ಬಿಡುಗಡೆಗೆ ಸಜ್ಜಾದ ಹೋಂಡಾ ಹೆಚ್ಆರ್-ವಿ ಎಸ್‍ಯುವಿ ಕಾರಿನ ವಿಶೇಷತೆ ಏನು?

By Praveen Sannamani

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಕೆಲ ದಿನಗಳ ಹಿಂದಷ್ಟೆ ತಮ್ಮ ನ್ಯೂ ಅಮೇಜ್ ಮತ್ತು ಜಾಝ್ ಫೇಸ್‌ಲಿಫ್ಟ್ ಕಾರುಗಳನ್ನು ಬಿಡುಗಡೆಗೊಳಿಸಿದ್ದು, ಈಗ 5 ಆಸನವುಳ್ಳ ಹೆಚ್‍ಆರ್-ವಿ ‍ಪ್ರೀಮಿಯಂ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದೆ.

ಬಿಡುಗಡೆಗೆ ಸಜ್ಜಾದ ಹೋಂಡಾ ಹೆಚ್ಆರ್-ವಿ ಎಸ್‍ಯುವಿ ಕಾರಿನ ವಿಶೇಷತೆ ಏನು?

ಹೋಂಡಾ ಇಂಡಿಯಾ ಸಂಸ್ಥೆಯು ಇದೇ ವರ್ಷದ ಕೊನೆಯಲ್ಲಿ ಸಿಆರ್-ವಿ ಕ್ರಾಸ್ ಓವರ್ ಎಸ್‌ಯುವಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಇದರ ಜೊತೆಗೆ ತನ್ನ ಬಹುನೀರಿಕ್ಷಿತ ಹೆಚ್ಆರ್-ವಿ ಕಾರನ್ನು ಸಹ ಬಿಡುಗಡೆ ಗೊಳಿಸುವ ಬಗ್ಗೆ ಸುಳಿವು ನೀಡಿದೆ. ಹೀಗಾಗಿ ಪ್ರೀಮಿಯಂ ವೈಶಿಷ್ಟ್ಯತೆಗಳೊಂದಿಗೆ ಲಗ್ಗೆಯಿಡಲಿರುವ ಈ ಹೊಸ ಕಾರು ಹೋಂಡಾ ಸಂಸ್ಥೆಯ ಬಿಆರ್‌-ವಿ ಮತ್ತು ಸಿಆರ್-ವಿ ಕಾರುಗಳ ನಡುವಿನ ಸ್ಥಾನವನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ.

ಬಿಡುಗಡೆಗೆ ಸಜ್ಜಾದ ಹೋಂಡಾ ಹೆಚ್ಆರ್-ವಿ ಎಸ್‍ಯುವಿ ಕಾರಿನ ವಿಶೇಷತೆ ಏನು?

ಹೆಚ್‍ಆರ್-ವಿ ಪ್ರೀಮಿಯಂ ಎಸ್‍‍ಯುವಿ ಕಾರುಗಳು ಹ್ಯುಂಡೈ ಕ್ರೆಟಾ, ರೆನಾಲ್ಟ್ ಡಸ್ಟರ್ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಪೈಪೋಟಿ ನೀಡುವ ಗುಣಲಕ್ಷಣಗಳನ್ನ ಹೊಂದಿದ್ದು, ಈ ಕಾರು ಈಗಾಗಲೇ ಯುರೋಪ್ ಮಾರುಕಟ್ಟೆಗಳಲ್ಲಿ 2014ರಲ್ಲೇ ಬಿಡುಗಡೆಗೊಂಡು ಇದೀಗ ಹೊಸದಾಗಿ ವಿನ್ಯಾಸಗೊಂಡ ಫೇಸ್‍‍ಲಿಫ್ಟ್ ಮಾದರಿಯಲ್ಲಿ ಮತ್ತೆ ಎಂಟ್ರಿ ಕೊಡುತ್ತಿದೆ.

ಬಿಡುಗಡೆಗೆ ಸಜ್ಜಾದ ಹೋಂಡಾ ಹೆಚ್ಆರ್-ವಿ ಎಸ್‍ಯುವಿ ಕಾರಿನ ವಿಶೇಷತೆ ಏನು?

ಇದೇ ಕಾರು ಜಪಾನ್ ಮಾರುಕಟ್ಟೆಯಲ್ಲಿ ಹೋಂಡಾ ವೆಝೆಲ್ ಎಂಬ ಹೆಸರಿನಲ್ಲಿ ಮಾರಾಟಗೊಳ್ಳುತ್ತಿದ್ದು, ಜಾಝ್ ಪ್ಲಾಟ್‍‍‍ಫಾರ್ಮ್‍‍ನಲ್ಲೇ ಸಿದ್ದಗೊಳ್ಳಲಿರುವ ಹೋಂಡಾ ಹೆಚ್ಆರ್-ವಿ ಕಾರುಗಳು ಸಿಟಿ ಮತ್ತು ಡಬ್ಲ್ಯೂಆರ್‍-ವಿ ವಿನ್ಯಾಸಗಳನ್ನು ಸಹ ಎರವಲು ಪಡೆಯಲಿದೆ.

ಬಿಡುಗಡೆಗೆ ಸಜ್ಜಾದ ಹೋಂಡಾ ಹೆಚ್ಆರ್-ವಿ ಎಸ್‍ಯುವಿ ಕಾರಿನ ವಿಶೇಷತೆ ಏನು?

ಇನ್ನು ಹೋಂಡಾ ಸಂಸ್ಥೆಯು ತನ್ನ 1.6-ಲೀಟರ್ ಐ-ಡಿಟಿಇಸಿ ಡೀಸೆಲ್ ಎಂಜಿನ್ ಅನ್ನು ರಾಜಸ್ತಾನದಲ್ಲಿರುವ ತನ್ನ ಕಾರು ಉತ್ಪಾದನಾ ಘಟಕದಲ್ಲಿ ಅಭಿವೃದ್ಧಿಗೊಳಿಸುತ್ತಿದ್ದು, ಅದೇ ಎಂಜಿನ್ ಇದೀಗ ಹೊಸ ಹೆಚ್‌ಆರ್-ವಿ ಮತ್ತು 2018ರ ಸಿವಿಕ್ ಕಾರುಗಳಿಗೆ ಶಕ್ತಿ ನೀಡುತ್ತದೆ. ಇದಲ್ಲದೇ ಎಸ್‌ಯುವಿ ಪೆಟ್ರೋಲ್ ಆವೃತ್ತಿಯು ಅದರ ಎಂಜಿನ್‍ ಅನ್ನು ಸಿಟಿ ಸೆಡಾನ್ ಕಾರುಗಳಿಗೆ ಮೂಲವಾಗಿಸುತ್ತದೆ.

ಬಿಡುಗಡೆಗೆ ಸಜ್ಜಾದ ಹೋಂಡಾ ಹೆಚ್ಆರ್-ವಿ ಎಸ್‍ಯುವಿ ಕಾರಿನ ವಿಶೇಷತೆ ಏನು?

2013ರ ಡೆಟ್ರಾಯ್ಟ್ ಮೋಟಾರ್ ಶೋನಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿದ್ದ ಈ ಕಾರು ಆಕ್ರಮಣಕಾರಿ ವಿನ್ಯಾಸವನ್ನು ಪದೆದುಕೊಂಡಿದ್ದು, ಅಗಲವಾದ ಗ್ರಿಲ್, ಹೊಸ ಎಲ್ಇಡಿ ಹೆಡ್‍‍ಲ್ಯಾಂಪ್‍‍ಗಳು, ಟ್ವಿಕ್ಡ್ ಫಾಗ್ ಲ್ಯಾಂಪ್, ಡೇ ಟೈಮ್ ರನ್ನಿಂಗ್ ಲೈಟ್ಸ್ ಹಾಗೂ ಹೊಸ ಫ್ರಂಟ್ ಬಂಪರ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ಹೋಂಡಾ ಹೆಚ್ಆರ್-ವಿ ಎಸ್‍ಯುವಿ ಕಾರಿನ ವಿಶೇಷತೆ ಏನು?

ಹಾಗೆಯೇ ಕಾರಿನ ಒಳಭಾಗದಲ್ಲಿ ಹೋಂಡಾ ಸಂಸ್ಥೆಯ ಸ್ಯಾಟ್‌ಲೈಟ್ ನ್ಯಾವಿಗೆಷನ್, ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಆಯ್ಕೆಗಳನ್ನು ಒಳಗೊಂಡ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ಹೋಂಡಾ ಹೆಚ್ಆರ್-ವಿ ಎಸ್‍ಯುವಿ ಕಾರಿನ ವಿಶೇಷತೆ ಏನು?

ಇದಲ್ಲದೆ ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್, ಕೀಲೆಸ್ ಎಂಟ್ರಿ, ಡ್ಯುಯಲ್ ಫ್ರಂಟ್ ಏರ್‍‍ಬ್ಯಾಗ್ಸ್ ಹಾಗು ಸೈಡ್ ಏರ್‍‍ಬ್ಯಾಗ್ಸ್, ಎಬಿಎಸ್, ಇಬಿಡಿ, ವೆಹಿಕಲ್ ಸ್ಟ್ಯಾಬಿಲಿಟಿ ಅಸ್ಸಿಸ್ಟ್, ಟ್ರಾಕ್ಷನ್ ಕಂಟ್ರೋಲ್ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ನಂತಹ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ಹೋಂಡಾ ಹೆಚ್ಆರ್-ವಿ ಎಸ್‍ಯುವಿ ಕಾರಿನ ವಿಶೇಷತೆ ಏನು?

ಹೊಸ ಹೋಂಡಾ ಹೆಚ್‍ಆರ್‍-ವಿ ಫೇಸ್‍‍ಲಿಫ್ಟ್ ಕಾರು 4,295ಎಮ್ಎಮ್ ಉದ್ದ, 1,770ಎಮ್ಎಮ್ ಅಗಲ ಮತ್ತು 1,605ಎಮ್ಎಮ್ ಎತ್ತರವನ್ನು ಪಡೆದಿದ್ದು, 2,610ಎಮ್ಎಮ್ ವ್ಹೀಲ್‍‍ಬೇಸ್ ಹಾಗು 470 ಲೀಟರ್‍‍ನ ಬೂಟ್ ಸ್ಪೇಸ್ ಅನ್ನು ಹೊಂದಿದೆ.

ಬಿಡುಗಡೆಗೆ ಸಜ್ಜಾದ ಹೋಂಡಾ ಹೆಚ್ಆರ್-ವಿ ಎಸ್‍ಯುವಿ ಕಾರಿನ ವಿಶೇಷತೆ ಏನು?

ಎಂಜಿನ್ ಸಾಮರ್ಥ್ಯ

ಹೊಸ ಹೆಚ್ಆರ್-ವಿ ಕಾರುಗಳು 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಮತ್ತು 1.6 ಲೀಟರ್ ಐ-ವಿಟೆಕ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಬರಲಿದ್ದು, ಪೆಟ್ರೋಲ್ ಎಂಜಿನ್‍‍ಗಳು 175-ಬಿಹೆಚ್‍‍ಪಿ ಮತ್ತು 220-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡಿದಿದೆ.

ಬಿಡುಗಡೆಗೆ ಸಜ್ಜಾದ ಹೋಂಡಾ ಹೆಚ್ಆರ್-ವಿ ಎಸ್‍ಯುವಿ ಕಾರಿನ ವಿಶೇಷತೆ ಏನು?

ಅಂತೆಯೇ, ಡೀಸೆಲ್ ಎಂಜಿನ್‍‍ಗಳು 118-ಬಿಹೆಚ್‍‍ಪಿ ಮತ್ತು 300-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎರಡು ಎಂಜಿನ್‍‍ಗಳನ್ನು 6 ಸ್ಪೀಡ್ ಮ್ಯನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಪೆಟ್ರೋಲ್ ಎಂಜಿನ್‍‍ಗಳು ಪ್ರತೀ ಲೀಟರ್‍‍ಗೆ 17-18 ಕಿಲೋಮೀಟರ್ ಮತ್ತು ಡೀಸೆಲ್ ಎಂಜಿನ್ 20-22 ಕಿಲೋಮೀಟರ್ ಮೈಲೇಜ್ ನೀಡಲಿವೆ.

ಬಿಡುಗಡೆಗೆ ಸಜ್ಜಾದ ಹೋಂಡಾ ಹೆಚ್ಆರ್-ವಿ ಎಸ್‍ಯುವಿ ಕಾರಿನ ವಿಶೇಷತೆ ಏನು?

ಇದರಿಂದಾಗಿ ಹೊಸ ಕಾರಿನ ಬೆಲೆಗಳು ಹೋಂಡಾ ಹೆಚ್‍ಆರ್‍-ವಿ ಕಾರಿನ ಬೇಸ್ ಮಾಡೆಲ್ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 15 ಲಕ್ಷದಿಂದ ಟಾಪ್ ಮಾಡೆಲ್‍‍ನ ಬೆಲೆಯು ರೂ. 20 ಲಕ್ಷ ಇರಬಹುದೆಂದು ಅಂದಾಜಿಸಲಾಗುತ್ತಿದೆ.

ಬಿಡುಗಡೆಗೆ ಸಜ್ಜಾದ ಹೋಂಡಾ ಹೆಚ್ಆರ್-ವಿ ಎಸ್‍ಯುವಿ ಕಾರಿನ ವಿಶೇಷತೆ ಏನು?

ಮಾಹಿತಿಗಳ ಪ್ರಕಾರ, ವರ್ಷದ ಆರಂಭದಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲೇ ಈ ಕಾರನ್ನು ಪರಿಚಯಿಸುವ ಯೋಜಿಸಿತ್ತು. ಆದ್ರೆ ತಾಂತ್ರಿಕ ದೋಷಗಳಿಂದಾಗಿ ಹೊಸ ಕಾರನ್ನು ಪ್ರದರ್ಶಿಸಲು ಸಾಧ್ಯವಾಗಲಿಲ್ಲ ಎಂದು ಹೋಂಡಾ ಸಂಸ್ಥೆಯ ಮುಖ್ಯಸ್ಥರು ಸಹ ಹೇಳಿಕೊಂಡಿದ್ದರು. ಹೀಗಾಗಿ ಈ ಕಾರು 2019ರ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ.

More from DriveSpark

Article Published On: Saturday, August 18, 2018, 18:19 [IST]
English summary
Honda HR-V India Launch Details Revealed.
Read more on suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+