ಹೊಸ ಫೋರ್ಡ್ ಆಸ್ಪೈರ್ ಫೇ‍‍ಸ್‍‍‍ಲಿಫ್ಟ್ ಕಾರಿನ ಚಿತ್ರಗಳು ಸೋರಿಕೆ..

ಫೋರ್ಡ್ ಸಂಸ್ಥೆಯು ತಮ್ಮ ಜನಪ್ರಿಯ ಆಸ್ಪೈರ್ ಕಾರಿನ ಫೇ‍‍ಸ್‍‍‍ಲಿಫ್ಟ್ ಮಾದರಿಯನ್ನು ಅಕೋಬರ್ 4ರಂದು ಬಿಡುಗಡೆಗೊಳಿಸಲೈದ್ದು, ಹಿಂದಿನ ತಲೆಮಾರಿನ ಕಾರಿಗಿಂತಾ ಹೊಸ ವಿನ್ಯಾಸ, ವೈಶಿಷ್ಟ್ಯತೆ ಮತ್ತು ನವೀಕರಿಸಲಾದ ಎಂಜಿನ್ ಅನ್ನು ಪಡೆದಿರಲಿದೆ ಎನ್ನಲ

By Rahul Ts

ಫೋರ್ಡ್ ಸಂಸ್ಥೆಯು ತಮ್ಮ ಜನಪ್ರಿಯ ಆಸ್ಪೈರ್ ಕಾರಿನ ಫೇ‍‍ಸ್‍‍‍ಲಿಫ್ಟ್ ಮಾದರಿಯನ್ನು ಅಕೋಬರ್ 4ರಂದು ಬಿಡುಗಡೆಗೊಳಿಸಲೈದ್ದು, ಹಿಂದಿನ ತಲೆಮಾರಿನ ಕಾರಿಗಿಂತಾ ಹೊಸ ವಿನ್ಯಾಸ, ವೈಶಿಷ್ಟ್ಯತೆ ಮತ್ತು ನವೀಕರಿಸಲಾದ ಎಂಜಿನ್ ಅನ್ನು ಪಡೆದಿರಲಿದೆ ಎನ್ನಲಾಗಿದೆ. ಇದೀಗ ಫೋರ್ಡ್ ಆಸ್ಪೈರ್ ಫೇ‍‍ಸ್‍‍‍ಲಿಫ್ಟ್ ಕಾರಿನ ಟೈಟಾನಿಯಂ ವೇರಿಯಂಟ್ ಕಾರಿನ ಚಿತ್ರಗಳು ಸೋರಿಕೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೊಸ ಫೋರ್ಡ್ ಆಸ್ಪೈರ್ ಫೇ‍‍ಸ್‍‍‍ಲಿಫ್ಟ್ ಕಾರಿನ ಚಿತ್ರಗಳು ಸೋರಿಕೆ..

ಇನ್ನು ಕಾರಿನ ಒಳಭಾಗದಲ್ಲಿ ಫೋರ್ಡ್ ಇಕೋ ಸ್ಪೋರ್ಟ್ ಮಾದರಿಯಲ್ಲೇ ಮೊದಲ ಬಾರಿಗೆ ಎಸ್‍ವೈಎನ್‍ಸಿ3 ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಬಳಸಲಾಗಿದ್ದು, ಇದರಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆ್ಯಪಲ್ ಕಾರ್ ಪ್ಲೇ ಕನೆಕ್ಟಿವಿಟಿ ಅಂಶಗಳನ್ನು ಕೂಡಾ ಅಳವಡಿಸಲಾಗಿದೆ.

ಹೊಸ ಫೋರ್ಡ್ ಆಸ್ಪೈರ್ ಫೇ‍‍ಸ್‍‍‍ಲಿಫ್ಟ್ ಕಾರಿನ ಚಿತ್ರಗಳು ಸೋರಿಕೆ..

ಹೊಸದಾಗಿ ಬಿಡುಗಡೆಗೊಳ್ಳಲಿರುವ ಆಸ್ಫೈರ್ ಕಾರು, ಎಕೋ ಸ್ಪೋರ್ಟ್ಸ್ ಫೇಸ್‍ಲಿಫ್ಟ್ ಕಾರಿನಲ್ಲಿ ಬಳಸಲಾಗದಂತೆ 1.5 ಲೀಟರ್ ಡೀಸೆಲ್ ಎಂಜಿನ್ ಮತ್ತು 1.2 -ಲೀಟರ್ ತ್ರಿ ಸಿಲಿಂಡರ್ ಡ್ರಾಗನ್ ಸರಣಿಯ ಪೆಟ್ರೋಲ್ ಎಂಜಿನ್ ಅನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ.

ಹೊಸ ಫೋರ್ಡ್ ಆಸ್ಪೈರ್ ಫೇ‍‍ಸ್‍‍‍ಲಿಫ್ಟ್ ಕಾರಿನ ಚಿತ್ರಗಳು ಸೋರಿಕೆ..

ಹಾಗೆಯೇ ಸಿಎಜಿ ಬಳಕೆಗೆ ಒತ್ತು ನೀಡುತ್ತಿರುವ ಫೋರ್ಡ್ ಸಂಸ್ಥೆಯು ಆಸ್ಪೈರ್ ಫೇಸ್‌ಲಿಫ್ಟ್ ಸಿಎನ್‌ಜಿ ವರ್ಷನ್ ಕಾರುಗಳಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಜೋಡಿಸಲಿದ್ದು, ಇದು ಸಿಎನ್‌ಜಿ ಬಳಕೆಗೂ ಸಹಕಾರಿಯಾಗುವಂತೆ ಅಭಿವದ್ಧಿ ಮಾಡಲಾಗಿರುತ್ತದೆ.

MOST READ: ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಮಾರುತಿ ಸುಜುಕಿ ಎರ್ಟಿಗಾ ಫೇಸ್‍‍ಲಿಫ್ಟ್ ಕಾರಿನ ವಿಶೇಷತೆ ಏನು.?

ಹೊಸ ಫೋರ್ಡ್ ಆಸ್ಪೈರ್ ಫೇ‍‍ಸ್‍‍‍ಲಿಫ್ಟ್ ಕಾರಿನ ಚಿತ್ರಗಳು ಸೋರಿಕೆ..

ಇನ್ನು ಬಿಡುಗಡೆಯಾಗಲಿರುವ ಎರಡು ಎಂಜಿನ್‍ಗಳು ಸಹ 5 ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಅಥವಾ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಗಳನ್ನು ಪಡೆಯಲಿದ್ದು, ಮಾರುತಿ ಸುಜುಕಿ ಡಿಜೈರ್ ಕಾರುಗಳಿಗೆ ಈ ಕಾರು ತೀವ್ರ ಪೈಪೋಟಿ ನೀಡಲಿದೆ ಎನ್ನಬಹುದು.

ಹೊಸ ಫೋರ್ಡ್ ಆಸ್ಪೈರ್ ಫೇ‍‍ಸ್‍‍‍ಲಿಫ್ಟ್ ಕಾರಿನ ಚಿತ್ರಗಳು ಸೋರಿಕೆ..

ಹೊಸ ಅವತಾರದಲ್ಲಿ ಬಿಡಗಡೆಗೊಳ್ಳಲಿರುವ ಫೋರ್ಡ್ ಆಸ್ಪೈರ್ ಕಾರಿನ ಬಗ್ಗೆ ಸಂಸ್ಥೆಯು ಇನ್ನು ಹೆಚ್ಚು ಮಾಹಿತಿಯನ್ನು ಬಹಿರಂಗಗೊಳಿಸಲಿಲ್ಲವಾದರೂ, ಪವರ್‌ಫುಲ್ ಎಂಜಿನ್ ಬಳಕೆ ಹಿನ್ನೆಲೆ ಸೆಡಾನ್ ಪ್ರಿಯರನ್ನು ಸೆಳೆಯುವ ತವಕದಲ್ಲಿದೆ.

ಹೊಸ ಫೋರ್ಡ್ ಆಸ್ಪೈರ್ ಫೇ‍‍ಸ್‍‍‍ಲಿಫ್ಟ್ ಕಾರಿನ ಚಿತ್ರಗಳು ಸೋರಿಕೆ..

ಒಟ್ಟಿನಲ್ಲಿ ಹೊಸದಾಗಿ ನವೀಕರಣಗೊಂಡ ಈ ಕಾರು ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ ಮಾರುತಿ ಡಿಜೈರ್, ಹ್ಯುಂಡೈ ಎಕ್ಸ್ ಸೆಂಟ್, ಫೋಕ್ಸ್‌ವ್ಯಾಗನ್ ಎಮಿಯೊ ಮತ್ತು ಮುಂದಿನ ತಲೆಮಾರಿನ ಹೋಂಡಾ ಅಮೇಜ್ ಕಾರುಗಳಿಗೆ ಪೈಪೋಟಿಯನ್ನು ನೀಡುವ ತವಕಲಿದ್ದು, ಅಕ್ಟೋಬರ್ 4ರಂದು ಹೊಸ ಕಾರಿನ ಸಂಪೂರ್ಣ ಮಾಹಿತಿ ನಿಮ್ಮ ಡ್ರೈವ್‌ಸ್ಪಾರ್ಕ್ ಕನ್ನಡದಲ್ಲಿ ಲಭ್ಯವಿರಲಿದೆ.

Source: TeamBHP

MOST READ: ಶೀಘ್ರವೇ ಸರ್ಕಾರದಿಂದ ಭಾರತದಲ್ಲಿ 10,000 ಸಿಎನ್‍ಜಿ ಸ್ಟೇಷನ್‍ಗಳ ಸ್ಥಾಪನೆ..

Most Read Articles

Kannada
Read more on ford new car
English summary
Ford Aspire facelift leaked ahead of launch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X