ಬಹಿರಂಗಗೊಂಡ ಡಟ್ಸನ್ ಗೋ ಲೈವ್ ಸ್ಪೆಷಲ್ ಎಡಿಷನ್ ಕಾರು..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಡಟ್ಸನ್ ತಮ್ಮ ಗೋ ಕಾರಿನ ಲೈವ್ ಸ್ಪೆಷಲ್ ಎಡಿಷನ್ ಅನ್ನು ಇಂಡೋನೇಷಿಯಾದ ಜಕಾರ್‍ತಾ ವೇದಿಕೆಯಲ್ಲಿ ನಡೆಯುತ್ತಿರುವ ಗೈಕಿಂಡೊ ಇಂಡೋನೇಷಿಯನ್ ಇಂಟರ್‍‍ನ್ಯಾಷನಲ್ ಆಟೋ ಶೋ ನಲ್ಲಿ ಅನಾವರಣಗೊಳಿಸಿದೆ.

By Rahul Ts

2017ರಲ್ಲಿ ನಡೆದ ಆಟೋ ಮೇಳದಲ್ಲಿ ಮೊದಲ ಬಾರಿಗೆ ಆವಿಷ್ಕಾರ ಮಾಡಲಾದ ಲೈವ್ ಸ್ಪೆಷಲ್ ಎಡಿಷನ್ ಅಧಾರವಾಗಿ ಈ ಗೋ ಲೈವ್ ಸ್ಪೆಷಲ್ ಎಡಿಷನ್ ಕಾರನ್ನು ತಯಾರಿಸಲಾಗಿದೆ. ಮತ್ತು ಇದನ್ನು ಗೋ ಮಾಡಲ್‍‍ನ ಟಾಪ್ ವೇರಿಯಂಟ್ ಆಧಾರವಾಗಿ ತಯಾರು ಮಾಡಲಗಿದೆ ಎನ್ನಲಾಗಿದೆ.

ಬಹಿರಂಗಗೊಂಡ ಡಟ್ಸನ್ ಗೋ ಲೈವ್ ಸ್ಪೆಷಲ್ ಎಡಿಷನ್ ಕಾರು..

ರೆಗ್ಯೂಲರ್ ಡಟ್ಸನ್ ಗೋ ಮಾಡಲ್‍‍ಗೆ ಹೋಲಿಸಿದರೆ ವ್ಯತ್ಯಾಸ ಕಂಡುಬರಲು ಗೋ ಲೈವ್ ಎಡಿಷನ್ ಎಡಿಷನ್ ಕಾರಿನಲ್ಲಿ ವಿನ್ಯಾಸದ ಪ್ರವಾಗಿ ಬದಲಾವಣೆಗಳನ್ನು ಮಾದಿ ನಿರ್ವಹಿಸಿದ ನೂತನ ಡಿಸೈನ್ ಎಲಿಮೆಂಟ್ ಅನ್ನು ಜೋಡಿಸಲಾಗಿದೆ. ಇಂಡೋನೇಷಿಯಾದ ಮಾರುಕಟ್ಟೆಗಾಗಿ ಇವುಗಳನ್ನು ಪರಿಮಿತ ಸಂಖ್ಯೆಯಲ್ಲಿ ಉತ್ಪಾತ್ತಿ ಮಾಡಲಾಗಿದೆ.

ಬಹಿರಂಗಗೊಂಡ ಡಟ್ಸನ್ ಗೋ ಲೈವ್ ಸ್ಪೆಷಲ್ ಎಡಿಷನ್ ಕಾರು..

ಡಿಸೈನ್ ವಿಚಾರದ ಬಗ್ಗೆ ಹೋಳುವುದಾದರೆ, ಡಟ್ಸನ್ ಲೈವ್ ಕಾರಿನಲ್ಲಿ ಆಕ್ರಮಣಕಾರಿ ಬಾದಿ ಕಿಟ್ ಅಳವಡಿಸಲಾಗಿದ್ದು, ಇದು ಕಾರನ್ನು ಮತ್ತಷ್ಟು ಸ್ಪೋರ್ಟಿವ್ ಮತ್ತು ಸ್ಟೈಲಿಷ್ ಆಗಿ ಕಾಣುವಂತೆ ಮಾಡಲಾಗಿದೆ. ಸ್ಪೆಷಲ್ ಎಡಿಷನ್ ಡಟ್ಸನ್ ಗೋ ಲೈವ್ ಗ್ರೇ ಕಲರ್ ಬಾಡಿ ಪೆಯಿಂಟ್ ಸ್ಕೀಮ್‍ ಅನ್ನು ಪಡೆದಿರಲಿದೆ. ಫ್ರಂಟ್ ಸ್ಪ್ಲಿಟ್ಟರ್, ಸೈಡ್ ಮೌಲ್ಡಿಂಗ್ಸ್, ರಿಯರ್ ಡೀಫ್ಯೂಸರ್ ಮತ್ತು ಹಳದಿ ಬಣ್ಣದಲ್ಲಿರುವ ರಿಯರ್ ಸ್ಪಾಯ್ಲರ್ ಅನ್ನು ಪಡೆದುಕೊಂಡಿರಲಾಗಿದೆ.

ಬಹಿರಂಗಗೊಂಡ ಡಟ್ಸನ್ ಗೋ ಲೈವ್ ಸ್ಪೆಷಲ್ ಎಡಿಷನ್ ಕಾರು..

ಡಟ್ಸನ್ ಗೋ ಲೈವ್ ಇಂಟೀರಿಯರ್ ಹಳದಿ ಬಣ್ಣದ ದಾರದಿಂದ ಸ್ಟಿಚಿಂಗ್ ಮಾಡಿದ ಸೀಟ್‍‍ಗಳು, ಹಳದಿ ಬಣ್ಣದ ಸೀಟ್ ಬೆಲ್ಟ್ಸ್, ಹಳದಿ ಬ್ಯಾಕ್ ಲೈಟ್ ಇರುವ ಇಸ್ಟ್ರೂಮೆಂಟ್ ಕ್ಲಸ್ಟರ್ ಇರಿಸಲಾಗಿದೆ. ಹಳದಿ ವರ್ಣದ ಬೆಳಕನ್ನು ಹೊರತು ಪಡಿಸೆ ಬೇರಾವ ಬದಲಾವಣೆಗಳನ್ನು ಒಳಭಾಗದಲ್ಲಿ ಪಡೆದಿರುವುದಿಲ್ಲ.

ಬಹಿರಂಗಗೊಂಡ ಡಟ್ಸನ್ ಗೋ ಲೈವ್ ಸ್ಪೆಷಲ್ ಎಡಿಷನ್ ಕಾರು..

ತಾಂತ್ರಿಕವಾಗಿ ಡಟ್ಸನ್ ಗೋ ಲೈವ್ ಸ್ಪೆಷಲ್ ಎಡಿಷನ್ ಕಾರಿನಲ್ಲಿ 1.2 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. 5 ಸ್ಪೀಡ್ ಮ್ಯಾನುವಲ್ ಅಥವಾ ಸಿವಿಟಿ ಆಟೋಮ್ಯಾತಿಕ್ ಗೇರ್‍‍‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು ಇದು 78ಬಿಹೆಚ್‍‍ಪಿ ಹಾರ್ಸ್ ಪವರ್ ಅನ್ನು ಉತ್ಪತ್ತಿ ಮಾಡುತ್ತದೆ.

ಬಹಿರಂಗಗೊಂಡ ಡಟ್ಸನ್ ಗೋ ಲೈವ್ ಸ್ಪೆಷಲ್ ಎಡಿಷನ್ ಕಾರು..

ಇಂಡೋನೇಷಿಯಾದ ಮಾರುಕಟ್ಟೆಯಲ್ಲಿ ಡಟ್ಸನ್ ಗೋ ಲೈ ಸ್ಪೆಷಲ್ ಎಡಿಷನ್ ಕಾರಿನ ಖರೀದಿಗಾಗಿ ಈಗಾಗಲೆ ಬುಕ್ಕಿಂಗ್ ಶುರುವಾಗಿದ್ದು, ಇಂಟೀರಿಯರ್ ಮತ್ತು ಎಕ್ಸ್ಟೀರಿಯರ್ ಭಾಗಗಳಲ್ಲಿ ಹಲವಾರು ನವೀಕರಣಗಳನ್ನು ಮಾಡಲಾದ ಈ ಸ್ಪೋರ್ಟೀವ್ ಮಾಡಲ ಅನ್ನು ಪ್ರತ್ಯೇಕವಾಗಿ ಯುವ ಸಮುದಾಯವನ್ನು ಆಕರ್ಷಿಸಲು ವಿನ್ಯಾಸಗೊಳಿಸಲಾಗಿದೆ.

ಬಹಿರಂಗಗೊಂಡ ಡಟ್ಸನ್ ಗೋ ಲೈವ್ ಸ್ಪೆಷಲ್ ಎಡಿಷನ್ ಕಾರು..

ಡ್ರೈವ್‍‍ಸ್ಪಾರ್ಕ್ ಕನ್ನಡ ಅಭಿಪ್ರಾಯ

ಡಟ್ಸನ್ ಸಂಸ್ಥೆಯು ಈ ಹಿಂದೆಯೆ ಪರಿಚಯಿಸಿದ ಗೋ ಲೈವ್ ಕಾನ್ಸೆಪ್ಟ್ ಆಧಾರವಾಗಿ ಗೋ ಲೈವ್ ಸ್ಪೆಷಲ್ ಎಡಿಷನ್ ಕಾರನ್ನು ಆವಿಷ್ಕರಿಸಲಾಗಿದೆ. ಪ್ರಸ್ಥುತ ಇರುವ ರೆಗ್ಯುಲರ್ ಮಾಡಲ್‍‍ಗೆ ಹೋಲಿಸಿದರೆ, ತೊಂಬಾ ಹೊಸದಾಗಿ ಮತ್ತು ಸ್ಪೋರ್ಟೀವ್ ಆಗಿದೆ. ಬಹಳ ಆಕರ್ಷಕವಾದ ವಿನ್ಯಾಸದಲ್ಲಿರುವ ಡಟ್ಸನ್ ಗೋ ಲೈವ್ ಸ್ಪೆಷಲ್ ಎಡಿಷನ್ ಮಾಡಲ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದರ ಬಗ್ಗೆ ಇನ್ನು ಯಾವುದೇ ಮಾಹಿತಿಯು ಲಭ್ಯವಾಗಲಿಲ್ಲ.

More from DriveSpark

Article Published On: Friday, August 3, 2018, 15:31 [IST]
English summary
Datsun Go Live Special Edition Revealed At 2018 Indonesia International Auto Show.
Read more on datsun suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+