ಹೊಸ ಮಾದರಿಯ ಫ್ರೀ ಸ್ಟೈಲ್ ಕಂಪ್ಯಾಕ್ಟ್ ಯುಟಿಲಿಟಿ ಕಾರು ಅನಾವರಣಗೊಳಿಸಿದ ಫೋರ್ಡ್

ಕಂಪ್ಯಾಕ್ಟ್ ಯುಟಿಲಿಟಿ ಕಾರು ಮಾದರಿಯೊಂದನ್ನು ಅಭಿವೃದ್ಧಿಗೊಳಿಸಿರುವ ಫೋರ್ಡ್ ಇಂಡಿಯಾ ಸಂಸ್ಥೆಯು, ಫಿಗೊ ಹ್ಯಾಚ್‌ಬ್ಯಾಕ್ ಫ್ಯಾಟ್ ಫಾರ್ಮ್ ಅಡಿಯಲ್ಲಿ ಹೊಸ ಕಾರನ್ನು ಅಭಿವೃದ್ಧಿಗೊಳಿಸುವ ಮೂಲಕ ಹೊಸ ಸಂಚಲಯ ಸೃಷ್ಠಿಸಲು ಸಜ್ಜುಗೊಳ್ಳುತ್ತಿದೆ.

By Praveen

ಭಾರತೀಯ ಮಾರುಕಟ್ಟೆಗಾಗಿ ಹೊಸ ನಮೂನೆಯ ಕಂಪ್ಯಾಕ್ಟ್ ಯುಟಿಲಿಟಿ ಕಾರು ಮಾದರಿಯೊಂದನ್ನು ಅಭಿವೃದ್ಧಿಗೊಳಿಸಿರುವ ಫೋರ್ಡ್ ಇಂಡಿಯಾ ಸಂಸ್ಥೆಯು, ಫಿಗೊ ಹ್ಯಾಚ್‌ಬ್ಯಾಕ್ ಫ್ಯಾಟ್ ಫಾರ್ಮ್ ಅಡಿಯಲ್ಲಿ ಹೊಸ ಕಾರನ್ನು ಅಭಿವೃದ್ಧಿಗೊಳಿಸುವ ಮೂಲಕ ಹೊಸ ಸಂಚಲಯ ಸೃಷ್ಠಿಸಲು ಸಜ್ಜುಗೊಳ್ಳುತ್ತಿದೆ.

ಹೊಸ ಮಾದರಿಯ ಫ್ರೀ ಸ್ಟೈಲ್ ಕಂಪ್ಯಾಕ್ಟ್ ಯುಟಿಲಿಟಿ ಕಾರು ಅನಾವರಣಗೊಳಿಸಿದ ಫೋರ್ಡ್

ವರ್ಷದ ಆರಂಭದಲ್ಲಿ ಮೂರು ಹೊಸ ಕಾರುಗಳ ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದ್ದ ಫೋರ್ಡ್ ಸಂಸ್ಥೆಯು ಇದೀಗ ಕಂಪ್ಯಾಕ್ಟ್ ಯುಟಿಲಿಟಿ ಫ್ರೀ ಸ್ಟೈಲ್ ಕಾರು ಮಾದರಿಯನ್ನು ಅನಾವರಣಗೊಳಿಸಿದ್ದು, ಇದೇ ವರ್ಷ ಏಪ್ರಿಲ್ ಅಥವಾ ಮೇ ಆರಂಭದಲ್ಲಿ ಹೊಸ ಕಾರು ಬಿಡುಗಡೆ ಮಾಡಲಿದೆ.

ಹೊಸ ಮಾದರಿಯ ಫ್ರೀ ಸ್ಟೈಲ್ ಕಂಪ್ಯಾಕ್ಟ್ ಯುಟಿಲಿಟಿ ಕಾರು ಅನಾವರಣಗೊಳಿಸಿದ ಫೋರ್ಡ್

ಹೊಸ ಕಾರು ಬಿಡುಗಡೆಗೂ ಮುನ್ನ ಫ್ರೀ ಸ್ಟೈಲ್ ಕಾರು ಮಾದರಿಯ ಬಗ್ಗೆ ಮಹತ್ವದ ಮಾಹಿತಿಗಳನ್ನು ಬಹಿರಂಗಗೊಳಿಸಿರುವ ಫೋರ್ಡ್ ಸಂಸ್ಥೆಯು ಹೊಸ ಕಾರಿನಲ್ಲಿ ಪವರ್ ಫುಲ್ ಎಂಜಿನ್ ಒದಗಿಸಿರುವುದು ಮತ್ತೊಂದು ವಿಶೇಷ.

ಹೊಸ ಮಾದರಿಯ ಫ್ರೀ ಸ್ಟೈಲ್ ಕಂಪ್ಯಾಕ್ಟ್ ಯುಟಿಲಿಟಿ ಕಾರು ಅನಾವರಣಗೊಳಿಸಿದ ಫೋರ್ಡ್

ಎಂಜಿನ್ ಸಾಮರ್ಥ್ಯ

1.2-ಲೀಟರ್ 3 ಸಿಲಿಂಡರಿನ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು, 1.2-ಲೀಟರ್ ಮಾದರಿಯಲ್ಲಿ 94.6 ಬಿಎಚ್‌ಪಿ, 120 ಎನ್ಎಂ ಟಾರ್ಕ್ ಹಾಗೂ 1.5-ಲೀಟರ್ ಮಾದರಿಯಲ್ಲಿ 99 ಬಿಎಚ್‌ಪಿ ಮತ್ತು 120 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಹೊಸ ಮಾದರಿಯ ಫ್ರೀ ಸ್ಟೈಲ್ ಕಂಪ್ಯಾಕ್ಟ್ ಯುಟಿಲಿಟಿ ಕಾರು ಅನಾವರಣಗೊಳಿಸಿದ ಫೋರ್ಡ್

ಬರಲಿರುವ ಎರಡು ಮಾದರಿಗಳಲ್ಲೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದ್ದು, ಫಿಗೊ ಹ್ಯಾಚ್‌ಬ್ಯಾಕ್‌ಗಿಂತಲೂ 15ಎಂಎಂ ನಷ್ಟು ಹೆಚ್ಚುವರಿ ಗ್ರೌಂಡ್ ಕ್ಲಿಯರೆನ್ಸ್(189 ಎಂಎಂ) ಪಡೆದುಕೊಂಡಿದೆ.

ಹೊಸ ಮಾದರಿಯ ಫ್ರೀ ಸ್ಟೈಲ್ ಕಂಪ್ಯಾಕ್ಟ್ ಯುಟಿಲಿಟಿ ಕಾರು ಅನಾವರಣಗೊಳಿಸಿದ ಫೋರ್ಡ್

ಈ ಮೂಲಕ ಸ್ಪೋಟಿ ಲುಕ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು ಹೆಕ್ಸಾಗೊನಲ್ ಹನಿಕೊಂಬೊ ಮಾದರಿಯ ಗ್ರಿಲ್ ಜೋಡಣೆಯು ಹೊಸ ಕಾರಿನ ಹೊರ ನೋಟವನ್ನು ಹೆಚ್ಚಿಸಿದ್ದು, ಹೊಸ ನಮೂನೆಯ ಬ್ಯಾನೆಟ್, ಬಂಪರ್, ಬ್ಲ್ಯಾಕ್ ಕ್ಲ್ಯಾಂಡಿಂಗ್, ಫಾಗ್ ಲ್ಯಾಂಪ್ಸ್ ನೀಡಲಾಗಿದೆ.

ಹೊಸ ಮಾದರಿಯ ಫ್ರೀ ಸ್ಟೈಲ್ ಕಂಪ್ಯಾಕ್ಟ್ ಯುಟಿಲಿಟಿ ಕಾರು ಅನಾವರಣಗೊಳಿಸಿದ ಫೋರ್ಡ್

ಇನ್ನು ಫ್ರೀ ಸ್ಟೈಲ್ ಕಾರುಗಳ ಹೊಸ ವಿನ್ಯಾಸಗಳ ಬಗ್ಗೆ ಮಾತನಾಡುವುದಾದರೇ 6.5 ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ ಹೊಂದಿರುವ ಹೊಸ ಕಾರುಗಳು ವಿನೂತನ ಡ್ಯಾಶ್ ಬೋರ್ಡ್, ಅಂಡ್ರಾಯಿಡ್ ಆಟೋ, ಆ್ಯಪಲ್ ಕಾರ್ ಪ್ಲೇ, ಫೋರ್ಡ್ ಸಿಂಕ್ 3 ಇನ್ಪೋಟೈನ್‌ಮೆಂಟ್ ಸೆಟ್ ಅಪ್ ಹೊಂದಿದೆ.

ಹೊಸ ಮಾದರಿಯ ಫ್ರೀ ಸ್ಟೈಲ್ ಕಂಪ್ಯಾಕ್ಟ್ ಯುಟಿಲಿಟಿ ಕಾರು ಅನಾವರಣಗೊಳಿಸಿದ ಫೋರ್ಡ್

ಬಿಡುಗಡೆಯ ದಿನಾಂಕ ಮತ್ತು ಬೆಲೆ

ಫ್ರೀಸ್ಟೈಲ್ ಕಾರನ್ನು ಇದೇ ವರ್ಷ ಏಪ್ರಿಲ್ ಅಥವಾ ಮೇ ಪ್ರಾರಂಭದಲ್ಲಿ ಬಿಡುಗಡೆ ಮಾಡಲು ಉದ್ದೇಶಿಸಿದ್ದು, ಹೊಸ ಕಾರಿನ ಬೆಲೆಗಳು ರೂ. 6 ಲಕ್ಷದಿಂದ 8..50 ಲಕ್ಷ ಇರಬಹುದೆಂದು ನೀರಿಕ್ಷಿಸಲಾಗಿದೆ.

Trending On DriveSpark Kannada:

ಅಲಾಯ್ ಚಕ್ರ V/s ಸ್ಪೋಕ್ ಚಕ್ರ- ಇವುಗಳಲ್ಲಿ ಯಾವುದು ಉತ್ತಮ?

ಮೆಸಾರಟಿ ಸೂಪರ್ ಕಾರು ಖರೀದಿಸಿದ ಗೋಲ್ ಮಾಲ್ ಖ್ಯಾತಿಯ ರೋಹಿತ್ ಶೆಟ್ಟಿ

Trending DriveSpark YouTube Videos

Subscribe To DriveSpark Kannada YouTube Channel - Click Here

Most Read Articles

Kannada
Read more on ford ಫೋರ್ಡ್
English summary
Ford Freestyle Unveiled — The Answer To India's Rugged Roads.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X