ಮೇ 18ಕ್ಕೆ ಟೊಯೊಟಾ ಯಾರಿಸ್ ಬಿಡುಗಡೆಯಾಗುವುದು ಕನ್ಫರ್ಮ್

ಸೆಡಾನ್ ಪ್ರಿಯರ ಕುತೂಹಲಕ್ಕೆ ಕಾರಣವಾಗಿರುವ ಟೊಯೊಟಾ ಯಾರಿಸ್ ಕಾರುಗಳು ಬಿಡುಗಡೆಗೆ ಸಜ್ಜುಗೊಂಡಿದ್ದು, ಮೇ 18ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದು ಖಚಿತ ಎನ್ನಲಾಗಿದೆ.

By Rahul Ts

2018ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಳ್ಳುವ ಮೂಲಕ ಸೆಡಾನ್ ಪ್ರಿಯರ ಕುತೂಹಲಕ್ಕೆ ಕಾರಣವಾಗಿರುವ ಟೊಯೊಟಾ ಯಾರಿಸ್ ಕಾರುಗಳು ಬಿಡುಗಡೆಗೆ ಸಜ್ಜುಗೊಂಡಿದ್ದು, ಮೇ 18ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವುದು ಖಚಿತ ಎನ್ನಲಾಗಿದೆ.

ಮೇ 18ಕ್ಕೆ ಟೊಯೊಟಾ ಯಾರಿಸ್ ಬಿಡುಗಡೆಯಾಗುವುದು ಕನ್ಫರ್ಮ್

ಟೊಯೊಟಾ ಸಂಸ್ಥೆಯು ಯಾರಿಸ್ ಸೆಡಾನ್ ಕಾರುಗಳನ್ನು ಮೇ 18ರಂದು ಬಿಡುಗಡೆಗೊಳಿಸಲಿದ್ದು, ಖರೀದಿಗಾಗಿ ಏಪ್ರಿಲ್ 22ರಿಂದ ರೂ. 50 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಮಾಡಬಹುದಾಗಿದೆ. ಆದರೂ ದೆಹಲಿಯ ಹಲವು ಟೊಯೊಟಾ ಡೀಲರ್‍‍ಗಳು ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಈಗಾಗಲೇ ಆರಂಭಗೊಳಿಸಿದ್ದಾರೆ.

ಮೇ 18ಕ್ಕೆ ಟೊಯೊಟಾ ಯಾರಿಸ್ ಬಿಡುಗಡೆಯಾಗುವುದು ಕನ್ಫರ್ಮ್

ಸೆಡಾನ್ ಕಾರುಗಳಲ್ಲೇ ವಿಶೇಷ ವಿನ್ಯಾಸಗಳನ್ನು ಹೊಂದಿರುವ ಯಾರಿಸ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಸಿಯಾಜ್, ಸ್ಕೋಡಾ ರ‍್ಯಾಪಿಡ್, ಫೋಕ್ಸ್‌ವ್ಯಾಗನ್ ವೆಂಟೊ ಮತ್ತು ಹೋಂಡಾ ಸಿಟಿ ಕಾರುಗಳಿಗೆ ಇದು ತೀವ್ರ ಪೈಪೋಟಿ ನೀಡಲಿದ್ದು, ಪ್ರಯಾಣಿಕ ಕಾರು ವಿಭಾಗದಲ್ಲಿ ಹೊಸ ಟ್ರೆಂಡ್ ಸೃಷ್ಠಿಸುವ ವಿಶ್ವಾಸದಲ್ಲಿದೆ.

ಮೇ 18ಕ್ಕೆ ಟೊಯೊಟಾ ಯಾರಿಸ್ ಬಿಡುಗಡೆಯಾಗುವುದು ಕನ್ಫರ್ಮ್

ಹೊಸ ಕಾರಿನ ವೈಶಿಷ್ಟ್ಯತೆ

ವೃತ್ತಾಕಾರದ ಫುಲ್ ಎಲ್ಇಡಿ ಹೆಡ್‌ಲ್ಯಾಂಪ್ ಹೊಂದಿರುವ ಯಾರಿಸ್, ಎಲ್ಇಡಿ ಡೇ ಟೈಮ್ ಲೈಟ್, ಫ್ರಂಟ್ ಬಂಪರ್, ಫುಲ್ ಎಲ್ಇಡಿ ಟೈಲ್ ಲೈಟ್ಸ್, ಡ್ಯುಯಲ್ ಟೋನ್ ಇಂಟಿರಿಯರ್, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಸಂಜ್ಞೆಗಳ ಮೂಲಕ ನಿಯಂತ್ರಿಸಬಹುದಾದ ತಾಂತ್ರಿಕ ಪ್ರತಿಫಲಕವನ್ನು ನೀಡಲಾಗಿದೆ.

ಮೇ 18ಕ್ಕೆ ಟೊಯೊಟಾ ಯಾರಿಸ್ ಬಿಡುಗಡೆಯಾಗುವುದು ಕನ್ಫರ್ಮ್

ಅಲ್ಲದೇ ಟರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ, ಮೂರು ನೆಕ್ ರೆಸ್ಟ್ರೈಂಟ್ಸ್ ಅನ್ನು ಅಡ್ಜಸ್ಟ್ ಮಾಡಿಕೊಳ್ಳಬಹುದಾದ 60:40 ಸ್ಪ್ಲಿಟ್ ರೀರ್ ಸೀಟ್ಸ್, ರೂಫ್ ಮೌನ್ಟೆಡ್ ರೀರ್ ಏರ್-ಕಾನ್, 7ಏರ್‍‍ಬ್ಯಾಗ್ಸ್, ಆಲ್ ವೀಲ್ ಡಿಸ್ಕ್ ಬ್ರೇಕ್, ಹಿಲ್ ಸ್ಟಾರ್ಟ್ ಅಸ್ಸಿಸ್ಟ್, ಎಬಿಎಸ್, ಇಬಿಡಿ ಮತ್ತು ಇಎಸ್‍ಪಿ ವೈಶಿಷ್ಟ್ಯತೆಗಳನ್ನು ಪಡೆದಿವೆ.

ಮೇ 18ಕ್ಕೆ ಟೊಯೊಟಾ ಯಾರಿಸ್ ಬಿಡುಗಡೆಯಾಗುವುದು ಕನ್ಫರ್ಮ್

ಎಂಜಿನ್ ಸಾಮರ್ಥ್ಯ

ಯಾರಿಸ್ ಕಾರು ಮಾದರಿಗಳು 1.5-ಲೀಟರ್ ಪೆಟ್ರೋಲ್ ಎಂಜಿನ್ ಪರಿಚಯಿಸಲಿರುವ ಟೊಯೊಟಾ, 6-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಮತ್ತು 7-ಸ್ಟೆಪ್ ಸಿವಿಟಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ ಹೊಂದಿರಲಿವೆ.

ಮೇ 18ಕ್ಕೆ ಟೊಯೊಟಾ ಯಾರಿಸ್ ಬಿಡುಗಡೆಯಾಗುವುದು ಕನ್ಫರ್ಮ್

ಹೊಸ ಟೊಯೊಟಾ ಕಾರುಗಳು ಕರ್ನಾಟಕದ ಪ್ಲಾಂಟ್‍‍ನಲ್ಲಿ ತಯಾರಾಗುತಿದ್ದು, ಕಾರಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ 8.4 ಲಕ್ಷದಿಂದ ಆರಂಭಿಕ ಬೆಲೆಯನ್ನು ನಿಗದಿಪಡಿಸಲಾಗಿದೆ.

ಮೇ 18ಕ್ಕೆ ಟೊಯೊಟಾ ಯಾರಿಸ್ ಬಿಡುಗಡೆಯಾಗುವುದು ಕನ್ಫರ್ಮ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಸ್‌ಯುವಿ ಆವೃತ್ತಿಗಳಲ್ಲಿ ತನ್ನದೇ ಆದ ಬೇಡಿಕೆ ಹೊಂದಿರುವ ಟೊಯೊಟಾ ಸಂಸ್ಥೆಯು ಸೆಡಾನ್ ವಿಭಾಗದಲ್ಲಿ ಮತ್ತಷ್ಟು ಜನಪ್ರಿಯತೆ ಪಡೆಯುವ ನಿಟ್ಟಿನಲ್ಲಿ ಹೊಸ ಉತ್ಪನ್ನಗಳನ್ನು ಪರಿಚಯಿಸುತ್ತಿದ್ದು, ಯಾರಿಸ್ ಹೊಸ ಸಂಚಲನ ಉಂಟು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಹೊಸ ಕಾರುಗಳ ಉತ್ಪಾದನೆಗಾಗಿ ಒಂದಾದ ಟೊಯೊಟಾ ಮತ್ತು ಸುಜುಕಿ ಮೋಟಾರ್ಸ್

2. ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಮರಳಿ ಬಂದ ಮಾರುತಿ ಓಮ್ನಿ ಮತ್ತು ಇಕೋ..

3. ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...

4. ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ...

5. ಭಾರತದಲ್ಲಿ 7 ಸೀಟರ್ ವ್ಯಾಗನ್ ಆರ್ ಬಿಡುಗಡೆಯಾಗುವುದು ಪಕ್ಕಾ ಅಂತೆ..!!

Most Read Articles

Kannada
Read more on toyota
English summary
2018 Toyota Yaris to launch on May 18.
Story first published: Thursday, March 29, 2018, 18:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X