Just In
- 11 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 12 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 14 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 15 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- Finance ಸಂಸ್ಥೆಯ ಎಲ್ಲ 30,000 ಉದ್ಯೋಗಿಗಳಿಗೆ ವರ್ಕ್ ಫಮ್ ಹೋಂ ನೀಡಿದ ಟೆಕ್ ಕಂಪೆನಿ
- Technology Earbuds: 2000 ರೂ. ಒಳಗೆ ಲಭ್ಯ ಇರುವ ಅತ್ಯುತ್ತಮ ಇಯರ್ಬಡ್ಸ್! ಸಖತ್ ಫೀಚರ್ಸ್...
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮತ್ತೇರಡು ಹೊಸ ವೆರಿಯೆಂಟ್ಗಳಲ್ಲಿ ಫೋರ್ಡ್ ಇಕೋ ಸ್ಪೋರ್ಟ್
ಅಮೆರಿಕ ಮೂಲದ ಪ್ರಸಿದ್ಧ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ತಮ್ಮ ಜನಪ್ರಿಯ ಇಕೋ ಸ್ಪೋರ್ಟ್ ಎಸ್ಯುವಿ ಆವೃತ್ತಿಯಲ್ಲಿ ಮತ್ತೇರಡು ಹೊಸ ವೆರಿಯೆಂಟ್ಗಳನ್ನು ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದೆ.
ಅಮೆರಿಕ ಮೂಲದ ಪ್ರಸಿದ್ಧ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ತಮ್ಮ ಜನಪ್ರಿಯ ಇಕೋ ಸ್ಪೋರ್ಟ್ ಎಸ್ಯುವಿ ಆವೃತ್ತಿಯಲ್ಲಿ ಮತ್ತೇರಡು ಹೊಸ ವೆರಿಯೆಂಟ್ಗಳನ್ನು ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದ್ದು, ಟೈಟಾನಿಯಂ ಎಸ್ ಮತ್ತು ಸಿಗ್ನಿಚೆರ್ ಎಂಬ ಎರಡು ಟಾಪ್ ಎಂಡ್ ಕಾರು ಮಾದರಿಗಳನ್ನು ಮುಂದಿನ 2 ವಾರಗಳಲ್ಲಿ ಬಿಡುಗಡೆಗೊಳ್ಳುವ ನೀರಿಕ್ಷೆಗಳಿವೆ.
ಹೊಸ ಇಕೋ ಸ್ಪೋರ್ಟ್ ಟೈಟಾನಿಯಂ ಎಸ್ ಮತ್ತು ಸಿಗ್ನಿಚೆರ್ ಟಾಪ್ ಎಂಡ್ ವೆರಿಯೆಂಟ್ ಕಾರುಗಳು ಸನ್ರೂಫ್ ಮತ್ತು 6 ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್, ವಿನ್ಯಾಸದಲ್ಲಿ ಗುರುತರ ಬದಲಾವಣೆಗಳು ಹಾಗೂ ಅಲಾಯ್ ಚಕ್ರಗಳನ್ನು ಹೊಸದಾಗಿ ಪಡೆದುಕೊಂಡಿರಲಿದ್ದು, ಹೊಸ ಕಾರುಗಳನ್ನು ಈಗಾಗಲೇ ದೇಶದ ಪ್ರಮುಖ ಫೋರ್ಡ್ ಡೀಲರ್ ಸ್ಟಾಕ್ ಬಳಿ ಕಾಣಿಸಿಕೊಂಡಿವೆ.
ಫೋರ್ಡ್ ಇಕೋ ಸ್ಪೋರ್ಟ್ ಫೇಸ್ಲಿಫ್ಟ್ ಕಾರುಗಳು ಈ ಹಿಂದೆ 2017ರ ನವೆಂಬರ್ ತಿಂಗಳಲ್ಲಿ ಬಿಡುಗಡೆಗೊಂಡಿದ್ದು, ಬಿಡುಗಡೆಯ ನಂತರ ಹತ್ತಾರು ಬದಲಾವಣೆಗಳನ್ನು ಕಂಡಿದೆ. ಹೀಗಾಗಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಇದೀಗ ಮತ್ತೇರಡು ಟಾಪ್ ವೆರಿಯೆಂಟ್ಗಳನ್ನು ಅಭಿವೃದ್ಧಿ ಮಾಡಲಾಗಿದೆ.
ಇಕೊಸ್ಪೋರ್ಟ್ ಕಾರುಗಳಲ್ಲಿ ಆ್ಯಂಬಿಯೆಂಟ್, ಟ್ರೆಂಡ್, ಟ್ರೆಂಡ್+, ಟೈಟಾನಿಯಂ ಮತ್ತು ಟೈಟಾನಿಯಂ+ ಎಂಬ ಐದು ವೆರಿಯಂಟ್ಗಳಲ್ಲಿ ಲಭ್ಯವಿದ್ದು, ಹೊಸದಾಗಿ ಟೈಟಾನಿಯಂ ಎಸ್ ಮತ್ತು ಸಿಗ್ನಿಚೆರ್ ಎಂಬ ಟಾಪ್ ಎಂಡ್ ವೆರಿಯಂಟ್ ಕಾರುಗಳನ್ನು ಪರಿಚಯಿಸಲಾಗುತ್ತಿದೆ.
ಇನ್ನು ಹೊಸ ಕಾರುಗಳ ವಿನ್ಯಾಸದ ಬಗ್ಗೆ ಹೇಳುವುದಾದರೇ, ಕಾರಿನ ಹೊರ ವಿನ್ಯಾಸದಲ್ಲಿ ಸ್ಮೋಕ್ಡ್ ಎಫೆಕ್ಟ್ ಪ್ರೊಜೆಕ್ಟರ್ ಹೆಡ್ಲ್ಯಾಂಪ್ಸ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲ್ಯಾಂಪ್ಸ್, ಬ್ಲಾಕ್ ರೂಪ್ ರೈಲ್ಸ್, ಫಾಗ್ ಲ್ಯಾಂಪ್ಗಲನ್ನು ಕಪ್ಪು ಬಣ್ಣದಿಂದ ಸಜ್ಜುಗೊಳಿಸಿದ್ದು, ಹೊಸದಾದ ಸ್ಪೋರ್ಟಿ ಅಲಾಯ್ ಚಕ್ರಗಳನ್ನು ಪಡೆದುಕೊಂಡಿವೆ.
ಇದಲ್ಲದೆ ಹೊಸ ಟೈಟಾನಿಯಂ ಎಸ್ ಮತ್ತು ಸಿಗ್ನಿಚೆರ್ ಕಾರುಗಳು ಬ್ಲಾಕ್ ರೂಫ್ ಮೌಂಟೆಡ್ ಸ್ಪಾಯ್ಲರ್, ಟೈಟಾನಿಯಂ ಎಸ್ ಬ್ಯಾಡ್ಜಿಂಗ್ ಪಡೆದ ಇಂಟಿಗ್ರೇಟೆಡ್ ಎಲ್ಇಡಿ ಬ್ರೇಕ್ ಲೈಟ್ಗಳನ್ನು ಅಳವಡಿಸಲಾಗಿದೆ.
ಟೈಟಾನಿಯಂ ಎಸ್ ಮತ್ತು ಸಿಗ್ನಿಚೆರ್ ಕಾರುಗಳ ಒಳಭಾಗದಲ್ಲಿ ಕೂಡಾ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಆರೆಂಜ್ ಬಣ್ಣವನ್ನು ಬಳಸಲಾಗಿರುವ ಕಪ್ಪು ಬಣ್ಣದ ಇಂಟಿರಿಯರ್ಗಳು, ಆಕರ್ಷಿತವಾದ ಡ್ಯಾಶ್ಬೋರ್ಡ್, ಡೋರ್ ಪ್ಯಾನೆಲ್ಗಳು ಮತ್ತು ಸ್ಟೀರಿಂಗ್ ವೀಲ್ನಿಂದ ಸಜ್ಜುಗೊಂಡಿದೆ.
ಇವುಗಳಲ್ಲದೆ ಹೊಸ ವೆರಿಯೆಂಟ್ ಕಾರುಗಳಲ್ಲಿ ಎಲೆಕ್ಟ್ರಾನಿಕ್ ಸನ್ರೂಫ್, ಟ್ವಿನ್ ಪೊಡ್ ಕ್ಲಸ್ಟರ್, 3 ಸ್ಪೋಕ್ ಮಲ್ಟಿಫಂಕ್ಷನ್ ಸ್ಟೀರಿಂಗ್ ವೀಲ್, ಆಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ಪ್ಲೇ ಮತ್ತು ಫೋರ್ಡ್ ಸಂಸ್ಥೆಯ ಎಸ್ವೈಎನ್ಸಿ3 ಆಯ್ಕೆಗಳನ್ನು ಪಡೆದುಕೊಂಡಿರುವ ಫ್ಲೋಟಿಂಗ್ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಅಳವಡಿಸಲಾಗಿದೆ.
ಎಂಜಿನ್ ಸಾಮರ್ಥ್ಯ
ಹೊಸ ಫೋರ್ಡ್ ಇಕೊಸ್ಪೋರ್ಟ್ ಟೈಟಾನಿಯಂ ಎಸ್ ಮತ್ತು ಸಿಗ್ನಿಚೆರ್ ವೆರಿಯೆಂಟ್ ಕಾರುಗಳು 1.5 ಲೀಟರ್ ಟಿಡಿಸಿಐ ಡೀಸೆಲ್ ಎಂಜಿನ್ ಸಹಾಯದಿಂದ 99ಬಿಹೆಚ್ಪಿ ಮತ್ತು 205ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 1.5 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 123ಬೆಹೆಚ್ಪಿ ಮತ್ತು 150ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತವೆ. ಎರಡು ಎಂಜಿನ್ಗಳನ್ನು ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಟ್ರಾನ್ಸ್ ಮಿಶನ್ಗಳೊಂದಿಗೆ ಜೋಡಿಸಲಾಗಿದೆ.
ಈಗಾಗಲೇ ಫೋರ್ಡ್ ಸಂಸ್ಥೆಯು ತನ್ನ ಇಕೋ ಸ್ಪೋರ್ಟ್ ಕಾರುಗಳ ಮೇಲೆ ರೂ 5000 ರಿಂದ 10000 ಸಾವಿರದ ವರೆಗು ಬೆಲೆ ಏರಿಕೆ ಮಾಡಿದ್ದು, ಎಲ್ಲಾ ವೆರಿಯೆಂಟ್ ಕಾರುಗಳಲ್ಲಿ ಹೊಸದಾಗಿ ಪಾರ್ಕಿಂಗ್ ಸೆನ್ಸಾರ್ಸ್, ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್ ಮತ್ತು ಪ್ಯಾಸೆಂಜರ್ ಸೀಟ್ಬೆಲ್ಟ್ ರಿಮೈಂಡರ್ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.
ಹೀಗಾಗಿ ಹೊಸದಾಗಿ ಬಿಡುಗಡೆಗೊಳ್ಳಲಿರುವ ಇಕೋ ಸ್ಪೋರ್ಟ್ ಟೈಟಾನಿಯಂ ಎಸ್ ಹಾಗೂ ಸಿಗ್ನಿಚೆರ್ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಲ್ಲಿ, ಮಾರುತಿ ಸುಜುಕಿ ವಿಟಾರಾ ಬ್ರೇಝಾ ಮತ್ತು ರೆನಾಲ್ಟ್ ಡಸ್ಟರ್ ಕಾರುಗಳಿಗೆ ತೀವ್ರ ಪೈಪೋಟಿಯನ್ನು ನೀಡವುದರಲ್ಲಿ ಯಾವುದೇ ಅನುಮಾನವಿಲ್ಲ.