ಇದೇ ತಿಂಗಳು 9ರಂದು ಬಿಡುಗಡೆಯಾಗಲಿರುವ ದಟ್ಸನ್ ಹೊಸ ಕಾರುಗಳು ಹೇಗಿರಲಿವೆ ಗೊತ್ತಾ?

2018ರ ದಟ್ಸನ್ ರೆಡಿ ಗೊ ಮತ್ತು ಗೊ ಪ್ಲಸ್ ಕಾರು ಆವೃತ್ತಿಗಳು ಭಾರತೀಯ ಮಾರುಕಟ್ಟೆಯಲ್ಲಿ ಇದೇ ತಿಂಗಳು ಅಕ್ಟೋಬರ್ 9ರಂದು ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಇದಕ್ಕೂ ಮುನ್ನ ಹೊಸ ಕಾರಿನ ವಿಶೇಷ ಸೌಲಭ್ಯಗಳ ಕುರಿತಾದ ಮಾಹಿತಿ ಕೈಪಿಡಿಯನ್ನು ದಟ್ಸನ್ ಸಂಸ್ಥೆಯು ಬಹಿರಂಗಗೊಳಿಸಿದೆ.

ಇದೇ ತಿಂಗಳು 9ರಂದು ಬಿಡುಗಡೆಯಾಗಲಿರುವ ದಟ್ಸನ್ ಹೊಸ ಕಾರುಗಳು ಹೇಗಿರಲಿವೆ ಗೊತ್ತಾ?

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ದಟ್ಸನ್ ತಮ್ಮ ಜನಪ್ರಿಯ ದಟ್ಸನ್ ಗೊ ಮತ್ತು ದಟ್ಸನ್ ಗೋ ಪ್ಲಸ್ ಕಾರುಗಳ ಫೇಸ್‍‍ಲಿಫ್ಟ್ ಮಾದರಿಗಳನ್ನು ವಿನೂತನ ವಿನ್ಯಾಸಗಳೊಂದಿಗೆ ಪರಿಚಯಿಸುತ್ತಿದ್ದು, ಇದೀಗ ರೂ.11 ಸಾವಿರ ಮುಂಗಡ ಪಾವತಿಯೊಂದಿಗೆ ಹೊಸ ಕಾರುಗಳಿಗೆ ಬುಕ್ಕಿಂಗ್ ಕೂಡಾ ಸಲ್ಲಿಸಬಹುದಾಗಿದೆ.

ಇದೇ ತಿಂಗಳು 9ರಂದು ಬಿಡುಗಡೆಯಾಗಲಿರುವ ದಟ್ಸನ್ ಹೊಸ ಕಾರುಗಳು ಹೇಗಿರಲಿವೆ ಗೊತ್ತಾ?

ದಟ್ಸನ್ ಗೊ ಮತ್ತು ಗೊ ಪ್ಲಸ್ ಫೇಸ್‍‍ಲಿಫ್ಟ್ ಕಾರುಗಳು ಈಗಾಗಲೇ ಇಂಡೋನೇಷ್ಯಾದಲ್ಲಿ ಬಿಡುಗಡೆಗೊಂಡು ಯಶಸ್ವಿಯಾಗಿ ಮಾರಾಟಗೊಳ್ಳುತ್ತಿದ್ದು, ದಟ್ಸನ್ ಗೊ ಮತ್ತು ಗೊ ಪ್ಲಸ ಫೇಸ್‍‍ಲಿಫ್ಟ್ ಕಾರುಗಳು ಹೊಸ ವಿನ್ಯಾಸವನ್ನು ಪಡೆದಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಯಾವ ರೂಪವನ್ನು ಹೊತ್ತು ಬರಲಿದೆ ಎಂಬ ಮಾಹಿತಿಯನ್ನ ಇದೀಗ ಬಿಟ್ಟುಕೊಡಲಾಗಿದೆ.

ಇದೇ ತಿಂಗಳು 9ರಂದು ಬಿಡುಗಡೆಯಾಗಲಿರುವ ದಟ್ಸನ್ ಹೊಸ ಕಾರುಗಳು ಹೇಗಿರಲಿವೆ ಗೊತ್ತಾ?

ದಟ್ಸನ್ ನೀಡಿರುವ ಮಾಹಿತಿ ಪ್ರಕಾರ, ದಟ್ಸನ್ ಗೊ ಮತ್ತು ಗೊ ಪ್ಲಸ್ ಫೇಸ್‍‍ಲಿಫ್ಟ್ ಕಾರುಗಳು ಹೊರಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಹೆಡ್‍‍ಲ್ಯಾಂಪ್ಸ್, ಎಲ್ಇಡಿ ಡಿಆರ್‍ಎಲ್‍‍ನೊಂದಿಗೆ ಬಂಪರ್ಸ್, ಹೊಸ ಮೆಶ್ ವಿನ್ಯಾಸದೊಂದಿಗೆ ಮುಂಭಾಗದಲ್ಲಿ ಹೆಕ್ಸಾಗೊನಲ್ ಗ್ರಿಲ್ ಮತ್ತು ಈ ಕಾರುಗಳ ಹೈ ಎಂಡ್ ಮಾದರಿಯು 14 ಇಂಚಿನ ಡೈಮಂಡ್ ಕಟ್ ಅಲಾಯ್ ಚಕ್ರಗಳನ್ನು ಪಡೆದುಕೊಂಡಿದೆ.

ಇದೇ ತಿಂಗಳು 9ರಂದು ಬಿಡುಗಡೆಯಾಗಲಿರುವ ದಟ್ಸನ್ ಹೊಸ ಕಾರುಗಳು ಹೇಗಿರಲಿವೆ ಗೊತ್ತಾ?

ಇನ್ನು ಈ ಕಾರುಗಳ ಒಳಭಾಗದಲ್ಲೂ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹೊಸ ಡ್ಯಾಶ್‍‍ಬೋರ್ಡ್, ಎಸಿ ವೆಂಟ್ಸ್ ಮತ್ತು 7-ಇಂಚಿನ ಟಚ್‍‍ಸ್ಕ್ರೀನ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಆ್ಯಪಲ್ ಕಾರ್ ಪ್ಲೇ, ಗೂಗಲ್ ಮ್ಯಾಪ್ ನೆವಿಗೆಷನ್ ಮತ್ತು ವಾಯ್ಸ್ ಕಮಾಂಡ್ ಸೌಲಭ್ಯ ಅನ್ನು ಅಳವಡಿಸಲಾಗಿದೆ.

ಇದೇ ತಿಂಗಳು 9ರಂದು ಬಿಡುಗಡೆಯಾಗಲಿರುವ ದಟ್ಸನ್ ಹೊಸ ಕಾರುಗಳು ಹೇಗಿರಲಿವೆ ಗೊತ್ತಾ?

ದಟ್ಸನ್ ಗೊ ಮತ್ತು ಗೊ ಪ್ಲಸ್ ಫೇಸ್‍‍ಲಿಫ್ಟ್ ಕಾರುಗಳಲ್ಲಿನ ಸ್ಪೋರ್ಟಿ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಈ ಬಾರಿ ಟಾಚೊಮೀಟರ್ ಅನ್ನು ಕೂಡಾ ಪಡೆದಿದ್ದು, ಮುಂಭಾಗದಲ್ಲಿ ವಿಭಜಿತ ಸೀಟ್‍‍ಗಳು ಮತ್ತು ಗ್ಲೋವ್‍ ಬಾಕ್ಸ್ ಅನ್ನು ಪಡೆದುಕೊಂಡಿದೆ.

ಇದೇ ತಿಂಗಳು 9ರಂದು ಬಿಡುಗಡೆಯಾಗಲಿರುವ ದಟ್ಸನ್ ಹೊಸ ಕಾರುಗಳು ಹೇಗಿರಲಿವೆ ಗೊತ್ತಾ?

ಇದಲ್ಲದೆ ಈ ಕಾರುಗಳಲ್ಲಿ ಎಲೆಕ್ಟ್ರಾನಿಕ್ ಅಡ್ಜಸ್ಟ್ ಮಿರರ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್, ಪವರ್ ವಿಂಡೋ, ಡ್ರೈವರ್ ಸೀಟ್ ರಿಮೆಂಡರ್, ರಿಯರ್ ವೈಪರ್ಸ್ ವೈಶಿಷ್ಟ್ಯತೆಗಳ ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಮತ್ತು ಡ್ಯುಯಲ್ ಫ್ರಂಟ್ ಏರ್‍‍ಬ್ಯಾಗ್‍‍ಗಳನ್ನು ಅಳವಡಿಸಲಾಗಿದೆ.

ಇದೇ ತಿಂಗಳು 9ರಂದು ಬಿಡುಗಡೆಯಾಗಲಿರುವ ದಟ್ಸನ್ ಹೊಸ ಕಾರುಗಳು ಹೇಗಿರಲಿವೆ ಗೊತ್ತಾ?

ಇನ್ನು ದಟ್ಸನ್ ಗೊ ಮತ್ತು ಗೋ ಪ್ಲಸ್ ಹ್ಯಾಚ್‍‍ಬ್ಯಾಕ್ ಹಾಗೂ ಎಮ್‍‍ಪಿವಿ ಕಾರುಗಳು 1.2 ಲೀಟರ್, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದಿದ್ದು, 68 ಬಿಹೆಚ್‍‍ಪಿ ಮತ್ತು 104 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಹಾಗು ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಇದೇ ತಿಂಗಳು 9ರಂದು ಬಿಡುಗಡೆಯಾಗಲಿರುವ ದಟ್ಸನ್ ಹೊಸ ಕಾರುಗಳು ಹೇಗಿರಲಿವೆ ಗೊತ್ತಾ?

ಇಂಡೋನೇಷ್ಯಾದಲ್ಲಿ ಮಾರಾಟಗೊಳ್ಳುತ್ತಿರುವ ಈ ಕಾರುಗಳು ಸಿವಿಟಿ ಗೇರ್‍‍ಬಾಕ್ಸ್ ಅನ್ನು ಪಡೆದಿದ್ದು, ಭಾರತಕ್ಕೆ ಬರಲಿರುವ ದಟ್ಸನ್ ಗೊ ಮತ್ತು ಗೊ ಪ್ಲಸ್ ಕಾರುಗಳು ಕೇವಲ ಮ್ಯಾನುವಲ್ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ಮಾತ್ರ ಲಭ್ಯವಿರಲಿದೆ ಎನ್ನಲಾಗಿದೆ.

ಇದೇ ತಿಂಗಳು 9ರಂದು ಬಿಡುಗಡೆಯಾಗಲಿರುವ ದಟ್ಸನ್ ಹೊಸ ಕಾರುಗಳು ಹೇಗಿರಲಿವೆ ಗೊತ್ತಾ?

ಹೀಗಾಗಿ ಹೊಸದಾಗಿ ಬಿಡುಗಡೆಗೊಳ್ಳಲಿರುವ ದಟ್ಸನ್ ಗೊ ಮತ್ತು ಗೊ+ ಕಾರುಗಳು ಪ್ರೀಮಿಯಂ ಕಾರುಗಳ ಬೆಲೆಯನ್ನು ಹೊಂದಿರಲಿದೆ ಎನ್ನಲಾಗಿದ್ದು, ಪ್ರಸ್ತುತ ದೊರೆಯುತ್ತಿರುವ ಸಾಧಾರಣ ಗುಣಮಟ್ಟದ ದಟ್ಸನ್ ಗೊ ಮತ್ತು ಗೊ ಪ್ಲಸ್ ಕಾರುಗಳಿಗಿಂತಲೂ ಹೊಸ ಕಾರುಗಳು ರೂ. 50 ಸಾವಿರದಿಂದ 80 ಸಾವಿರ ಹೆಚ್ಚಿರಲಿವೆ ಎನ್ನಲಾಗಿದೆ.

More from DriveSpark

ಸದ್ಯ ಎಂಪಿವಿ ಕಾರುಗಳ ವಿಭಾಗದಲ್ಲಿ ಭಾರೀ ಬೇಡಿಕೆ ಹೊಂದಿರುವ ಮಹೀಂದ್ರಾ ಮರಾಜೊ ಕಾರುಗಳ ಫೋಟೋ ಗ್ಯಾಲರಿ..!

Article Published On: Thursday, October 4, 2018, 11:03 [IST]
English summary
Datsun Go And Go+ Facelift Features Revealed Ahead Of Launch.
Read more on datsun new car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+