ಅಕ್ಟೋಬರ್ 4ಕ್ಕೆ ಬಿಡುಗಡೆಯಾಗಲಿದೆಯೆಂತೆ ಫೋರ್ಡ್ ಆಸ್ಪೈರ್ ಫೇಸ್‌ಲಿಫ್ಟ್..

By Praveen Sannamani

ಅಮೆರಿಕ ಮೂಲದ ಪ್ರಸಿದ್ದ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ಸಂಸ್ಥೆಯು ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರಸ್ತುತ ತಲೆಮಾರಿನ ಆಸ್ಫೈರ್ ಸೆಡಾನ್ ಕಾರಿನ ಉತ್ಪಾದನೆಯನ್ನು ನಿಲ್ಲಿಸುತ್ತಿರುವುದಾಗಿ ಹೇಳಿಕೊಂಡಿತ್ತು. ಇದರ ಬೆನ್ನೆಲ್ಲೇ ನ್ಯೂ ಜನರೇಷನ್ ಮಾದರಿಯ ಆಸ್ಪೈರ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜುಗೊಳ್ಳುತ್ತಿದೆ.

ಅಕ್ಟೋಬರ್ 4ಕ್ಕೆ ಬಿಡುಗಡೆಯಾಗಲಿದೆಯೆಂತೆ ಫೋರ್ಡ್ ಆಸ್ಪೈರ್ ಫೇಸ್‌ಲಿಫ್ಟ್..

ಮಾಹಿತಿಗಳ ಪ್ರಕಾರ, ಫೋರ್ಡ್ ಸಂಸ್ಥೆಯು ನ್ಯೂ ಜನರೇಷನ್ ಮಾದರಿಯ ಆಸ್ಫೈರ್ ಕಾರುನ್ನು ಭಾರತೀಯ ಮಾರುಕಟ್ಟೆಗೆ ಇದೇ ವರ್ಷ ಅಕ್ಟೋಬರ್ 4ಕ್ಕೆ ಬಿಡುಗಡೆಗೊಳಿಸು ಇರಾದೆಯಲ್ಲಿದ್ದು, ಹೀಗಾಗಿ ಹೊಸ ಕಾರನ್ನು ಅಧಿಕೃತ ಕಾರು ಡೀಲರ್ಸ್ ಯಾರ್ಡ್‌ಗಳಲ್ಲಿ ಸ್ಟಾಕ್ ಮಾಡುತ್ತಿರುವುದು ಕಂಡುಬಂದಿದೆ.

ಅಕ್ಟೋಬರ್ 4ಕ್ಕೆ ಬಿಡುಗಡೆಯಾಗಲಿದೆಯೆಂತೆ ಫೋರ್ಡ್ ಆಸ್ಪೈರ್ ಫೇಸ್‌ಲಿಫ್ಟ್..

ಹೊಸ ಫೋರ್ಡ್ ಆಸ್ಫೈರ್ ಸೆಡಾನ್ ಕಾರು ಪ್ರಸ್ತುತ ತಲೆಮಾರಿನೊಂದಿಗೆ ಹೋಲಿಸಿದರೆ ಹಲವಾರು ಹೊಸ ನವೀಕರಣಗಳೊಂದಿಗೆ ಸಿದ್ದಗೊಂಡಿದ್ದು, ಕಾರಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಸ ಬಂಪರ್ ಮತ್ತು ಟ್ವೀಕ್ಡ್ ರಿಯರ್ ಪ್ರೊಫೈಲ್ ಹಾಗೆಯೇ ಅಲಾಯ್ ಚಕ್ರಗಳನ್ನೂ ಕೂಡಾ ಪಡೆದಿರಲಿವೆ.

ಅಕ್ಟೋಬರ್ 4ಕ್ಕೆ ಬಿಡುಗಡೆಯಾಗಲಿದೆಯೆಂತೆ ಫೋರ್ಡ್ ಆಸ್ಪೈರ್ ಫೇಸ್‌ಲಿಫ್ಟ್..

ಇನ್ನು ಕಾರಿನ ಒಳಭಾಗದಲ್ಲಿ ಫೋರ್ಡ್ ಇಕೋ ಸ್ಪೋರ್ಟ್ ಮಾದರಿಯಲ್ಲೇ ಮೊದಲ ಬಾರಿಗೆ ಎಸ್‍ವೈಎನ್‍ಸಿ3 ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಬಳಸಲಾಗಿದ್ದು, ಇದರಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಅಂಶಗಳನ್ನು ಕೂಡಾ ಅಳವಡಿಸಲಾಗಿದೆ.

ಅಕ್ಟೋಬರ್ 4ಕ್ಕೆ ಬಿಡುಗಡೆಯಾಗಲಿದೆಯೆಂತೆ ಫೋರ್ಡ್ ಆಸ್ಪೈರ್ ಫೇಸ್‌ಲಿಫ್ಟ್..

ಹೊಸದಾಗಿ ಬಿಡುಗಡೆಗೊಳ್ಳಲಿರುವ ಆಸ್ಫೈರ್ ಕಾರು, ಎಕೋ ಸ್ಪೋರ್ಟ್ಸ್ ಫೇಸ್‍ಲಿಫ್ಟ್ ಕಾರಿನಲ್ಲಿ ಬಳಸಲಾದಂತೆ 1.5 ಲೀಟರ್ ಡೀಸೆಲ್ ಎಂಜಿನ್ ಮತ್ತು 1.2 -ಲೀಟರ್ ತ್ರಿ ಸಿಲಿಂಡರ್ ಡ್ರಾಗನ್ ಸರಣಿಯ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ.

MOST READ: ಆರ್‌ಇಯಿಂದ ಮೋಸದ ವ್ಯಾಪಾರ- ದುಬಾರಿ ಬೆಲೆಯ ಪೆಗಾಸಸ್ ಬೈಕ್ ತಿಪ್ಪೆಗೆ ಎಸೆದ ಬೈಕ್ ಮಾಲೀಕ

ಅಕ್ಟೋಬರ್ 4ಕ್ಕೆ ಬಿಡುಗಡೆಯಾಗಲಿದೆಯೆಂತೆ ಫೋರ್ಡ್ ಆಸ್ಪೈರ್ ಫೇಸ್‌ಲಿಫ್ಟ್..

ಹಾಗೆಯೇ ಸಿಎಜಿ ಬಳಕೆಗೆ ಒತ್ತು ನೀಡುತ್ತಿರುವ ಫೋರ್ಡ್ ಸಂಸ್ಥೆಯು ಆಸ್ಪೈರ್ ಫೇಸ್‌ಲಿಫ್ಟ್ ಸಿಎನ್‌ಜಿ ವರ್ಷನ್ ಕಾರುಗಳಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಜೋಡಿಸಲಿದ್ದು, ಇದು ಸಿಎನ್‌ಜಿ ಬಳಕೆಗೂ ಸಹಕಾರಿಯಾಗುವಂತೆ ಅಭಿವದ್ಧಿ ಮಾಡಲಾಗಿರುತ್ತದೆ.

ಅಕ್ಟೋಬರ್ 4ಕ್ಕೆ ಬಿಡುಗಡೆಯಾಗಲಿದೆಯೆಂತೆ ಫೋರ್ಡ್ ಆಸ್ಪೈರ್ ಫೇಸ್‌ಲಿಫ್ಟ್..

ಇನ್ನು ಬಿಡುಗಡೆಯಾಗಲಿರುವ ಎರಡು ಎಂಜಿನ್‍ಗಳು ಸಹ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಗಳನ್ನು ಪಡೆಯಲಿದ್ದು, ಮಾರುತಿ ಸುಜುಕಿ ಡಿಜೈರ್ ಕಾರುಗಳಿಗೆ ಈ ಕಾರು ತೀವ್ರ ಪೈಪೋಟಿ ನೀಡಲಿದೆ ಎನ್ನಬಹುದು.

ಅಕ್ಟೋಬರ್ 4ಕ್ಕೆ ಬಿಡುಗಡೆಯಾಗಲಿದೆಯೆಂತೆ ಫೋರ್ಡ್ ಆಸ್ಪೈರ್ ಫೇಸ್‌ಲಿಫ್ಟ್..

ಹೊಸ ಅವತಾರದಲ್ಲಿ ಬಿಡಗಡೆಗೊಳ್ಳಲಿರುವ ಫೋರ್ಡ್ ಆಸ್ಪೈರ್ ಕಾರಿನ ಬಗ್ಗೆ ಸಂಸ್ಥೆಯು ಇನ್ನು ಹೆಚ್ಚು ಮಾಹಿತಿಯನ್ನು ಬಹಿರಂಗಗೊಳಿಸಲಿಲ್ಲವಾದರೂ, ಪವರ್‌ಫುಲ್ ಎಂಜಿನ್ ಬಳಕೆ ಹಿನ್ನೆಲೆ ಸೆಡಾನ್ ಪ್ರಿಯರನ್ನು ಸೆಳೆಯುವ ತವಕದಲ್ಲಿದೆ.

ಫೋರ್ಡ್ ಕಾರು

ಒಟ್ಟಿನಲ್ಲಿ ಹೊಸದಾಗಿ ನವೀಕರಣಗೊಂಡ ಈ ಕಾರು ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಮಾರುತಿ ಡಿಜೈರ್, ಹ್ಯುಂಡೈ ಎಕ್ಸ್ ಸೆಂಟ್, ಫೋಕ್ಸ್‌ವ್ಯಾಗನ್ ಎಮಿಯೊ ಮತ್ತು ಮುಂದಿನ ತಲೆಮಾರಿನ ಹೋಂಡಾ ಅಮೇಜ್ ಕಾರುಗಳಿಗೆ ಪೈಪೋಟಿಯನ್ನು ನೀಡುವ ತವಕಲಿದ್ದು, ಅಕ್ಟೋಬರ್ 4ರಂದು ಹೊಸ ಕಾರಿನ ಸಂಪೂರ್ಣ ಮಾಹಿತಿ ನಿಮ್ಮ ಡ್ರೈವ್‌ಸ್ಪಾರ್ಕ್ ಕನ್ನಡದಲ್ಲಿ ಲಭ್ಯವಿರಲಿದೆ.

Article Published On: Thursday, September 6, 2018, 13:10 [IST]
English summary
Ford Aspire Facelift Launch Date Revealed.
Read more on ford new car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+