ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಸಜ್ಜಾದ ಬಜಾಜ್ ಕ್ಯೂಟ್ ಕ್ವಾಡ್ರಿ‍‍ಸೈಕಲ್..

By Praveen Sannamani

ಇಷ್ಟು ದಿನಗಳ ಕಾಲ ಭಾರತದಲ್ಲೇ ಅಭಿವೃದ್ಧಿಗೊಂಡ ವಿದೇಶಿ ಮಾರುಕಟ್ಟೆಗಳಲ್ಲಿ ಮಾತ್ರ ಮಾರಾಟವಾಗುತ್ತಿದ್ದ ಬಜಾಜ್ ಕ್ಯೂಟ್ ಕ್ವಿಡ್ರಿಸೈಕಲ್‌ಗಳು ಇದೀಗ ಭಾರತದಲ್ಲೇ ಖರೀದಿಗೆ ಲಭ್ಯವಾಗುತ್ತಿದ್ದು, ಒಂದು ವೇಳೆ ಈ ವಿನೂತನ ವಾಹನವು ಆಕರ್ಷಕ ಬೆಲೆಗಳಲ್ಲಿ ಬಿಡುಗೊಂಡಿದ್ದೆ ಆದರಲ್ಲಿ ಆಟೋ ರಿಕ್ಷಾಗಳು ಮೂಲೆಗುಂಪಾಗೊದು ಮಾತ್ರ ಖಚಿತ ಎಂದು ಹೇಳಲಾಗುತ್ತಿದೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಸಜ್ಜಾದ ಬಜಾಜ್ ಕ್ಯೂಟ್ ಕ್ವಾಡ್ರಿ‍‍ಸೈಕಲ್..

ಕ್ಯೂಟ್ ಕ್ವಾಡ್ರಿಸೈಕಲ್‌ಗಳ ಬಿಡುಗಡೆಗೆ ಇಷ್ಟು ದಿನಗಳ ಕಾಲ ಅವಕಾಶ ನೀಡಲು ಹಿಂದೇಟು ಹಾಕಿದ್ದ ಕೇಂದ್ರ ಸರ್ಕಾರವು ಇದೀಗ ಹೊಸ ವಾಹನಗಳಿಗೆ ಕೆಲವು ಷರತ್ತುಗಳನ್ನ ವಿಧಿಸಿ ಕ್ವಾಡ್ರಿಸೈಕಲ್‌ಗಳನ್ನು ಬಿಡುಗಡೆಗೊಳಿಸಲು ಅನುಮತಿ ನೀಡಿದ್ದು, ಎಲ್ಲವೂ ಅಂದುಕೊಂಡತೆ ಆದಲ್ಲಿ ಇದೇ ವರ್ಷದ ಕೊನೆಯಲ್ಲಿ ಬಜಾಜ್ ಹೊಸ ವಾಹನಗಳು ಖರೀದಿಗೆ ಲಭ್ಯವಾಗಲಿವೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಸಜ್ಜಾದ ಬಜಾಜ್ ಕ್ಯೂಟ್ ಕ್ವಾಡ್ರಿ‍‍ಸೈಕಲ್..

ಕ್ವಾಡ್ರಿಸೈಕಲ್‌ಗಳನ್ನು ಭಾರತದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ ಹಲವು ಸುತ್ತಿನ ಮಾತುಕತೆಯ ನಂತರ ಕೇಂದ್ರ ಸರ್ಕಾರವು ಅನುಮತಿ ನೀಡಿದ್ದು, ಈ ಹಿನ್ನೆಲೆ ಬಜಾಜ್ ಕ್ಯೂಟ್ ಕ್ವಾಡ್ರಿ ಸೈಕಲ್‌ಗಳನ್ನು ಪರಿಚಯಿಸಲು ಬಜಾಜ್ ಸಂಸ್ಥೆಯು ಹಲವು ಸುತ್ತಿನ ಸ್ಪಾಟ್ ಟೆಸ್ಟಿಂಗ್‌ಗಳನ್ನು ನಡೆಸುತ್ತಿದೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಸಜ್ಜಾದ ಬಜಾಜ್ ಕ್ಯೂಟ್ ಕ್ವಾಡ್ರಿ‍‍ಸೈಕಲ್..

ವಿದೇಶಿ ಮಾರುಕಟ್ಟೆಗಳಲ್ಲಿ ಭರ್ಜರಿ ಬೇಡಿಕೆ

ಹೌದು, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಮಾರುಕಟ್ಟೆಗಳಲ್ಲಿ ಕ್ವಾಡ್ರಿ‌ಸೈಕಲ್‌ಗಳಿಗೆ ಉತ್ತಮ ಬೇಡಿಕೆಯಿದ್ದು, ಬಜಾಜ್ ಸಂಸ್ಥೆಯು ಭಾರತದಲ್ಲಿ ಈ ವಾಹನಗಳನ್ನು ಅಭಿವೃದ್ಧಿ ಮಾಡಿ ಭಾರೀ ಪ್ರಮಾಣದಲ್ಲಿ ರಫ್ತು ಮಾಡುತ್ತಿದೆ. ಆದ್ರೆ ಭಾರತದಲ್ಲಿ ಈ ವಾಹನಕ್ಕೆ ಇಷ್ಟು ದಿನಗಳ ಕಾಲ ಅನುಮತಿ ನೀಡಿರಲಿಲ್ಲ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಸಜ್ಜಾದ ಬಜಾಜ್ ಕ್ಯೂಟ್ ಕ್ವಾಡ್ರಿ‍‍ಸೈಕಲ್..

ಇದಕ್ಕೆ ಕಾರಣ, ಭಾರತೀಯ ರಸ್ತೆ ನಿಯಮಗಳ ಪ್ರಕಾರ ಕೆಲವು ಸುರಕ್ಷಾ ಮಾರ್ಪಾಡುಗಳನ್ನು ಕಡ್ಡಾಯವಾಗಿ ಹೊಂದಿರಬೇಕು ಎಂಬ ನಿಯಮವಿದೆ. ಆದ್ರೆ ಬಜಾಜ್ ಕ್ವಾಡ್ರಿಸೈಕಲ್‌ಗಳು ಇಂತಹ ಸುರಕ್ಷಾ ಕ್ರಮಗಳನ್ನು ಹೊಂದಿರಲಿಲ್ಲ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಸಜ್ಜಾದ ಬಜಾಜ್ ಕ್ಯೂಟ್ ಕ್ವಾಡ್ರಿ‍‍ಸೈಕಲ್..

ಜೊತೆಗೆ ಇದನ್ನು ದ್ವಿಚಕ್ರ ವಾಹನಗಳ ವಿಭಾಗಕ್ಕೆ ಸೇರಿಸಬೇಕೋ ಅಥವಾ ಕಾರುಗಳ ವಿಭಾಗಕ್ಕೆ ಸೇರಿಸಬೇಕೋ ಎಂಬ ಗೊಂದಲವಿತ್ತು. ಇದಕ್ಕೆ ಕಾರಣ ಇದು ಬೈಕ್ ಮಾದರಿಯೆಂದು ಕರೆಯಲು ಇದು ನಾಲ್ಕು ಚಕ್ರದ ವಾಹನವಾಗಿತ್ತು. ಇನ್ನು ಕಾರು ಮಾದರಿಯೆಂದು ನಿರ್ಣಯಿಸಲು ಇದರಲ್ಲಿ ಕಾರಿನಲ್ಲಿ ಇರಬೇಕಾದ ಕೆಲವು ಅಂಶಗಳು ಇಲ್ಲದೇ ಇರುವುದು ಗೊಂದಲಕ್ಕೆ ಕಾರಣವಾಗಿತ್ತು.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಸಜ್ಜಾದ ಬಜಾಜ್ ಕ್ಯೂಟ್ ಕ್ವಾಡ್ರಿ‍‍ಸೈಕಲ್..

ಅದೇ ವಿದೇಶಿ ಮಾರುಕಟ್ಟೆಗಳಲ್ಲಿ ಪೋಲಾರಿಸ್ ವಾಹನಗಳಿಗೆ ಸಾರ್ವಜನಿಕವಾಗಿ ಬಳಕೆ ಮಾಡಲು ಅವಕಾಶವಿದ್ದು, ಬಜಾಜ್ ಕ್ವಾಡ್ರಿಸೈಕಲ್‌ಗಳ ಮಾರಾಟಕ್ಕೆ ಅಲ್ಲಿ ಯಾವುದೇ ತೊಂದರೆ ಇಲ್ಲ. ಇದು ಬೈಕ್ ಮತ್ತು ಕಾರಿನ ನಡುವೆ ಬರುವ ಮತ್ತೊಂದು ವಾಹನ ಮಾದರಿಯಾಗಿತ್ತು.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಸಜ್ಜಾದ ಬಜಾಜ್ ಕ್ಯೂಟ್ ಕ್ವಾಡ್ರಿ‍‍ಸೈಕಲ್..

ಅಂತಿಮವಾಗಿ ಕೇಂದ್ರ ಸರ್ಕಾರದ ಜೊತೆಗಿನ ಮಾತುಕತೆ ನಂತರ ಕಾರು ವಿಭಾಗಕ್ಕೆ ಸೇರಿಸಲು ಬೇಕಾದ ಮಾರ್ಪಡುಗಳನ್ನು ಮಾಡಲು ಬಜಾಜ್ ಒಪ್ಪಿಗೆ ಸೂಚಿಸಿದ್ದು, ವಾಣಿಜ್ಯ ಬಳಕೆ ಮಾತ್ರ ಮಾರಾಟ ಮಾಡುವಂತೆ ಅವಕಾಶ ನೀಡಿದೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಸಜ್ಜಾದ ಬಜಾಜ್ ಕ್ಯೂಟ್ ಕ್ವಾಡ್ರಿ‍‍ಸೈಕಲ್..

ಪ್ರಸ್ತುತ ಈ ಕ್ವಾಡ್ರಿ ಸೈಕಲ್‌ಗಳನ್ನು ಇಂಡಿಯನ್ ಆಟೋಮೊಬೈಲ್ ರಿಸರ್ಚ್ ಸೆಂಟರ್‍‍‍ಗೆ ಕಳುಹಿಸಲಾಗಿದ್ದು, ರಿಸರ್ಚ್ ಸೆಂಟರ್‍‍ನ ಒಪ್ಪಿಗೆಯ ನಂತರ ಇದೇ ವರ್ಷದ ಕೊನೆಯಲ್ಲಿ ಬಜಾಜ್ ಸಂಸ್ಥೆಯು ಬಿಡುಗಡೆಗೊಳಿಸಲಿದೆಯೆಂತೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಸಜ್ಜಾದ ಬಜಾಜ್ ಕ್ಯೂಟ್ ಕ್ವಾಡ್ರಿ‍‍ಸೈಕಲ್..

ಬಜಾಜ್ ಸಂಸ್ಥೆಯು ಈ ವಾಹನವು ಈಗಾಗಲೇ ವಿವಿಧ ರಾಷ್ಟ್ರಗಳಿಗೆ ರಫ್ತು ಕೂಡಾ ಮಾಡುತ್ತಿದ್ದು, ಪ್ರತಿ ತಿಂಗಳಿಗೆ 5000 ಯೂನಿಟ್ ಕ್ಯೂಟ್ ಕ್ವಾಡ್ರಿಗಳನ್ನು ಉತ್ಪಾದಿಸುತ್ತಿದೆ. ವಿಶೇಷ ಅಂದ್ರೆ ಕ್ಯೂಟ್ ಕ್ವಾಡ್ರಿ ಸೈಕಲ್‌ಗಳು ಆಟೋ ರಿಕ್ಷಾಗಳಿಂತಲೂ ಹೆಚ್ಚು ಶಕ್ತಿಶಾಲಿಯಾಗಿರಲಿವೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಸಜ್ಜಾದ ಬಜಾಜ್ ಕ್ಯೂಟ್ ಕ್ವಾಡ್ರಿ‍‍ಸೈಕಲ್..

ಕ್ಯೂಟ್ ಕ್ವಾಡ್ರಿ ಸೈಕಲ್‌ಗಳು 217ಸಿಸಿ 4 ಸ್ಟ್ರೋಕ್ಸ್ ಮತ್ತು ಸಿಂಗಲ್ ಸಿಲಿಂಡರ್ , ಲಿಕ್ವಿಡ್ ಕೂಲ್ ಫ್ಯುಯಲ್ ಇಂಜೆಕ್ಷನ್ ಸಹಾಯದಿಂದ 13 ಬಿಹೆಚ್‍‍ಪಿ ಮತ್ತು 20 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ.

ಆಟೋ ರಿಕ್ಷಾಗಳನ್ನು ಹಿಂದಿಕ್ಕಲು ಸಜ್ಜಾದ ಬಜಾಜ್ ಕ್ಯೂಟ್ ಕ್ವಾಡ್ರಿ‍‍ಸೈಕಲ್..

ಕ್ಯೂಟ್ ಕ್ವಾಡ್ರಿ ಸೈಕಲ್‌ಳು ಗರಿಷ್ಠವಾಗಿ ಗಂಟೆಗೆ 70 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, 2752-ಎಮ್ಎಮ್ ಉದ್ದ, 1312- ಎಮ್ಎಮ್ ಅಗಲ ಮತ್ತು 1650-ಎಮ್ಎಮ್ ಎತ್ತರವನ್ನು ಪಡೆದಿದ್ದು ಜೊತೆಗೆ ಸಿಎನ್‍‍ಜಿ ವರ್ಷನ್‍‍ನಲ್ಲಿ ಕೂಡಾ ಲಭ್ಯವಿರಲಿದೆ.

Source: Cartoq

Kannada
English summary
Bajaj Qute CNG Variant Spotted Testing In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X