ಭವಿಷ್ಯದಲ್ಲಿ ಮಾಯವಾಗಲಿವೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳು?

ಸದ್ಯ ಆಟೋ ಉದ್ಯಮದವು ಹೊಸ ಬದಲಾವಣೆಯತ್ತ ಸಾಗುತ್ತಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳಿಗೆ ಎಲ್ಲಿದ ಬೇಡಿಕೆ ಸೃಷ್ಠಿಯಾಗುತ್ತಿದೆ.

By Praveen Sannamani

ಸದ್ಯ ಆಟೋ ಉದ್ಯಮದವು ಹೊಸ ಬದಲಾವಣೆಯತ್ತ ಸಾಗುತ್ತಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳಿಗೆ ಎಲ್ಲಿದ ಬೇಡಿಕೆ ಸೃಷ್ಠಿಯಾಗುತ್ತಿದೆ. ಇದೇ ಕಾರಣ, ಈ ಹಿಂದೆ ಇದ್ದ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳ ಬೇಡಿಕೆ ಇದೀಗ ಕ್ರಮೇಣ ಕಡಿಮೆಯಾಗುತ್ತಿದ್ದು, ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನತ್ತ ಗ್ರಾಹಕರು ಹೆಚ್ಚಿನ ಒಲವು ತೊರುತ್ತಿದ್ದಾರೆ.

ಭವಿಷ್ಯದಲ್ಲಿ ಮಾಯವಾಗಲಿವೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳು?

ಭಾರತೀಯ ಆಟೋ ಉದ್ಯಮದಲ್ಲಿ ಮೊದಲ ಬಾರಿಗೆ 2014ರಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳನ್ನು ಪರಿಚಯಿಸಿದ್ದ ಮಾರುತಿ ಸುಜುಕಿ ಸಂಸ್ಥೆಯು ಭಾರೀ ಬದಲಾವಣೆ ಕಾರಣವಾಯ್ತು. ಅಲ್ಲಿಂದ ಪ್ರತಿ ಕಾರು ಮಾದರಿಗಳು ಸಹ ಮ್ಯಾನುವಲ್ ಜೊತೆ ಜೊತೆಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯಲ್ಲಿ ಬಿಡುಗಡೆಯಾಗುತ್ತಿದ್ದು, ಇದೀಗ ಮ್ಯಾನುವಲ್‌ಗಿಂತ ಹೆಚ್ಚು ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿರುವುದು ಮ್ಯಾನುವಲ್ ಕಾರುಗಳು ಭವಿಷ್ಯದಲ್ಲಿ ಇಲ್ಲವಾಗಬಹುದಾದ ಮುನ್ಸೂಚನೆ ನೀಡುತ್ತಿವೆ.

ಭವಿಷ್ಯದಲ್ಲಿ ಮಾಯವಾಗಲಿವೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳು?

ಇದಕ್ಕೆ ಹಲವು ಕಾರಣಗಳಿದ್ದು, ಮ್ಯಾನುವಲ್‌ಗಿಂತ ಕಾರು ಚಾಲನೆಗೆ ಆಟೋಮ್ಯಾಟಿಕ್ ಹೆಚ್ಚು ಅನುಕೂಲಕರವಾಗಿದ್ದು, ನಗರ ಪ್ರದೇಶಗಳಲ್ಲಿ ವ್ಯಯಕ್ತಿಕವಾಗಿ ಕಾರು ಖರೀದಿ ಮಾಡುತ್ತಿರುವ ಶೇ. 70ರಷ್ಟು ಗ್ರಾಹಕರು ಆಟೋಮ್ಯಾಟಿಕ್ ಕಾರುಗಳು ಮೊದಲ ಪ್ರಾಶಸ್ತ್ಯ ನೀಡುತ್ತಿರುವುದು ವಾಸ್ತವ. ಇದಕ್ಕೂ ಹಲವಾರು ಕಾರಣಗಳಿದ್ದು, ಇದೇ ಉದ್ದೇಶದಿಂದ ಪರ್ಸನಲ್ ವೆಹಿಕಲ್‌ಗಳು ಬಹುತೇಕ ಎಎಂಟಿ ಆಯ್ಕೆಯನ್ನು ಪಡೆದುಕೊಳ್ಳುತ್ತಿವೆ.

ಭವಿಷ್ಯದಲ್ಲಿ ಮಾಯವಾಗಲಿವೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳು?

ಎಎಂಟಿ ಅಂದರೆ ಏನು? ಸಾಮಾನ್ಯ ಮ್ಯಾನುವಲ್ ಗೇರ್ ಬಾಕ್ಸ್‌ಗಿಂತಲೂ ಇದು ಹೇಗೆ ಭಿನ್ನ? ಎಂಬಿತ್ಯಾದಿ ಪ್ರಶ್ನೆಗಳ ಕುರಿತಾಗಿ ವಾಹನ ಪ್ರಿಯರಲ್ಲಿ ಗೊಂದಲ ಇದ್ದೆ ಇರುತ್ತದೆ. ಸೆಮಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳನ್ನು (ಎಸ್‌ಎಟಿ) ಸುಲಭವಾಗಿ ಕ್ಲಚ್‌ಲೆಸ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅಥವಾ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಎಂದು ಕರೆಯುತ್ತೇವೆ.

ಭವಿಷ್ಯದಲ್ಲಿ ಮಾಯವಾಗಲಿವೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳು?

ಭಾರತದಲ್ಲಿ ಈ ಹಿಂದೆ ಮಾರುತಿ ಸುಜುಕಿ ಸಂಸ್ಥೆಯು ಸೆಲೆರಿಯೊ ಕಾರುಗಳಲ್ಲಿ ಎಎಂಟಿ ಪರಿಚಯಿಸಿ ವಾಹನೋದ್ಯಮದಲ್ಲಿ ಹೊಸ ಕ್ರಾಂತಿಯನ್ನೇ ಎಬ್ಬಿಸಿತ್ತು. ತದನಂತರದಲ್ಲಿ ಬಿಡುಗಡೆಯಾಗಿರುವ ಬಹುತೇಕ ಕಾರುಗಳಲ್ಲಿ ಮ್ಯಾನುವಲ್ ಗೇರ್ ಬಾಕ್ಸ್ ಜೊತೆ ಜೊತೆಗೆ ಎಎಂಟಿ ಕೂಡಾ ಲಭ್ಯವಾಗುತ್ತಿರುವುದು ಗಮನಾರ್ಹ.

ಭವಿಷ್ಯದಲ್ಲಿ ಮಾಯವಾಗಲಿವೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳು?

ಇನ್ನೊಂದು ಪ್ರಮುಖ ಅಂದ್ರೆ ಎಎಂಟಿ ಸೌಲಭ್ಯವಿರುವ ಕಾರುಗಳ ಬಳಕೆಯು ಇಂಧನ ದಕ್ಷತೆಯ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುತ್ತೆ ಎನ್ನುವ ಬಗ್ಗೆ ಹಲವರಲ್ಲಿ ಗೊಂದವಿದೆ. ಆದ್ರೆ ಈ ಬಗ್ಗೆ ಚಿಂತೆ ಬೇಡವೇ ಬೇಡ. ಎಎಂಟಿ ಬಳಕೆಯು ಇಂಧನ ಕಾರ್ಯಕ್ಷಮತೆ ಮೇಲೆ ಯಾವುದೇ ಪರಿಣಾಮ ಬೀರದು.

ಭವಿಷ್ಯದಲ್ಲಿ ಮಾಯವಾಗಲಿವೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳು?

ಇದೇ ಕಾರಣಕ್ಕಾಗಿ ಇಟಲಿಯ ಮಾಗ್ನೆಟ್ಟಿ ಮರೆಲ್ಲಿ ಪೂರೈಕೆ ಮಾಡುತ್ತಿರುವ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಕಾರುಗಳಿಗೆ ಭಾರತದಲ್ಲಿ ಅತ್ಯಧಿಕ ಬೇಡಿಕೆ ಕಂಡುಬರುತ್ತಿದೆ. ಇದೀಗ ಎಎಂಟಿ ಕುರಿತಾಗಿ ನೀವು ತಿಳಿದುಕೊಳ್ಳಲೇಬೇಕಾದ 10 ಅಂಶಗಳಿಗಾಗಿ ಮುಂದಿನ ಪುಟಗಳತ್ತ ಮುಂದುವರಿಯಿರಿ..

ಭವಿಷ್ಯದಲ್ಲಿ ಮಾಯವಾಗಲಿವೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳು?

1. ಕ್ಲಚ್ ಇದೆ, ಕ್ಲಚ್ ಪೆಡಲ್ ಇಲ್ಲ

ನೀವು ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌‍‌ನಲ್ಲಿ ಕ್ಲಚ್ ಇರಲ್ಲ ಅಂದುಕೊಂಡಿದ್ದರೆ ತಪ್ಪಾದಿತ್ತು. ನಿಸ್ಸಂಶವಾಗಿಯೂ ಇದರಲ್ಲಿ ಕ್ಲಚ್ ಇದ್ದು, ಕ್ಲಚ್ ಪೆಡಲ್ ಮಾತ್ರ ಕಂಡುಬರುವುದಿಲ್ಲ. ಇದು ನಿಮ್ಮ ಪಯಣವನ್ನು ಹೆಚ್ಚು ಆರಾದಾಯಕವಾಗಿಸಲಿದೆ.

ಭವಿಷ್ಯದಲ್ಲಿ ಮಾಯವಾಗಲಿವೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳು?

4. ಫಾಕ್ಟರಿ ಫಿಟ್ಟಿಂಗ್

ಮೇಲೆ ತಿಳಿಸಲಾದ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಅನ್ನು ಫಾಕ್ಟರಿಯಿಂದ ಮಾತ್ರ ಜೋಡಣೆ ಮಾಡಲು ಸಾಧ್ಯ.

5. ಎರಡು ಪ್ರಮುಖ ಘಟಕಗಳು

ಎಎಂಟಿ ಎರಡು ಪ್ರಮುಖ ಘಟಕಗಳನ್ನು ಹೊಂದಿರುತ್ತದೆ. ಅವುಗಳೆಂದರೆ, ಹೈಡ್ರಾಲಿಕ್ ಸಿಸ್ಟಂ ಮತ್ತು ಎಲೆಕ್ಟ್ರಾನಿಕ್ ಕಂಟ್ರೋಲ್ ಯುನಿಟ್.

ಭವಿಷ್ಯದಲ್ಲಿ ಮಾಯವಾಗಲಿವೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳು?

6. ಗೇರ್ ಬದಲಾವಣೆ

ಎಎಂಟಿ ವರ್ಷನ್ ಮ್ಯಾನುವಲ್ ಗೇರ್ ಬಾಕ್ಸ್ ಮೇಲೆ ಅವಲಂಬಿತವಾಗಿದ್ದು, ಆಟೋ ಮೋಡ್‌ನಲ್ಲಿ (ಡ್ರೈವ್) ಸ್ವಯಂಚಾಲಿತವಾಗಿ ಗೇರ್‌ಗಳು ಬದಲಾಗುತ್ತಿರುತ್ತವೆ. ಇದು ಸ್ಪೋರ್ಟ್ಸ್ ಮೋಡ್ (ಮ್ಯಾನುವಲ್) ಸಹ ಪಡೆದುಕೊಂಡಿದ್ದು, ಇಲ್ಲಿ ಚಾಲಕ ಮ್ಯಾನುವಲ್ ಆಗಿ ಗೇರ್ ಬದಲಾವಣೆ ಮಾಡಬೇಕಾಗುತ್ತದೆ. ಇದಕ್ಕಾಗಿ ಪ್ಲಸ್ (ಗೇರ್ ಹೆಚ್ಚಿಸಲು) ಮತ್ತು ಮೈನಸ್ (ಗೇರ್ ಕಡಿಮೆ ಮಾಡಲು) ನೀಡಲಾಗಿದೆ.

ಭವಿಷ್ಯದಲ್ಲಿ ಮಾಯವಾಗಲಿವೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳು?

7. ಹೆಚ್ಚು ಅನುಕೂಲಕರ

ವಾಹನ ತಜ್ಞರ ಪ್ರಕಾರ ಎಎಂಟಿ ಬಳಕೆಯು ಚಾಲಕ ಹಾಗೂ ತಯಾರಕರ ದೃಷ್ಟಿಕೋನದಲ್ಲೂ ಹೆಚ್ಚು ಅನುಕೂಲಕರವಾಗಿದೆ. ಇನ್ನೊಂದೆಡೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳು ಸಂಪೂರ್ಣ ವಿಭಿನ್ನ ವ್ಯವಸ್ಥೆಯನ್ನು ಪಡೆದುಕೊಂಡಿರುತ್ತದೆ.

ಭವಿಷ್ಯದಲ್ಲಿ ಮಾಯವಾಗಲಿವೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳು?

8. ಮ್ಯಾಗ್ನೆಟ್ಟಿ ಮರೆಲ್ಲಿ

ಇಟಲಿ ಮೂಲದ ಮ್ಯಾಗ್ನೆಟ್ಟಿ ಮರೆಲ್ಲಿ ಸಂಸ್ಥೆಯು ಭಾರತಕ್ಕೆ ಎಂಎಂಟಿ ವ್ಯವಸ್ಥೆಯನ್ನು ಒದಗಿಸುತ್ತದೆ. ಸಂಸ್ಥೆಯ ಪ್ರಕಾರ 2020ರ ವೇಳೆಯಾಗುವಾಗ ದೇಶದ 20ರಷ್ಟು ಪ್ರಯಾಣಿಕ ವಾಹನಗಳು ಎಎಂಟಿ ಮಾದರಿಗಳನ್ನು ಒಳಗೊಂಡಿರಲಿದೆ.

ಭವಿಷ್ಯದಲ್ಲಿ ಮಾಯವಾಗಲಿವೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳು?

9. ಇಂಧನ ದಕ್ಷತೆ

ಎಎಂಟಿ ವರ್ಷನ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಿಂತಲೂ ಹೆಚ್ಚು ಇಂಧನ ದಕ್ಷತೆಯನ್ನು ಹೊಂದಿರುತ್ತದೆ. ಇನ್ನೊಂದೆಡೆ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ ಬಳಕೆಯಿಂದಾಗಿ ಶೇಕಡಾ 10ರಷ್ಟು ಇಂಧನ ಕ್ಷಮತೆ ಕಡಿಮೆಯಾಗುತ್ತೆಯಾದರೂ ಇತ್ತೀಚೆಗೆ ಬಿಡುಗಡೆಯಾಗಿರುವ ಸುಧಾರಿತ ಕಾರುಗಳಲ್ಲಿ ಇಂತಹ ಸಮಸ್ಯೆ ಇಲ್ಲವೇ ಇಲ್ಲ ಎನ್ನಬಹುದು.

ಭವಿಷ್ಯದಲ್ಲಿ ಮಾಯವಾಗಲಿವೆ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಕಾರುಗಳು?

10. ಬೆಲೆ ವ್ಯತ್ಯಾಸ

ಎಎಂಟಿ ವರ್ಷನ್ ಸಾಮಾನ್ಯ ಮ್ಯಾನುವಲ್ ಟ್ರಾನ್ಸ್‌ಮಿಷನ್‌ಗಿಂತಲೂ 40ರಿಂದ 50 ಸಾವಿರ ರು.ಗಳಷ್ಟು ದುಬಾರಿಯೆನಿಸಲಿದೆ.

More from DriveSpark

Article Published On: Sunday, June 24, 2018, 13:00 [IST]
English summary
India is going for automatic cars.
Read more on auto facts auto news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+