ನಮ್ಮ ಬೆಂಗಳೂರಿನಲ್ಲಿ ಅನಾವರಣಗೊಂಡ ಹೊಚ್ಚ ಹೊಸ ಬೆಂಟ್ಲಿ ಕಾಂಟಿನೆಂಟಲ್ ಜಿಟಿ
ಐಷಾರಾಮಿ ಕಾರು ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬ್ರಿಟಿಷ್ ಮೋಟಾರ್ ಸಂಸ್ಥೆಯಾದ ಬೆಂಟ್ಲಿ ತನ್ನ ಹೊಚ್ಚ ಹೊಸ ಕಾಂಟಿನೆಂಟಲ್ ಜಿಟಿ ಕಾರನ್ನು ಕಳೆದ ಕೆಲದಿನಗಳ ಹಿಂದಷ್ಟೇ ಬಿಡುಗಡೆ ಮಾಡಿದ್ದು, ಭಾರತದಲ್ಲಿ ಹೊಸ ಕಾರು ಖರೀದಿಗಾಗಿ ಗ್ರಾಹಕರನ್ನು ಸೆಳೆಯುಲು ಬೃಹತ್ ಪ್ಲ್ಯಾನ್ ಮಾಡಿದೆ.

ಭಾರತದಲ್ಲಿ ಎಕ್ಸ್‌ಕ್ಲೂಸಿವ್ ಮೋಟಾರ್ ಡೀಲರ್ಸ್ ಮೂಲಕ ತನ್ನ ಕಾರುಗಳನ್ನು ಮಾರಾಟ ಮಾಡುತ್ತಿರುವ ಬೆಂಟ್ಲಿ ಇಂಡಿಯಾ ಸಂಸ್ಥೆಯು ಹೊಸ ಕಾಂಟಿನೆಂಟಲ್ ಜಿಟಿ ಕಾರನ್ನು ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಅನಾವರಣಗೊಳಿಸುವ ಮೂಲಕ ಗ್ರಾಹಕರನ್ನು ಆಕರ್ಷಣೆ ಮಾಡುತ್ತಿದ್ದು, ಸೂಪರ್ ಕಾರುಗಳಿಗೆ ವಿಶೇಷ ಬೇಡಿಕೆ ಇರುವ ನಮ್ಮ ಬೆಂಗಳೂರಿನಲ್ಲೂ ಹೊಸ ಕಾರನ್ನು ಅನಾವರಣಗೊಳಿಸಿತು.

ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಯುಬಿ ಸಿಟಿಯ ಓಕ್ ವುಡ್ ಪ್ರೆಸ್ಟಿಜ್‌ನಲ್ಲಿ ಹೊಸ ಕಾಂಟಿನೆಂಟಲ್ ಜಿಟಿ ಕಾರನ್ನು ಪ್ರದರ್ಶನ ಮಾಡಿದ ಬೆಂಟ್ಲಿ ಸಂಸ್ಥೆಯು ಹೊಸ ಕಾರಿನ ಕುರಿತಾದ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು ವಿಶೇಷವಾಗಿತ್ತು.

ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 3.70 ಕೋಟಿ ಬೆಲೆ ಹೊಂದಿರುವ ಹೊಸ ಕಾಂಟಿನೆಂಟಲ್ ಜಿಟಿ ಕಾರು ಈ ಹಿಂದಿನ ಆವೃತ್ತಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯಗಳೊಂದಿಗೆ ಪರ್ಫಾಮೆನ್ಸ್‌ನಲ್ಲೂ ಸಾಕಷ್ಟು ಸುಧಾರಣೆ ಕಂಡುಕೊಂಡಿದೆ.

2x2 ಆಸನ ಸೌಲಭ್ಯವನ್ನು ಹೊಂದಿರುವ ಹೊಸ ಕಾಂಟಿನೆಂಟಲ್ ಜಿಟಿ ಕಾರು ಮಾದರಿಯು ಫೋಮ್ ಅಲ್ಯುಮಿನಿಯಂ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ಧಿ ಹೊಂದಿದ್ದು, ಈ ಹಿನ್ನೆಲೆ ಹಳೆಯ ಮಾದರಿಗಿಂತಲೂ ಹೊಸ ಮಾದರಿಯು ಸಾಕಷ್ಟು ಆಕರ್ಷಕ ಡಿಸೈನ್ ಪಡೆದುಕೊಂಡಿದೆ.

ಹಾಗೆಯೇ ಕಾರಿನ ಒಳಭಾಗದ ವಿನ್ಯಾಸದಲ್ಲೂ ಗುರುತರ ಬದಲಾವಣೆಗಳನ್ನು ತರಲಾಗಿದ್ದು, ವಿಶ್ವದರ್ಜೆಯ ಲೆದರ್ ವ್ಯಾರ್ಪ್ ಆಧರಿತ ಇಂಟಿರಿಯರ್ ಕುಷನ್, ಅಡ್ವಾನ್ಸ್ ಲೈಟಿಂಗ್ ಟೆಕ್ನಾಲಜಿ, ಸಾಂಪ್ರಾದಾಯಿಕ ಬೆಂಟ್ಲಿ ಗ್ರಿಲ್, 21 ಇಂಚಿನ ಫೈವ್ ಸ್ಪೋಕ್ ಚಕ್ರಗಳನ್ನು ಜೋಡಿಸಲಾಗಿದೆ.

ಜಗತ್ತಿನ ಕೆಲವೇ ಕೆಲವು ಆಟೋ ಉದ್ಯಮ ಸಂಸ್ಥೆಗಳು ಮಾತ್ರವೇ ಇಂಟಿರಿಯರ್ ಡಿಸೈನ್ ಅಭಿವೃದ್ದಿ ತಂತ್ರಜ್ಞಾನಕ್ಕಾಗಿ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಹೊಂದಿದ್ದು, ಇವುಗಳಲ್ಲಿ ಬೆಂಟ್ಲಿ ಮೋಟಾರ್ಸ್ ಕೂಡಾ ಒಂದು ಎನ್ನಬಹುದು.

ಇದರಿಂದಾಗಿಯೇ ಕಾರಿನ ಒಳ ವಿನ್ಯಾಸಗಳಲ್ಲಿ ಪ್ರತಿಬಾರಿಯೂ ಹೊಸತ ಪರಿಚಯಿಸುವ ಬೆಂಟ್ಲಿ ಈ ಬಾರಿ ಹೊಸ ಕಾಂಟಿನೆಂಟಲ್ ಜಿಟಿನಲ್ಲಿ ಅತ್ಯುತ್ತಮ ದರ್ಜೆಯ ವುಡ್ ಕ್ರೋಮ್ ನೀಡಿರುವುದು ಕಾರಿನ ಮೌಲ್ಯ ಹೆಚ್ಚಿಸಿದ್ದು, 18-ಸ್ಪೀಕರ್ಸ್ ಹೊಂದಿರುವ ನೈಮ್ ಆಡಿಯೋ, 12.3-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಒಂದೇ ಸೂರಿನಡಿ ವಿವಿಧ ಮಾಹಿತಿ ನೀಡುವ ಸ್ಕೀನ್ ಬಟನ್ ಸೌಲಭ್ಯವಿದೆ.
MOST READ: ಕಳೆದ ವರ್ಷ ಕಿಸೆಯಲ್ಲಿ 5 ಸಾವಿರ ಇಲ್ಲ ಎಂದಿದ್ದ ಈ ನಟ ಇವತ್ತು 4 ಕೋಟಿ ಮೌಲ್ಯದ ಕಾರಿನ ಒಡೆಯ

ಎಂಜಿನ್ ಸಾಮರ್ಥ್ಯ
ಹೊಸ ಕಾಂಟಿನೆಂಟಲ್ ಜಿಟಿ ಕಾರುಗಳು 6.0-ಲೀಟರ್(6 ಸಾವಿರ ಸಿಸಿ) ಟ್ವಿನ್ ಟರ್ಬೋಚಾರ್ಜ್ಡ್ ಡಬ್ಲ್ಯು12 ಪೆಟ್ರೋಲ್ ಎಂಜಿನ್ ಹೊಂದಿದ್ದು, 8-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್‌ಮಿಷನ್‌ನೊಂದಿಗೆ 626-ಬಿಎಚ್‌ಪಿ ಮತ್ತು 900-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಈ ಮೂಲಕ 3.3 ಸೆಕೇಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮಿ ವೇಗ ಪಡೆಯುವ ಹೊಸ ಕಾಂಟಿನೆಂಟಲ್ ಜಿಟಿ ಕಾರು 333ಕಿ.ಮಿ ಪ್ರತಿ ಗಂಟೆಗೆ ಟಾಪ್ ಸ್ಪೀಡ್ ಹೊಂದಿದ್ದು, ಇದು ಲಂಬೋರ್ಗಿನಿ, ಫೆರಾರಿಗಿಂತಲೂ ಉತ್ತಮ ಟಾರ್ಕ್ ಹಿಂದಿರುಗಿಸಬಲ್ಲದು.
MOST READ: ಮಾಡಿಫೈಡ್ ವಿನ್ಯಾಸದಲ್ಲಿ ಮಿಂಚಿದ ಟೊಯೊಟಾ ಇನೋವಾ ಕ್ರಿಸ್ಟಾ

ಒಟ್ಟಿನಲ್ಲಿ ವಿಶ್ವದ ಶ್ರೇಷ್ಠ ಕಾರುಗಳಲ್ಲಿ ಒಂದಾಗಿರುವ ಬೆಂಟ್ಲಿ ಸಂಸ್ಥೆಯು ಸದ್ಯ ಕಾಂಟಿನೆಂಟಲ್ ಜಿಟಿ ಮಾದರಿಗಳ ಮಾರಾಟಕ್ಕಾಗಿ ಭಾರತದಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಿದ್ದು, ಹೊಸ ಕಾರು ಅನಾವರಣಗೊಳಿಸುವ ಮೂಲಕ ಐಷಾರಾಮಿ ಕಾರು ಖರೀದಿದಾರರನ್ನು ತನ್ನತ್ತ ಸೆಳೆಯಲು ತವಕದಲ್ಲಿದೆ.


Click it and Unblock the Notifications








