ಎಸ್‌ಯುವಿ ಪ್ರಿಯರಿಗೆ ಹೊಸ ಆಯ್ಕೆಯಾಗಲಿದೆ 7 ಸೀಟರ್ ದಟ್ಸನ್ ಕ್ರಾಸ್

ಎಸ್‌ಯುವಿ ಪ್ರಿಯರಿಗೆ ಹೊಸ ಆಯ್ಕೆಯಾಗಲಿದೆ 7 ಸೀಟರ್ ದಟ್ಸನ್ ಕ್ರಾಸ್

By Praveen Sannamani

2018ರ ಅವಧಿಗೆ ಬಿಡುಗಡೆಯಾಗಲಿರುವ ಪ್ರಮುಖ ಎಸ್‌ಯುವಿ ಕಾರುಗಳಲ್ಲಿ ದಟ್ಸನ್ ಕ್ರಾಸ್ ಹೊಸ ನೀರಿಕ್ಷೆ ಹುಟ್ಟುಹಾಕಿದ್ದು, ಗ್ರಾಹಕರನ್ನು ಸೆಳೆಯುವ ಉದ್ದೇಶದೊಂದಿಗೆ ವಿನೂತನ ವಿನ್ಯಾಸಗಳೊಂದಿಗೆ ದೇಶಿಯ ಮಾರುಕಟ್ಟೆ ಪ್ರವೇಶ ಪಡೆಯುವುದು ಖಚಿತವಾಗಿದೆ.

ಎಸ್‌ಯುವಿ ಪ್ರಿಯರಿಗೆ ಹೊಸ ಆಯ್ಕೆಯಾಗಲಿದೆ 7 ಸೀಟರ್ ದಟ್ಸನ್ ಕ್ರಾಸ್

ಸದ್ಯ ವಾಣಿಜ್ಯ ಬಳಕೆಯ ಉದ್ದೇಶಕ್ಕಾಗಿ 7 ಸೀಟರ್ ಕಾರುಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆಯಿದ್ದು, ಟೊಯೊಟಾ ಇನೋವಾ ಹೊರತು ಪಡಿಸಿ ಉಳಿದ ಕಾರು ಮಾದರಿಗಳು ಅಷ್ಟೇನು ಯಶಸ್ವಿಯಾಗುತ್ತಿಲ್ಲ. ಹೀಗಾಗಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ದಟ್ಸನ್ ಕ್ರಾಸ್ ಹೊರತರಲಾಗುತ್ತಿದ್ದು, ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

ಎಸ್‌ಯುವಿ ಪ್ರಿಯರಿಗೆ ಹೊಸ ಆಯ್ಕೆಯಾಗಲಿದೆ 7 ಸೀಟರ್ ದಟ್ಸನ್ ಕ್ರಾಸ್

ದಟ್ಸನ್ ಬಿಡುಗಡೆ ಮಾಡಿರುವ ಮಾಹಿತಿಗಳ ಪ್ರಕಾರ ಬರಲಿರುವ ದಟ್ಸನ್ ಕ್ರಾಸ್ ಕಾರುಗಳು ಸಿಎಂಎಫ್-ಎ ಚಾರ್ಸಿ ಆಧಾರದ ಮೇಲೆ ನಿರ್ಮಾಣವಾಗಿದ್ದು, ದೊಡ್ಡದಾದ ಒಳ ವಿನ್ಯಾಸವನ್ನು ಪಡೆದುಕೊಂಡಿದೆ.

ಎಸ್‌ಯುವಿ ಪ್ರಿಯರಿಗೆ ಹೊಸ ಆಯ್ಕೆಯಾಗಲಿದೆ 7 ಸೀಟರ್ ದಟ್ಸನ್ ಕ್ರಾಸ್

ಜೊತೆಗೆ ಬಾಡಿ ಕ್ಲ್ಯಾಡಿಂಗ್, ಹೊಲೋಜೆನ್ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಫ್ರಂಟ್ ಫಾಗ್ ಲ್ಯಾಂಪ್, ಎಲ್ಇಡಿ ಪೋಜಿಷನ್ ಲ್ಯಾಂಪ್, ರೂಫ್ ರೈಲ್ಸ್, ರಿರ್ ವೈಪರ್ ಸೇರಿದಂತೆ 15-ಇಂಚಿನ ಅಲಾಯ್ ಚಕ್ರಗಳು, ಹನಿಕೊಂಬೋ ಗ್ರಿಲ್ ಪಡೆದುಕೊಂಡಿದೆ.

ಎಸ್‌ಯುವಿ ಪ್ರಿಯರಿಗೆ ಹೊಸ ಆಯ್ಕೆಯಾಗಲಿದೆ 7 ಸೀಟರ್ ದಟ್ಸನ್ ಕ್ರಾಸ್

ಈ ಹಿಂದೆ 2016ರ ಇಂಡಿಯನ್ ಆಟೋ ಎಕ್ಸ್‌ಪೋದಲ್ಲೇ ದಟ್ಸನ್ ಕ್ರಾಸ್ ಪರಿಕಲ್ಪನೆಯನ್ನು ಪ್ರದರ್ಶನ ಮಾಡಲಾಗಿತ್ತಾದರೂ ನಿಗದಿತ ಅವಧಿಯಲ್ಲಿ ಮಾರುಕಟ್ಟೆಗೆ ಪರಿಚಯಸಲು ತಡವಾಗಿದ್ದು, ಇದೀಗ ಮಾರುಕಟ್ಟೆಯ ಸನ್ನಿವೇಶಗಳಿಗೆ ಅನುಗುಣವಾಗಿ ದಟ್ಸನ್ ಕ್ರಾಸ್ ಅಭಿವೃದ್ಧಿ ಮಾಡಲಾಗಿದೆ.

ಎಸ್‌ಯುವಿ ಪ್ರಿಯರಿಗೆ ಹೊಸ ಆಯ್ಕೆಯಾಗಲಿದೆ 7 ಸೀಟರ್ ದಟ್ಸನ್ ಕ್ರಾಸ್

ಎಂಜಿನ್ ಸಾಮರ್ಥ್ಯ

1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಲಿರುವ ದಟ್ಸನ್ ಕ್ರಾಸ್ ಕಾರುಗಳು 68-ಬಿಎಚ್‌ಪಿ ಮತ್ತು 104-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದ್ದು, 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಮತ್ತು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದೆ.

ಎಸ್‌ಯುವಿ ಪ್ರಿಯರಿಗೆ ಹೊಸ ಆಯ್ಕೆಯಾಗಲಿದೆ 7 ಸೀಟರ್ ದಟ್ಸನ್ ಕ್ರಾಸ್

ಇನ್ನು ಕಾರಿನ ಸುರಕ್ಷಾ ವಿಧಾನಗಳ ಬಗ್ಗೆ ಹೇಳುವುದಾದರೇ 7 ಸೀಟರ್ ಮಾದರಿಯ ದಟ್ಸನ್ ಕ್ರಾಸ್ ಕಾರುಗಳ ಮುಂಭಾಗದ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ ಸಿಸ್ಟಂ ಹೊಂದಿರುವ ದಟ್ಸನ್ ಕ್ರಾಸ್ ಕಾರುಗಳು, ಎಬಿಎಸ್, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ರಿರ್ ಪಾರ್ಕಿಂಗ್ ಸೆನ್ಸಾರ್, ವಿದ್ಯುತ್ ಮಾದರಿಯ ರಿಯರ್ ವ್ಯೂವ್ ಮಿರರ್ ನೀಡಲಾಗಿದೆ.

ಎಸ್‌ಯುವಿ ಪ್ರಿಯರಿಗೆ ಹೊಸ ಆಯ್ಕೆಯಾಗಲಿದೆ 7 ಸೀಟರ್ ದಟ್ಸನ್ ಕ್ರಾಸ್

ಬಿಡುಗಡೆ ಯಾವಾಗ?

ದಟ್ಸನ್ ಕ್ರಾಸ್ ಎಸ್‌ಯುವಿ ಕಾರುಗಳು ಮುಂಬರುವ ವರ್ಷಾಂತ್ಯದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿದ್ದು, ಮಧ್ಯಮ ಗಾತ್ರದ ಎಸ್‌ಯುವಿಗಳಾದ ಮಹೀಂದ್ರಾ ಕೆಯುವಿ 100, ಫೋರ್ಡ್ ಫಿಗೊ ಸೇರಿದಂತೆ ಪ್ರಮುಖ ಕಾರು ಆವೃತ್ತಿಗೆ ಇದು ತೀವ್ರ ಪ್ರತಿಸ್ಪರ್ಧಿಯಾಗಲಿದೆ.

ಎಸ್‌ಯುವಿ ಪ್ರಿಯರಿಗೆ ಹೊಸ ಆಯ್ಕೆಯಾಗಲಿದೆ 7 ಸೀಟರ್ ದಟ್ಸನ್ ಕ್ರಾಸ್

ಕಾರಿನ ಬೆಲೆ(ಅಂದಾಜು)

ದಟ್ಸನ್ ಕ್ರಾಸ್ ಕಾರುಗಳ ಬೆಲೆ ಕುರಿತಂತೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಿಸ್ಸಾನ್ ಇಂಡಿಯಾ ಮಾರುಕಟ್ಟೆ ವಿಭಾಗದ ಅಧ್ಯಕ್ಷ ಥಾಮಸ್ ಕೂಹಲ್ ಅವರು, ದಟ್ಸನ್ ಕಾರುಗಳನ್ನ ಭಾರತದಲ್ಲಿ ಜನಪ್ರಿಯ ಬ್ರಾಂಡ್ ಕಾರುಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ಖರೀದಿ ಲಭ್ಯವಿರಲಿದ್ದು, 10 ಲಕ್ಷದೊಳಗೆ ದಟ್ಸನ್ ಕ್ರಾಸ್ ಲಭ್ಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದಿದ್ದಾರೆ.

Source: ACI

ಎಸ್‌ಯುವಿ ಪ್ರಿಯರಿಗೆ ಹೊಸ ಆಯ್ಕೆಯಾಗಲಿದೆ 7 ಸೀಟರ್ ದಟ್ಸನ್ ಕ್ರಾಸ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಎಸ್‌ಯುವಿ ಆವೃತ್ತಿಗಳಿಗೆ ಉತ್ತಮ ಬೇಡಿಕೆಯಿದ್ದು, ದಟ್ಸನ್ ಕ್ರಾಸ್ ಉತ್ತಮ ಆಯ್ಕೆಯಾಗುವ ಎಲ್ಲಾ ಭರವಸೆಗಳನ್ನು ಹೊಂದಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ದಟ್ಸನ್ ಕ್ರಾಸ್ ಯಾವ ರೀತಿ ಗ್ರಾಹಕರನ್ನು ಸೆಳೆಯಲಿದೆ ಎಂಬುವುದನ್ನ ಕಾಯ್ದು ನೋಡಬೇಕಿದೆ.

More from DriveSpark

Article Published On: Wednesday, July 25, 2018, 11:33 [IST]
English summary
Datsun to launch sub-4 meter compact SUV In India Soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+