ಬಿಡುಗಡೆಯಾದ ಹೊಸ ಬಜಾಜ್ ವಿ15 ಬೈಕಿನ ಹೊಸ ವೇರಿಯಂಟ್...
ದೇಶಿಯ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಬಜಾಜ್ ಆಟೋ ತಮ್ಮ ಬಜಾಜ್ ವಿ15 ಬೈಕಿನ ಪವರ್ ಅಪ್ ಎಂಬ ಬೈಕನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 65.700 ಸಾವಿರದ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ.

ಹೆಸರಿಗೆ ತಕ್ಕ ಹಾಗೆ ಬಜಾಜ್ ವಿ15 ಪವರ್ ಅಪ್ ವೇರಿಯಂಟ್ ಬೈಕಿನಲ್ಲಿ ಸಾಧಾರಣ ವಿ15 ಬೈಕಿಂಗಿಂತಾ ಹೆಚ್ಚಿನ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಇದಲ್ಲದೇ ಈ ಬೈಕಿನ ವಿನ್ಯಾಸ ಮತ್ತು ಶೆಲಿಯಲ್ಲಿ ಕೂಡಾ ಗುರುತರ ಬದಲಾವಣೆಗಳನ್ನು ಕಾಣಬಹುದಾಗಿದೆ. ವಿ 15 ಪವರ್ ಅಪ್ ವೇರಿಯಂಟ್ ಬೈಕಿನಲ್ಲಿ ಪಿಲಿಯಾನ್ ಬ್ಯಾಕ್‍ರೆಸ್ಟ್ ಅನ್ನು ನೀಡಲಾಗಿದ್ದು, ಆಕರ್ಷಕವಾದ ಫ್ಯುಯಲ್ ಟ್ಯಾಂಕ್ ಅನ್ನು ಪಡೆದುಕೊಂಡಿದೆ.

ಅದಾಗ್ಯೂ, ಬಜಾಜ್ ವಿ 15 ಪವರ್ ಅಪ್ ವೇರಿಯಂಟ್ ಬೈಕ್ ಸುರಕ್ಷತೆಯ ವಿಚಾರದಲ್ಲಿ ಎಬಿಎಸ್ ಅನ್ನು ಪದೆಡಿಲ್ಲವಾದರೂ, ಕೇಂದ್ರ ಸರ್ಕಾರದ ಆದೇಶದಂತೆ ಎಪ್ರಿಲ್ 2019ರಿಂದ ಜಾರಿಯಾಗಲಿರುವ ಹೊಸ ಕಾಯ್ದೆಯ ಅನುಸಾರ 150ಸಿಸಿ ಗಿಂತ ಮೇಲ್ಪಟ್ಟ ಎಲ್ಲಾ ದ್ವಿಚಕ್ರ ವಾಹನಗಳು ತಪ್ಪದೇ ಎಬಿಎಸ್ ಅನ್ನು ಪಡೆದಿರಲೇಬೇಕಿದೆ.

ವಿ 15 ಪವರ್ ಅಪ್ ವೇರಿಯಂಟ್ ಬೈಕ್ ಕೇವಲ ವಿನ್ಯಾಸದಲ್ಲಿ ಮಾತ್ರವಲ್ಲದೆ ಗಾತ್ರದಲ್ಲಿಯು ಬದಲಾವಣೆಗಳನ್ನು ಕಾಣಬಹುದಾಗಿದ್ದು, ರೈಡರ್‍ಗಳಿಗೆ ನಗರ ಪ್ರದೇಶಗಳಿಗೆ ತಕ್ಕ ಹಾಗೆ ಆರಾಮದಾಯಕವಾದ ಚಾಲನಾ ಅನುಭವವನ್ನು ನೀಡುತ್ತದೆ. ಮತ್ತು ಈ ಬೈಕ್ 137 ಕಿಲೋಗ್ರಾಂನ ತೂಕವನ್ನು ಪಡೆದುಕೊಂಡಿದೆ.
ಎಂಜಿನ್ ಸಾಮರ್ಥ್ಯ
ಮೇಲೆ ಹೇಳಿರುವ ಹಾಗೆ ಬಜಾಜ್ ವಿ15 ಪವರ್ ಅಪ್ ವೇರಿಯಂಟ್ ಬೈಕ್ ಸಾಧಾರಣ ವಿ15 ಬೈಕಿಗಿಂತಾ ಹೆಚ್ಚಿನ ಸಾಮಥ್ಯವನ್ನು ಪಡೆದುಕೊಂಡಿದ್ದು, 149.5ಸಿಸಿ ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 12.8 ಬಿಹೆಚ್‍ಪಿ ಮತ್ತು 13 ಎನನ್ ಟಾರ್ಕ್ ಅನ್ನು ಅಧಿಕವಾಗಿ ಉತ್ಪಾದಿಸಬಲ್ಲದು.

ಎಂಜಿನ್ ಐದು-ಸ್ಪೀಡ್ ಗೇರ್‍ಬಾಕ್ಸ್ ಗೆ ಜೋಡಿಸಲಾಗಿರುತ್ತದೆ, ಆದರೆ ವರ್ಗಾವಣೆ ಈಗ 'ಒನ್-ಡೌನ್ನಲ್ಲಿದೆ; ನಾಲ್ಕು ಅಪ್ ಮಾದರಿ ". ಈ ಹಿಂದೆ, ಗೇರ್ ಬಾಕ್ಸ್ ಒಂದು 'ಎಲ್ಲ-ಅಪ್' ಮಾದರಿಯನ್ನು ಹೊಂದಿತ್ತು.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಬಜಾಜ್ ಆಟೋ ಸಂಸ್ಥೆಯು ತಮ್ಮ ವಿ15 ಬೈಕ್ ಅನ್ನು ಮೊದಲಬಾರಿಗೆ 2016ರ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಗೊಳಿಸಿದ್ದು, ಐಎನ್ಎಸ್ ವಿಕ್ರಾಂತ್ ಜೊತೆಗೆ ಮಾರ್ಕೆಟಿಂಗ್ ಕನೆಕ್ಷನ್ ಅನ್ನು ಪಡುಕೊಂಡಿತ್ತು. ಈ ನಿಟ್ತಿನಲ್ಲಿ ಕೇವಲ ಐದು ತಿಂಗಳ ಗಡುವಿನಲ್ಲಿ ಮಾರಾಟದ ಸಂಖ್ಯೆಯು ಕೂಡಾ ಲಕ್ಷದ ಸಂಖ್ಯೆಯಲ್ಲಿಯೆ ಇದ್ದು, ಹೊಸದಾಗಿ ಸೇರ್ಪಡೆಯಾದ ಬಜಾಜ್ ವಿ15 ಬೈಕ್ ಬಜಾಜ್ ಆಟೋ ಸಂಸ್ಥೆಯ ಮಾರಾಟ ಶ್ರೇಣಿಯನ್ನು ಹೆಚ್ಚಿಸುವಲ್ಲಿ ಸಹಾಯಕವಾಗಲಿದೆ ಎನ್ನಲಾಗಿದೆ.
Source: Thrust Zone


Click it and Unblock the Notifications