ಮೇ 14ಕ್ಕೆ ಬಿಡುಗಡೆಯಾಗಲಿದೆ ಫೋರ್ಡ್ ಇಕೋ ಸ್ಪೋರ್ಟ್ ಟೈಟಾನಿಯಂ ಎಸ್

ಜನಪ್ರಿಯ ಇಕೋ ಸ್ಪೋರ್ಟ್ ಎಸ್‌ಯುವಿ ಆವೃತ್ತಿಯಲ್ಲಿ ಮತ್ತೇರಡು ಹೊಸ ವೆರಿಯೆಂಟ್‌ಗಳನ್ನು ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದ್ದು, ಇದೇ ತಿಂಗಳು 14ರಂದು ಟೈಟಾನಿಯಂ ಎಸ್ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

By Praveen Sannamani

ಅಮೆರಿಕ ಮೂಲದ ಪ್ರಸಿದ್ಧ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ತಮ್ಮ ಜನಪ್ರಿಯ ಇಕೋ ಸ್ಪೋರ್ಟ್ ಎಸ್‌ಯುವಿ ಆವೃತ್ತಿಯಲ್ಲಿ ಮತ್ತೇರಡು ಹೊಸ ವೆರಿಯೆಂಟ್‌ಗಳನ್ನು ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದ್ದು, ಇದೇ ತಿಂಗಳು 14ರಂದು ಟೈಟಾನಿಯಂ ಎಸ್ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಮೇ 14ಕ್ಕೆ ಬಿಡುಗಡೆಯಾಗಲಿದೆ ಫೋರ್ಡ್ ಇಕೋ ಸ್ಪೋರ್ಟ್ ಟೈಟಾನಿಯಂ ಎಸ್

ಹೊಸ ಇಕೋ ಸ್ಪೋರ್ಟ್ ಟೈಟಾನಿಯಂ ಎಸ್ ಮತ್ತು ಸಿಗ್ನಿಚೆರ್ ಟಾಪ್ ಎಂಡ್ ವೆರಿಯೆಂಟ್‍ ಕಾರುಗಳು ಸನ್‍‍ರೂಫ್ ಮತ್ತು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್, ವಿನ್ಯಾಸದಲ್ಲಿ ಗುರುತರ ಬದಲಾವಣೆಗಳು ಹಾಗೂ ಅಲಾಯ್ ಚಕ್ರಗಳನ್ನು ಹೊಸದಾಗಿ ಪಡೆದುಕೊಂಡಿರಲಿದ್ದು, ಹೊಸ ಕಾರುಗಳನ್ನು ಈಗಾಗಲೇ ದೇಶದ ಪ್ರಮುಖ ಫೋರ್ಡ್ ಡೀಲರ್ ಸ್ಟಾಕ್‌ನಲ್ಲಿ ಕಾಣಿಸಿಕೊಂಡಿವೆ.

ಮೇ 14ಕ್ಕೆ ಬಿಡುಗಡೆಯಾಗಲಿದೆ ಫೋರ್ಡ್ ಇಕೋ ಸ್ಪೋರ್ಟ್ ಟೈಟಾನಿಯಂ ಎಸ್

ಫೋರ್ಡ್ ಇಕೋ ಸ್ಪೋರ್ಟ್ ಫೇಸ್‍‍ಲಿಫ್ಟ್ ಕಾರುಗಳು ಈ ಹಿಂದೆ 2017ರ ನವೆಂಬರ್ ತಿಂಗಳಲ್ಲಿ ಬಿಡುಗಡೆಗೊಂಡಿದ್ದು, ಬಿಡುಗಡೆಯ ನಂತರ ಹತ್ತಾರು ಬದಲಾವಣೆಗಳನ್ನು ಕಂಡಿದೆ. ಹೀಗಾಗಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇದೀಗ ಮತ್ತೇರಡು ಟಾಪ್ ವೆರಿಯೆಂಟ್‌ಗಳನ್ನು ಅಭಿವೃದ್ಧಿ ಮಾಡಲಾಗಿದೆ.

ಮೇ 14ಕ್ಕೆ ಬಿಡುಗಡೆಯಾಗಲಿದೆ ಫೋರ್ಡ್ ಇಕೋ ಸ್ಪೋರ್ಟ್ ಟೈಟಾನಿಯಂ ಎಸ್

ಸದ್ಯ ಇಕೊಸ್ಪೋರ್ಟ್ ಕಾರುಗಳಲ್ಲಿ ಆ್ಯಂಬಿಯೆಂಟ್, ಟ್ರೆಂಡ್, ಟ್ರೆಂಡ್+, ಟೈಟಾನಿಯಂ ಮತ್ತು ಟೈಟಾನಿಯಂ+ ಎಂಬ ಐದು ವೆರಿಯಂಟ್‍‍ಗಳಲ್ಲಿ ಲಭ್ಯವಿದ್ದು, ಹೊಸದಾಗಿ ಟೈಟಾನಿಯಂ ಎಸ್ ಮತ್ತು ಸಿಗ್ನಿಚೆರ್ ಎಂಬ ಟಾಪ್ ಎಂಡ್ ವೆರಿಯಂಟ್ ಕಾರುಗಳನ್ನು ಪರಿಚಯಿಸಲಾಗುತ್ತಿದೆ.

ಮೇ 14ಕ್ಕೆ ಬಿಡುಗಡೆಯಾಗಲಿದೆ ಫೋರ್ಡ್ ಇಕೋ ಸ್ಪೋರ್ಟ್ ಟೈಟಾನಿಯಂ ಎಸ್

ಮಾಹಿತಿ ಪ್ರಕಾರ ಹೊಸದಾಗಿ ಬಿಡುಗಡೆಯಾಗುತ್ತಿರುವ ಟೈಟಾನಿಯಂ ಕಾರು ಆವೃತ್ತಿಗಳಲ್ಲಿ ಪೆಟ್ರೋಲ್ ವರ್ಷನ್‌ಗಳು 1.0-ಲೀಟರ್ ಇಕೋಬೂಸ್ಟ್ ಎಂಜಿನ್ ಆಯ್ಕೆ ಪಡೆದುಕೊಳ್ಳಲಿವೆ ಎನ್ನಲಾಗಿದ್ದು, ಟೈಟಾನಿಯಂ ಎಸ್ ಬಿಡುಗಡೆ ನಂತರವಷ್ಟೇ ಸಿಗ್ನೆಚೆರ್ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ.

ಮೇ 14ಕ್ಕೆ ಬಿಡುಗಡೆಯಾಗಲಿದೆ ಫೋರ್ಡ್ ಇಕೋ ಸ್ಪೋರ್ಟ್ ಟೈಟಾನಿಯಂ ಎಸ್

ಇನ್ನು ಹೊಸ ಕಾರುಗಳ ವಿನ್ಯಾಸದ ಬಗ್ಗೆ ಹೇಳುವುದಾದರೇ, ಕಾರಿನ ಹೊರ ವಿನ್ಯಾಸದಲ್ಲಿ ಸ್ಮೋಕ್ಡ್ ಎಫೆಕ್ಟ್ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲ್ಯಾಂಪ್ಸ್, ಬ್ಲಾಕ್ ರೂಪ್ ರೈಲ್ಸ್, ಫಾಗ್ ಲ್ಯಾಂಪ್‍‍ಗಲನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಿದ್ದು, ಹೊಸದಾದ ಸ್ಪೋರ್ಟಿ ಅಲಾಯ್ ಚಕ್ರಗಳನ್ನು ಪಡೆದುಕೊಂಡಿವೆ.

ಮೇ 14ಕ್ಕೆ ಬಿಡುಗಡೆಯಾಗಲಿದೆ ಫೋರ್ಡ್ ಇಕೋ ಸ್ಪೋರ್ಟ್ ಟೈಟಾನಿಯಂ ಎಸ್

ಇದಲ್ಲದೆ ಹೊಸ ಟೈಟಾನಿಯಂ ಎಸ್ ಮತ್ತು ಸಿಗ್ನಿಚೆರ್ ಕಾರುಗಳು ಬ್ಲಾಕ್ ರೂಫ್ ಮೌಂಟೆಡ್ ಸ್ಪಾಯ್ಲರ್, ಟೈಟಾನಿಯಂ ಎಸ್ ಬ್ಯಾಡ್ಜಿಂಗ್ ಪಡೆದ ಇಂಟಿಗ್ರೇಟೆಡ್ ಎಲ್ಇಡಿ ಬ್ರೇಕ್ ಲೈಟ್‍‍ಗಳನ್ನು ಅಳವಡಿಸಲಾಗಿದೆ.

ಮೇ 14ಕ್ಕೆ ಬಿಡುಗಡೆಯಾಗಲಿದೆ ಫೋರ್ಡ್ ಇಕೋ ಸ್ಪೋರ್ಟ್ ಟೈಟಾನಿಯಂ ಎಸ್

ಟೈಟಾನಿಯಂ ಎಸ್ ಮತ್ತು ಸಿಗ್ನಿಚೆರ್ ಕಾರುಗಳ ಒಳಭಾಗದಲ್ಲಿ ಕೂಡಾ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಆರೆಂಜ್ ಬಣ್ಣವನ್ನು ಬಳಸಲಾಗಿರುವ ಕಪ್ಪು ಬಣ್ಣದ ಇಂಟಿರಿಯರ್‍‍ಗಳು, ಆಕರ್ಷಿತವಾದ ಡ್ಯಾಶ್‍‍ಬೋರ್ಡ್, ಡೋರ್ ಪ್ಯಾನೆಲ್‍‍ಗಳು ಮತ್ತು ಸ್ಟೀರಿಂಗ್ ವೀಲ್‍‍ನಿಂದ ಸಜ್ಜುಗೊಂಡಿದೆ.

ಮೇ 14ಕ್ಕೆ ಬಿಡುಗಡೆಯಾಗಲಿದೆ ಫೋರ್ಡ್ ಇಕೋ ಸ್ಪೋರ್ಟ್ ಟೈಟಾನಿಯಂ ಎಸ್

ಹೊಸ ವೆರಿಯೆಂಟ್ ಕಾರುಗಳಲ್ಲಿ ಎಲೆಕ್ಟ್ರಾನಿಕ್ ಸನ್‍‍ರೂಫ್, ಟ್ವಿನ್ ಪೊಡ್ ಕ್ಲಸ್ಟರ್, 3 ಸ್ಪೋಕ್ ಮಲ್ಟಿ‍ಫಂಕ್ಷನ್ ಸ್ಟೀರಿಂಗ್ ವೀಲ್, ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್‍‍ಪ್ಲೇ ಮತ್ತು ಫೋರ್ಡ್ ಸಂಸ್ಥೆಯ ಎಸ್‍ವೈಎನ್‍ಸಿ3 ಆಯ್ಕೆಗಳನ್ನು ಪಡೆದುಕೊಂಡಿರುವ ಫ್ಲೋಟಿಂಗ್ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.

ಮೇ 14ಕ್ಕೆ ಬಿಡುಗಡೆಯಾಗಲಿದೆ ಫೋರ್ಡ್ ಇಕೋ ಸ್ಪೋರ್ಟ್ ಟೈಟಾನಿಯಂ ಎಸ್

ಎಂಜಿನ್ ಸಾಮರ್ಥ್ಯ

ಹೊಸ ಫೋರ್ಡ್ ಇಕೊಸ್ಪೋರ್ಟ್ ಟೈಟಾನಿಯಂ ಎಸ್ ಮತ್ತು ಸಿಗ್ನಿಚೆರ್ ವೆರಿಯೆಂಟ್ ಕಾರುಗಳು 1.5 ಲೀಟರ್ ಟಿಡಿಸಿಐ ಡೀಸೆಲ್ ಎಂಜಿನ್ ಸಹಾಯದಿಂದ 99ಬಿಹೆಚ್‍ಪಿ ಮತ್ತು 205ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 1.5 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 123-ಬಿಹೆಚ್‍ಪಿ ಮತ್ತು 150-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಎರಡು ಎಂಜಿನ್‍‍ಗಳನ್ನು ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್ ಮಿಶನ್‍‍ಗಳೊಂದಿಗೆ ಜೋಡಿಸಲಾಗಿದೆ.

ಮೇ 14ಕ್ಕೆ ಬಿಡುಗಡೆಯಾಗಲಿದೆ ಫೋರ್ಡ್ ಇಕೋ ಸ್ಪೋರ್ಟ್ ಟೈಟಾನಿಯಂ ಎಸ್

ಈಗಾಗಲೇ ಫೋರ್ಡ್ ಸಂಸ್ಥೆಯು ತನ್ನ ಇಕೋ ಸ್ಪೋರ್ಟ್ ಕಾರುಗಳ ಮೇಲೆ ರೂ 5000 ರಿಂದ 10000 ಸಾವಿರದ ವರೆಗು ಬೆಲೆ ಏರಿಕೆ ಮಾಡಿದ್ದು, ಎಲ್ಲಾ ವೆರಿಯೆಂಟ್ ಕಾರುಗಳಲ್ಲಿ ಹೊಸದಾಗಿ ಪಾರ್ಕಿಂಗ್ ಸೆನ್ಸಾರ್ಸ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್ ಮತ್ತು ಪ್ಯಾಸೆಂಜರ್ ಸೀಟ್‍‍ಬೆಲ್ಟ್ ರಿಮೈಂಡರ್ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

ಮೇ 14ಕ್ಕೆ ಬಿಡುಗಡೆಯಾಗಲಿದೆ ಫೋರ್ಡ್ ಇಕೋ ಸ್ಪೋರ್ಟ್ ಟೈಟಾನಿಯಂ ಎಸ್

ಹೀಗಾಗಿ ಹೊಸದಾಗಿ ಬಿಡುಗಡೆಗೊಳ್ಳಲಿರುವ ಇಕೋ ಸ್ಪೋರ್ಟ್ ಟೈಟಾನಿಯಂ ಎಸ್ ಹಾಗೂ ಸಿಗ್ನಿಚೆರ್ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ, ಮಾರುತಿ ಸುಜುಕಿ ವಿಟಾರಾ ಬ್ರೇಝಾ ಮತ್ತು ರೆನಾಲ್ಟ್ ಡಸ್ಟರ್ ಕಾರುಗಳಿಗೆ ತೀವ್ರ ಪೈಪೋಟಿಯನ್ನು ನೀಡವುದರಲ್ಲಿ ಯಾವುದೇ ಅನುಮಾನವಿಲ್ಲ.

Article Published On: Friday, May 11, 2018, 19:58 [IST]
English summary
Ford EcoSport Titanium S Launch Date Revealed.
Read more on ford suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+