕಾರಿನ ರಹಸ್ಯ ಚಿತ್ರಗಳು ಸೋರಿಕೆ

ಇನ್ನೊಂದು ವಿಶೇಷ ಅಂದ್ರೆ ಎಕ್ಸ್‌40 ಕಾರು ತಯಾರಿಕೆ ವಿಚಾರದಲ್ಲಿ ಕಾರು ವಿನ್ಯಾಸಕಾರರಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದ ವೊಲ್ಪೋ, ಚಾಲಕನಿಗೆ ಇದೊಂದು ಅತ್ಯುತ್ತಮ ಮಾದರಿಯಾಗುವ ರೀತಿಯಲ್ಲಿ ಕಾರು ಉತ್ಪಾದನೆಗೆ ಸೂಚನೆ ನೀಡಿತ್ತು.

ವೊಲ್ವೋ ಎಕ್ಸ್‌ಸಿ 40 ಕಾರಿನ ರಹಸ್ಯ ಚಿತ್ರಗಳು ಸೋರಿಕೆ

ಈ ಹಿನ್ನೆಲೆ ಹೊಸ ಕಾರಿನ ಬಗ್ಗೆ ಭಾರೀ ನೀರಿಕ್ಷೆ ಇಟ್ಟುಕೊಂಡಿರುವ ವೊಲ್ವೋ ಸಂಸ್ಥೆಯು, ಎಕ್ಸ್‌ಸಿ40 ಕಾರಿನ ಚಾಲನೆ ವೇಳೆ ಚಾಲಕರು ತಮ್ಮ ವ್ಯಕ್ತಿತ್ವ ತೆರೆದುಕೊಳ್ಳಿ ಎಂಬ ಘೋಷವಾಕ್ಯದೊಂದಿಗೆ ಹೊಸ ಕಾರನ್ನು ಸಿದ್ಧಗೊಳಿಸಿದೆ.

ವೊಲ್ವೋ ಎಕ್ಸ್‌ಸಿ 40 ಕಾರಿನ ರಹಸ್ಯ ಚಿತ್ರಗಳು ಸೋರಿಕೆ

ಎಂಜಿನ್

ಮೂಲಗಳ ಪ್ರಕಾರ 1.5-ಲೀಟರ್ ಮತ್ತು 2.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗ ಎಕ್ಸ್‌ಸಿ 40 ಬಿಡುಗಡೆ ಸಾಧ್ಯತೆಯಿದ್ದು, ಸೆಪ್ಟೆಂಬರ್ 21ರಂದು ಹೊಸ ಕಾರಿನ ಮತ್ತಷ್ಟು ಮಾಹಿತಿಗಳು ಲಭ್ಯವಾಗಲಿವೆ.

ವೊಲ್ವೋ ಎಕ್ಸ್‌ಸಿ 40 ಕಾರಿನ ರಹಸ್ಯ ಚಿತ್ರಗಳು ಸೋರಿಕೆ

ಇನ್ನು ಕಾರಿನ ಒಳಭಾಗದಲ್ಲಿ ಬೆಚ್ಚಗಿನ ಲಾವಾ ಆರೆಂಜ್ ಕಾರ್ಪೆಟ್, ಆಕ್ಸೈಡ್ ರೆಡ್, ನಗರ ವಿನ್ಯಾಸಗಳು ಮತ್ತು ಕಾರ್ಟೋಗ್ರಫಿಗಳಿಂದ ಸ್ಫೂರ್ತಿ ಪಡೆದ ವಿನ್ಯಾಸಗಳು ಎಕ್ಸ್‌ಸಿ 40 ಅಂದಕ್ಕೆ ಮತ್ತಷ್ಟು ಮೆರಗು ನೀಡಿವೆ.

ವೊಲ್ವೋ ಎಕ್ಸ್‌ಸಿ 40 ಕಾರಿನ ರಹಸ್ಯ ಚಿತ್ರಗಳು ಸೋರಿಕೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಬಹುದಿನಗಳಿಂದ ಇಂತದೊಂದು ವಿಶಿಷ್ಠ ವಿನ್ಯಾಸದ ಕಾರು ಒಂದನ್ನು ಬಿಡುಗಡೆ ಮಾಡುವ ಬಗ್ಗೆ ಯೋಜನೆ ರೂಪಿಸುತ್ತಿದ್ದ ವೊಲ್ವೋ ಈ ಬಾರಿ ಎಕ್ಸ್‌ಸಿ 40ನೊಂದಿಗೆ ಮರ್ಸಿಡಿಸ್ ಬೆಂಝ್ ಜಿಎಲ್ಎ, ಬಿಎಂಡಬ್ಲ್ಯು ಎಕ್ಸ್1 ಮತ್ತು ಆಡಿ ಕ್ಯೂ3 ಮಾದರಿಗಳಿಗೆ ತೀವ್ರ ಸ್ಪರ್ಧೆ ನೀಡಲಿದೆ.

More from DriveSpark

Article Published On: Saturday, September 16, 2017, 19:15 [IST]
English summary
Read in Kannada about Volvo XC40 Leaked Ahead Of Debut.
Read more on ವೊಲ್ವೋ volvo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+