TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಬರಲಿದೆ ನಿಸ್ಸಾನ್ ಸಂಸ್ಥೆಯಿಂದ ಹೊಸ ಎಸ್‍ಯುವಿ ಕಾರು..
ಜಪಾನ್ ಮೂಲದ ವಾಹನ ತಯಾಕರ ಸಂಸ್ಥೆಯಾದ ನಿಸ್ಸಾನ್ 2019ರಲ್ಲಿ ಹ್ಯುಂಡೈ ಕ್ರೆಟಾ ಕಾರಿಗೆ ಪೈಪೋಟಿ ನೀಡಲು ಹೊಸ ಎಸ್‍ಯುವಿ ಕಾರನ್ನು ಬಿಡುಗಡೆಗೊಳಿಸುವ ಯೋಜನೆಯಿದ್ದು, ಈ ನಿಟ್ಟಿನಲ್ಲಿ ಹೊಸ ಫ್ಲಾಟ್‍ಫಾರ್ಮ್‍ನ ಅಡಿಯಲ್ಲಿ ತಯಾರಿಸಲಾದ ಈ ಎಸ್‍ಯುವಿ ಕಾರಿನ ಎಂಜಿನ್ ಕಾರ್ಯಕ್ಷಮತೆಗಾಗಿ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ನಿಸ್ಸಾನ್ ಕಿಕ್ಸ್ ಎಂಬ ಹೆಸರಿನಲ್ಲಿ ಮಾರಾಟಗೊಳ್ಳಲ್ಲಿರುವ ಈ ಎಸ್‍ಯುವಿ ಕಾರು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೆಸರನ್ನು ಹೊತ್ತು ಲಗ್ಗೆಯಿಡಲಿದೆ. ಇದೀಗ ಹೊಸ ತಲೆಮಾರಿನ ಈ ಕಾರು ಭಾರತೀಯ ರಸ್ತೆಗಳಲ್ಲಿ ಮೊದಲ ಬಾರಿಗೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ.
5 ಆಸನವುಳ್ಳ ನಿಸ್ಸಾನ್ ಕಿಕ್ಸ್ ಎಸ್‍ಯುವಿ ಬೋಲ್ಡ್ ಸ್ಟೈಲಿಷ್ ಬೊನೆಟ್, ದಟ್ಟವಾದ ವ್ಹೀಲ್ ಆರ್ಚ್ಸ್, ವಿಶಿಷ್ಟವಾದ ಫ್ರಂಟ್ ಗ್ರಿಲ್ ಮತ್ತು ವಿಂಡ್‍ಸ್ಕ್ರೀನ್ ಅನ್ನು ಪಡೆದುಕೊಂಡಿದೆ. ಒಟ್ಟಾರೆಯಾಗಿ ನಿಸ್ಸಾನ್ ಸಂಸ್ಥೆಯು ಈ ಬಾರಿ ದೇಶಿಯ ಮಾರಕಟ್ಟೆಗೆ ಸ್ಟೈಲಿಶ್ ಎಸ್‍ಯುವಿ ಕಾರನ್ನು ನೀಡಲಿದೆ.
ನಿಸ್ಸನ್ ಕಿಕ್ಸ್ ಎಂದು ಕರೆಲ್ಪಡುತ್ತಿರುವ ಈ ಎಸ್‍ಯುವಿ ಕಾರಿನ ಒಳಭಾಗದಲ್ಲಿ 7.0 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಫ್ಲ್ಯಾಟ್ ಬಾಟಮ್ ಸ್ಟೀರಿಂಗ್ ವ್ಹೀಲ್ಸ್ ಅನ್ನು ಅಳವಡಿಸಲಾಗಿದೆ.
ಜಾಗತಿಕವಾಗಿ ಬಿಡುಗಡೆಗೊಳ್ಳಲ್ಲಿರುವ ಈ ಎಸ್‍ಯುವಿ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಆಕ್ಟೀವ್ ಟ್ರಾಕ್ಷನ್ ಕಂಟ್ರೋಲ್, ಮೋವಿಂಗ್ ಅಬ್ಸ್ಟಕಲ್ ಡಿಟೆಕ್ಷನ್, ಡಿನಾಮಿಕ್ ಬ್ರೇಕ್ ಕಂಟ್ರೋಲ್, ಆಕ್ಟಿವ್ ಬ್ರೇಕ್ ಅಸ್ಸಿಸ್ಟ್ ಅನ್ನು ಅಳವಡಿಸಲಾಗಿದ್ದು, ಈ ಸುರಕ್ಷಾ ವೈಶಿಷ್ಟ್ಯತೆಗಳು ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ಎಸ್‍ಯುವಿ ಕಾರಿನಲ್ಲಿ ಅಳವಡಿಸಲಿದೆಯೆ ಎಂದು ಕಾಯ್ದು ನೋಡಬೇಕಿದೆ.
ಆದರೆ ಭಾರತಕ್ಕೆ ಬರಲಿರುವ ನಿಸ್ಸಾನ್ ಕಿಕ್ಸ್ ಎಸ್‍ಯುವಿ ಕಾರುಗಳಲ್ಲಿ ಆಟೋಮ್ಯಾಟಿಕ್ ಎಸಿ, ರಿಯರ್ ಎಸಿ ವೆಂಟ್ಸ್, ಸನ್‍ರೂಫ್, ಕೀಲೆಸ್ ಎಂಟ್ರಿ, ಸ್ಟಾರ್ಟ್ ಸ್ಟಾಪ್ ಬಟನ್, ಡ್ರೈವರ್ ಸೀಟ್ ಹೈಟ್ ಅಡ್ಜಸ್ಟ್, ಡ್ಯುಯಲ್ ಫ್ರಂಟ್ ಏರ್‍ಬ್ಯಾಗ್ಸ್, ಎಬಿಎಸ್, ಇಬಿಡಿ, ಬ್ರೇಕ್ ಅಸ್ಸಿಸ್ಟ್ ಮತ್ತು ಎಂಜಿನ್ ಇಮ್ಮೊಬಿಲೈಜರ್ ಅನ್ನು ಒದಗಿಸಬಹುದೆಂಬ ಬರವಸೆ ಇದೆ. ಅಲ್ಲದೇ ಕಾರಿನ ಟಾಪ್ ಎಂಡ್ ಸ್ಪೆಕ್ ಮಾಡಲ್‍ನಲ್ಲಿ ಹಿಲ್ ಲಾಂಚ್ ಅಸ್ಸಿಸ್ಟ್ ಮತು ಡೆಸ್ಸೆಂಟ್ ಅಸ್ಸಿಟ್ ವೈಶಿಷ್ಟ್ಯತೆಗಳನ್ನು ಪಡೆಯಲಿದೆ ಎನ್ನಲಾಗಿದೆ.
ಎಂಜಿನ್ ವಿಚಾರದಲ್ಲಿ ನಿಸ್ಸಾನ್ ಕಿಕ್ಸ್ ಎಸ್‍ಯುವಿ ಕಾರು ಟೆರ್ರಾನೊ ಕಾರಿನಲ್ಲಿ ಬಳಸಲಾದ ಎಂಜಿನ್ ಅನ್ನೆ ಪಡೆದುಕೊಳ್ಳಲಿದೆ. 1.5 ಲೀಟರ್ ಡೀಸೆಲ್ ಎಂಜಿನ್ 110 ಬಿಹೆಚ್‍ಪಿ ಮತ್ತು 245ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಲಿದ್ದು ಏಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಇನ್ನು 1.6 ಲೀಟರ್ ಪೆಟ್ರೋಲ್ ಎಂಜಿನ್ 106ಬಿಹೆಚ್‍ಪಿ ಮತ್ತು 142ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಬಲ್ಲ ಸಾಮರ್ಥ್ಯವನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಅಲ್ಲದೇ ಈ ಕಾರಿನ ಪೆಟ್ರೋಲ್ ಎಂಜಿನ್‍ಗಳು ಸಿವಿಟಿ ಗೇರ್‍ಬಾಕ್ಸ್ ಅನ್ನು ಕೂಡ ಪಡೆದಿರಲಿದೆ.
ಡ್ರೈವ್‍ಸ್ಪಾರ್ಕ್ ಕನ್ನಡ ಅಭಿಪ್ರಾಯ
ದೇಶಿಯ ಮಾರುಕಟ್ಟೆಯಲ್ಲಿ ಎಸ್‍ಯುವಿ ಕಾರುಗಳ ಬೇಡಿಕೆಯು ಹೆಚ್ಚಾಗುತ್ತಿದು, ನಿಸ್ಸಾನ್ ಸಂಸ್ಥೆಯು ತಮ್ಮ ಕಿಕ್ಸ್ ಕಾರನ್ನು ಬಿಡುಗಡೆಗೊಳಿಸುವ ವೇಳೆಯಲ್ಲೆ ಟಾಟಾ ಸಂಸ್ಥೆಯು ತಮ್ಮ ಹ್ಯಾರಿಯರ್, ಎಮ್‍ಜಿ ಮೋಟರ್ಸ್ ತಮ್ಮ ಎಸ್‍ಯುವಿ ಕಾರು ಮತ್ತು ಮಹೀಂದ್ರಾ ಸಂಸ್ಥೆಯು ಕೂಡಾ ಒಂದು ಎಸ್‍ಯುವಿ ಕಾರನ್ನು ಬಿಡುಗಡೆಗೊಳಿಸಲಿದೆ. ಆದರೇ ನಿಸ್ಸಾನ್ ಸಂಸ್ಥೆಯು ತಮ್ಮ ಕಿಕ್ಸ್ ಕಾರಿನಿಂದ ಎಷ್ಟರ ಮಟ್ಟಿಗೆ ಜನಪ್ರಿಯತೆಯನ್ನು ಪಡೆಯಲಿದೆ ಎಂದು ಕಾಯ್ದು ನೋಡಬೇಕಿದೆ.