ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ದಟ್ಸನ್ ಗೋ ಫೇಸ್‍ಲಿಫ್ಟ್ ಕಾರು..
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ದಟ್ಸನ್ ಸಂಸ್ಥೆಯು ತಮ್ಮ ಹೊಸ ಗೋ ಬಡ್ಜೆಟ್ ಮತ್ತು 7 ಆಸನದ ಎಮ್‍ಪಿವಿ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸುವ ಯೋಜನೆಯಲ್ಲಿದ್ದು, ಮುಂದಿನ ತಿಂಗಳು ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದೆ.
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ದಟ್ಸನ್ ಸಂಸ್ಥೆಯು ತಮ್ಮ ಹೊಸ ಗೋ ಬಡ್ಜೆಟ್ ಮತ್ತು 7 ಆಸನದ ಎಮ್‍ಪಿವಿ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸುವ ಯೋಜನೆಯಲ್ಲಿದ್ದು, ಮುಂದಿನ ತಿಂಗಳು ಮಾರುಕಟ್ಟೆಗೆ ಬಿಡುಗಡೆಗೊಳಿಸಲಿದೆ.

ಕೆಲ ದಿನಗಳ ಹಿಂದಷ್ಟೆ ದಟ್ಸನ್ ಸಂಸ್ಥೆಯು ಬಿಡುಗಡೆಗೊಳಿಸಲಿರುವ ಕಾರುಗಳಲ್ಲಿ ಒಂದಾದ ಗೋ+ ಫೇಸ್‍ಲಿಫ್ಟ್ ಕಾರಿನ ಸ್ಪೈ ಚಿತ್ರಗಳು ಸೋರಿಕೆಯಾಗಿದು, ಇದೀಗ ಗೋ ಫೇಸ್‍ಲಿಫ್ಟ್ ಹ್ಯಾಚ್‍ಬ್ಯಾಕ್ ಕಾರು ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ. ಮಾರುಕಟ್ಟೆಗೆ ಹೊಸ ರೂಪ ತಾಳಿ ಬರಲಿರುವ ದಟ್ಸನ್ ಗೋ ಕಾರು ನವೀಕರಿಸಲಾದ ವೈಶಿಷ್ಟ್ಯತೆ ಮತ್ತು ವಿನ್ಯಾಸವನ್ನು ಪಡೆದುಕೊಂಡಿರಲಿದೆ.

ಹೊಸ ದಟ್ಸನ್ ಗೋ ಫೇಸ್‍ಲಿಫ್ಟ್ ಹ್ಯಾಚ್‍ಬ್ಯಾಕ್ ಕಾರಿನ ಮುಂಭಾಗದಲ್ಲಿ ಗುರುದರ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹೊಸ ಬಂಪರ್, ಅಗಲವಾದ ಗ್ರಿಲ್, ಅಪ್ಡೇಟೆಡ್ ಹೆಡ್‍ಲ್ಯಾಂಪ್ಸ್, ಡೇ ಟೈಮ್ ರನ್ನಿಂಗ್ ಲೈಟ್ಸ್ ಮತ್ತು ಈ ಕಾರಿನ ಟಾಪ್ ಎಂಡ್ ಆವೃತ್ತಿಯು ಸ್ಟೈಲಿಷ್ ಅಲಾಯ್ ಚಕ್ರಗಳನ್ನು ಪಡೆದುಕೊಂಡಿರಲಿದೆ.

ಅಲ್ಲದೇ ದಟ್ಸನ್ ಗೋ ಫೇಸ್‍ಲಿಫ್ಟ್ ಕಾರಿನ ಒಳಭಾಗದಲ್ಲಿಯೂ ನವೀಕರಿಸಲಾಗಿದ್ದು, ಹೊಸ ಡ್ಯಾಶ್‍ಬೋರ್ಡ್ ಅನ್ನು ಪಡೆದುಕೊಂಡಿದೆ. ಗೇರ್ ಲಿವರ್ ಅನ್ನೂ ಕೂಡಾ ಬದಲಾಯಿಸಲಾಗಿದ್ದು, ಬ್ಲೂಟೂತ್ ಮತ್ತು ಸ್ಮಾರ್ಟ್‍ಫೋನ್ ಕನೆಕ್ಟಿವಿಟಿಯನ್ನು ಸಪೋರ್ಟ್ ಮಾಡಬಲ್ಲ 6.75 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.

ಇನ್ಸ್ಟ್ರೂಮೆಂಟ್ ಕ್ಲಸ್ಟರ್‍ನೊಂದಿಗೆ ಹೊಸ ಟಾಚೋ ಮೀಟರ್ ಅನ್ನು ಕೂಡ ಒದಗಿಸಲಾಗಿದ್ದು, ಸೀಟ್‍ಗಳ ವಿನ್ಯಾಸವನ್ನು ಕೂಡಾ ಬದಲಾಯಿಸಲಾಗಿದೆ. ಇದಲ್ಲದೇ ಕಾರಿನ ನಾಲ್ಕು ಬಾಗಿಲುಗಳಿಗೆ ಪವರ್ ವಿಂಡೋಸ್ ಅನ್ನು ನೀಡಿದ್ದು, ಸ್ಟೀರಿಂಗ್ ವ್ಹೀಲ್ ಅನ್ನು ಕೂಡಾ ನವೀಕರಿಸಲಾಗಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಏರ್‍ಬ್ಯಾಗ್‍ಗಳನ್ನು ಅಳವಳಿಸಲಾಗಿದೆ. ಇಂಡೋನೇಷಿಯಾ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ದಟ್ಸನ್ ಗೋ ಫೇಸ್‍ಲಿಫ್ಟ್ ಕಾರುಗಳು ಹೆಚ್‍ಆರ್12ಡಿಇ 1.2 ಲೀಟರ್ 3 ಸಿಲೆಂಡರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 67ಬಿಹೆಚ್‍ಪಿ ಮತ್ತು 104ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೊಳ್ಳಲಿರುವ ದಟ್ಸನ್ ಗೋ ಫೇಸ್‍ಲಿಫ್ಟ್ ಹ್ಯಾಚ್‍ಬ್ಯಾಕ್ ಕಾರಿನ ಬೆಲೆಯ ಬಗ್ಗೆ ಮಾಹಿತಿ ಅಲಭ್ಯವಾಗಿದ್ದು, ಬಿಡುಗಡೆಯ ನಂತರ ಗ್ರಾಹಕರಲ್ಲಿ ಯಾವ ರೀತಿಯ ಕುತೂಹಲವನ್ನು ಉಂಟು ಮಾಡಲಿದೆ ಎಂದು ಕಾಯ್ದು ನೋಡಬೇಕಿದೆ.


Click it and Unblock the Notifications








