ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ಫೋರ್ಡ್ ಫಿಗೊ ಫೇಸ್‍‍ಲಿಫ್ಟ್ ಕಾರಿನ ವಿಶೇಷತೆ ಏನು.?

ಫೋರ್ಡ್ ಇಂಡಿಯಾ ಸಂಸ್ಥೆಯು ಮೊನ್ನೆಯಷ್ಟೆ ತಮ್ಮ ಆಸ್ಫೈರ್ ಸೆಡಾನ್ ಕಾರಿನ ಫೇಸ್‍‍ಲಿಫ್ಟ್ ಮಾದರಿಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.5.55 ಲಕ್ಷದ ಬೆಲಯಲ್ಲಿ ಬಿಡುಗಡೆಗೊಳಿಸಿದ್ದು, ಮಾಹಿತಗಳ ಪ್ರಕಾರ ಸಂಸ್ಥೆಯು ತಮ್ಮ ಜನಪ್ರಿಯ ಫಿಗೊ ಕಾರಿನ ಫೇಸ್‍ಲಿಫ್ಟ್ ಅನ್ನು 2019ರ ಮಾರ್ಚ್ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಗೆ ಪರಿಚಯಿಸಲಿದೆ ಎನ್ನಲಾಗಿದೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ಫೋರ್ಡ್ ಫಿಗೊ ಫೇಸ್‍‍ಲಿಫ್ಟ್ ಕಾರಿನ ವಿಶೇಷತೆ ಏನು.?

ಫೋರ್ಡ್ ಪರಿಚಯಿಸುತ್ತಿರುವ ಫಿಗೊ ಫೇಸ್‌ಲಿಫ್ಟ್ ಆವೃತ್ತಿಯು ಪ್ರಸ್ತುತ ಮಾದರಿಗಿಂತಲೂ ಹೆಚ್ಚಿನ ಬದಲಾವಣೆ ಹೊಂದಿದ್ದು, ಕಾರಿನ ಒಳಗೂ ಹಾಗು ಹೊರಗಿನ ವಿನ್ಯಾಸಗನ್ನು ಬದಲಾವಣೆ ಮಾಡಿ ಹೊಸ ಲುಕ್ ನೀಡಿರುವುದು ಗ್ರಾಹಕರನ್ನು ಸೆಳೆಯಲು ನೆರವಾಗಲಿದೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ಫೋರ್ಡ್ ಫಿಗೊ ಫೇಸ್‍‍ಲಿಫ್ಟ್ ಕಾರಿನ ವಿಶೇಷತೆ ಏನು.?

ಇನ್ನು ಫೋರ್ಡ್ ಫಿಗೊ ಫೇಸ್ ಲಿಫ್ಟ್ ಬದಲಾವಣೆಗೆ ಸಂಬಂಧಿಸಿದಂತೆ ಫಿಗೊ ಮಾದರಿಯು ದೊಡ್ಡದಾದ ಹೆಡ್‌ಲ್ಯಾಂಪ್‌ಗಳು, ಹೊಸ ನಮೂನೆ ಗ್ರಿಲ್ ಅನ್ನು ಪಡೆದುಕೊಂಡಿದೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ಫೋರ್ಡ್ ಫಿಗೊ ಫೇಸ್‍‍ಲಿಫ್ಟ್ ಕಾರಿನ ವಿಶೇಷತೆ ಏನು.?

ಕಾರಿನ ಒಳ ವಿನ್ಯಾಸ

ಫಿಗೊ ಫೇಸ್‌ಲಿಫ್ಟ್ ಮಾದರಿಯು 6.5 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಹೊಂದಿದ್ದು, ಇದು ಇತ್ತೀಚೆಗೆ ಅನಾವರಣಗೊಂಡ ಫ್ರೀ ಸ್ಟೈಲ್ ಕ್ರಾಸ್ ಓವರ್‌ನಲ್ಲೂ ಅವಳವಡಿಸಲಾಗಿದೆ. ಇದರ ಜೊತೆಗೆ ಫೋರ್ಡ್ ಸಿಂಕ್ 3 ತಂತ್ರಜ್ಞಾನ, ಆ್ಯಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ ಸಂಪರ್ಕದ ವೈಶಿಷ್ಟ್ಯತೆಯನ್ನು ಪಡೆದಿದೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ಫೋರ್ಡ್ ಫಿಗೊ ಫೇಸ್‍‍ಲಿಫ್ಟ್ ಕಾರಿನ ವಿಶೇಷತೆ ಏನು.?

ಎಂಜಿನ್ ಸಾಮರ್ಥ್ಯ

ಬಿಡುಗಡೆಗೊಳ್ಳಲಿರುವ ಹೊಸ ಫೋರ್ಡ್ ಫಿಗೊ ಫೇಸ್‍‍ಲಿಫ್ಟ್ ಕಾರುಗಳು 1.2 ಲೀಟರ್ ಮತ್ತು 1.5 ಲೀಟರ್ ಪೆಟ್ರೋಲ್ ಎಂಜಿನ್ ಹಾಗು 1.5 ಲೀಟರ್ ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಲಭ್ಯವಿರಲಿದೆ ಎನ್ನಲಾಗಿರ್ರುಮ್ 1.2 ಲೀಟರ್ ಡ್ರಾಗನ್ ಸಿರೀಸ್ ಪೆಟ್ರೋಲ್ ಎಂಜಿನ್ 95ಬಿಹೆಚ್‍ಪಿ ಮತ್ತು 120ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂದಿದೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ಫೋರ್ಡ್ ಫಿಗೊ ಫೇಸ್‍‍ಲಿಫ್ಟ್ ಕಾರಿನ ವಿಶೇಷತೆ ಏನು.?

ಇನ್ನು 1.5 ಲೀಟರ್ ಪೆಟ್ರೋಲ್ ಎಂಜಿನ್ 121ಬಿಹೆಚ್‍ಪಿ ಮತ್ತು 150ಎನ್ಎಮ್ ಟಾರ್ಕ್ ಅನ್ನು ಉತ್ಪದಿಸುವ ಶಕ್ತಿಯನ್ನು ಪಡೆದುಕೊಂಡಿದೆ. ಹಾಗೆಯೆ 1.5 ಲೀಟರ್ ಡೀಸೆಲ್ ಎಂಜಿನ್ 99ಬಿಹೆಚ್‍ಪಿ ಮತ್ತು 215ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ಫೋರ್ಡ್ ಫಿಗೊ ಫೇಸ್‍‍ಲಿಫ್ಟ್ ಕಾರಿನ ವಿಶೇಷತೆ ಏನು.?

ಫೋರ್ಡ್ ಫಿಗೊ ಕಾರಿನ 1.2 ಲೀಟರ್ ಪೆಟ್ರೋಲ್ ಹಾಗು 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಿದರೆ ಇನ್ನು 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಮ್ಯಾನುವಲ್ ಹಾಗು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿರಲಿದೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ಫೋರ್ಡ್ ಫಿಗೊ ಫೇಸ್‍‍ಲಿಫ್ಟ್ ಕಾರಿನ ವಿಶೇಷತೆ ಏನು.?

ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರುನಲ್ಲಿ ಡ್ಯುಯಲ್ ಏರ್‍‍ಭ್ಯಾಗ್ಸ್, ಎಬಿಎಸ್, ಇಬಿಡಿ ಮತ್ತು ಐಎಸ್‍ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಕಾರಿನ ಟಾಪ್ ವೇರಿಯಂಟ್‍‍ಗಳಲ್ಲಿ ಆಟೋಮ್ಯಾಟಿಕ್ ಹೆಡ್‍‍ಲ್ಯಾಂಪ್ಸ್, ರೈನ್ ಸೆಂಸಿಂಗ್ ವೈಪರ್ಸ್ ಮತ್ತು ರಿವರ್ಸ್ ಮಾರ್ಕಿಂಗ್ ಸೆನ್ಸಾರ್‍‍ಗಳನ್ನು ಒದಗಿಸಲಾಗಿದೆ.

ಮುಂದಿನ ವರ್ಷ ಬಿಡುಗಡೆಗೊಳ್ಳಲಿರುವ ಫೋರ್ಡ್ ಫಿಗೊ ಫೇಸ್‍‍ಲಿಫ್ಟ್ ಕಾರಿನ ವಿಶೇಷತೆ ಏನು.?

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಫೋರ್ಡ್ ಸಂಸ್ಥೆಯು ತಮ್ಮ ಅಪ್ಡೇಟೆಡ್ ಫಿಗೊ ಫೇಸ್‍‍ಲಿಫ್ಟ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ 2019ರ ಮಾರ್ಚ್ ತಿಂಗಳ ಅವಧಿಯಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಒಮ್ಮೆ ಮಾರುಕಟ್ಟೆಗೆ ಈ ಕಾರು ಲಗ್ಗೆಯಿಟ್ಟಲ್ಲಿ ಮಾರುತಿ ಸ್ವಿಫ್ಟ್, ಹ್ಯುಂಡೈ ಗ್ರ್ಯಾಂಡ್ ಐ10 ಮತ್ತು ಮಾರುತಿ ಸುಜುಕಿ ಇಗ್ನಿಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Kannada
Read more on ford figo new car
English summary
Ford Figo Facelift India Launch Details Revealed
Story first published: Saturday, October 6, 2018, 12:04 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more