ಬಹಿರಂಗಗೊಂಡ ಹ್ಯುಂಡೈ ವೆರ್ನಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಮಾಹಿತಿ..

ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಪ್ಯಾಸ್ಸೆಂಜರ್ ಕಾರುಗಳಿಂದ ಜನಪ್ರಿಯತೆಯನ್ನು ಪಡೆದ ಹ್ಯುಂಡೈ ಸಂಸ್ಥೆಯು 2017ರಲ್ಲಿ ಹೊಸ ವಿನ್ಯಾಸದೊಂದಿಗೆ ವೆರ್ನಾ ಸೆಡಾನ್ ಕಾರುಗಳನ್ನು ಬಿಡುಗಡೆಗೊಳಿಸಿತ್ತು.

By Rahul Ts

ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಪ್ಯಾಸ್ಸೆಂಜರ್ ಕಾರುಗಳಿಂದ ಜನಪ್ರಿಯತೆಯನ್ನು ಪಡೆದ ಹ್ಯುಂಡೈ ಸಂಸ್ಥೆಯು 2017ರಲ್ಲಿ ಹೊಸ ವಿನ್ಯಾಸದೊಂದಿಗೆ ವೆರ್ನಾ ಸೆಡಾನ್ ಕಾರುಗಳನ್ನು ಬಿಡುಗಡೆಗೊಳಿಸಿತ್ತು. ಇದೀಗ ,ಮಹಿತಿಗಳ ಪ್ರಕಾರ ಹ್ಯುಂಡೈ ಸಂಸ್ಥೆಯು ತಮ್ಮ ವೆರ್ನಾ ಕಾರಿನ ಫೇಸ್‍‍ಲಿಫ್ಟ್ ಮಾದರಿಯನ್ನು 2020ರ ಎರಡನೆಯ ಅರ್ಧವಾರ್ಶಿಕ ಅವಧಿಯಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಬಹಿರಂಗಗೊಂಡ ಹ್ಯುಂಡೈ ವೆರ್ನಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಮಾಹಿತಿ..

ಹೊಸ ಹ್ಯುಂಡೈ ವೆರ್ನಾ ಫೇಸ್‍‍ಲಿಫ್ಟ್ ಕಾರು ಹೊಸ ವೈಶಿಷ್ಟ್ಯತೆಗಳು ಮತ್ತು ವಿನ್ಯಾಸವನ್ನು ಪಡೆದಿದ್ದು, ವಿನ್ಯಾಸದ ಪರವಾಗಿ ಹೊಸ ಅಪ್ಡೇಟೆಡ್ ಗ್ರಿಲ್, ಬಂಪರ್ ಮತ್ತು ಗುರುತರ ಬದಲಾವಣೆಗಳನ್ನು ಪಡೆದಿರಲಿದೆ.

ಬಹಿರಂಗಗೊಂಡ ಹ್ಯುಂಡೈ ವೆರ್ನಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಮಾಹಿತಿ..

ಹ್ಯುಂಡೈ ವೆರ್ನಾ ಫೇಸ್‍‍ಲಿಫ್ಟ್ ಸೆಡಾನ್ ಕಾರು ಹೊಸ ಬೊನೆಟ್, ಬೂಟ್ ಲಿಡ್ ಮತ್ತು ಫೇಂಡರ್‍‍ಗಳನ್ನು ಪಡೆದಿರದುವುಲ್ಲದೆ ಕಾರಿನ ಒಳಭಾಗದಲ್ಲಿಯೂ ಬದಲಾವಣೆಗಳನ್ನು ಪಡೆದುಕೊಂಡಿರಲಿದೆ.

ಬಹಿರಂಗಗೊಂಡ ಹ್ಯುಂಡೈ ವೆರ್ನಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಮಾಹಿತಿ..

ಹ್ಯುಂಡೈ ಫೇಸ್‍‍ಲಿಫ್ಟ್ ಕಾರಿನ ಒಳಭಾಗದಲ್ಲಿ ನೂತನ ಕನೆಕ್ಟಿವಿಟಿ ಆಯ್ಕೆಯೊಂದಿಗೆ ಮುಂದಿನ ತಲೆಮಾರಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೇಂಟ್ ಸಿಸ್ಟಮ್ ಅನ್ನು ಹೊಂದಿರಲಿದ್ದು, ಈ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹ್ಯುಂಡೈ ಸಂಸ್ಥೆಯು 2019ರಲ್ಲಿ ಬಿಡುಗಡೆಗೊಳ್ಳಲಿರುವ ತಮ್ಮ ಮುಂದಿನ ಕಂಪ್ಯಾಕ್ಟ್ ಎಸ್‍‍ಯುವಿ ಕಾರಿನಲ್ಲಿ ಅಳವಡಿಸಲಾಗಿದೆ.

ಬಹಿರಂಗಗೊಂಡ ಹ್ಯುಂಡೈ ವೆರ್ನಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಮಾಹಿತಿ..

ವೆರ್ನಾ ಫೇಸ್‍‍ಲಿಫ್ಟ್ ಕಾರು ತಾಂತ್ರಿಕತೆಯಲ್ಲಿ ಬಹುದೊಡ್ಡ ಅಪ್ಡೇಟ್ ಅನ್ನು ಪಡೆದುಕೊಂಡಿದೆ. ಹೌದು, ಹ್ಯುಂಡೈ ವೆರ್ನಾ ಫೇಸ್‍‍ಲಿಫ್ಟ್ ಕಾರುಗಳು ಹೊಸದಾಗಿ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಪಡೆಯಲಿದ್ದು, 2020ರ ಏಪ್ರಿಲ್ 1 ರಂದು ನಡೆಯಲಿರುವ ಬಿಎಸ್-4 ಎಮಿಷನ್ ಪರೀಕ್ಷೆಯಲ್ಲಿ ಭಾಗವಹಿಸಲಿದೆ.

ಬಹಿರಂಗಗೊಂಡ ಹ್ಯುಂಡೈ ವೆರ್ನಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಮಾಹಿತಿ..

ವೆರ್ನಾ ಫೇಸ್‍‍ಲಿಫ್ಟ್ ಕಾರಿನಲ್ಲಿ ಅಳವಡಿಸಲಾಗಿರುವ ಹೊಸ 1.5 ಲೀಟರ್ ಡೀಸೆಲ್ ಎಂಜಿನ್ ಈಗಾಗಲೆ ಇರುವ 1.6 ಲೀಟರ್ ಡೀಸೆಲ್ ಎಂಜಿನ್ ಅನ್ನು ಭರ್ತಿ ಮಾಡಲಿದ್ದು, ಕಡಿಮೆ ಔಟ್‍‍ಪುಟ್ ಅನ್ನು ನೀಡಲಿದೆ.

ಬಹಿರಂಗಗೊಂಡ ಹ್ಯುಂಡೈ ವೆರ್ನಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಮಾಹಿತಿ..

ಹಳೆಯ 1.6 ಲೀಟರ್ ಡೀಸೆಲ್ ಎಂಜಿನ್ 128ಬಿಹೆಚ್‍ಪಿ ಮತ್ತು 260ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸಿದಲ್ಲಿ, ಹೊಸ 1.5 ಲೀಟರ್ ಡೀಸೆಲ್ ಎಂಜಿನ್ ಕೇವಲ 115ಬಿಹೆಚ್‍ಪಿ ಮತ್ತು 250ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದೆ.

ಬಹಿರಂಗಗೊಂಡ ಹ್ಯುಂಡೈ ವೆರ್ನಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಮಾಹಿತಿ..

ಇದಲ್ಲದೆ ಮಾಹಿತಿಗಳ ಪ್ರಕಾರ ಹ್ಯುಂಡೈ ಸಂಸ್ಥೆಯು ಹೊಸ 1.5 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಕೂಡಾ ಪರಿಚಯಿಸಲಿದ್ದು, ಇದು ಸಹ ಈಗಾಗಲೆ ಇರುವ 1.6 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಭರ್ತಿ ಮಾಡಲಿದೆ. ಮತ್ತು ಹೊಸ ಪೆಟ್ರೋಲ್ ಎಂಜಿನ್ ಕೂಡಾ ಎಮಿಷನ್ ಟೆಸ್ಟ್ ಅನ್ನು ಪಡೆಯಲಿದೆ.

ಬಹಿರಂಗಗೊಂಡ ಹ್ಯುಂಡೈ ವೆರ್ನಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಮಾಹಿತಿ..

ಡ್ರೈವ್‍‍ಸ್ಪಾರ್ಕ್ ಕನ್ನಡ ಅಭಿಪ್ರಾಯ

ಹ್ಯುಂಡೈ ವೆರ್ನಾ ಕಾರುಗಳು ಕೊರಿಯನ್ ವಾಹನ ತಯಾರಕ ಸಂಸ್ಥೆಯಲ್ಲಿನ ಹೆಚ್ಚು ಜನಪ್ರಿಯತೆಯನ್ನು ಪಡೆದ ಕಾರಾಗಿದ್ದು, ಸಂಸ್ಥೆಯು ಇದೀಗ 2020ರಲ್ಲಿ ತಮ್ಮ ಹೊಸ ವೆರ್ನಾ ಫೇಸ್‍‍ಲಿಫ್ಟ್ ಕಾರನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಈ ಕಾರಿನಲ್ಲಿ ಹೊಸ ವಿನ್ಯಾಸ ಮತ್ತು ಇನ್ನಿತರೆ ವೈಶಿಷ್ಟ್ಯತೆಗಳನ್ನು ನೀಡುವ ನೀರಿಕ್ಷೆಯಲ್ಲಿದೆ.

Most Read Articles

Kannada
Read more on hyundai verna sedan
English summary
Hyundai Verna Facelift Launch Details Revealed.
Story first published: Thursday, August 2, 2018, 11:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X