ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...

ಅಪಘಾತ ಪ್ರಕರಣಗಳಿಗೆ ರಾಂಗ್ ರೂಟ್‌ನಲ್ಲಿ ವಾಹನಗಳ ಚಾಲನೆಯೇ ಮುಖ್ಯವಾದ ಕಾರಣವಾಗಿದೆ. ಇದಕ್ಕಾಗಿ ಎಷ್ಟೇ ಕಠಿಣ ಕಾನೂನು ಕ್ರಮಗಳನ್ನು ಜಾರಿ ತಂದರೂ ಕೆಲವರು ಮಾತ್ರ ತಮ್ಮ ಕೆಟ್ಟಅಭ್ಯಾಸ ರಾಂಗ್ ರೂಟ್‌ನಲ್ಲಿ ಹೋಗುವುದನ್ನು ಮಾತ್ರ ಮರೆಯುವುದೇ ಇಲ್ಲ.

By Praveen Sannamani

ನಗರಪ್ರದೇಶಗಳಲ್ಲಿ ದಿನಂಪ್ರತಿ ಸಂಭವಿಸುವ ಬಹುತೇಕ ಅಪಘಾತ ಪ್ರಕರಣಗಳಿಗೆ ರಾಂಗ್ ರೂಟ್‌ನಲ್ಲಿ ವಾಹನಗಳ ಚಾಲನೆಯೇ ಬಹುಮುಖ್ಯವಾದ ಕಾರಣವಾಗಿದೆ. ಇದಕ್ಕಾಗಿ ಎಷ್ಟೇ ಕಠಿಣ ಕಾನೂನು ಕ್ರಮಗಳನ್ನು ಜಾರಿ ತಂದರೂ ಕೆಲವರು ಮಾತ್ರ ತಮ್ಮ ಕೆಟ್ಟ ಅಭ್ಯಾಸ ರಾಂಗ್ ರೂಟ್‌ನಲ್ಲಿ ಹೋಗುವುದನ್ನು ಮಾತ್ರ ಮರೆಯುವುದೇ ಇಲ್ಲ.

ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...

ಇದೇ ಕಾರಣಕ್ಕೆ ರಾಂಗ್ ರೂಟ್‌ನಲ್ಲಿ ಹೋಗುವ ವಾಹನ ಸವಾರರಿಗೆ ಸರಿಯಾಗಿಯೇ ಬುದ್ದಿಕಲಿಸಲು ಮುಂದಾಗಿರುವ ಪುಣೆ ಟ್ರಾಫಿಕ್ ಪೊಲೀಸರು ಹೊಸದೊಂದು ತಂತ್ರ ರೂಪಿಸಿದ್ದು, ರೋಡ್ ಹಂಪ್‌ಗಳ ಬದಲಾಗಿ ಟೈರ್ ಕಿಲ್ಲರ್ ಎನ್ನುವ ಹೊಸ ತಂತ್ರ ಬಳಕೆಗೆ ಚಾಲನೆ ನೀಡಿದ್ದಾರೆ.

ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...

ವಿಶೇಷವಾಗಿ ರಚನೆಗೊಂಡಿರುವ ಈ ಟೈರ್ ಕಿಲ್ಲರ್ ಸೌಲಭ್ಯವು ರಾಂಗ್ ರೂಟ್‌ನಲ್ಲಿ ಬರುವ ವಾಹನ ಸವಾರರಿಗೆ ಕಂಟಕವಾಗಲಿದ್ದು, ಒಂದು ವೇಳೆ ಟೈರ್ ಕಿಲ್ಲರ್‌ನ ವಿರುದ್ದ ದಿಕ್ಕಿನಲ್ಲಿ ಹೋಗಿದ್ದೆ ಆದಲ್ಲಿ ಟೈರ್ ಪಂಚರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...

ಯಾಕೇಂದ್ರೆ ಟೈರ್ ಕಿಲ್ಲರ್‌ನಲ್ಲಿ ಬಳಸಲಾಗಿರುವ ಹರಿತವಾದ ಮೊಳೆಗಳು ವಿರುದ್ಧ ದಿಕ್ಕಿನಲ್ಲಿ ಬರುವ ವಾಹನಗಳ ಟೈರ್‌ಗಳಲ್ಲಿ ಸಿಕ್ಕಿಕೊಳ್ಳುವುದಲ್ಲದೇ ರಾಂಗ್ ರೂಟ್‌ನಲ್ಲಿ ಬರುವ ವಾಹನ ಸವಾರರಿಗೆ ಸರಿಯಾಗಿಯೇ ಬುದ್ದಿ ಕಲಿಸುತ್ತೆ.

ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಸರಿಯಾದ ಮಾರ್ಗದಲ್ಲಿ ಬರುವ ವಾಹನಗಳಿಗೆ ಟೈರ್ ಕಿಲ್ಲರ್‌ನಲ್ಲಿರುವ ಹರಿತವಾದ ಮೊಳೆಗಳಿಂದ ಯಾವುದೇ ತೊಂದರೆ ಆಗುವುದಿಲ್ಲ. ಜೊತೆಗೆ ರಾಂಗ್ ರೂಟ್‌ ಹವ್ಯಾಸ ತಪ್ಪಿಸಲು ಹರಸಾಹಸ ಪಡಬೇಕಾಗಿದ್ದ ಪೊಲೀಸರಿಗೂ ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ.

ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...

ಸದ್ಯ ಪ್ರಾಯೋಗಿಕವಾಗಿ ಪುಣೆಯ ಪ್ರಮುಖ ರಸ್ತೆಗಳಲ್ಲಿ ಟೈರ್ ಕಿಲ್ಲರ್‌ಗಳನ್ನು ಅಳವಡಿಸಲಾಗುತ್ತಿದ್ದು, ಇದರಿಂದ ಬಹುತೇಕ ವಾಹನ ಸವಾರರು ರಾಂಗ್ ರೂಟ್ ಹವ್ಯಾಸಕ್ಕೆ ಗುಡ್ ಬೈ ಹೇಳಿ ಸರಿಯಾದ ರಸ್ತೆ ನಿಯಮಗಳನ್ನು ಪಾಲನೆ ಮಾಡುತ್ತಿದ್ದಾರೆ.

ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...

ಇದರಿಂದಾಗಿ ಟೈರ್ ಕಿಲ್ಲರ್ ವ್ಯವಸ್ಥೆಯು ದೇಶದ ಎಲ್ಲಾ ಪ್ರಮುಖ ರಸ್ತೆಗಳಲ್ಲೂ ಅಳವಡಿಸುವ ಅವಶ್ಯಕತೆಯಿದ್ದು, ಇದರಿಂದ ದಿನಂಪ್ರತಿ ಸಂಭವಿಸುವ ನೂರಾರು ರಸ್ತೆ ಅಪಘಾತಗಳನ್ನು ಪರಿಣಾಮಕಾರಿ ತಗ್ಗಿಸಬಹುದಾಗಿದೆ.

ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ದೇಶದಲ್ಲಿ ಸಂಭವಿಸುತ್ತಿರುವ ಶೇ.40ಕ್ಕೂ ಹೆಚ್ಚು ಪ್ರಕರಣಗಳಲ್ಲಿ ರಾಂಗ್ ರೂಟ್‌ನಲ್ಲಿ ವಾಹನಗಳ ಚಾಲನೆಯೇ ಕಾರಣವಾಗಿದ್ದು, ಇದನ್ನು ತಡೆಯಲು ಈಗಾಗಲೇ ಹಲವಾರು ಕಠಿಣ ಕಾನೂನು ಕ್ರಮಗಳಿದ್ದರು ಬಹುತೇಕರು ಪಾಲನೆ ಮಾಡುತ್ತಿಲ್ಲ. ಆದ್ರೆ ಟೈರ್ ಕಿಲ್ಲರ್ ಎನ್ನುವ ಹೊಸ ತಂತ್ರವು ಪರಿಣಾಮಕಾರಿಯಾಗಿದ್ದು, ಕೇವಲ ಪುಣೆ ಅಷ್ಟೇ ಅಲ್ಲದೇ ಈ ಕೂಡಲೇ ಅದು ಇತರೆ ನಗರಗಳಲ್ಲೂ ಜಾರಿ ಮಾಡುವ ಅವಶ್ಯಕತೆಯಿದೆ.

ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ...

ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ...

ದೇಶದಲ್ಲಿ ವಾಹನ ಸಂಖ್ಯೆ ಹೆಚ್ಚಿದಂತೆ ಅಪಘಾತಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆ ದ್ವಿಚಕ್ರ ವಾಹನಗಳಲ್ಲಿನ ಕೆಲವು ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತಿರುವ ಕೇಂದ್ರ ಸರ್ಕಾರವು 125 ಸಿಸಿ ಮೇಲ್ಪಟ್ಟ ದ್ವಿಚಕ್ರ ವಾಹನಗಳಿಗೆ ಹೊಸ ನಿಯಮವೊಂದನ್ನು ಜಾರಿಗೆ ತರುತ್ತಿದೆ.

ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ...

ಕಳೆದ ವರ್ಷ ಏಪ್ರಿಲ್ 1 ರಿಂದ ಬಿಎಸ್ 3 ಎಂಜಿನ್ ವಾಹನಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಿದ್ದ ಕೇಂದ್ರ ಸರ್ಕಾರವು, ಬಿಎಸ್ 4 ಮೇಲ್ಪಟ್ಟ ವಾಹನಗಳ ಮಾರಾಟ ಮಾತ್ರ ಅವಕಾಶ ನೀಡುತ್ತಿದೆ. ಅಂತೆಯೇ ಇದೀಗ 125ಸಿಸಿ ಮೇಲ್ಪಟ್ಟ ಬೈಕ್‌ಗಳು ಮತ್ತು ಸ್ಕೂಟರ್‌ಗಳಿಗೆ ಕಡ್ಡಾಯವಾಗಿ ಎಬಿಎಸ್ ಹೊಂದರಬೇಕೆಂಬ ಮಹತ್ವದ ಆದೇಶವನ್ನು ಹೊರಡಿಸಲಿದೆ.

ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ...

ಬೈಕ್‌ಗಳು ಮತ್ತು ಸ್ಕೂಟರ್‌ಗಳಲ್ಲಿ ಎಬಿಎಸ್ (ಆಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನವನ್ನು ಕಡ್ಡಾಯಗೊಳಿಸುವ ಮೂಲಕ ಅಪಘಾತಗಳ ಸಂಖ್ಯೆ ತಗ್ಗಿಸುವ ಉದ್ದೇಶ ಹೊಂದಿದ್ದು, ಇದು ಬೈಕ್ ಸವಾರರಿಗೂ ಕೂಡಾ ಸಹಕಾರಿಯಾಗಿರಲಿದೆ ಎನ್ನಲಾಗಿದೆ.

ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ...

ಈಗಾಗಲೇ ಕೆಲವು ಸುಧಾರಿತ ಬೈಕ್ ಮತ್ತು ದುಬಾರಿ ಬೈಕ್‌ಗಳಲ್ಲಿ ಮಾತ್ರ ಈ ಸೌಲಭ್ಯವಿದ್ದು, ಕೇಂದ್ರ ಸರ್ಕಾರದ ಹೊಸ ನಿಮಯದಂತೆ 125 ಸಿಸಿ ಮೇಲ್ಪಟ್ಟ ಎಲ್ಲಾ ಬೈಕ್‌ಗಳಲ್ಲೂ ಈ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ಮಾಡುತ್ತಿದೆ.

ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ...

ಜೊತೆಗೆ ಏಪ್ರಿಲ್ 1ರಿಂದಲೇ ಎಬಿಎಸ್ ಇಲ್ಲದ 125 ಸಿಸಿ ಮೇಲ್ಪಟ್ಟ ಬೈಕ್‌ಗಳ ಮಾರಾಟಕ್ಕೂ ಬ್ರೇಕ್ ಬೀಳಲಿದ್ದು, ಒಂದು ವೇಳೆ ನೀವು ಅಂತಹ ಬೈಕ್‌ಗಳನ್ನು ಖರೀದಿ ಮಾಡಿದರೂ ನೋಂದಣಿ ಕೂಡಾ ಆಗುವುದಿಲ್ಲ ಎನ್ನುವುದು ಮುಖ್ಯ ವಿಚಾರ.

ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ...

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಸದ್ಯ ಮಾರುಕಟ್ಟೆಯಲ್ಲಿ ಹೊಸದಾಗಿ ಬಿಡುಗಡೆಯಾಗುತ್ತಿರುವ 125ಸಿಸಿ ಮೇಲ್ಪಟ್ಟ ಕೆಲವು ಬೈಕ್‌ಗಳಲ್ಲಿ ಎಬಿಎಸ್ ಇಲ್ಲದಿರುವುದನ್ನು ಗಮನಿಸಬಹುದಾಗಿದ್ದು, ಇಂತಹ ಬೈಕ್‌ಗಳ ಮೇಲೂ ಕೇಂದ್ರ ಸಾರಿಗೆ ಇಲಾಖೆಯು ಸದ್ಯದಲ್ಲೇ ಮಹತ್ವದ ನಿರ್ಧಾರವನ್ನು ಪ್ರಕಟಿಸಲಿದೆ.

ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ...

ಹಾಗಾದ್ರೆ ಎಬಿಎಸ್‌ನಿಂದ ಏನು ಲಾಭ?

ಹೌದು. ಇದು ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡಬಹುದಾದ ಸಹಜ ಪ್ರಶ್ನೆ. ಒಂದು ವೇಳೆ ಬೈಕ್‌ಗಳಲ್ಲಿ ಎಬಿಎಸ್ ತಂತ್ರಜ್ಞಾನ ಅಳವಡಿಕೆ ಇದ್ದಲ್ಲಿ ಅಪಘಾತಗಳ ತೀವ್ರತೆಯನ್ನು ತಡೆಯಬಹುದಾಗಿದ್ದು, ಜೊತೆಗೆ ಬ್ರೇಕಿಂಗ್ ವ್ಯವಸ್ಥೆ ಮೇಲೆ ಸಂಪೂರ್ಣ ಹಿಡಿದ ಸಾಧಿಸಬಹುದಾಗಿದೆ.

ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ...

ಎಬಿಎಸ್ ಮತ್ತು ಎಬಿಎಸ್ ಇಲ್ಲದ ಬೈಕ್ ಮಾದರಿಗಳಿಗೂ ಬೆಲೆಗಳಲ್ಲಿ ಸ್ವಲ್ಪ ಮಟ್ಟಿಗೆ ವ್ಯತ್ಯಾಸವಿದ್ದು, ಬೈಕ್ ಮಾದರಿಗಳಿಗೆ ಅನುಗುಣವಾಗಿ ಅದು 8 ರಿಂದ 12 ಸಾವಿರ ರೂಪಾಯಿ ಹೆಚ್ಚುವರಿ ದರಗಳು ನಿಗದಿಯಾಗಿರುತ್ತವೆ.

ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ...

ಬೆಲೆಗಳಲ್ಲಿ ತುಸು ಹೆಚ್ಚಿದ್ದರೂ ಎಬಿಎಸ್ ತಂತ್ರಜ್ಞಾನವು ಸವಾರಿಗೆ ಸಂಪೂರ್ಣ ಸುರಕ್ಷತೆಯನ್ನು ನೀಡಲಿದ್ದು, ಹೊಸ ನಿಮಯದಿಂದ ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯನ್ನು ಕೂಡಾ ತಡೆಯಬಹುದಾಗಿದೆ.

ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ...

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಹೊಸ ನಿಯಮವು ದ್ವಿಚಕ್ರ ವಾಹನ ಸವಾರರಿಗೆ ಅನುಕೂಲಕರವಾಗಲಿದ್ದು, ಮುಂದಿನ ತಿಂಗಳು ಏಪ್ರಿಲ್ 1ರಿಂದ ಎಬಿಎಸ್ ಕಡ್ಡಾಯವಾಗಿ ಜಾರಿಗೆ ಬರುತ್ತಿರುವ ಹಿನ್ನೆಲೆ ಇನ್ಮುಂದೆ ಹೊಸ ಬೈಕ್ ಖರೀದಿದಾರರು ಪ್ರಸ್ತುತ ಮಾರುಕಟ್ಟೆಯಲ್ಲಿ ನಿಯಮಗಳಿಗೆ ಅನುಗುಣವಾಗಿ ಬೈಕ್ ಆಯ್ಕೆ ಮಾಡುವುದು ಸುರಕ್ಷತೆಯ ದೃಷ್ಠಿಯಿಂದ ಒಳ್ಳೆಯದು.

Most Read Articles

Kannada
Read more on traffic rules police
English summary
Tyre killers installed in Pune to stop wrong side driving.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X