ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಬೆಸ್ಟ್ ಎಲೆಕ್ಟ್ರಿಕ್ ಕಾರುಗಳ ಮಾರಾಟ ಸಂಸ್ಥೆಯೆಂದೇ ಜನಪ್ರಿಯವಾಗುತ್ತಿರುವ ನಿಸ್ಸಾನ್ ಸಂಸ್ಥೆಯು ಸದ್ಯ ಭಾರತದಲ್ಲೂ ತನ್ನ ಯಶಸ್ವಿ ಲೀಫ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರುಗಳನ್ನು ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದ್ದು, ಹತ್ತು ಹಲವು ಹೊಸ ಸೌಲಭ್ಯವನ್ನು ಈ ಕಾರು ಈಗಾಗಲೇ ವಿಶ್ವಾದ್ಯಂತ ಲಕ್ಷಾಂತರ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

ಈ ಹಿನ್ನೆಲೆ ನಿಸ್ಸಾಸ್ ಸಂಸ್ಥೆಯು ಸುಧಾರಿತ ತಂತ್ರಜ್ಞಾನ ಹೊಂದಿರುವ ಲೀಫ್ ಎಲೆಕ್ಟ್ರಿಕ್ ಹ್ಯಾ‌ಚ್‌ಬ್ಯಾಕ್ ಕಾರು ಆವೃತ್ತಿಯನ್ನು ಭಾರತದಲ್ಲೂ ಬಿಡುಗಡೆಗೊಳಿಸುವ ಯೋಜನೆ ರೂಪಿಸುತ್ತಿದ್ದು, ಕೇರಳದ ಕೊಚ್ಚಿನಲ್ಲಿ ಹೊಸ ಲೀಫ್ ಕಾರನ್ನು ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವುದು ಕಾರು ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದೆ.

ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

ಪ್ರೀಮಿಯಂ ಹ್ಯಾಚ್‌ಬ್ಯಾಕ್ ಶೈಲಿಯನ್ನು ಹೊಂದಿರುವ ನಿಸ್ಸಾನ್ ಲೀಫ್ ಕಾರುಗಳು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಹೊಸ ನಮೂನೆಯ ಹೊರ ವಿನ್ಯಾಸಗಳನ್ನು ಪಡೆದುಕೊಂಡಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಬಳಕೆಯು ಈ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

ಸೇಕೆಂಡ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ಲೀಫ್ ಕಾರ್‌ನ್ನು ಅಭಿವೃದ್ಧಿ ಮಾಡಿರುವ ನಿಸ್ಸಾನ್ ಸಂಸ್ಥೆಯು, ಇದುವರೆಗೆ ಯಾವುದೇ ಆಟೋ ಉತ್ಪಾದನಾ ಸಂಸ್ಥೆಗಳು ಬಳಸದ ಸುಧಾರಿತ ಮಾದರಿಯ ಬ್ಯಾಟರಿ ಸೌಲಭ್ಯ ಅಳವಡಿಸಿರುವುದು ಹಲವು ವಿಶೇಷತೆಗಳಿಗೆ ಕಾರಣವಾಗಿದೆ.

ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

ಇದೇ ಕಾರಣಕ್ಕೆ ಒಂದು ಬಾರಿ ಚಾರ್ಜ್ ಮಾಡಿದಲ್ಲಿ ಬರೋಬ್ಬರಿ 378 ಕಿ.ಮೀ ಮೈಲೇಜ್ ನೀಡಲಿದೆ ಎಂದು ಹೇಳಿಕೊಂಡಿರುವ ನಿಸ್ಸಾನ್ ಸಂಸ್ಥೆಯು, ದುಬಾರಿ ಬೆಲೆಗೆ ಲಭ್ಯವಿರುವ 380 ಕಿಮಿ ಮೈಲೇಜ್ ರೇಂಜ್ ಹೊಂದಿರುವ ಟೆಸ್ಲಾ ಮಾಡೆಲ್ 3 ಕಾರಿಗಿಂತಲೂ ಅತ್ಯತ್ತಮ ಎಲೆಕ್ಟ್ರಿಕ್ ಕಾರು ಮಾದರಿ ಇದಾಗಿದೆ ಎಂದಿದೆ.

ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

ಹೀಗಾಗಿ ಹೊಸ ಕಾರುಗಳ ಮೈಲೇಜ್ ವಿಚಾರವಾಗಿ ಇಡೀ ಆಟೋ ಉದ್ಯಮ ವಲಯವನ್ನೇ ಸೆಳೆದಿರುವ ನಿಸ್ಸಾನ್, ಲೀಫ್ ಎಲೆಕ್ಟ್ರಿಕ್ ಕಾರುಗಳ ಆವೃತ್ತಿ ಮೂಲಕ ಹೊಸ ಯುಗಾರಂಭ ಮಾಡುವುದು ಬಹುತೇಕ ಖಚಿತವಾಗಿದೆ.

ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

ಇದಲ್ಲದೇ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ಕಾರುಗಳ ಕುರಿತು ಪ್ರಚಾರಕ್ಕಾಗಿ ಎರಡು ಲೀಫ್ ಎಲೆಕ್ಟ್ರಿಕ್ ಕಾರುಗಳನ್ನು ಸಹ ಭಾರತದಲ್ಲಿ ಆಮದು ಮಾಡಿಕೊಳ್ಳಲಾಗಿದ್ದು, ಆಸಕ್ತ ಗ್ರಾಹಕರು ಟೆಸ್ಟ್ ಡ್ರೈವ್ ಮೂಲಕ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತು ಅನುಭವ ಪಡೆದುಕೊಳ್ಳಬಹುದಾಗಿದೆ.

ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

ಕಾರು ಬಿಡುಗಡೆಯ ಅವಧಿ

ಎಕಾಮಿಕ್ಸ್ ಟೈಮ್ಸ್ ವರದಿ ಪ್ರಕಾರ ಹೊಚ್ಚ ಹೊಸ ಲೀಫ್ ಕಾರುಗಳು 2019ರ ಮಧ್ಯಂತರದಲ್ಲಿ ಬಿಡುಗಡೆಯಾಗಲಿವೆ ಎನ್ನಲಾಗಿದ್ದು, ಈ ಕಾರು ಈಗಾಗಲೇ ಎಲೆಕ್ಟ್ರಿಕ್ ವಾಹನ ಪ್ರಿಯರಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

ಕಾರಿನ ಬೆಲೆಗಳು(ಅಂದಾಜು)

ಅತಿಹೆಚ್ಚು ಮೈಲೇಜ್ ರೇಂಜ್ ಹೊಂದಿರುವ ಲೀಫ್ ಕಾರುಗಳು ಐಷಾರಾಮಿ ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಕಾರಿನ ಬೆಲೆಯು ರೂ.35 ಲಕ್ಷದಿಂದ ರೂ.40 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಆದ್ರೆ ಭಾರತದಲ್ಲೇ ಹೊಸ ಕಾರುಗಳು ನಿರ್ಮಾಣವಾದಲ್ಲಿ ಕಾರಿನ ಬೆಲೆಗಳು ಗಣನೀಯವಾಗಿ ತಗ್ಗಬಹುದು.

MOST READ: ಹೈವೆನಲ್ಲಿ ದರೋಡೆ ಮಾಡುತ್ತಿದ್ದ ಖದೀಮರಿಗೆ ಡಿಸಿಪಿ ಅಣ್ಣಾಮಲೈ ಮಾಸ್ಟರ್ ಸ್ಟ್ರೋಕ್..!

ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

ಇನ್ನು ಲೀಫ್ ಕಾರುಗಳಲ್ಲಿ ಒದಗಿಸಲಾಗಿರುವ ವಿಶ್ವದರ್ಜೆ ಸೌಲಭ್ಯಗಳು ಕಾರಿನ ಪ್ರಯಾಣವನ್ನು ಮತ್ತಷ್ಟು ಸುಖಕರವಾಗಿಸಿದ್ದು, ಕಾರಿನ ಹೊರ ಮತ್ತು ಒಳ ವಿನ್ಯಾಸಗಳು ಸಾಕಷ್ಟು ಆಕರ್ಷಣೆಯಿಂದ ಕೂಡಿರುವುದಲ್ಲದೇ ಸ್ಪೋರ್ಟಿ ಲುಕ್ ಸಹ ಪಡೆದುಕೊಂಡಿವೆ.

Source: Team bhp

ಪ್ರತೀ ಚಾರ್ಜ್‍ಗೆ 378 ಕಿ.ಮೀ ಮೈಲೇಜ್ ನೀಡುತ್ತೆ ಈ ನಿಸ್ಸಾನ್ ಇವಿ ಕಾರು.!

ಒಟ್ಟಿನಲ್ಲಿ ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ಜನಪ್ರಿಯವಾಗುತ್ತಿರುವ ಲೀಫ್ ಎಲೆಕ್ಟ್ರಿಕ್ ಕಾರುಗಳು ಭಾರತದಲ್ಲೂ ಬಿಡುಗಡೆಯಾಗುವುದು ಖಚಿತವಾಗಿದ್ದು, ಲೀಫ್ ಬಿಡುಗಡೆಯ ನಂತರ ಹಲವು ಮಾದರಿಯ ಐಷಾರಾಮಿ ಕಾರುಗಳು ಉತ್ಪಾದನೆಯಿಂದ ಹಿಂದೆ ಸರಿಯಬಹುದಾದ ಸಾಧ್ಯತೆಗಳು ಕೂಡಾ ಇವೆ.

MOST READ: ದೇಶದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಅತಿ ಉದ್ದದ ಜಲಾಂತರ್ಗಾಮಿ ರೈಲ್ವೆ ಯೋಜನೆ..!

More from DriveSpark

Article Published On: Thursday, December 6, 2018, 12:05 [IST]
English summary
Second Generation Nissan Leaf spotted in India. Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+