ಹೊಸ ದಟ್ಸನ್ ಗೊ ಮತ್ತು ಗೊ ಪ್ಲಸ್ ಫೇಸ್‌ಲಿಫ್ಟ್ ಕಾರುಗಳ ಖರೀದಿಗಾಗಿ ಬುಕ್ಕಿಂಗ್ ಆರಂಭ
2018ರ ದಟ್ಸನ್ ರೆಡಿ ಗೊ ಮತ್ತು ಗೊ ಪ್ಲಸ್ ಕಾರು ಆವೃತ್ತಿಗಳು ಭಾರತೀಯ ಮಾರುಕಟ್ಟೆಯಲ್ಲಿ ಅಕ್ಟೋಬರ್ 9ರಂದು ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಇದಕ್ಕೂ ಮುನ್ನ ಹೊಸ ಕಾರಿನ ಕುರಿತಾದ ಟೀಸರ್ ಒಂದನ್ನು ಬಿಡುಗಡೆಗೊಳಿಸಿದ್ದ ದಟ್ಸನ್ ಸಂಸ್ಥೆಯು ಇದೀಗ ಕಾರಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಸಹ ಆರಂಭಿಸಿದೆ.

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ದಟ್ಸನ್ ತಮ್ಮ ಜನಪ್ರಿಯ ದಟ್ಸನ್ ಗೊ ಮತ್ತು ದಟ್ಸನ್ ಗೋ ಪ್ಲಸ್ ಕಾರುಗಳ ಫೇಸ್‍ಲಿಫ್ಟ್ ಮಾದರಿಗಳನ್ನು ವಿನೂತನ ವಿನ್ಯಾಸಗಳೊಂದಿಗೆ ಪರಿಚಯಿಸುತ್ತಿದ್ದು, ರೂ.11 ಸಾವಿರ ಮುಂಗಡ ಪಾವತಿಯೊಂದಿಗೆ ಹೊಸ ಕಾರುಗಳಿಗೆ ಬುಕ್ಕಿಂಗ್ ಸಲ್ಲಿಸಬಹುದಾಗಿದೆ.

ದಟ್ಸನ್ ಗೊ ಮತ್ತು ಗೊ ಪ್ಲಸ್ ಫೇಸ್‍ಲಿಫ್ಟ್ ಕಾರುಗಳು ಈಗಾಗಲೇ ಇಂಡೋನೇಷ್ಯಾದಲ್ಲಿ ಬಿಡುಗಡೆಗೊಂಡು ಯಶಸ್ವಿಯಾಗಿ ಮಾರಾಟಗೊಳ್ಳುತ್ತಿದ್ದು, ದಟ್ಸನ್ ಗೊ ಮತ್ತು ಗೊ ಪ್ಲಸ ಫೇಸ್‍ಲಿಫ್ಟ್ ಕಾರುಗಳು ಹೊಸ ವಿನ್ಯಾಸವನ್ನು ಪಡೆದಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಯಾವ ರೂಪವನ್ನು ಹೊತ್ತು ಬರಲಿದೆ ಎಂಬ ಮಾಹಿತಿಯು ಇನ್ನು ಲಭ್ಯವಾಗಲಿಲ್ಲ.

ಟೀಸರ್ ಪ್ರಕಾರ, ದಟ್ಸನ್ ಗೊ ಮತ್ತು ಗೊ ಪ್ಲಸ್ ಫೇಸ್‍ಲಿಫ್ಟ್ ಕಾರುಗಳು ಹೊರಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಹೆಡ್‍ಲ್ಯಾಂಪ್ಸ್, ಎಲ್ಇಡಿ ಡಿಆರ್‍ಎಲ್‍ನೊಂದಿಗೆ ಬಂಪರ್ಸ್, ಹೊಸ ಮೆಶ್ ವಿನ್ಯಾಸದೊಂದಿಗೆ ಮುಂಭಾಗದಲ್ಲಿ ಹೆಕ್ಸಾಗೊನಲ್ ಗ್ರಿಲ್ ಮತ್ತು ಈ ಕಾರುಗಳ ಹೈ ಎಂಡ್ ಮಾದರಿಯು 14 ಇಂಚಿನ ಅಲಾಯ್ ಚಕ್ರಗಳನ್ನು ಪಡೆದುಕೊಂಡಿದೆ.

ಇನ್ನು ಈ ಕಾರುಗಳ ಒಳಭಾಗದಲ್ಲಿ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹೊಸ ಡ್ಯಾಶ್‍ಬೋರ್ಡ್, ಎಸಿ ವೆಂಟ್ಸ್ ಮತ್ತು 6.5 ಇಂಚಿನ ಟಚ್‍ಸ್ಕ್ರೀನ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ.

ದಟ್ಸನ್ ಗೊ ಮತ್ತು ಗೊ ಪ್ಲಸ್ ಫೇಸ್‍ಲಿಫ್ಟ್ ಕಾರುಗಳಲ್ಲಿನ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಈ ಬಾರಿ ಟಾಚೊಮೀಟರ್ ಅನ್ನು ಕೂಡಾ ಪಡೆದಿದ್ದು, ಮುಂಭಾಗದಲ್ಲಿ ವಿಭಜಿತ ಸೀಟ್‍ಗಳು ಮತ್ತು ಗ್ಲೋವ್ ಬಾಕ್ಸ್ ಅನ್ನು ಪಡೆದುಕೊಂಡಿದೆ.

ಇದಲ್ಲದೆ ಈ ಕಾರುಗಳಲ್ಲಿ ಎಲೆಕ್ಟ್ರಾನಿಕ್ ಅಡ್ಜಸ್ಟ್ ಮಿರರ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್, ಪವರ್ ವಿಂಡೋ, ರಿಯರ್ ವೈಪರ್ಸ್ ವೈಶಿಷ್ಟ್ಯತೆಗಳ ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಮತ್ತು ಏರ್‍ಬ್ಯಾಗ್‍ಗಳನ್ನು ಅಳವಡಿಸಲಾಗಿದೆ.

ದಟ್ಸನ್ ಗೊ ಮತ್ತು ಗೋ ಪ್ಲಸ್ ಹ್ಯಾಚ್‍ಬ್ಯಾಕ್ ಹಾಗೂ ಎಮ್‍ಪಿವಿ ಕಾರುಗಳು 1.2 ಲೀಟರ್, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದಿದ್ದು, 68 ಬಿಹೆಚ್‍ಪಿ ಮತ್ತು 104 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಹಾಗು ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇಂಡೋನೇಷ್ಯಾದಲ್ಲಿ ಮಾರಾಟಗೊಳ್ಳುತ್ತಿರುವ ಈ ಕಾರುಗಳು ಸಿವಿಟಿ ಗೇರ್‍ಬಾಕ್ಸ್ ಅನ್ನು ಪಡೆದಿದ್ದು, ಭಾರತಕ್ಕೆ ಬರಲಿರುವ ದಟ್ಸನ್ ಗೊ ಮತ್ತು ಗೊ ಪ್ಲಸ್ ಕಾರುಗಳು ಕೇವಲ ಮ್ಯಾನುವಲ್ ಗೇರ್‍ಬಾಕ್ಸ್ ಆಯ್ಕೆಯಲ್ಲಿ ಮಾತ್ರ ಲಭ್ಯವಿರಲಿದೆ ಎನ್ನಲಾಗಿದೆ.

ಹೀಗಾಗಿ ಹೊಸದಾಗಿ ಬಿಡುಗಡೆಗೊಳ್ಳಲಿರುವ ದಟ್ಸನ್ ಗೊ ಮತ್ತು ಗೊ+ ಕಾರುಗಳು ಪ್ರೀಮಿಯಂ ಕಾರುಗಳ ಬೆಲೆಯನ್ನು ಹೊಂದಿರಲಿದೆ ಎನ್ನಲಾಗಿದ್ದು, ಪ್ರಸ್ತುತ ದೊರೆಯುತ್ತಿರುವ ಸಾಧಾರಣ ದಟ್ಸನ್ ಗೊ ಮತ್ತು ಗೊ ಪ್ಲಸ್ ಕಾರುಗಳಿಗಿಂತ ರೂ. 30 ಸಾವಿರದಿಂದ 45 ಸಾವಿರ ಹೆಚ್ಚಿರಲಿವೆ.


Click it and Unblock the Notifications








