ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಮರಳಿ ಬಂದ ಮಾರುತಿ ಓಮ್ನಿ ಮತ್ತು ಇಕೋ....

Written By:

ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಜನಪ್ರಿಯತೆಯೊಂದಿಗೆ ಮುನ್ನುಗ್ಗುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಸದ್ಯದಲ್ಲೇ ಓಮ್ನಿ ಮತ್ತು ಇಕೋ ವಾಹನಗಳನ್ನು ಹೊಸ ಸುರಕ್ಷಾ ಸೌಲಭ್ಯಗೊಳೊಂದಿಗೆ ಮರು ಬಿಡುಗಡೆ ಮಾಡುವ ಸುಳಿವು ನೀಡಿದೆ.

ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಮರಳಿ ಬಂದ ಮಾರುತಿ ಓಮ್ನಿ ಮತ್ತು ಇಕೋ....

ಕಳೆದ ಎಂಟು ವರ್ಷಗಳಿಂದ ಹಗುರ ವಾಣಿಜ್ಯ ವಾಹನಗಳ ಮಾರಾಟಾ ವಿಭಾಗದಲ್ಲಿ ಮುಂಚೂಣಿ ಸಾಧಿಸಿದ್ದರೂ ಓಮ್ನಿ ಮತ್ತು ಇಕೋ ವಾಹನಗಳು ಗ್ರಾಹಕರಿಗೆ ಅಗತ್ಯ ಸುರಕ್ಷೆತೆ ನೀಡುವಲ್ಲಿ ವಿಫಲವಾಗಿವೆ. ಈ ಹಿನ್ನೆಲೆ ಹೊಸ ಸುರಕ್ಷಾ ಮಾನದಂಡಗಳ ಪ್ರಕಾರ ಓಮ್ನಿ ಮತ್ತು ಇಕೋ ವಾಹನಗಳನ್ನು ಉನ್ನತೀಕರಿಸುವ ಯೋಜನೆಗೆ ಮಾರುತಿ ಸುಜುಕಿ ಸಂಸ್ಥೆಯು ಚಾಲನೆ ನೀಡಿದೆ.

ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಮರಳಿ ಬಂದ ಮಾರುತಿ ಓಮ್ನಿ ಮತ್ತು ಇಕೋ....

ಈ ಹಿಂದೆ ನಡೆದಿದ್ದ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಸೊನ್ನೆ ಅಂಕ ಗಳಿಸಿದ್ದ ಈ ಎರಡು ವಾಹನಗಳು, ಅಪಘಾತಗಳ ಸಂದರ್ಭದಲ್ಲಿ ವಾಹನ ಸವಾರರಿಗೆ ಸುರಕ್ಷೆ ನೀಡುವಲ್ಲಿ ವಿಫಲವಾಗಿದ್ದವು ಎನ್ನುವುದು ಮುಖ್ಯ ವಿಚಾರ.

ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಮರಳಿ ಬಂದ ಮಾರುತಿ ಓಮ್ನಿ ಮತ್ತು ಇಕೋ....

ಇದರಿಂದಾಗಿ ವಾಹನ ಮಾರಾಟದಲ್ಲಿ ಕುಸಿತವಾಗಿದ್ದಲ್ಲದೇ ಹೊಸ ಸುರಕ್ಷಾ ಕಾಯ್ದೆಗೆ ಇದು ವಿರುದ್ಧವಾಗಿತ್ತು. ಇದರಿಂದಾಗಿ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಮಾರುತಿ ಸುಜುಕಿ ಅಗತ್ಯ ಏರ್‌ಬ್ಯಾಗ್ ಮತ್ತು ಎಬಿಎಸ್ ಸೇರಿದಂತೆ ಇನ್ನಿತರೆ ಸೌಲಭ್ಯಗಳನ್ನು ಹೊಸ ವಾಹನಗಳಲ್ಲಿ ಸೇರ್ಪಡೆ ಮಾಡಲಿದೆ.

ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಮರಳಿ ಬಂದ ಮಾರುತಿ ಓಮ್ನಿ ಮತ್ತು ಇಕೋ....

ಇದಲ್ಲದೇ ಮಾರುತಿ ಸುಜುಕಿ ಸಂಸ್ಥೆಯ ಎಂಟ್ರಿ ಲೆವಲ್ ಕಾರು ಮಾದರಿಯಾದ ವ್ಯಾಗನ್ ಆರ್ ‌ನಲ್ಲಿ ಈಗಾಗಲೇ ಹೊಸ ಸುರಕ್ಷಾ ಕ್ರಮಗಳನ್ನು ಅಳವಡಿಸಲಾಗಿದ್ದು, ವಾಣಿಜ್ಯ ವಾಹನಗಳಾದ ಓಮ್ನಿ ಮತ್ತು ಇಕೋ ವಾಹನಗಳಿಗೂ ಇದು ಅತ್ಯವಶ್ಯಕವಾಗಿದೆ.

ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಮರಳಿ ಬಂದ ಮಾರುತಿ ಓಮ್ನಿ ಮತ್ತು ಇಕೋ....

ಈ ಬಗ್ಗೆ ಮಾತನಾಡಿರುವ ಮಾರುತಿ ಸುಜುಕಿ ಇಂಡಿಯಾದ ಎಕ್ಸಿಕ್ಯುಟಿವ್ ಡೈರೆಕ್ಟರ್ ಸಿ.ವಿ. ರಾಮನ್ ಅವರು, ಗ್ರಾಹಕರಿಗೆ ಅಗತ್ಯ ಸುರಕ್ಷಾ ಕ್ರಮಗಳನ್ನು ಒದಗಿಸುವಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಬದ್ದವಾಗಿದ್ದು, ಮುಂಬರುವ ದಿನಗಳಲ್ಲಿ ಓಮ್ನಿ ಮತ್ತು ಇಕೋ ವಿನೂತನ ಸುರಕ್ಷಾ ಕ್ರಮಗಳನ್ನು ಹೊಂದಿರಲಿವೆ ಎಂದಿದ್ದಾರೆ.

ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಮರಳಿ ಬಂದ ಮಾರುತಿ ಓಮ್ನಿ ಮತ್ತು ಇಕೋ....

ಹೀಗಾಗಿ ಮುಂದಿನ ಕೆಲವೇ ತಿಂಗಳಲ್ಲಿ ಹೊಸ ಸುರಕ್ಷತೆಯೊಂದಿಗೆ ಓಮ್ನಿ ಮತ್ತು ಇಕೋ ವಾಹನಗಳು ಮಾರುಕಟ್ಟೆಗೆ ಬರಲಿದ್ದು, ಹೊಸ ಸೌಲಭ್ಯಗಳ ಅಳವಡಿಕೆ ಹಿನ್ನೆಲೆ ಬೆಲೆಗಳ ಕೂಡಾ ಕೊಂಚ ದುಬಾರಿಯಾಗಿರಲಿವೆ.

ಹೊಸ ಸುರಕ್ಷಾ ಸೌಲಭ್ಯಗಳೊಂದಿಗೆ ಮರಳಿ ಬಂದ ಮಾರುತಿ ಓಮ್ನಿ ಮತ್ತು ಇಕೋ....

ಒಂದು ವೇಳೆ ಓಮ್ನಿ ಮತ್ತು ಇಕೋ ವಾಹನಗಳು ಫ್ರಂಟ್ ಏರ್‌ಬ್ಯಾಗ್ ಮತ್ತು ಎಬಿಎಸ್ ಸೇರಿದಂತೆ ಪ್ರಮುಖ ಬದಲಾವಣೆಗಳೊಂದಿಗೆ ಬಂದಿದ್ದೇ ಆದಲ್ಲಿ ಎಂಟ್ರಿ ಲೆವಲ್ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದ್ದು, ಸುರಕ್ಷೆ ಬಯಸುವ ಗ್ರಾಹಕರಿಗೂ ಇದು ಎನಿಸಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

01. ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ...

02. ಭಾರತದಲ್ಲಿ 7 ಸೀಟರ್ ವ್ಯಾಗನ್ ಆರ್ ಬಿಡುಗಡೆಯಾಗುವುದು ಪಕ್ಕಾ ಅಂತೆ..!!

03.ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...

Read more on maruti suzuki omni
English summary
Updated Maruti Omni And Eeco In The Works; To Get Safety Upgrades.
Story first published: Thursday, March 29, 2018, 13:51 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark