ಭಾರತಕ್ಕೂ ಬರಲಿದೆಯೆ ಹೊಸ ಮಿಟ್ಸುಬಿಷಿ ಮೊಂಟೆರೊ ಫೇಸ್‍ಲಿಫ್ಟ್ ಕಾರು..??
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಮಿಟ್ಸುಬಿಷಿ ತಮ್ಮ ಹೊಸ ಮೊಂಟೆರೊ ಎಸ್‍ಯುವಿ ಕಾರಿನ ಫೇಸ್‍ಲಿಫ್ಟ್ ಮಾದರಿಯನ್ನು ಬಹಿರಂಗಗೊಳಿಸಿದೆ.
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಮಿಟ್ಸುಬಿಷಿ ತಮ್ಮ ಹೊಸ ಮೊಂಟೆರೊ ಎಸ್‍ಯುವಿ ಕಾರಿನ ಫೇಸ್‍ಲಿಫ್ಟ್ ಮಾದರಿಯನ್ನು ಬಹಿರಂಗಗೊಳಿಸಿದೆ. ಇನ್ನು ಕೆಲವೆ ತಿಂಗಳುಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಮೊಂಟೆರೊ ಫೇಸ್‍ಲಿಫ್ಟ್ ಕಾರು ಆಕರ್ಷಕ ವಿನ್ಯಾಸವನ್ನು ಪಡೆದುಕೊಂಡಿದೆ.

ಮೊಂಟೆರೊ ಫೇಸ್‍ಲಿಫ್ಟ್ ಎಸ್‍ಯುವಿ ಹಲವಾರು ಪ್ರೀಮಿಯಮ್ ನವೀಕರಣವನ್ನು ಪಡೆದುಕೊಂಡಿದ್ದು, ಕಾರಿನ ಮುಂಭಾಗದಲ್ಲಿ ಸ್ಲೇಟ್ ಅನ್ನು ಅಳವಡಿಸಲಾಗಿರುವ ಕ್ರೋಮ್ ಫಿನಿಷ್ಡ್ ಗ್ರಿಲ್, ಕ್ರೋಮ್ ಫಿನಿಷ್ಡ್ ಫ್ರಂಟ್ ಬಂಪರ್, ಕಾರಿನ ಹುಡ್ ಮೇಲೆ ಪಜೆರೊ ಹೆಸರನ್ನು ಬಂಗಾರದ ಬಣ್ಣದಲ್ಲಿ ಹಾಗು ಕಾರಿನ ಫ್ರಂಟ್ ಗ್ರಿಲ್‍ನ ಮೇಲೆ ಮಿಟ್ಸುಬಿಷಿ ಲೋಗೊವನ್ನು ಅಳವಡಿಸಲಾಗಿದೆ.

ಮೊಂಟೆರೊ ಫೇಸ್‍ಲಿಫ್ಟ್ ಎಸ್‍ಯುವಿ ಕಾರಿನ ಹಿಂಭಾಗದಲ್ಲಿ ಟೈಲ್ ಲ್ಯಾಂಪ್‍ನ ಹಾಗು ಕ್ರೋಮ್ ಮೇಲೆ ಮತ್ತು ಲೋಗೊವನ್ನು ಹಾಗು ಬಂಗಾರದ ಬಣ್ಣದಿಂದ ಜ್ಜುಗೊಳಿಸಲಾಗಿದ್ದು, ಬದಿಗಳಲ್ಲಿ ಯಾವುದೆ ಹಿಂದಿನ ಮಾದರಿಯ ಕಾರಿನ ವಿನ್ಯಾಸವನ್ನೆ ಹೋಲಲಿದೆ.

ಮೊಂಟೆರೊ ಫೇಸ್‍ಲಿಫ್ಟ್ ಎಸ್‍ಯುವಿ ಕಾರಿನ ಕ್ಯಾಬಿನ್ ಅನ್ನು ಕೂಡಾ ಮರುವಿನ್ಯಾಸಗೊಳಿಸಲಾಗಿದ್ದು ಫೌಕ್ಸ್ ವುಡ್ ಫಿನಿಷ್, ನವೀಕರಿಸಲಾದ ಇನ್ಫೋಟೈನ್ಮೆಂಟ್ ಸಿಸ್ಟಮ್, ವೈರ್‍ಲೆಸ್ ಚಾರ್ಜಿಂಗ್, ಹೀಟೆಡ್ ಸೀಟಿಂಗ್ ಮತ್ತು ಫೌಕ್ಸ್ ವುಡ್ ಫಿನಿಷ್‍ನಿಂದ ಒಳಭಾಗವನ್ನು ಸಜ್ಜುಗೊಳಿಸಲಾಗಿದೆ.

ಚೀನಾದಲ್ಲಿನ ಮಿಟ್ಸುಬಿಷಿ ಮೊಂಟೆರೊ ಕಾರು 3.0 ಲೀಟರ್ ವಿ6 ಪೆಟ್ರೋಲ್ ಎಂಜಿನ್ ಸಹಾಯದಿಂದ 174ಬಿಹೆಚ್‍ಪಿ ಮತ್ತು 255ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಇನ್ನು 2016ರಲ್ಲಿ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಟ್ಟ ಮಿಟ್ಸುಬಿಷಿ ಮೊಂಟೆರೊ ಕಾರುಗಳು, 3.2 ಲೀಟರ್ ಡೈರೆಕ್ಟ್ ಇಂಜೆಕ್ಷನ್ ಡೀಸೆಲ್ ಎಂಜಿನ್ ಸಹಾಯದಿಂದ 192ಬಿಹೆಚ್‍ಪಿ ಮತ್ತು 441ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿತ್ತು.

2016ರಲ್ಲಿ ಬಿಡುಗಡೆಗೊಂಡ ಮಿಟ್ಸುಬಿಷಿ ಮೊಂಟೆರೊ ಭಾರತಕ್ಕೆ ಸಿಬಿಯು ಮಾರ್ಗದಿಂದ ಆಮದು ಮಾದಿಕೊಳ್ಳಲಾಗಿದ್ದು, ಮಾರುಕಟ್ಟೆಯಲ್ಲಿ ಆಡಿ ಕ್ಯೂ7, ವೋಲ್ವೊ ಎಕ್ಸ್ ಸಿ90, ಬಿಎಮ್‍ಡಬ್ಲ್ಯೂ ಎಕ್ಸ್5 ಮತ್ತು ಮರ್ಸಿಡಿಸ್ ಜಿಎಲ್ಎಕ್ಸ್ ಕಾರುಗಳಿಗೆ ಪೈಪೋಟಿ ನೀಡುತ್ತಿದ್ದವು.

ಆದರೆ ಭಾರತದಲ್ಲಿ ಕಡಿಮೆ ಸಂಖ್ಯೆಯಲ್ಲಿ ಮಿಟ್ಸುಬಿಷಿ ಕಾರಿನ ಸರ್ವೀಸ್ ಸೆಂಟರ್‍ಗಳು ಇರುವುದರಿಂದ ಹಾಗು ನಿರ್ವಹಣೆಯ ವೆಚ್ಚವೂ ಸಹ ದುಬಾರಿಯಾದ ಕಾರಣ ಗ್ರಾಹಕರು ಇದನ್ನು ಕೊಳ್ಳಲು ಮುಂದಾಗಲಿಲ್ಲ. ಈನಿಟ್ಟಿನಲ್ಲಿ ಸಂಸ್ಥೆಯು ಈ ಕಾರನ್ನು ಹಾರತದ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಿಲ್ಲ ಎನ್ನಲಾಗಿದ್ದು, ಚೀನಾದಲ್ಲಿ ಮಿಟ್ಸುಬಿಷಿ ಮೊಂಟೆರೊ ಫೇಸ್‍ಲಿಫ್ಟ್ ಕಾರು ರೂ.36,24,014 ಲಕ್ಷದ ಪ್ರಾರಭಿಕ ಬೆಲೆಯಲ್ಲಿ ಬಿಡುಗಡೆಗೊಳ್ಳಲ್ಲಿದೆ.


Click it and Unblock the Notifications








