ಭಾರತದಲ್ಲಿ ಸದ್ದು ಮಾಡಲಿವೆ ಹ್ಯುಂಡೈ ನಿರ್ಮಾಣದ ಈ ಮೂರು ಹೊಸ ಕಾರುಗಳು...

Written By:

ದೇಶಿಯ ಮಾರುಕಟ್ಟೆಯಲ್ಲಿ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ಎರಡನೇ ಸ್ಥಾನ ಕಾಯ್ದುಕೊಂಡಿರುವ ಹ್ಯುಂಡೈ ಇಂಡಿಯಾ ಸಂಸ್ಥೆಯು ಇದೀಗ ಕಾರು ಮಾರಾಟದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಠಿಸುವ ತವಕದಲ್ಲಿದ್ದು, ಭಾರತೀಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮೂರು ಹೊಸ ಕಾರು ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದೆ.

ಭಾರತದಲ್ಲಿ ಸದ್ದು ಮಾಡಲಿವೆ ಹ್ಯುಂಡೈ ನಿರ್ಮಾಣದ ಈ ಮೂರು ಹೊಸ ಕಾರುಗಳು...

ಅತ್ಯತ್ತಮ ಕಾರ್ಯಕ್ಷಮತೆಯನ್ನು ಹೊಂದಿರುವ ಹ್ಯುಂಡೈ ಕಾರುಗಳು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಇದೇ ಉದ್ದೇಶದಿಂದ ಮತ್ತಷ್ಟು ಹೊಸ ಕಾರು ಉತ್ಪನ್ನಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಒಂದು ವೇಳೆ ಹ್ಯುಂಡೈ ನಿರ್ಮಾಣದ ಹೊಸ ಕಾರು ಉತ್ಪನ್ನಗಳು ನಿಗದಿತ ಅವಧಿಯಲ್ಲಿ ಬಿಡುಗೊಂಡಿದ್ದೆ ಆದಲ್ಲಿ ಹಲವು ಕಾರು ಮಾದರಿಗಳ ಮಾರಾಟವೇ ಸ್ಥಗಿತವಾಗವುದರಲ್ಲಿ ಯಾವುದೇ ಸಂದೇಹವಿಲ್ಲ.

ಭಾರತದಲ್ಲಿ ಸದ್ದು ಮಾಡಲಿವೆ ಹ್ಯುಂಡೈ ನಿರ್ಮಾಣದ ಈ ಮೂರು ಹೊಸ ಕಾರುಗಳು...

ಇದಕ್ಕೆ ಕಾರಣ ಹ್ಯುಂಡೈ ಬಿಡುಗಡೆ ಮಾಡಲು ನಿರ್ಧರಿಸುವ ಹೊಸ ಕಾರುಗಳು ಅತ್ಯುತ್ತಮ ಮಾದರಿಗಳಾಗಿದ್ದು, ಕ್ರೇಟಾ ಫೇಸ್‌ಲಿಫ್ಟ್, ಐ20 ಫೇಸ್‌ಲಿಫ್ಟ್ ಸೇರದಂತೆ ಹೊಸ ಕಾರು ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ.

Recommended Video - Watch Now!
Fighter Jet Crash In Goa - DriveSpark
ಭಾರತದಲ್ಲಿ ಸದ್ದು ಮಾಡಲಿವೆ ಹ್ಯುಂಡೈ ನಿರ್ಮಾಣದ ಈ ಮೂರು ಹೊಸ ಕಾರುಗಳು...

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಮಾರುತಿ ಆಲ್ಟೋ 800 ಮತ್ತು ರೆನಾಲ್ಟ್ ಕ್ವಿಡ್‌ಗೆ ಪ್ರತಿಸ್ಪರ್ಧಿಯಾಗಬಲ್ಲ ಎಂಟ್ರಿ ಲೆವಲ್ ಕಾರು ಮಾದರಿಯೊಂದನ್ನು ಹೊರ ತರಲಾಗುತ್ತಿದ್ದು, ಸಣ್ಣ ಕಾರು ಮಾರಾಟ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸಲಿದೆ.

ಭಾರತದಲ್ಲಿ ಸದ್ದು ಮಾಡಲಿವೆ ಹ್ಯುಂಡೈ ನಿರ್ಮಾಣದ ಈ ಮೂರು ಹೊಸ ಕಾರುಗಳು...

ಆದ್ರೆ ಹ್ಯುಂಡೈ ಹೊರತರುತ್ತಿರುವ ಸಣ್ಣ ಕಾರಿನ ಹೆಸರು ಇದುವರೆಗೂ ಬಹಿರಂಗಗೊಳಿಲ್ಲ. ಹೀಗಾಗಿ ಹೊಸ ಕಾರನ್ನು AH2 ಕೋಡ್ ಆಧಾರದ ಮೇಲೆ ಪರಿಚಯಿಸಿರುವ ಹ್ಯುಂಡೈ, ಬಿಡುಗಡೆಗೆ ಕೆಲ ದಿನಗಳ ಮುಂದಷ್ಟೇ ಹೊಸ ಕಾರಿನ ಹೆಸರನ್ನು ಬಹಿರಂಗ ಮಾಡಲಿದೆ.

ಭಾರತದಲ್ಲಿ ಸದ್ದು ಮಾಡಲಿವೆ ಹ್ಯುಂಡೈ ನಿರ್ಮಾಣದ ಈ ಮೂರು ಹೊಸ ಕಾರುಗಳು...

ಇದಷ್ಟೇ ಅಲ್ಲದೇ QXi ಕೋಡ್ ಆಧಾರ ಮೇಲೆ 7 ಸೀಟರ್ ಹೊಸ ಎಸ್‌ಯುವಿ ಮಾದರಿಯೊಂದನ್ನು ಕೂಡಾ ಬಿಡುಗಡೆ ಮಾಡಲಾಗುತ್ತಿದ್ದು, ಈ ಮೂಲಕ ಹ್ಯಾಚ್‌ಬ್ಯಾಕ್ ಮತ್ತು ಎಸ್‌ಯುವಿ ವಿಭಾಗದಲ್ಲಿ ಮತ್ತೊಮ್ಮೆ ಮುನ್ನಡೆ ಸಾಧಿಸುವ ತವಕದಲ್ಲಿದೆ.

ತಪ್ಪದೇ ಓದಿ- ಮಾರ್ಚ್‌ನಲ್ಲಿ ಬಿಡುಗಡೆಯಾಗಲಿರುವ 2018ರ ಮಾರುತಿ ಸುಜುಕಿ ಸ್ವಿಫ್ಟ್ ಬೆಲೆ ಎಷ್ಟು ಗೊತ್ತಾ?

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಹಾಫ್ ಹೆಲ್ಮೆಟ್ ವಿರುದ್ಧ ಭರ್ಜರಿ ಕಾರ್ಯಚರಣೆ- ಬೈಕ್ ಸವಾರರಿಗೆ ಬಿಗ್ ಶಾಕ್....

ಭಾರತದಲ್ಲಿ ಸದ್ದು ಮಾಡಲಿವೆ ಹ್ಯುಂಡೈ ನಿರ್ಮಾಣದ ಈ ಮೂರು ಹೊಸ ಕಾರುಗಳು...

ಈ ಬಗ್ಗೆ ಮಾತನಾಡಿರುವ ಹ್ಯುಂಡೈ ಇಂಡಿಯಾ ನಿರ್ದೇಶಕ ರಾಕೇಶ್ ಶ್ರೀವಾತ್ಸವ್ ಅವರು 'ಕಳೆದ 2017ರಲ್ಲಿ ಹ್ಯುಂಡೈ ಸಂಸ್ಥೆಯು ಭಾರತದಲ್ಲಿ 5.2 ಲಕ್ಷ ಕಾರುಗಳನ್ನು ಮಾರಾಟ ಮಾಡಿದ್ದು, ಈ ಬಾರಿ 7 ಲಕ್ಷ ಕಾರು ಮಾರಾಟದ ಗುರಿಯೊಂದಿಗೆ ಮೂರು ಹೊಸ ಕಾರು ಉತ್ಪನ್ನಗಳನ್ನು ಪರಿಚಯಿಸುತ್ತಿದ್ದೇವೆ' ಎಂದಿದ್ದಾರೆ.

ಭಾರತದಲ್ಲಿ ಸದ್ದು ಮಾಡಲಿವೆ ಹ್ಯುಂಡೈ ನಿರ್ಮಾಣದ ಈ ಮೂರು ಹೊಸ ಕಾರುಗಳು...

ಇದರಿಂದಾಗಿ ಕಾರು ಮಾರಾಟದಲ್ಲಿ ಮತ್ತೊಮ್ಮೆ ಪ್ರಾಬಲ್ಯ ಸಾಧಿಸಲಿರುವ ಹ್ಯುಂಡೈ ಸಂಸ್ಥೆಯು ಮಾರುತಿ ಸುಜುಕಿಗೂ ಪ್ರತಿಸ್ಪರ್ಧಿಯಾಗುವ ಬಗ್ಗೆ ಯೋಜನೆ ರೂಪಿಸುತ್ತಿದ್ದು, ಸದ್ಯ ಅಭಿವೃದ್ದಿಗೊಳಿಸಿರುವ ಮೂರು ಹೊಸ ಕಾರುಗಳನ್ನು ಮುಂಬರುವ ಉತ್ಸವ ದಿನಗಳಲ್ಲಿ ಬಿಡುಗಡೆ ಮಾಡಲಿದೆ.

ತಪ್ಪದೇ ಓದಿ-ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ವೇಗದಲ್ಲಿದ್ದ ಕಾರಿಗೆ ಅಡ್ಡ ಬಂದ ಬಾಲಕಿ- ಬಚಾವ್ ಮಾಡಲು ಹೋಗಿ ಒಂದೇ ಕುಟುಂಬದ ಐವರು ದುರ್ಮರಣ

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Hyundai To Launch Three New Cars In 2018.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark