ವೇಗದ ಚಾಲನೆಯಲ್ಲಿದ್ದಾಗ ಪಂಚರ್- ಮೂರು ಬಾರಿ ಪಲ್ಟಿ ಹೊಡೆದ ಟಾಟಾ ನೆಕ್ಸಾನ್
ಗೋವಾ ಪ್ರವಾಸಕ್ಕೆ ಹೊರಟಿದ್ದ ಟಾಟಾ ನೆಕ್ಸಾನ್ ಎಸ್‌ಯುವಿ ಕಾರೊಂದು ವೇಗದ ಚಾಲನೆಯಲ್ಲಿದ್ದಾಗ ಪಂಚರ್ ಆಗಿದ್ದು, ಪರಿಣಾಮ ನಿಯಂತ್ರಣ ತಪ್ಪಿದ ಕಾರು ಬರೋಬ್ಬರಿ ಮೂರು ಬಾರಿ ಪಲ್ಟಿ ಹೊಡೆದಿರುವ ಘಟನೆ ವಾಸ್ಕೋ ಬಳಿ ನಡೆದಿದೆ.
Recommended Video

ಗೋವಾ ಪ್ರವಾಸಕ್ಕೆ ಹೊರಟಿದ್ದ ಟಾಟಾ ನೆಕ್ಸಾನ್ ಎಸ್‌ಯುವಿ ಕಾರೊಂದು ವೇಗದ ಚಾಲನೆಯಲ್ಲಿದ್ದಾಗ ಪಂಚರ್ ಆಗಿದ್ದು, ಪರಿಣಾಮ ನಿಯಂತ್ರಣ ತಪ್ಪಿದ ಕಾರು ಬರೋಬ್ಬರಿ ಮೂರು ಬಾರಿ ಪಲ್ಟಿ ಹೊಡೆದಿರುವ ಘಟನೆ ವಾಸ್ಕೋ ಬಳಿ ನಡೆದಿದೆ.

ಅಪಘಾತದಲ್ಲಿ ಟಾಟಾ ನೆಕ್ಸನ್ ಕಾರು ಸಂಪೂರ್ಣ ಜಖಂಗೊಂಡಿದ್ದರು ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂಬುವುದೇ ಸಮಾಧಾನಕರ ಸಂಗತಿ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿವರವನ್ನು ಹಂಚಿಕೊಂಡಿರುವ ಕಾರು ಮಾಲೀಕರಾದ ಶ್ರೀಜಿತ್ ಅವರು, ಕಡಿದಾದ ಮಾರ್ಗದಲ್ಲಿ ಚಲಿಸುವಾಗ ಇದ್ದಕ್ಕಿದ್ದಂತೆ ಕಾರು ಪಂಚರ್ ಆಗಿದ್ದು, ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎಂದಿದ್ದಾರೆ.

ಆದ್ರೆ ಟಾಟಾ ಮೋಟಾರ್ಸ್ ನಿರ್ಮಾಣದ ನೆಕ್ಸಾನ್ ಕಾರುಗಳಲ್ಲಿನ ಸುರಕ್ಷತೆಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಶ್ರೀಜಿತ್, ನೆಕ್ಸಾನ್ ಕಾರಿನಲ್ಲಿ ನೀಡಲಾಗಿರುವ ಅತ್ಯತ್ತಮ ಸುರಕ್ಷಾ ಸಾಧನಗಳು ಮತ್ತು ಗಟ್ಟಿಮುಟ್ಟಾದ ಕವಚ ನಿರ್ಮಾಣವೇ ನನ್ನ ಜೀವ ಉಳಿಯಲು ಕಾರಣ ಎಂದಿದ್ದಾರೆ.

ಕಾರು ಮಾಲೀಕ ಶ್ರೀಜಿತ್ ಮುಂಬೈ ಮೂಲದವರು ಎಂಬ ಮಾಹಿತಿಯಿದ್ದು, ಇವರ ಜೊತೆ ಪತ್ನಿ ಹಾಗೂ ಮಗಳು ಪ್ರವಾಸಕ್ಕಾಗಿ ಗೋವಾಕ್ಕೆ ತೆರಳಿದ್ದಾಗ ಈ ಅವಘಡ ನಡೆದಿದೆ.

ಇನ್ನು ಅಪಘಾತದಲ್ಲಿ ಕಾರಿ ಎಲ್ಲ ಏರ್‌ಬ್ಯಾಗ್‌ಗಳು ಸರಿಯಾದ ಸಮಯಕ್ಕೆ ಕಾರ್ಯನಿರ್ವಹಣೆಯಾಗಿದ್ದು, ಕಾರಿನ ಹಿಂಭಾಗವು ಸಂಪೂರ್ಣ ಜಖಂಗೊಂಡಿದ್ದರು ಕಾರಿನಲ್ಲಿದ್ದ ಮೂವರಿಗೂ ಯಾವುದೇ ರೀತಿಯ ತೊಂದರೆ ಆಗಿಲ್ಲ ಎನ್ನುವುದೇ ಗಮನಿಸಬೇಕಾದ ಅಂಶವಾಗಿದೆ.

ಕಳೆದ ಸೆಪ್ಟಂಬರ್‌ನಲ್ಲಿ ಟಾಟಾ ನೆಕ್ಸಾನ್ ಕಾರುಗಳು ಭಾರತದಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದ್ದು, ಕೈಗೆಟುವ ದರಗಳಲ್ಲಿ ಅತ್ಯುತ್ತಮ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲಿ ನೆಕ್ಸನ್ ಆವೃತ್ತಿಗಳು ಉತ್ತಮ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ.

ಹೀಗಾಗಿ ಗ್ರಾಹಕರ ನೀಡುವ ದರಗಳಿಗೆ ಟಾಟಾ ನೆಕ್ಸಾನ್ ಕಾರುಗಳು ಉತ್ತಮ ಮಾದರಿಯಾಗಿದ್ದು, ಅಪಘಾತಗಳ ಸಂದರ್ಭದಲ್ಲಿ ನಿರ್ದಿಷ್ಟ ಮಟ್ಟದ ಸುರಕ್ಷೆ ನೀಡುವಲ್ಲಿ ಟಾಟಾ ಕಾರುಗಳು ಉತ್ತಮ ಭರವಸೆ ಹೊಂದಿವೆ ಅಂದರೇ ತಪ್ಪಾಗಲಾರದು.
ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ತಮ್ಮಿಷ್ಟದ ವಾಹನಗಳನ್ನು ಖರೀದಿ ಮಾಡಬೇಕೆಂಬ ಹೆಬ್ಬಯಿಕೆ ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತೆ. ಆದ್ರೆ ನಾವು ಖರೀದಿ ಮಾಡುವ ವಾಹನಗಳು ಎಷ್ಟರ ಮಟ್ಟಿಗೆ ರೀ ಸೇಲ್ ಮೌಲ್ಯವನ್ನು ಹೊಂದಿವೆ ಎಂಬುವುದರ ಮೇಲೆ ಅದರ ಜನಪ್ರಿಯತೆ ಹೆಚ್ಚಿರುತ್ತದೆ. ಒಂದು ವೇಳೆ ನೀವು ಕೂಡಾ ಕಾರುಗಳನ್ನು ಖರೀದಿ ಮಾಡುವ ಯೋಜನೆಯಲ್ಲಿದ್ದರೇ ಈ ಕೆಳಗಿನ ಕಾರುಗಳ ಖರೀದಿ ಮುನ್ನ ಸ್ವಲ್ಪ ಯೋಚನೆ ಮಾಡಿ.

ಭಾರತೀಯ ವಾಹನ ಉದ್ಯಮವು ಕಾಲಕ್ಕೆ ತಕ್ಕಂತೆ ಹಲವಾರು ಬದಲಾವಣೆಗಳಿಗೆ ಕಂಡುಕೊಳ್ಳುತ್ತಲೇ ಹೊಸತನಕ್ಕೆ ಸಾಕ್ಷಿ ಆಗುತ್ತಿರುತ್ತದೆ. ಈ ನಡುವೆ ಮಾರುಕಟ್ಟೆಗೆ ಪರಿಚಯಿಸಲಾಗುವ ವಾಹನಗಳು ಕೇವಲ ಸಲ ಭಾರೀ ಜನಪ್ರಿಯತೆ ಗಳಿಸಿದ್ರೆ ಕೆಲ ಸಲ ಭಾರೀ ಹಿನ್ನಡೆಯನ್ನು ಕೂಡಾ ಅನುಭವಿಸುತ್ತವೆ. ಇದೇ ಕಾರಣಕ್ಕೆ ಈ ಕೆಳಗೆ ನೀಡಲಾಗಿರುವ ಕಾರುಗಳು ಅತ್ಯುತ್ತಮ ರೀ ಸೇಲ್ ಮೌಲ್ಯವನ್ನು ಹೊಂದಲು ವಿಫಲವಾಗಿವೆ.

ಫಿಯೆಟ್ ಪುಂಟೋ
ಹ್ಯಾಚ್‌ಬ್ಯಾಕ್ ಕಾರುಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಸಾಧಿಸಿದ ಪುಂಟೋ ಕಾರುಗಳು ಕೆಲವೇ ದಿನಗಳಲ್ಲೇ ಮಾರುಕಟ್ಟೆಯಲ್ಲಿ ಗಣನೀಯ ಮಟ್ಟದಲ್ಲಿ ಮಾರಾಟ ಹಿನ್ನಡೆ ಅನುಭವಿಸಿದವು. ಇದಕ್ಕೆ ಕಾರಣ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಲಗ್ಗೆ ಕೊಟ್ಟಿತ್ತಾದರೂ ಮೈಲೇಜ್ ವಿಚಾರಕ್ಕೆ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಯ್ತು.

ಫಿಯೆಟ್ ಲೆನಿಯಾ
ಕಂಪ್ಯಾಕ್ಟ್ ಸೆಡಾನ್ ಆವೃತ್ತಿಗಳಲ್ಲಿ ಈಗಲೂ ಮಾರಾಟಕ್ಕೆ ಲಭ್ಯವಿರುವ ಫಿಯೆಟ್ ಲೆನಿಯಾ ಆವೃತ್ತಿಗಳು ಉತ್ತಮ ರೀತಿಯ ರೀ ಸೇಲ್ ಮೌಲ್ಯವನ್ನು ಹೊಂದುವಲ್ಲಿ ವಿಫಲವಾಗಿವೆ. ಇದಕ್ಕೆ ಕಾರಣ ಗುಣಮಟ್ಟವಿಲ್ಲದ ಸುರಕ್ಷಾ ವಿಧಾನಗಳು ಮತ್ತು ವಿಳಂಬವಾಗುವ ಗ್ರಾಹಕರ ಸೇವೆಗಳು ಕಾರು ಮಾರಾಟಕ್ಕೆ ಹಿನ್ನಡೆಯಾಗಿದೆ.

ಟಾಟಾ ನ್ಯಾನೋ
ಅಗ್ಗದ ಬೆಲೆಯಲ್ಲಿ ಕಾರು ಖರೀದಿ ಮಾಡುವ ಗ್ರಾಹಕರ ನೆಚ್ಚಿನ ಆಯ್ಕೆಯಾಗಿರುವ ಟಾಟಾ ನ್ಯಾನೋ ರೀ ಸೇಲ್ ವ್ಯಾಲ್ಯೂ ಹೊಂದಿಲ್ಲ ಎಂಬುವುದು ಅಷ್ಟೇ ಸತ್ಯ. ಇದಕ್ಕೆ ಹಲವಾರು ಕಾರಣಗಳಿದ್ದು, ವಿನ್ಯಾಸ, ಸುರಕ್ಷಾ ವಿಚಾರಗಳು ನ್ಯಾನೋ ಮಾರಾಟಕ್ಕೆ ಹಿನ್ನೆಡೆಯಾಗಿದೆ.

ಟಾಟಾ ಬೊಲ್ಟ್
ಬೊಲ್ಟ್ ಕಾರು ಇಂಡಿಕಾ ವಿಸ್ಟಾ ಕಾರಿನ ಬೇರೆ ಆಯಾಮದ ಕಾರು ಎನ್ನಬಹುದು. ವಿಸ್ಟಾ ಕಾರಿಗಿಂತ ಈ ಕಾರಿನ ಒಳಾಂಗಣವು ಉತ್ತಮ ಗುಣಮಟ್ಟದಾಗಿತ್ತು. ಬೋಲ್ಟ್ ಸಹ ಎಬಿಎಸ್ ಮತ್ತು ಏರ್‌ಬ್ಯಾಗ್ ಸೌಲಭ್ಯ ಪಡೆದುಕೊಂಡಿದೆ.

ಆದರೂ ಮಾರುಕಟ್ಟೆಯಲ್ಲಿ ಈ ಕಾರುಗೆ ಹೆಚ್ಚಿನ ಮನ್ನಣೆ ಸಿಗಲಿಲ್ಲ. ವೈಯಕ್ತಿಕವಾಗಿ ಹ್ಯಾಚ್‌ಬ್ಯಾಕ್ ಕೊಳ್ಳುವವರು ಈ ಕಾರನ್ನು ಮರೆತುಬಿಟ್ಟಿದ್ದಾರೆ ಎನ್ನಬಹುದು.

ದಟ್ಸನ್ ಗೋ
ಈ ಹಿಂದೆ ಕಡಿಮೆ ಬೆಲೆಗಳ ಮೂಲಕ ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲಿ ಮುಂಚೂಣಿ ಸಾಧಿಸಿದ್ದ ದಟ್ಸನ್ ಕಾರುಗಳು ಕೂಡಾ ಇತ್ತೀಚೆಗೆ ಕಾರು ಖರೀದಿ ಮಾಡುವರೇ ಇಲ್ಲದಂತಾಗಿದೆ. ಕಾರಣ, ನೋಡಲು ಅಷ್ಚೇನು ಆಕರ್ಷಕವಲ್ಲದ ದಟ್ಸನ್ ಕಾರುಗಳು ಸುರಕ್ಷತೆ ನೀಡುವಲ್ಲಿ ಕೂಡಾ ವಿಫಲವಾಗಿವೆ.

ನಿಸ್ಸಾನ್ ಟೆರಾನೋ
ಎಸ್‌ಯುವಿ ಮಾದರಿಗಳಲ್ಲಿ ಮುಂಚೂಣಿ ಸಾಧಿಸಬೇಕಿದ್ದ ಟೆರಾನೋ ಕಾರುಗಳು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮಾರಾಟ ಹಿನ್ನೆಡೆ ಅನುಭವಿಸಿದವು. ಇದಕ್ಕೆ ಕಾರಣ ಗುಣಮಟ್ಟದ ಸೌಲಭ್ಯಗಳನ್ನು ಹೊಂದಿದ್ದರು ಕಾರಿನ ವಿನ್ಯಾಸಗಳು ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿವೆ ಎನ್ನಬಹುದು.

ಮಹೀಂದ್ರಾ ನೊವಾ ಸ್ಪೋರ್ಟ್
ಕ್ವಾಂಟೊ ಮಾರಾಟಕ್ಕೆ ಗುಡ್ ಬೈ ಹೇಳಿ ಗ್ರಾಹಕರ ಬೇಡಿಕೆಯತ್ತ ಗಮನಹರಿಸಿದ್ದ ಮಹೀಂದ್ರಾ ಸಂಸ್ಥೆಯು ನೊವಾ ಸ್ಪೋರ್ಟ್ ಪರಿಚಯಿಸಿತ್ತು. ಆದ್ರೆ ಮಾರುಕಟ್ಟೆಯಲ್ಲಿನ ಸರ್ವಕಾಲಿಕ ಬದಲಾವಣೆಗಳು ನೋವಾ ಸ್ಪೋರ್ಟ್ ಮಾರಾಟಕ್ಕೆ ತೀವ್ರ ಹೊಡೆತ ನೀಡಿದ್ದವು.

ರೆನಾಲ್ಟ್ ಲೊಡ್ಜಿ
7 ಸೀಟರ್ ಎಸ್‌ಯುವಿಗಳಲ್ಲಿ ಅತಿಹೆಚ್ಚು ಮಾರಾಟ ದಾಖಲಿಸಬೇಕಾಗಿದ್ದ ರೆನಾಲ್ಟ್ ಲೊಡ್ಜಿ ಒಂದೇ ಒಂದು ಕಾರಣಕ್ಕೆ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿದ್ದು ಮಾತ್ರ ದುರಂತ.

ರೆನಾಲ್ಟ್ ಲೊಡ್ಜಿ ಕಾರು ಅತ್ಯುತ್ತಮ ಇಂಧನ ಕಾರ್ಯಕ್ಷಮತೆ ಮತ್ತು ಪ್ರಯಾಣಿಕರಿಗೆ ಅನೂಕರವಾದ ಸೌಲಭ್ಯಗಳಿದ್ದರು ಕಾರಿನ ಔಟ್ ಲುಕ್‌ನಲ್ಲಿ ಮುಗ್ಗರಿಸಿತ್ತು. ಇದೇ ಕಾರಣಕ್ಕೆ ಉತ್ತಮ ಕಾರು ಮಾದರಿಯಾದರೂ ಗ್ರಾಹಕರಿಂದ ತಿರಸ್ಕಾರವಾಗಿದೆ.

ಮಹೀಂದ್ರಾ ವೆರಿಟೋ ವೈಬ್
ಮಹೀಂದ್ರಾ ನಿರ್ಮಾಣದ ವೆರಿಟೋ ವೈಬ್ ಹಲವು ಕಾರಣಗಳಿಗೆ ರೀ ಸೇಲ್ ಮೌಲ್ಯವನ್ನು ಕಳೆದುಕೊಂಡಿದೆ. ನೋಡಲು ಆಕರ್ಷಕವಾಗಿದ್ದರು ಇಂಧನ ಕಾರ್ಯಕ್ಷಮತೆ ಮತ್ತು ಗ್ರಾಹಕರ ಸ್ನೇಹಿ ಸೌಲಭ್ಯಗಳಿಲ್ಲದಿರುವುದು ಕಾರಿನ ಮೌಲ್ಯಕ್ಕೆ ಹೊಡೆತ ನೀಡಿದೆ.

ಹೋಂಡಾ ಬ್ರಿಯೋ
ಬ್ರಿಯೋ ಕಾರನ್ನು ಪರಿಚಯಿಸುವ ಮೂಲಕ ವಿನೂತನ ಮಾದರಿಯನ್ನು ಮಾರುಕಟ್ಟೆಗೆ ತಂದಿದ್ದ ಹೋಂಡಾ ಸಂಸ್ಥೆಯು ವಿಶೇಷವಾಗಿ ಭಾರತೀಯ ಗ್ರಾಹಕರನ್ನೇ ಗುರಿಯಾಗಿಸಿಕೊಂಡು ಈ ಕಾರನ್ನು ಸಿದ್ದಪಡಿಸಿತ್ತು. ಆದ್ರೆ ಸುರಕ್ಷಾ ವಿಧಾನಗಳು ಮತ್ತು ಚಾಲನಾ ವೈಖರಿಯು ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿವೆ.

ಟಾಟಾ ಸಫಾರಿ ಸ್ಟಾರ್ಮ್
ಬೃಹತ್ ಗಾತ್ರದ ಎಸ್‌ಯುವಿ ಉತ್ತಮ ಬೇಡಿಕೆ ಹೊಂದಿದ್ದ ಟಾಟಾ ಸಫಾರಿ ಸ್ಟಾರ್ಮ್ ಬಿಡುಗಡೆ ಕೆಲವೇ ವರ್ಷಗಳಲ್ಲಿ ಭಾರೀ ಪ್ರಮಾಣದ ನಷ್ಟ ಅನುಭವಿಸಿದೆ. ಇದಕ್ಕೆ ಕಾರಣ ಸಣ್ಣ ಗಾತ್ರದ ಎಸ್‌ಯುವಿಗಳು ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಸಫಾರಿ ಮಾರಾಟದ ಮೇಲೆ ಹೊಡೆತ ಕೊಟ್ಟಿವೆ ಎನ್ನಬಹುದು.


Click it and Unblock the Notifications








