ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

By Praveen Sannamani

ಹೆದ್ದಾರಿಗಳಲ್ಲಿ ಕ್ಯೂ ನಿಂತು ಟೋಲ್‌ ಕಟ್ಟವುದು ಇದೀಗ ವಾಹನ ಸವಾರರಿಗೆ ಕಿರಿಕಿರಿ ಉಂಟುಮಾಡುತ್ತಿದೆ. ಆದ್ರೆ ಇನ್ಮುಂದೆ ಆ ತಾಪತ್ರಯ ಇರುವುದಿಲ್ಲ. ಯಾಕೆಂದ್ರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಪಾವತಿಗೆ ಫಾಸ್ಟ್‌ಟ್ಯಾಗ್ ಎಂಬ ಹೊಸ ವ್ಯವಸ್ಥೆ ಜಾರಿಗೆ ಮಾಡಿರುವುದಲ್ಲದೇ ಫಾಸ್ಟ್‌ಟ್ಯಾಗ್ ವಿತರಣೆಗೂ ಹೊಸ ವ್ಯವಸ್ಥೆ ಮಾಡಿದೆ.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ವೇಳೆ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಯನ್ನು ತಗ್ಗಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ತರಲಾಗಿದ್ದು, ನಾಲ್ಕು ಚಕ್ರದ ಹೊಸ ವಾಹನಗಳು ಫಾಸ್ಟ್ ಟ್ಯಾಗ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಕೆ ಮಾಡಿಕೊಳ್ಳಬೇಕೆಂಬ ನಿಯಮವನ್ನು ಕೂಡಾ ಜಾರಿಗೆ ಮಾಡುತ್ತಿದೆ. ಹೀಗಾಗಿ ಫಾಸ್ಟ್ ಟ್ಯಾಗ್ ಲಭ್ಯತೆ ಹಾಗೂ ಬಳಕೆ ಮಾಡುವುದು ಹೇಗೆ? ಎನ್ನುವ ಬಗ್ಗೆ ನಿಮ್ಮ ಡ್ರೈವ್ ಸ್ಪಾರ್ಕ್ ತಂಡ ತಿಳಿಸಿಕೊಡಲಿದೆ.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಫಾಸ್ಟ್ ಟ್ಯಾಗ್‌ಗಳಿಗೆ ಮೊಬೈಲ್ ಮಾದರಿಯಲ್ಲೇ ಕರೆನ್ಸಿ ಹಾಕಿಸಿಕೊಳ್ಳುವ ಮೂಲಕ ಟೋಲ್ ಪಾವತಿ ಮಾಡುವ ಒಂದು ವಿಧಾನವಾಗಿದ್ದು, ಹೊಸ ವ್ಯವಸ್ಥೆಯಿಂದ ಹಲವಾರು ಲಾಭಗಳಿವೆ.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಹೊಸ ವ್ಯವಸ್ಥೆಯಿಂದ ನೀವು ಟೋಲ್‌ ಕೇಂದ್ರಗಳಲ್ಲಿ ಹಣ ಪಾವತಿ ಮಾಡಲು ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಲಿದ್ದು, ಒಂದು ಭಾರೀ ನೀವು ನೋಂದಣಿ ಮಾಡಿಕೊಂಡಿದಲ್ಲಿ ಐದು ವರ್ಷ ಕಾಲ ನೀವು ಈ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದು.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಫಾಸ್ಟ್‌ಟ್ಯಾಗ್ ಪಡೆಯುವುದು ಹೇಗೆ?

ಟೋಲ್ ಪ್ಲಾಜ್‌ಗಳಲ್ಲೇ ಫಾಸ್ಟ್ ಟ್ಯಾಗ್ ಖರೀದಿ ಮಾಡಬಹುದಾಗಿದ್ದು, ಇಲ್ಲವೇ ಫಾಸ್ಟ್ ಟ್ಯಾಗ್ ಮಾರಾಟ ಮಾಡುವ ಖಾಸಗಿ ಏಜೆನ್ಸಿಗಳಿಂದಲೂ ಖರೀದಿ ಮಾಡಬಹುದು. ಜೊತೆಗೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‌ಗಳಲ್ಲೂ ಫಾಸ್ಟ್‌ಟ್ಯಾಗ್ ವಿತರಣೆಗೆ ಅವಕಾಶ ಕಲ್ಪಿಸಲಾಗಿದೆ.

MOST READ: ವಾಣಿಜ್ಯ ವಾಹನಗಳ ಸ್ಪೀಡ್ ಗವರ್ನರ್ ವಿಚಾರದಲ್ಲಿ ಕೇಂದ್ರದಿಂದ ಮಹತ್ವದ ನಿರ್ಧಾರ

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಜೊತೆಗೆ ನಿಮ್ಮ ಹತ್ತಿರದ ಎಸ್‌ಬಿಐ, ಐಸಿಐಸಿಐ, ಆಕ್ಸಿಸ್ ಮತ್ತು ಫೆಡರಲ್ ಬ್ಯಾಂಕ್‌ಗಳಲ್ಲೂ ಫಾಸ್ಟ್‌ಟ್ಯಾಗ್‌ಗಳು ಲಭ್ಯವಾಗಲಿದ್ದು, ಇದಕ್ಕಾಗಿ ನೀವು ಕೆಲವು ಸೂಕ್ತ ದಾಖಲೆ ಸಲ್ಲಿಸುವುದು ಅವಶ್ಯಕತೆಯಿದೆ. ಈ ಮೂಲಕ ಮುಂದಿನ ನಾಲ್ಕು ತಿಂಗಳಲ್ಲಿ ಪ್ರತಿಯೊಂದು ವಾಹನವು ಸಹ ಫಾಸ್ಟ್‌ಟ್ಯಾಗ್ ಹೊಂದಿರುವಂತೆ ನೋಡಿಕೊಳ್ಳಲಾಗುತ್ತಿದೆ.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಬೇಕಾದ ದಾಖಲೆ ಪತ್ರಗಳು..!

*ವಾಹನದ ಆರ್‌ಸಿ ಬುಕ್

*ವಾಹನ ಮಾಲೀಕರ ಒಂದು ಪಾಸ್‌ಫೋರ್ಟ್ ಸೈಜ್ ಫೋಟೋ

*ವಾಹನದ ಕೆವೈಸಿ ದಾಖಲೆ

*ವಿಳಾಸ ಮತ್ತು ID ಪ್ರೂಫ್ (ಆಧಾರ್, ಓಟರ್ ಐಡಿ, ಪಾರ್ಸ್‌ಫೋರ್ಟ್, ಪಾನ್ ಕಾರ್ಡ್)

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಫಾಸ್ಟ್ ಟ್ಯಾಗ್‌ನಿಂದ ಪ್ರಯೋಜನಗಳು ಯಾವುವು?

ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಫಾಸ್ಟ್‌ಟ್ಯಾಗ್ ಹೊಂದಿದ್ದರೆ ಹಲವು ಪ್ರಯೋಜನಗಳಿದ್ದು, ಸುಲಭವಾಗಿ ಟೋಲ್ ಶುಲ್ಕ ಪಾವತಿ ಮಾಡಬಹುದಲ್ಲದೇ ಆನ್‌ಲೈನ್ ರೀಚಾರ್ಜಿಂಗ್, ಎಸ್ಎಂಎಸ್ ಅಲರ್ಟ್ ಸೌಲಭ್ಯವಿರುತ್ತದೆ.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಇದರಿಂದ ನಿಮ್ಮ ಫಾಸ್ಟ್‌ಟ್ಯಾಗ್‌ನಲ್ಲಿರುವ ಮೊತ್ತ ಮತ್ತು ನೀವು ಹೊರಟಿರುವ ಸ್ಥಳಗಳಲ್ಲಿನ ಟೋಲ್ ಸಂಗ್ರಹ ಕೇಂದ್ರಗಳ ಮಾಹಿತಿ, ಶುಲ್ಕುಗಳ ಮಾಹಿತಿ ಸಂದೇಶಗಳನ್ನು ಪಡೆಯಬಹುದಾಗಿದ್ದು, ವಿಶೇಷ ಸಂದರ್ಭಗಳಲ್ಲಿ ನೀವು ಕ್ಯಾಶ್ ಬ್ಯಾಕ್ ಆಫರ್ ಪಡೆಯುವ ಅವಕಾಶವಿರುತ್ತೆ.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಫಾಸ್ಟ್‌ಟ್ಯಾಗ್ ರೀಚಾರ್ಜ್ ಹೇಗೆ?

ಕ್ರೇಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಟ್ ಬ್ಯಾಕಿಂಗ್ ಇಲ್ಲವೇ ಚೆಕ್ ಪಾವತಿಸಿ ರೀಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ರೂ.100 ರಿಂದ 1 ಲಕ್ಷ ತನಕ ರೀಚಾರ್ಜ್ ಮಿತಿ ಹೊಂದಿರುತ್ತೆ.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಫ್ಯಾಸ್ಟ್ ಟ್ಯಾಗ್ ಹೇಗೆ ಕಾರ್ಯನಿರ್ವಹಿಸುತ್ತೆ?

ಆರ್‌ಎಫ್ಐಡಿ ಎನ್ನುವ ತಂತ್ರಜ್ಞಾನ ಸಹಾಯದೊಂದಿಗೆ ಕಾರ್ಯನಿರ್ವಹಿಸುವ ಫಾಸ್ಟ್ ಟ್ಯಾಗ್‌ಗಳು ಕಾರಿನ ವಿಂಡ್‌ಸ್ಕೀನ್ ಬಳಿ ಅಳವಡಿಸಲಾಗಿರುತ್ತದೆ. ಇದು ಟೋಲ್ ಪ್ಲಾಜ್‌ದಲ್ಲಿರುವ ಫಾಸ್ಟ್ ಟ್ಯಾಗ್ ಲೈನ್ ಮೂಲಕ ಹಾಯ್ದುಹೋಗುವಾಗ ಆಟೋಮ್ಯಾಟಿಕ್ ಆಗಿ ನಿಮ್ಮ ಫಾಸ್ಟ್ ಟ್ಯಾಗ್ ಅಕೌಂಟ್‌ನಿಂದ ಶುಲ್ಕ ಸಂದಾಯವಾಗುತ್ತೆ.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಶುಲ್ಕ ಸಂದಾಯವಾದ ಕೆಲವೇ ಸೇಕೆಂಡುಗಳಲ್ಲಿ ಶುಲ್ಕ ಪಾವತಿಯಾದ ಸಂದೇಶವು ನಿಮ್ಮ ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಬರಲಿದ್ದು, ಟ್ರೋಲ್ ಪ್ಲಾಜಾ ಮಾಹಿತಿ ಮತ್ತು ಕಡಿತವಾದ ಶುಲ್ಕದ ಮೊತ್ತ ಮತ್ತು ಉಳಿದ ಕರೆನ್ಸಿ ಮಾಹಿತಿಯು ನಿಮಗೆ ಲಭ್ಯವಾಗಲಿದೆ.

MOST READ: ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪೆಗೆ ಎಸೆದ ಬೈಕ್ ಮಾಲೀಕ

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಇದಕ್ಕಾಗಿಯೇ ಫಾಸ್ಟ್ ಟ್ಯಾಗ್ ಆಪ್ ಕೂಡಾ ಲಭ್ಯವಿದ್ದು, ಈ ಮೂಲಕವು ನೀವು ಮತ್ತಷ್ಟು ಮಾಹಿತಿ ಪಡೆಯಬಹದು. ಫಾಸ್ಟ್ ಟ್ಯಾಗ್ ನೋಂದಣಿ ಮಾಡುವಾಗ ಆ್ಯಪ್‌ಗೆ ಸಂಬಂಧಿಸಿ ನಿಮಗೆ ಕೆಲವು ಪಾಸ್‌ವರ್ಡ್ ನೀಡಲಾಗುತ್ತೆ. ಆ್ಯಪ್ ಬಳಸುವಾಗ ನೀವು ನಿಮ್ಮ ಪರ್ಸನಲ್ ಪಾಸ್‌ವರ್ಡ್ ಬಳಕೆ ಮಾಡಬೇಕಾಗುತ್ತೆ. ಯಾಕೆಂದ್ರೆ ವ್ಯಯಕ್ತಿಕ ಮಾಹಿತಿ ಇದಲ್ಲಿರುತ್ತದೆ.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಒಂದು ಫಾಸ್ಟ್ ಟ್ಯಾಗ್ ಅನ್ನು ಮತ್ತೊಂದು ವಾಹನಕ್ಕೆ ಬಳಕೆ ಮಾಡಲು ಯಾವುದೇ ಅವಕಾಶವಿಲ್ಲ. ಹೀಗಾಗಿ ಫಾಸ್ಟ್ ಟ್ಯಾಗ್ ಬೇಡ ಎನ್ನಿಸಿದಲ್ಲಿ ವಾಹನ ಮಾಲೀಕರು ಕಸ್ಟಮರ್ ಕೇರ್ ಮೂಲಕ ಬ್ಲ್ಯಾಕ್ ಕೂಡಾ ಮಾಡಬಹುದು.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಇದಲದೇ ವಾಣಿಜ್ಯ ವಾಹನಗಳಲ್ಲಿ ಅಳವಡಿಸಲಾಗುವ ಸ್ಪೀಡ್ ಗವರ್ನರ್ ವಿಚಾರದಲ್ಲಿ ಕೇಂದ್ರ ಸಾರಿಗೆ ಇಲಾಖೆಯು ಮಹತ್ವದ ನಿರ್ಣಯ ಕೈಗೊಳ್ಳಲು ಮುಂದಾಗಿದ್ದು, ಸರ್ಕಾರ ಮತ್ತು ವಾಹನ ಮಾಲೀಕರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿರುವ ಸ್ಪೀಡ್ ಗವರ್ನರ್ ವಿವಾದಕ್ಕೆ ಸದ್ಯದಲ್ಲೇ ಸ್ಪಷ್ಟ ಉತ್ತರ ಸಿಗಲಿದೆ.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಸ್ಪೀಡ್ ಗವರ್ನರ್ ವಿವಾದ ಕುರಿತು ಮಾತನಾಡಿರುವ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡಾ ತುರ್ತು ಆರ್ಥಿಕ ಬೆಳವಣಿಗೆಗೆ ಮಾರಕವಾಗಿರುವ ಸ್ಪೀಡ್ ಗವರ್ನರ್ ಕಡ್ಡಾಯವನ್ನು ತೆಗೆದುಹಾಕುತ್ತಿರುವ ಬಗ್ಗೆ ಸುಳಿವು ನೀಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದ್ದಾರೆ.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ದೆಹಲಿಯಲ್ಲಿ ನಡೆದ 58ನೇ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನಿಫ್ಯಾಚ್ಚರ್ಸ್(SIAM)ಸಮಾವೇಶದಲ್ಲಿ ಮಾತನಾಡಿದ ಸಚಿವ ನಿತಿನ್ ಗಡ್ಕರಿ ಅವರು, ಸಾರಿಗೆ ಇಲಾಖೆಗೆ ಹಿನ್ನಡೆಯಾಗಿರುವ ಸ್ಪೀಡ್ ಗವರ್ನರ್ ತೆಗೆದುಹಾಕುವ ಬಗ್ಗೆ ಈಗಾಲಲೇ ಹಲವು ಸುತ್ತಿನ ಉನ್ನತ ಸಭೆಗಳನ್ನು ನಡೆಸಲಾಗಿದೆ ಎಂದಿದ್ದಾರೆ.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಹೀಗಾಗಿ ಹೊಸ ಕಾಯ್ದೆ ಅನುಷ್ಠಾನ ತರುವುದಕ್ಕೂ ಮುನ್ನ ಮೋಟಾರ್ ಕಾಯ್ದೆಗೆ ತಿದ್ದುಪಡಿ ತರುವ ಅವಶ್ಯಕತೆಯಿದ್ದು, ತಿದ್ದುಪಡಿ ತಂದ ನಂತರವೇ ಸ್ಪೀಡ್ ಗವರ್ನರ್ ನಿಷೇಧವು ಅಧಿಕೃತವಾಗಿ ಜಾರಿಗೆ ಬರಲಿದೆ. ಇದರಿಂದ ವಾಣಿಜ್ಯ ವಾಹನಗಳಿಗೆ ಸಾಕಷ್ಟು ಅನುಕೂಲತೆಗಳಿದ್ದು, ಸರಕು ಸಾಗಾಣಿಕೆಯಲ್ಲಿ ಆಗುವ ಸಮಯದ ವ್ಯರ್ಥ ಮತ್ತು ಸಾಗಾಣಿಕೆ ವೆಚ್ಚಗಳನ್ನು ತಗ್ಗಿಸಲು ಸಹಕಾರಿಯಾಗಲಿದೆ.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶ.!

ವೈಯಕ್ತಿಕ ಬಳಕೆ ವಾಹನಗಳನ್ನು ಹೊರತುಪಡಿಸಿ ಅಂದರೆ, ದ್ವಿಚಕ್ರ ವಾಹನ, ಕಾರು(ವೈಟ್ ಬೋರ್ಡ್ ಮಾತ್ರ) ಹೊರತುಪಡಿಸಿ ಇನ್ನುಳಿದ ಎಲ್ಲಾ ವಾಣಿಜ್ಯ ವಾಹನಗಳಿಗೆ ಕಡ್ಡಾಯವಾಗಿ ಸ್ಪೀಡ್ ಗರ್ವನರ್ ಅಳವಡಿಸುವಂತೆ 2006ರಲ್ಲೇ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿತ್ತು.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ತದನಂತರದ ದಿನಗಳಲ್ಲಿ ಈ ಆದೇಶವನ್ನು ಸುಪ್ರೀಂಕೋರ್ಟ್ ಕೂಡಾ ಎತ್ತಿಹಿಡಿಯುವ ಮೂಲಕ ದೇಶಾದ್ಯಂತ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಕರ್ನಾಟಕ ನಂತರ ದೇಶದ ಬಹುತೇಕ ರಾಜ್ಯಗಳಲ್ಲಿ ಸ್ಪೀಡ್ ಗವರ್ನರ್ ಜಾರಿಗೆ ತರುವ ಮೂಲಕ ಅತಿ ವೇಗಕ್ಕೆ ಸ್ಪೀಡ್ ಹಾಕುವುದೇ ಈ ಕಾಯ್ದೆಯ ಉದ್ದೇಶವಾಗಿತ್ತು.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಅಂದಿನಿಂದ ಇದುವರೆಗೂ ಸ್ಪೀಡ್ ಗವರ್ನರ್ ಕಡ್ಡಾಯದ ಬಗ್ಗೆ ಸರ್ಕಾರ ಮತ್ತು ವಾಣಿಜ್ಯ ವಾಹನಗಳ ಮಾಲೀಕರ ನಡುವೆ ಜಟಾಪಟಿ ನಡೆಯುತ್ತಲೇ ಇದ್ದು, ಸ್ಪೀಡ್ ಗವರ್ನರ್ ವಿರುದ್ಧ ದೇಶಾದ್ಯಂತ ಇದುವರೆಗೆ ನೂರಾರು ಮುಸ್ಕರಗಳು ನಡೆದಿರುವುದಲ್ಲದೇ ಕಡ್ಡಾಯ ಕಾಯ್ದೆ ತೆಗೆದುಹಾಕುವಂತೆ ಸರ್ಕಾರಗಳ ಒತ್ತಡ ತರಲಾಗುತ್ತಿದೆ.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಇದಕ್ಕೆ ಸಮ್ಮತಿಸುವ ಕೇಂದ್ರ ಸಾರಿಗೆ ಇಲಾಖೆಯು ಮುಂಬರುವ ಕೆಲವೇ ದಿನಗಳಲ್ಲಿ ಅಧಿಕೃತ ಆದೇಶ ಹೊರಡಿಸುವುದಾಗಿ ಭರವಸೆ ನೀಡಿದ್ದು, ವಾಣಿಜ್ಯ ವಾಹನ ಮಾಲೀಕರಿಗೆ ಇದು ವರವಾಗಿ ಪರಿಣಮಿಸಲಿದೆ ಎನ್ನಬಹುದು.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಸದ್ಯಕ್ಕಿರುವ ಸ್ಪೀಡ್

ಸದ್ಯ ಚಾಲ್ತಿಯಲ್ಲಿರುವ ಸ್ಪೀಡ್ ಗವರ್ನರ್ ಕಾಯ್ದೆ ಪ್ರಕಾರ ಬಸ್, ಟ್ಯಾಕ್ಸಿಗಳಿಗೆ ಪ್ರತಿ ಗಂಟೆಗೆ 80 ಕಿ.ಮೀ, ಟ್ರಕ್ಸ್‌ಗಳಿಗೆ ಪ್ರತಿ ಗಂಟೆಗೆ 60 ಕಿ.ಮೀ ಮತ್ತು ಮೂರು ಚಕ್ರದ ವಾಹನ, ಶಾಲಾ ಬಸ್‌ಗಳಿಗೆ ಪ್ರತಿ ಗಂಟೆಗೆ 40ಕಿ.ಮಿ ಸ್ಪೀಡ್ ಗವರ್ನರ್ ಜಾರಿಯಲ್ಲಿದೆ.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಇದರಿಂದ ಸರಕು ಸಾಗಾಟಗಳಿಗೆ ಭಾರೀ ಹಿನ್ನಡೆಯಾಗಿದ್ದು, ಟ್ಯಾಕ್ಸಿ ಮಾಲೀಕರು ಮತ್ತು ಲಾರಿ ಮಾಲೀಕರು ಇದನ್ನು ವಿರೋಧಿಸುತ್ತಲೇ ಬಂದಿದ್ದಾರೆ. ಅಪಘಾತಗಳ ಸಂಖ್ಯೆ ನಿಯಂತ್ರಿಸುವ ಒಂದೇ ಉದ್ದೇಶದಿಂದ ಜಾರಿಗೆ ತರಲಾದ ಈ ಕಾಯ್ದೆಯು ಭಾರೀ ಪ್ರಮಾಣದ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತಿರುವ ಬಗ್ಗೆ ಕೇಂದ್ರ ಸಾರಿಗೆ ಇಲಾಖೆಯು ಗಂಭೀರ ಚಿಂತನೆ ನಡೆಸಿದ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದೆ.

ಫಾಸ್ಟ್‌‌ಟ್ಯಾಗ್ ವಿತರಣೆಗೆ ಹೊಸ ಕ್ರಮ- ಟೋಲ್‌ನಲ್ಲಿ ಇನ್ಮುಂದೆ ಕಾಯಬೇಕಿಲ್ಲ..

ಇದಕ್ಕಾಗಿಯೇ ವಾಣಿಜ್ಯ ವಾಹನಗಳಿಗೆ ಸ್ಪೀಡ್ ಗವರ್ನರ್ ಬದಲಾಗಿ ಹೊಸ ಸುರಕ್ಷಾ ಸೌಲಭ್ಯಗಳನ್ನು ಕಡ್ಡಾಯಗೊಳಿಸುವ ಬಗ್ಗೆ ಸುಳಿವು ನೀಡಿರುವ ಕೇಂದ್ರ ಸರ್ಕಾರವು ವಾಣಿಜ್ಯ ವಾಹನಗಳಲ್ಲಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್ ಮತ್ತು ಸ್ಪೀಡ್ ರಿಮೆಂಡರ್(120 ಕಿ.ಮೀ) ಸೌಲಭ್ಯಗಳನ್ನು ಕಡ್ಡಾಯಗೊಳಿಸಲಿದೆ.

Most Read Articles

Kannada
Read more on auto news
English summary
Nitin Gadkari To Introduce FASTags Across All Toll Lanes In India Within Four Months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X