ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಫೋರ್ಡ್ ಫೇಸ್‌ಲಿಫ್ಟ್ ಎಂಡೀವರ್....

ಫಾರ್ಚೂನರ್ ಮಾದರಿಯಲ್ಲೇ ಎಲ್ಲಾ ಮಾದರಿಯಲ್ಲೂ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಎಂಡೀವರ್ ಇದೀಗ ಫೇಸ್‌ಲಿಫ್ಟ್ ಸೌಲಭ್ಯದೊಂದಿಗೆ ಮತ್ತಷ್ಟು ಜನಪ್ರಿಯತೆ ಸಾಧಿಸುವ ತವಕದಲ್ಲಿದೆ.

By Praveen Sannamani

ಟೊಯೊಟಾ ಫಾರ್ಚೂನರ್ ಹಿಂದಿಕ್ಕುವ ಏಕೈಕ ಕಾರು ಮಾದರಿ ಅಂದ್ರೆ ಅದು ಫೋರ್ಡ್ ಎಂಡೀವರ್ ಮಾತ್ರ. ಯಾಕೇಂದ್ರೆ ಫಾರ್ಚೂನರ್ ಮಾದರಿಯಲ್ಲೇ ಎಲ್ಲಾ ಮಾದರಿಯಲ್ಲೂ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೀಗ ಫೇಸ್‌ಲಿಫ್ಟ್ ಸೌಲಭ್ಯದೊಂದಿಗೆ ಮತ್ತಷ್ಟು ಜನಪ್ರಿಯತೆ ಸಾಧಿಸುವ ತವಕದಲ್ಲಿದೆ.

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಫೋರ್ಡ್ ಫೇಸ್‌ಲಿಫ್ಟ್ ಎಂಡೀವರ್....

ಹೌದು, ಆಟೋ ಕಾರ್ ಇಂಡಿಯಾ ಸುದ್ದಿ ವಾಹಿನಿ ವರದಿ ಪ್ರಕಾರ ಫೇಸ್‌ಲಿಫ್ಟ್ ಎಂಡೀವರ್ ಬಿಡುಗಡೆ ಮಾಡುವ ಫೋರ್ಡ್ ಸಂಸ್ಥೆಯು ಈ ಬಾರಿ ಫಾರ್ಚೂನರ್ ಮಾರಾಟಕ್ಕೆ ಪ್ರಬಲ ಪೈಪೋಟಿ ನೀಡುವ ವಿಶ್ವಾಸ ವ್ಯಕ್ತಪಡಿಸಿಯೆಂತೆ. ಹೀಗಾಗಿ ಫೇಸ್‌ಲಿಫ್ಟ್ ಎಂಡೀವರ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿ ಕಾರು ಆವೃತ್ತಿಗಿಂತ ಹೆಚ್ಚಿನ ಗುಣಮಟ್ಟದ ಎಂಜಿನ್ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಹೊತ್ತುಬರುವುದು ಖಚಿತವಾಗಿದೆ.

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಫೋರ್ಡ್ ಫೇಸ್‌ಲಿಫ್ಟ್ ಎಂಡೀವರ್....

ಇದಕ್ಕಾಗಿಯೇ ಹೊಸ ಫೇಸ್‌ಲಿಫ್ಟ್ ಎಂಡೀವರ್ ಆವೃತ್ತಿಯನ್ನು ವಿದೇಶಿ ಮಾರುಕಟ್ಟೆಗಳಲ್ಲಿ ಈಗಾಗಲೇ ಸ್ಪಾಟ್ ಟೆಸ್ಟಿಂಗ್ ನಡೆಸಿರುವ ಫೋರ್ಡ್ ಸಂಸ್ಥೆಯು, ಇದೇ ವರ್ಷ ಜೂನ್ ಅಂತ್ಯಕ್ಕೆ ಆಸ್ಟ್ರೇಲಿಯಾ ಮತ್ತು ಥೈಲ್ಯಾಂಡ್‌ನಲ್ಲಿ ಫೇಸ್‌ಲಿಫ್ಟ್ ಎಂಡೀವರ್ ಕಾರುಗಳನ್ನು ಎವರೆಸ್ಟ್ ಹೆಸರಿನಲ್ಲಿ ಬಿಡುಗಡೆ ಮಾಡುತ್ತಿದೆ.

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಫೋರ್ಡ್ ಫೇಸ್‌ಲಿಫ್ಟ್ ಎಂಡೀವರ್....

ತದನಂತರವಷ್ಟೇ ಭಾರತೀಯ ಮಾರುಕಟ್ಟೆಯಲ್ಲಿ ಫೇಸ್‌ಲಿಫ್ಟ್ ಎಂಡೀವರ್ ಬಿಡುಗಡೆ ಮಾಡಲಿರುವ ಫೋರ್ಡ್, ಹೊಸ ಕಾರಿನಲ್ಲಿ ಸುಧಾರಿತ ಗ್ರಿಲ್, ಫಾಗ್ ಲ್ಯಾಂಪ್, ಫ್ರಂಟ್ ಬಂಪರ್, ಚಕ್ರಗಳು ಮತ್ತು ಕಾರಿನ ಇಂಟಿರಿಯರ್ ವಿಭಾಗದಲ್ಲಿ ಗುರುತರ ಬದಲಾವಣೆ ತರಲಿದೆ.

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಫೋರ್ಡ್ ಫೇಸ್‌ಲಿಫ್ಟ್ ಎಂಡೀವರ್....

ಜೊತೆಗೆ 7-ಸೀಟರ್ ವೈಶಿಷ್ಟ್ಯತೆಗಳನ್ನು ಮತ್ತಷ್ಟು ಆರಾಮದಾಯಕಗೊಳಿಸಲಿದ್ದು, ಕೀ ಲೆಸ್ ಎಂಟ್ರಿ, ಸ್ಟಾರ್ಟ್/ಸ್ಟಾಪ್ ಪುಶ್ ಬಟನ್, ಸಿಕ್ಸ್ ಸ್ಪೋರ್ಕ್ ಅಲಾಯ್ ವೀಲ್ಹ್ ಸೇರಿದಂತೆ ಕಾರಿನ ಹೊರ ಭಾಗದ ವಿನ್ಯಾಸದಲ್ಲೂ ಕೆಲವು ಬದಲಾವಣೆಗಳಾಗಲಿವೆ.

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಫೋರ್ಡ್ ಫೇಸ್‌ಲಿಫ್ಟ್ ಎಂಡೀವರ್....

ಎಂಜಿನ್ ಸಾಮರ್ಥ್ಯ

ವಿದೇಶಿ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಸಿದ್ದವಾಗಿರುವ ಫೇಸ್‌ಲಿಫ್ಟ್ ಎಂಡೀವರ್(ಎವೆರೆಸ್ಟ್) ಕಾರುಗಳು 2.0-ಲೀಟರ್ ಫೌರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 10-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‌ಬಾಕ್ಸ್‌ನೊಂದಿಗೆ ಸಿಂಗಲ್ ಟರ್ಬೋ ವರ್ಷನ್ ಮತ್ತು ಟ್ವಿನ್ ಟರ್ಬೋ ವರ್ಷನ್ ಎಂಬ ಎರಡು ಎಂಜಿನ್ ಆಯ್ಕೆ ಹೊಂದಿವೆ.

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಫೋರ್ಡ್ ಫೇಸ್‌ಲಿಫ್ಟ್ ಎಂಡೀವರ್....

ಈ ಮೂಲಕ ಸಿಂಗಲ್ ಟರ್ಬೋ ವರ್ಷನ್ ಕಾರುಗಳು 180ಬಿಎಚ್‌ಪಿ, 420ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ ಟ್ವಿನ್ ಟರ್ಬೋ ವರ್ಷನ್ ಕಾರುಗಳು 213ಬಿಎಚ್‌ಪಿ, 500 ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿವೆ.

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಫೋರ್ಡ್ ಫೇಸ್‌ಲಿಫ್ಟ್ ಎಂಡೀವರ್....

ಆದರೇ, ಭಾರತೀಯ ಮಾರುಕಟ್ಟೆಯಲ್ಲಿ ಸದ್ಯ ಮಾರಾಟವಾಗುತ್ತಿರುವ ಎಂಡೀವರ್ ಕಾರುಗಳು 2.2-ಲೀಟರ್ ಫೌರ್ ಸಿಲಿಂಡರ್ ಡಿಸೇಲ್ ಎಂಜಿನ್ ಮತ್ತು 3.2-ಲೀಟರ್ ಫೈವ್ ಸಿಲಿಂಡರ್ ಡಿಸೇಲ್ ಎಂಜಿನ್‌ನೊಂದಿಗೆ ಮಾರಾಟವಾಗುತ್ತಿದ್ದು, ಫೇಸ್‌ಲಿಫ್ಟ್ ಎಂಡೀವರ್‌ನಲ್ಲೂ ಹಳೆಯ ಕಾರಿನ ಮಾದರಿಯ್ಲೇ ಎಂಜಿನ್ ಆಯ್ಕೆ ಮುಂದುವರಿಸುವ ಸಾಧ್ಯತೆಗಳಿವೆ.

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಫೋರ್ಡ್ ಫೇಸ್‌ಲಿಫ್ಟ್ ಎಂಡೀವರ್....

ಹೀಗಾಗಿ 2.2-ಲೀಟರ್ ಡಿಸೇಲ್ ಎಂಜಿನ್ ಮಾದರಿಯು 158ಬಿಎಚ್‌ಪಿ, 385ಎನ್ಎಂ ಟಾರ್ಕ್ ಉತ್ಪಾದಿಸಿದಲ್ಲಿ, 3.2-ಲೀಟರ್ ಡಿಸೇಲ್ ಎಂಜಿನ್ ಮಾದರಿಯು 197ಬಿಎಚ್‌ಪಿ, 470ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಎರಡು ಮಾದರಿಯಲ್ಲೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹಾಗೂ ಆಲ್ ವೀಲ್ಹ್ ಡ್ರೈವ್ ಸೌಲಭ್ಯ ಜೋಡಿಸಲಾಗಿದೆ.

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಫೋರ್ಡ್ ಫೇಸ್‌ಲಿಫ್ಟ್ ಎಂಡೀವರ್....

ಎಂಡೀವರ್ ಫೇಸ್‌ಲಿಫ್ಟ್ ಬಿಡುಗಡೆಯ ದಿನಾಂಕ

ಇದೇ ವರ್ಷ ಜೂನ್ ಅಂತ್ಯಕ್ಕೆ ಆಸ್ಟ್ರೇಲಿಯಾ ಮತ್ತು ಥೈಲ್ಯಾಂಡ್‌ನಲ್ಲಿ ಫೇಸ್‌ಲಿಫ್ಟ್ ಎಂಡೀವರ್ ಕಾರುಗಳನ್ನು ಬಿಡುಗಡೆಯಾಗಲಿದ್ದು, ತದನಂತರವಷ್ಟೇ ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳು ವರ್ಷಾಂತ್ಯಕ್ಕೆ ಖರೀದಿಗೆ ಲಭ್ಯವಾಗಲಿವೆ.

ಫಾರ್ಚೂನರ್ ಹಿಂದಿಕ್ಕಲು ಸಜ್ಜಾದ ಫೋರ್ಡ್ ಫೇಸ್‌ಲಿಫ್ಟ್ ಎಂಡೀವರ್....

ಒಟ್ಟಿನಲ್ಲಿ 7-ಸೀಟರ್ ಎಸ್‌ಯುವಿಗಳಲ್ಲೇ ಉತ್ತಮ ಕಾರು ಮಾದರಿಯಾಗಿರುವ ಫೋರ್ಡ್ ಎಂಡೀವರ್ ಇದೀಗ ಫೇಸ್‌ಲಿಫ್ಟ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು, ಜನಪ್ರಿಯ ಫಾರ್ಚೂನರ್ ಕಾರು ಮಾರಾಟಕ್ಕೆ ತೀವ್ರ ಪೈಪೋಟಿ ನೀಡುವತ್ತ ಗಮನಹರಿಸುತ್ತಿದೆ.

Article Published On: Wednesday, May 2, 2018, 13:27 [IST]
English summary
New Ford Endeavour Facelift To Be Launched In India — To Rival The Toyota Fortuner.
Read more on ford suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+