ಮಾರುತಿ ಬ್ರೆಝಾ ಕಾರನ್ನು ಹಿಂದಿಕ್ಕುತ್ತಾ ದಟ್ಸನ್ ಗೋ ಕ್ರಾಸ್‍ಓವರ್ ಎಸ್‍ಯುವಿ ಕಾರು.?
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್ ಸ್ವಾಮ್ಯದ ದಟ್ಸನ್ ತಮ್ಮ ಗೋ ಕ್ರಾಸ್ ಕಾರನ್ನು ಕಳೆದ ವರ್ಷ ಇಂಡೋನೇಶಿಯಾದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್ ಸ್ವಾಮ್ಯದ ದಟ್ಸನ್ ತಮ್ಮ ಗೋ ಕ್ರಾಸ್ ಕಾರನ್ನು ಕಳೆದ ವರ್ಷ ಇಂಡೋನೇಶಿಯಾದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಆದರೆ ಇದೀಗ ಚೆನ್ನೈ ನಗರದಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸುವಾಗ ಕಾಣಿಸಿಕೊಂಡಿದ್ದು, ಶೀಘ್ರವೇ ಭಾರತೀಯ ಮಾರುಕಟ್ಟೆಯಲ್ಲಿ ಕೂಡಾ ಬಿಡುಗಡೆಗೊಳ್ಳುವ ಬಗ್ಗೆ ಸುಳಿವು ನೀಡಿದೆ.

ದಟ್ಸನ್ ಗೋ ಕ್ರಾಸ್ ಕಾರು ಮಾರಟ್ಟೆಯಲ್ಲಿ ಸುಮಾರು ರೂ. 10 ಲಕ್ಷಕ್ಕೆ ಮಾರಾಟಗೊಳ್ಳುಬಹುದು ಎಂದು ಆಂದಾಜಿಸಲಾಗಿದ್ದು, ಸಬ್ 4 ಮೀಟರ್ ಕಾರ್ ವಿನ್ಯಾಸದಲ್ಲಿ ಬರಲಿದೆ. ಹೊಸ ದಟ್ಸನ್ ಗೋ ಕ್ರಾಸ್ ಈ ಕಾರು ಸಂಪೂರ್ಣ ಎಸ್‍ಯುವಿ ಆಕಾರದಲ್ಲಿ ಅಲ್ಲದೆ ಕ್ರಾಸ್‍ಓವರ್ ಎಸ್‍ಯುವಿ ವಿನ್ಯಾಸವನ್ನು ಪಡೆದುಕೊಳ್ಳಲಿದೆ.

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ದಟ್ಸನ್ ಗೋ ಕ್ರಾಸ್ ಎಸ್‍ಯುವಿ ಕಾರು ವಿಶಾಲವಾದ ಆಕಾರವನ್ನು ಪಡೆದುಕೊಂಡಿದ್ದು, ಕಾರಿನ ಹೊರಭಾಗದಲ್ಲಿ ಹೆಡ್‍ಲ್ಯಾಂಪ್ಸ್, ಫಾಗ್ ಲ್ಯಾಂಪ್ಸ್, ಎಲ್‍ಇಡಿ ಡಿಆರ್‍ಎಲ್, ಇಂಟಿಗ್ರೇಟೆಡ್ ಏರ್‍ಡ್ಯಾಮ್ಸ್ ಅನ್ನು ಪಡೆದುಕೊಂಡಿದೆ.

ಕಾರಿನ ಹಿಂಭಾಗದಲ್ಲಿ ಸ್ಪೋರ್ಟಿ ಸ್ಪಾಯ್ಲರ್‍ನೊಂದಿಗೆ ಅಗಲವಾದ ಬಂಪರ್ ಅನ್ನು ಪಡೆದುಕೊಂಡಿರಲಿದೆ. ಬಿಡುಗಡೆಗೊಳ್ಳಲಿರುವ ಹೊಸ ದಟ್ಸನ್ ಗೋ ಕ್ರಾಸ್ ರೆನಾಲ್ಟ್-ನಿಸ್ಸನ್ ಅಲಿಯಾನ್ಸ್ ಸಿಎಮ್‍ಎಫ್-ಎ ಫ್ಲಾಟ್‍ಫಾರ್ಮ್ ಅನ್ನು ಆಧರಿಸಲಿದ್ದು, 1.0 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ.

ಇಂಡೋನೇಶಿಯಾದ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ ದಟ್ಸನ್ ಗೋ ಕ್ರಾಸ್ ಕಾರು 1.2 ಲೀಟರ್ 3 ಸಿಲೆಂಡರ್ ಹೆಚ್‍ಆರ್12ಡಿಇ ಪೆಟ್ರೋಲ್ ಎಂಜಿನ್ ಸಹಾಯದಿಂದ 67ಬಿಹೆಚ್‍ಪಿ ಮತ್ತು 104ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಮತ್ತು ಸಿವಿಟಿ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾಹಿತಿಗಳ ಪ್ರಕಾರ ಈ ಕಾರು ಮೇಲೆ ಹೇಳಿರುವ ಹಾಗೆ ರೆಡಿ ಗೋ ಕಾರಿನಲ್ಲಿರುವ 1 ಲೀಟರ್ 3 ಸಿಲೆಂಡರ್ ಪೆಟ್ರೋಲ್ ಎಂಜಿನ್ ಅನ್ನು ಬಳಸಲಾಗಿದ್ದು, 67ಬಿಹೆಚ್‍ಪಿ ಮತ್ತು 90ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದೆ.

ಜಪಾನ್ ಮೂಲದ ಸಂಸ್ಥೆಯಾದ ದಟ್ಸನ್ ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ಮಾರಾಟವನ್ನು ಅಧಿಕಗೊಳಿಸಲು ಕಡಿಮೆ ಬೆಲೆಯಲ್ಲಿ ಕಾರುಗಳನ್ನು ಬಿಡುಗಡೆಗೊಳಿಸಲಿದ್ದು, ಇನ್ನು ಮುಂದಿನ ಆರು ತಿಂಗಳಿನಲ್ಲಿ ದಟ್ಸನ್ ಗೋ ಮತ್ತು ಗೋ+ ಕಾರುಗಳ ಫೇಸ್‍ಲಿಫ್ಟ್ ಮಾದರಿಯನ್ನು ಪರಿಚಯಿಸಲಿದೆ.

ಮುಂದಿನ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಕಾಲಿಡಲಿರುವ ದಟ್ಸನ್ ಗೋ ಕ್ರಾಸ್ ಎಸ್‍ಯುವಿ ಕಾರು, ಮಾರುತಿ ಬ್ರೆಝಾ ಮತ್ತು ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಪೈಪೋಟಿ ನೀಡಲಿದೆ.


Click it and Unblock the Notifications








