ಬಿಡುಗಡೆಗೆ ಸಜ್ಜಾದ ಸಿವಿಟಿ ಸೌಲಭ್ಯದ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್

2018ರ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್ ಕಾರು ಆವೃತ್ತಿಯು ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಇದಕ್ಕೂ ಮುನ್ನ ಹೊಸ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಾ ನಡೆಸಲಾದ ಸ್ಪಾಟ್ ಟೆಸ್ಟಿಂಗ್ ವೇಳೆ ಹೊಸ ಕಾರಿನ ತಾಂತ್ರಿಕ ಅಂಶಗಳು ಬಹಿರಂಗಗೊಂಡಿವೆ.

By Praveen Sannamani

ಹೊಚ್ಚ ಹೊಸ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್ ಆವೃತ್ತಿ ಭಾರತದಲ್ಲಿ ಅಷ್ಟೇ ಅಲ್ಲದೇ ಇಂಡೋನೇಷ್ಯಾದಲ್ಲೂ ಸಹ ಬಿಡುಗಡೆಯಾಗಲಿದ್ದು, ಹೊಸ ಕಾರಿನಲ್ಲಿ ಹೊಸದಾಗಿ ಸಿವಿಟಿ(ಆಟೋ ಮ್ಯಾಟಿಕ್ ಗೇರ್‌ಬಾಕ್ಸ್) ಸೌಲಭ್ಯ ಹೊಂದಿರುವುದು ಖಚಿತವಾಗಿದೆ. ಈ ಮೂಲಕ ಸಿಟಿವಿ ಹ್ಯಾಚ್‌ಬ್ಯಾಕ್ ಇಷ್ಟಪಡುವ ಗ್ರಾಹಕರಿಗೆ ಇದು ಉತ್ತಮ ಆಯ್ಕೆಯಾಗಿ ಹೊರಹೊಮ್ಮುವ ಸಾಧ್ಯತೆಗಳಿವೆ.

ಬಿಡುಗಡೆಗೆ ಸಜ್ಜಾದ ಸಿವಿಟಿ ಸೌಲಭ್ಯದ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕಾರಿನ ತಾಂತ್ರಿಕ ಅಂಶಗಳ ಬಗೆಗೆ ಹೇಳುವುದಾದರೇ, ನ್ಯೂ ಗ್ರೀಲ್, ಅಪ್‌ಡೇಡ್ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಸ್, ವಿಶೇಷ ವಿನ್ಯಾಸದ ರಿಯರ್ ಬಂಪರ್, ಲಾರ್ಜ್ ರಿಯರ್ ಸ್ಪಾಯ್ಲರ್ ಮತ್ತು ಟರ್ನ್ ಇಂಡಿಕೇಟರ್ ಸೌಲಭ್ಯ ಪಡೆದಿರುವುದು ಬಹಿರಂಗವಾಗಿದೆ.

ಬಿಡುಗಡೆಗೆ ಸಜ್ಜಾದ ಸಿವಿಟಿ ಸೌಲಭ್ಯದ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್

ಜೊತೆಗೆ ಕಾರಿನ ಹಿಂಭಾಗದ ವಿನ್ಯಾಸದಲ್ಲೂ ಗುರತರ ಬದಲಾವಣೆ ತಂದಿರುವ ದಟ್ಸನ್ ಸಂಸ್ಥೆಯು ಸ್ಪೋರ್ಟಿ ಲುಕ್ ನೀಡಿದ್ದು, ಒಆರ್‌ವಿಎಂ, ಬಾಡಿ ಕಿಟ್, ಫ್ರಂಟ್ ಸ್ಲಿಟ್ಟರ್, ಸೈಡ್ ಸ್ಟೈಕರ್ ಬಳಕೆ ಮಾಡಿರುವುದು ಹ್ಯಾಚ್‌ಬ್ಯಾಕ್ ಪ್ರಿಯರನ್ನು ಆಕರ್ಷಣೆ ಮಾಡುವುದಲ್ಲಿ ಯಾವುದೇ ಅನುಮಾನವಿಲ್ಲ.

ಬಿಡುಗಡೆಗೆ ಸಜ್ಜಾದ ಸಿವಿಟಿ ಸೌಲಭ್ಯದ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್

ಇನ್ನು ಕಾರಿನ ಒಳ ವಿನ್ಯಾಸದ ಬಗೆಗೆ ಹೇಳುವುದಾರರೇ, ಹಳೆಯ ಮಾದರಿಗಿಂತ ಕೊಂಚ ಬದಲಾವಣೆ ಹೊರತು ಪಡಿಸಿ ಈ ಹಿಂದಿನಂತೆಯೇ ಸ್ಟಿರಿಂಗ್ ವೀಲ್ಹ್ ವಿನ್ಯಾಸ, ಇನ್‌ಸ್ಟುಮೆಂಟ್ ಕ್ಸಸ್ಟರ್, ನ್ಯೂ ಎಸಿ ವೆಂಟ್ಸ್, ಫ್ರಂಟ್ ಏರ್‌ಬ್ಯಾಗ್ ಸೌಲಭ್ಯಗಳು ಅರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗಲಿವೆ.

ಬಿಡುಗಡೆಗೆ ಸಜ್ಜಾದ ಸಿವಿಟಿ ಸೌಲಭ್ಯದ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್

ಎಂಜಿನ್ ಸಾಮರ್ಥ್ಯ

ಫೇಸ್‌ಲಿಫ್ಟ್ ದಟ್ಸನ್ ರೆಡಿ ಗೊ ಕಾರುಗಳು 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 68-ಬಿಎಚ್‌ಪಿ ಮತ್ತು 104-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಜೊತೆಗೆ 5-ಸ್ಟೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು ಆಯ್ಕೆ ರೂಪದಲ್ಲಿ 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಕಾರು ಮಾದರಿಯು ಖರೀದಿಗೆ ಲಭ್ಯವಿರವಿದೆ.

ಬಿಡುಗಡೆಗೆ ಸಜ್ಜಾದ ಸಿವಿಟಿ ಸೌಲಭ್ಯದ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್

ಬಿಡುಗಡೆ ಯಾವಾಗ?

ಸದ್ಯ ಇಂಡೋನೇಷ್ಯಾದಲ್ಲಿ ಇದೇ ತಿಂಗಳ 7 ರಂದು ಬಿಡುಗಡೆಯಾಗುತ್ತಿದ್ದು, ಭಾರತದಲ್ಲೂ ಇದೇ ಸಂದರ್ಭದಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದ್ದರೂ ಯಾವುದೇ ಖಚಿತ ಮಾಹಿತಿ ಇಲ್ಲ. ಒಂದೇ ವೇಳೆ 7ರಂದು ಭಾರತದಲ್ಲಿ ಬಿಡುಗಡೆಗೊಂಡಿಲ್ಲವಾದ್ರೂ ತಿಂಗಳಾಂತ್ಯಕ್ಕೆ ಬಿಡುಗಡೆಯಾಗುವುದು ನಿಶ್ಚಿತ.

ಬಿಡುಗಡೆಗೆ ಸಜ್ಜಾದ ಸಿವಿಟಿ ಸೌಲಭ್ಯದ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್

ಕಾರಿನ ಬೆಲೆಗಳು

ದಟ್ಸನ್ ರೆಡಿ ಗೊ ಕಾರುಗಳು ಅಪ್‌ಡೇಡ್ ವರ್ಷನ್ ಹಿನ್ನೆಲೆ ಬೆಲೆ ಕೊಂಚ ದುಬಾರಿಯಾಗಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ 3.35 ಲಕ್ಷದಿಂದ 3.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ಸಿವಿಟಿ ಸೌಲಭ್ಯದ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್

ಒಟ್ಟಿನಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ ಗ್ರಾಹಕರನ್ನು ಸೆಳೆಯಲು ಸಜ್ಜಾಗಿರುವ ಹೊಸ ಕಾರುಗಳು, ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿ ಮಾರುತಿ ಆಲ್ಟೊ 800, ಟಾಟಾ ನ್ಯಾನೊ ಮತ್ತು ರೆನಾಲ್ಟ್ ಕ್ವಿಡ್ ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

More from DriveSpark

Article Published On: Friday, May 4, 2018, 11:27 [IST]
English summary
New Datsun GO 2018 Facelift Spied In Indonesia.
Read more on datsun hatchback
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+