2018ರ ಸಿವಿಕ್ ಕಾರಿನ ಬಿಡುಗಡೆಗೂ ಮುನ್ನ ಸಿವಿಕ್ ಫೇಸ್‌ಲಿಫ್ಟ್ ಅನಾವರಣ

By Praveen Sannamani

ಹೋಂಡಾ ಸಂಸ್ಥೆಯು ಇದೇ ವರ್ಷದ ಕೊನೆಯಲ್ಲಿ ತನ್ನ ಬಹುನೀರಿಕ್ಷಿತ ನ್ಯೂ ಜನರೇಷನ್ ಸಿವಿಕ್ ಸೆಡಾನ್ ಕಾರುಗಳನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸುತ್ತಿದ್ದು, ಈ ಮಧ್ಯೆ ಹತ್ತನೇ ತಲೆಮಾರಿನ ವೈಶಿಷ್ಟ್ಯತೆಯುಳ್ಳ ಸಿವಿಕ್ ಫೇಸ್‌ಲಿಫ್ಟ್ ಕಾರುಗಳನ್ನ ಅನಾವರಣಗೊಳಿಸಲಾಗಿದೆ.

2018ರ ಸಿವಿಕ್ ಕಾರಿನ ಬಿಡುಗಡೆಗೂ ಮುನ್ನ ಸಿವಿಕ್ ಫೇಸ್‌ಲಿಫ್ಟ್ ಅನಾವರಣ

ಹೋಂಡಾ ಸಂಸ್ಥೆಯು ಈ ಹಿಂದೆ ಸಿವಿಕ್ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸುವ ಮೂಲಕ ಹೊಸ ವಿನ್ಯಾಸದ ಸಿವಿಕ್ ಕಾರುಗಳ ಬಿಡುಗಡೆಯ ಸುಳಿವು ನೀಡಿತ್ತು. ಅಂತೆಯೇ ಕಳೆದ ಫೆಬ್ರುವರಿಯಲ್ಲಿ ನಡೆದಿದ್ದ 2018ರ ಆಟೋ ಎಕ್ಸ್‌ಪೋದಲ್ಲಿ ಹೊಸ ಸಿವಿಕ್ ಕಾರುಗಳನ್ನ ಅನಾವರಣ ಮಾಡಿತ್ತು. ಇದೀಗ 2018ರ ಸಿವಿಕ್ ಬಿಡುಗಡೆಗೂ ಮುನ್ನ ಸಿವಿಕ್ ಫೇಸ್‌ಲಿಫ್ಟ್ ಕಾರುಗಳನ್ನು ಅನಾವರಣಗೊಳಿಸಿರುವುದಲ್ಲದೇ 2019ರ ಆರಂಭದಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿದೆ.

2018ರ ಸಿವಿಕ್ ಕಾರಿನ ಬಿಡುಗಡೆಗೂ ಮುನ್ನ ಸಿವಿಕ್ ಫೇಸ್‌ಲಿಫ್ಟ್ ಅನಾವರಣ

ಸ್ಪೋರ್ಟಿ ಲುಕ್‌ನೊಂದಿಗೆ ಮಿಂಚಲಲಿರುವ ಸಿವಿಕ್ ಫೇಸ್‌ಲಿಫ್ಟ್ ಕಾರುಗಳಲ್ಲಿ ಹೊಸ ವಿನ್ಯಾಸದ ಗ್ರಿಲ್, ಎಲ್ಇಡಿ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್, ಆಂಗ್ಯುಲರ್ ಬಂಪರ್, ಕ್ರೋಮ್ ಅಸೆಟ್ಸ್ ಮತ್ತು ಎಲ್ಇಡಿ ಡಿಆರ್‌ಎಸ್ ಸೌಲಭ್ಯ ಹೊಂದಿದೆ.

2018ರ ಸಿವಿಕ್ ಕಾರಿನ ಬಿಡುಗಡೆಗೂ ಮುನ್ನ ಸಿವಿಕ್ ಫೇಸ್‌ಲಿಫ್ಟ್ ಅನಾವರಣ

10ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಸಿವಿಕ್ ಫೇಸ್‌ಲಿಫ್ಟ್ ಕಾರುಗಳನ್ನು ಅಭಿವೃದ್ಧಿ ಮಾಡಲಾಗಿದ್ದು, ವಿದೇಶಿ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಲಭ್ಯವಿರುವ ಸಿವಿಕ್ ಕಾರು ಮಾದರಿಗಳಿಂತಲೂ ಹೆಚ್ಚಿನ ಮಟ್ಟದ ಸಿವಿಕ್ ಆವೃತ್ತಿಗಳನ್ನು ಹೊರತರುವ ಸುಳಿವು ನೀಡಿದೆ.

2018ರ ಸಿವಿಕ್ ಕಾರಿನ ಬಿಡುಗಡೆಗೂ ಮುನ್ನ ಸಿವಿಕ್ ಫೇಸ್‌ಲಿಫ್ಟ್ ಅನಾವರಣ

ಮಾಹಿತಿಗಳ ಪ್ರಕಾರ, ಭಾರತೀಯ ಸಿವಿಕ್ ಮಾದರಿಗಳು 2.0-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1. 6- ಡೀಸೆಲ್ ಎಂಜಿನ್ ಹೊಂದಿರಲಿದ್ದು, ಪೆಟ್ರೋಲ್ ವರ್ಷನ್ 154 ಬಿಎಚ್‌ಪಿ, 187 ಎನ್ಎಂ ಟಾರ್ಕ್ ಮತ್ತು ಡೀಸೆಲ್ ವರ್ಷನ್ 118 ಬಿಎಚ್‌ಪಿ, 300 ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

2018ರ ಸಿವಿಕ್ ಕಾರಿನ ಬಿಡುಗಡೆಗೂ ಮುನ್ನ ಸಿವಿಕ್ ಫೇಸ್‌ಲಿಫ್ಟ್ ಅನಾವರಣ

ಜೊತೆಗೆ 10ನೇ ಜನರೇಷನ್ ವೈಶಿಷ್ಟ್ಯತೆ ಹೊಂದಿರುವ ಸಿವಿಕ್ ಕಾರುಗಳಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ವಿಭಾಗದಲ್ಲಿ 6-ಸ್ಪೀಡ್ ಮತ್ತು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಗಳು ಆಯ್ಕೆ ಮಾಡಬಹುದಾಗಿದ್ದು, ಎಲ್ಇಡಿ ಟೈಲ್ ಲೈಟ್ಸ್, ಡ್ಯುಯಲ್ ಟೋನ್ ಇಂಟಿರಿಯರ್, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಇರಲಿದೆ.

2018ರ ಸಿವಿಕ್ ಕಾರಿನ ಬಿಡುಗಡೆಗೂ ಮುನ್ನ ಸಿವಿಕ್ ಫೇಸ್‌ಲಿಫ್ಟ್ ಅನಾವರಣ

ಇನ್ನು ಹೊಸ ಕಾರುಗಳಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಎಬಿಎಸ್, ಇಬಿಡಿ, ಲಾರ್ಜ್ ಕ್ರೋಮ್ ಗ್ರಿಲ್, ಅಲಾಯ್ ಚಕ್ರಗಳು ಮತ್ತು 8 ಏರ್ ಬ್ಯಾಗ್ ವ್ಯವಸ್ಥೆ ಇರುವುದು ಸೆಡಾನ್ ಪ್ರಿಯರ ಆಯ್ಕೆಗೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಲಿದೆ.

2018ರ ಸಿವಿಕ್ ಕಾರಿನ ಬಿಡುಗಡೆಗೂ ಮುನ್ನ ಸಿವಿಕ್ ಫೇಸ್‌ಲಿಫ್ಟ್ ಅನಾವರಣ

ಹೀಗಾಗಿ ಹೊಸ ಕಾರಿನ ಬೆಲೆಯು ದೆಹೆಲಿ ಎಕ್ಸ್ ಶೋರಂ ಪ್ರಕಾರ 22 ಲಕ್ಷದಿಂದ 28 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, 2018ರ ಸಿವಿಕ್ ಕಾರುಗಳ ಬಿಡುಗಡೆಯ ನಂತರವಷ್ಟೇ ಸಿವಿಕ್ ಫೇಸ್‌ಲಿಫ್ಟ್ ವರ್ಷನ್‌ಗಳು ಖರೀದಿಗೆ ಲಭ್ಯವಾಗಲಿವೆ.

2018ರ ಸಿವಿಕ್ ಕಾರಿನ ಬಿಡುಗಡೆಗೂ ಮುನ್ನ ಸಿವಿಕ್ ಫೇಸ್‌ಲಿಫ್ಟ್ ಅನಾವರಣ

ಇದರೊಂದಿಗೆ ಮಧ್ಯಮ ಕ್ರಮಾಂಕದ ಸೆಡಾನ್ ಆವೃತ್ತಿಗಳಾದ ಟಯೊಟಾ ಕರೊಲ್ಲಾ, ಸ್ಕೋಡಾ ಒಕ್ಟಿವಿಯಾ ಮತ್ತು ಹ್ಯುಂಡೈ ಎಲಾಂತ್ರಾ ಕಾರುಗಳಿಗೆ ಸಿವಿಕ್ ಫೇಸ್‌ಲಿಫ್ಟ್ ಕಾರುಗಳು ತ್ರೀವ ಪೈಪೋಟಿ ನೀಡಲಿದ್ದು, ಕಾರಿನ ದರ ನಿಗದಿ ಮೇಲೆ ಹೊಸ ಕಾರಿನ ಭವಿಷ್ಯ ನಿರ್ಧಾರವಾಗಲಿದೆ.

Most Read Articles

Kannada
Read more on sedan
English summary
Honda Civic Facelift Revealed — India Launch in 2019.
Story first published: Tuesday, August 14, 2018, 11:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X