ಮೆಸಾರಟಿ ಸೂಪರ್ ಕಾರು ಖರೀದಿಸಿದ ಗೋಲ್ ಮಾಲ್ ಖ್ಯಾತಿಯ ರೋಹಿತ್ ಶೆಟ್ಟಿ

Written By:

ಬಾಲಿವುಡ್‌ ಚಿತ್ರರಂಗದಲ್ಲಿ ಹತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿ ಯಶಸ್ವಿಯಾಗಿರುವ ರೋಹಿತ್ ಶೆಟ್ಟಿ ಬಿ ಟೌನ್‌ನಲ್ಲಿ ತಮ್ಮದೇ ಜನಪ್ರಿಯತೆ ಹೊಂದಿದ್ದಾರೆ. ಕೇವಲ ಚಿತ್ರ ನಿರ್ದೇಶನ ಮಾತ್ರವಲ್ಲದೇ ಸೂಪರ್ ಕಾರುಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ರೋಹಿತ್ ಶೆಟ್ಟಿ ಅವರು ಮೊನ್ನೆಯಷ್ಟೇ ದುಬಾರಿ ಬೆಲೆಯ ಮೆಸಾರಟಿ ಮೆಸರಾಟಿ ಗ್ರ್ಯಾನ್ ಟ್ಯೂರಿಸ್ಮೋ ಸ್ಪೋರ್ಟ್ ಕಾರು ಖರೀದಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಮೆಸಾರಟಿ ಸೂಪರ್ ಕಾರು ಖರೀದಿಸಿದ ಗೋಲ್ ಮಾಲ್ ಖ್ಯಾತಿಯ ರೋಹಿತ್ ಶೆಟ್ಟಿ

ಮೂಲತಃ ಮಂಗಳೂರು ಮೂಲದವರಾದರೂ ಮುಂಬೈನಲ್ಲೇ ಹುಟ್ಟಿ ಬೆಳೆದಿರುವ ರೋಹಿತ್ ಶೆಟ್ಟಿ ಅವರು ತಂದೆ ಫೈಟರ್ ಶೆಟ್ಟಿ ಜನಪ್ರಿಯತೆಯೊಂದಿಗೆ ಬಾಲಿವುಡ್‌ಗೆ ಎಂಟ್ರಿ ನೀಡಿ, ಯಶಸ್ವಿ ನಿರ್ದೇಶಕ ಅಷ್ಟೇ ಅಲ್ಲದೇ ಅತ್ಯುತ್ತಮ ಛಾಯಾಚಿತ್ರಗ್ರಾಹಕರಾಗಿಯೂ ಜನಪ್ರಿಯತೆ ಸಾಧಿಸಿದ್ದಾರೆ.

ಮೆಸಾರಟಿ ಸೂಪರ್ ಕಾರು ಖರೀದಿಸಿದ ಗೋಲ್ ಮಾಲ್ ಖ್ಯಾತಿಯ ರೋಹಿತ್ ಶೆಟ್ಟಿ

ಹೀಗೇ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಚಿತ್ರ ನಿರ್ದೇಶಕ ರೋಹಿತ್ ಶೆಟ್ಟಿ, ಜಮೀನ್, ಸಿಂಘಂ, ಗೋಲ್ ಮಾಲ್ ಸೀರೀಸ್, ಸಿಂಘಂ ರಿಟರ್ನ್ ಚಿತ್ರಗಳ ಮೂಲಕ ಬಾಲಿವುಡ್‌ನಲ್ಲಿ ಮತ್ತಷ್ಟು ಜನಪ್ರಿಯತೆ ಗಳಿಸಿದ್ದಾರೆ.

ಮೆಸಾರಟಿ ಸೂಪರ್ ಕಾರು ಖರೀದಿಸಿದ ಗೋಲ್ ಮಾಲ್ ಖ್ಯಾತಿಯ ರೋಹಿತ್ ಶೆಟ್ಟಿ

ಅಜಯ್ ದೇವಗನ್ ಅಭಿನಯದ ಸಿಂಘಂ ರಿಟರ್ನ್ ಚಿತ್ರವೂ ಮೊದಲ ದಿನವೇ 32 ಕೋಟಿ ರೂಪಾಯಿ ಸಂಪಾದನೆ ಮಾಡಿ ಸಲ್ಮಾನ್ ಖಾನ್ ಅವರ ಅಭಿನಯದ ಕಿಕ್ ಚಿತ್ರದ ದಾಖಲೆಯನ್ನು ಮುರಿದಿದ್ದ ರೋಹಿತ್ ಶೆಟ್ಟಿ, ಶಾರುಖ್ ಮತ್ತು ದೀಪಿಕಾ ಅಭಿನಯದ ಚೆನ್ನೈ ಎಕ್ಷ್‌ಪ್ರೆಸ್ ಚಿತ್ರವೂ ಬ್ಲಾಕ್ ಬಾಸ್ಟರ್ ಆಗಿ ಗಲ್ಲಾ ಪೆಟ್ಟಿಗೆ ತುಂಬಿಸಿದ್ದರು.

ಮೆಸಾರಟಿ ಸೂಪರ್ ಕಾರು ಖರೀದಿಸಿದ ಗೋಲ್ ಮಾಲ್ ಖ್ಯಾತಿಯ ರೋಹಿತ್ ಶೆಟ್ಟಿ

ಈ ಮೂಲಕ ಯಶಸ್ವಿ ನಿರ್ದೇಶಕರಾಗಿರುವ ರೋಹಿತ್ ಶೆಟ್ಟಿ ಸದ್ಯ ಮತ್ತೊಂದು ಚಿತ್ರದಲ್ಲಿ ಬ್ಯುಸಿಯಾಗಿದ್ದು, ಬಿಡುವಿನ ವೇಳೆ ತಮ್ಮ ನೆಚ್ಚಿನ ಐಷಾರಾಮಿ ಕಾರುಗಳ ಸಂಗ್ರಹದತ್ತ ಕಣ್ಣುಹರಿಸಿದ್ದಾರೆ.

Trending On DriveSpark Kannada:

ವೇಗದ ಚಾಲನೆಯಲ್ಲಿದ್ದಾಗ ಪಂಚರ್- ಮೂರು ಬಾರಿ ಪಲ್ಟಿ ಹೊಡೆದ ಟಾಟಾ ನೆಕ್ಸಾನ್

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಕಾರಿಗೆ ಅಡ್ಡ ಬಂದ ಬಾಲಕಿ- ದುರಂತ ತಪ್ಪಿಸಲು ಹೋದ ನಿಸ್ಸಾನ್ ಜಿಟಿ ಆರ್ ಸೂಪರ್ ಕಾರು ಪೀಸ್ ಪೀಸ್

ಮೆಸಾರಟಿ ಸೂಪರ್ ಕಾರು ಖರೀದಿಸಿದ ಗೋಲ್ ಮಾಲ್ ಖ್ಯಾತಿಯ ರೋಹಿತ್ ಶೆಟ್ಟಿ

ಈ ಬಾರಿ ಅವರ ನೆಚ್ಚಿನ ಮೆಸರಾಟಿ ಗ್ರ್ಯಾನ್ ಟ್ಯೂರಿಸ್ಮೋ ಸ್ಪೋರ್ಟ್ ಕಾರನ್ನು ಖರೀದಿಸಿದ್ದು, ಐಷಾರಾಮಿ ಸೌಲಭ್ಯಗಳ ಜೊತೆ ಸುಧಾರಿತ ತಂತ್ರಜ್ಞಾನ ಸೌಲಭ್ಯ ಹೊಂದಿರುವ ಹೊಸ ಕಾರು ಬರೋಬ್ಬರಿ 2.70 ಕೋಟಿ(ಎಕ್ಸ್ ಶೋರಂ) ಬೆಲೆ ಹೊಂದಿದೆ.

ಮೆಸಾರಟಿ ಸೂಪರ್ ಕಾರು ಖರೀದಿಸಿದ ಗೋಲ್ ಮಾಲ್ ಖ್ಯಾತಿಯ ರೋಹಿತ್ ಶೆಟ್ಟಿ

ಎಂಜಿನ್ ಸಾಮರ್ಥ್ಯ

ಸ್ಪೋಟ್ ವೈಶಿಷ್ಟ್ಯತೆಗಳನ್ನು ಹೊಂದಿರುವ ಮೆಸರಾಟಿ ಗ್ರ್ಯಾನ್ ಟ್ಯೂರಿಸ್ಮೋ ಕಾರುಗಳು 4.7-ಲೀಟರ್ ವಿ8 ಪೆಟ್ರೋಲ್ ಎಂಜಿನ್ ಹೊಂದಿದ್ದು, ಕೇವಲ 4.7 ಸೇಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿಮಿ ವೇಗ ಪಡೆದುಕೊಳ್ಳಬಲ್ಲವು.

ಮೆಸಾರಟಿ ಸೂಪರ್ ಕಾರು ಖರೀದಿಸಿದ ಗೋಲ್ ಮಾಲ್ ಖ್ಯಾತಿಯ ರೋಹಿತ್ ಶೆಟ್ಟಿ

ಇದಲ್ಲದೇ ಪ್ರತಿ ಗಂಟೆ 302 ಕಿಮಿ ಸಾಗಬಲ್ಲ ಗುಣಹೊಂದಿರುವ ಮೆಸರಾಟಿ ಗ್ರ್ಯಾನ್ ಟ್ಯೂರಿಸ್ಮೋ, ಟು ಡೋರ್ ಸೌಲಭ್ಯದೊಂದಿಗೆ ಕೂಪೆ ಮಾದರಿಯೊಂದಿಗೆ ಅಭಿವೃದ್ಧಿಗೊಂಡಿರುವುದು ಸೂಪರ್ ಕಾರು ಪ್ರಿಯರ ಹಾಟ್ ಫೆವರೀಟ್ ಆಗಿ ಹೊರಹೊಮ್ಮಿದೆ.

ಮೆಸಾರಟಿ ಸೂಪರ್ ಕಾರು ಖರೀದಿಸಿದ ಗೋಲ್ ಮಾಲ್ ಖ್ಯಾತಿಯ ರೋಹಿತ್ ಶೆಟ್ಟಿ

ನಿರ್ದೇಶಕ ರೋಹಿತ್ ಶೆಟ್ಟಿ ಬಳಿ ಕೇವಲ ಮೆಸರಾಟಿ ಗ್ರ್ಯಾನ್ ಟ್ಯೂರಿಸ್ಮೋ ಅಲ್ಲದೇ ದುಬಾರಿ ಬೆಲೆಯ ಫೋರ್ಡ್ ಮಸ್ಟಾಂಗ್, ರೇಂಜ್ ರೋವರ್ ಸ್ಪೋರ್ಟ್, ಮರ್ಸಿಡಿಸ್ ಬೆಂಝ್ ಜಿಎಲ್-ಕ್ಲಾಸ್ ಎಸ್‌ಯುವಿ ಕೂಡಾ ಐಷಾರಾಮಿ ಕಾರು ಸಂಗ್ರಹದಲ್ಲಿ ಸ್ಥಾನ ಪಡೆದಿವೆ.

Trending DriveSpark YouTube Videos

Subscribe To DriveSpark Kannada YouTube Channel - Click Here

Read more on celebrity car maserati
English summary
Bollywood director Rohit Shetty buys swanky Maserati GranTurismo Sport.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark