ಸಿಲಿಕಾನ್ ಸಿಟಿ ಜನರನ್ನು ಮೋಡಿ ಮಾಡಿದ ಆಸ್ಟನ್ ಮಾರ್ಟಿನ್ ವಿ12 ವೀಟೆಂಜ್ ಎಎಂಆರ್...
ಜಗತ್ತಿನ ಅತಿ ದುಬಾರಿ ಕಾರು ಮಾದರಿಗಳಲ್ಲಿ ಒಂದಾಗಿರುವ ಆಸ್ಟನ್ ಮಾರ್ಟಿನ್ ನಿರ್ಮಾಣದ ವಿ12 ಎಂಜಿನ್ ಪ್ರೇರಿತ ವೀಟೆಂಜ್ ಎಎಂಆರ್ ಲಿಮೆಟೆಡ್ ಎಡಿಷನ್ ಕಾರುಗಳ ಮಾರಾಟ ಪ್ರಕ್ರಿಯೆ ಆರಂಭವಾಗಿದೆ.
ಜಗತ್ತಿನ ಅತಿ ದುಬಾರಿ ಕಾರು ಮಾದರಿಗಳಲ್ಲಿ ಒಂದಾಗಿರುವ ಆಸ್ಟನ್ ಮಾರ್ಟಿನ್ ನಿರ್ಮಾಣದ ವಿ12 ಎಂಜಿನ್ ಪ್ರೇರಿತ ವೀಟೆಂಜ್ ಎಎಂಆರ್ ಲಿಮೆಟೆಡ್ ಎಡಿಷನ್ ಕಾರುಗಳ ಮಾರಾಟ ಪ್ರಕ್ರಿಯೆ ಆರಂಭವಾಗಿದ್ದು, ಇದೀಗ ದೇಶದ ಮೊದಲ ವಿ12 ವೀಟೆಂಜ್ ಎಎಂಆರ್ ಕಾರು ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳಲ್ಲಿ ಕಾಣಿಸಿಕೊಂಡಿದೆ.

ಸೂಪರ್ ಕಾರುಗಳಿಗೆ ಅತಿ ದೊಡ್ಡ ಮಾರುಕಟ್ಟೆಯಾಗಿರುವ ಬೆಂಗಳೂರಿನಲ್ಲಿ ವಿ12 ವೀಟೆಂಜ್ ಎಎಂಆರ್ ಲಿಮಿಟೆಡ್ ಎಡಿಷನ್ ಮೊದಲ ಕಾರು ಮಾರಾಟವಾಗಿದ್ದು, ಜಗತ್ತಿನ ವಿವಿಧ ಮಾರುಕಟ್ಟೆಗಳಲ್ಲಿ ಕೇವಲ 100 ವಿ12 ವೀಟೆಂಜ್ ಎಎಂಆರ್ ಕಾರುಗಳು ಮಾತ್ರ ಮಾರಾಟಕ್ಕೆ ಲಭ್ಯವಿವೆ. ಇದರಲ್ಲಿ ಬೆಂಗಳೂರಿನಲ್ಲಿ ಮಾರಾಟವಾದ ವಿ12 ವೀಟೆಂಜ್ ಎಎಂಆರ್ ಕಾರು ಕೂಡಾ ಒಂದು.

ಬೆಂಗಳೂರಿನ ಸೂಪರ್ ಕಾರ್ಸ್ ಗ್ಯಾರೇಜ್ ಮಾಲೀಕರೊಬ್ಬರು ವಿದೇಶಿ ಮಾರುಕಟ್ಟೆಯಿಂದ ಆಮದುಕೊಂಡಿದ್ದು, ಈ ಕಾರಿನ ಬೆಲೆಯು ಸುಮಾರು 5 ಕೋಟಿ ರಿಂದ 7 ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ.

ಆಸ್ಟನ್ ಮಾರ್ಟಿನ್ ನಿರ್ಮಾಣ ಮಾಡುವ ಸೂಪರ್ ಕಾರುಗಳ ಮಾದರಿಯಲ್ಲೇ ವಿ12 ವೀಟೆಂಜ್ ಎಎಂಆರ್ ಕಾರುಗಳು ಉನ್ನತ ಕಾರು ಆವೃತ್ತಿಯಾಗಿದ್ದು, ಅತಿ ವಿನೂತನ ಮತ್ತು ಹೈಟೆಕ್ ಟೆಕ್ನಾಲಜಿ ಪ್ರೇರಿತ ವಿ12 ಎಂಜಿನ್ ಪಡೆದಿರುವುದೇ ಈ ಕಾರಿನ ಹೈಲೈಟ್ಸ್.

ಇದಲ್ಲದೇ ಆಸ್ಟನ್ ಮಾರ್ಟಿನ್ ಸಂಸ್ಥೆಯು ವಿಶ್ವದ ಮಾರುಕಟ್ಟೆಗಳಿಗಾಗಿ ಬರೋಬ್ಬರಿ 300 ವೀಟೆಂಜ್ ಎಎಂಆರ್ ಸೂಪರ್ ಕಾರುಗಳನ್ನು ಅಭಿವೃದ್ಧಿಗೊಳಿಸಿದ್ದು, ಇದರಲ್ಲಿ 200 ವೀಟೆಂಜ್ ಎಎಂಆರ್ ಕಾರುಗಳು ವಿ8 ಎಂಜಿನ್ ಹೊಂದಿದ್ದರೆ ಇನ್ನುಳಿದ 100 ವೀಟೆಂಜ್ ಎಎಂಆರ್ ಸೂಪರ್ ಕಾರುಗಳು ವಿ12 ಎಂಜಿನ್ ಸೌಲಭ್ಯವನ್ನು ಪಡೆದುಕೊಂಡಿವೆ.

ವಿ8 ಮತ್ತು ವಿ12 ಎಂಜಿನ್ ಮಾದರಿಗಳಲ್ಲಿ ಸಾಕಷ್ಟು ಬದಲಾವಣೆ ಇದ್ದು, ಎರಡು ಕಾರುಗಳ ಬೆಲೆ ನಡುವೆ ಬರೋಬ್ಬರಿ ಎರಡೂವರೆ ಕೋಟಿ ಬೆಲೆ ವ್ಯತ್ಯಾಸ ಇವೆ. ಹೀಗಾಗಿ ಸೂಪರ್ ಕಾರು ಪ್ರಿಯರು ತಮ್ಮ ಬಜೆಟ್ ತಕ್ಕಂತೆ ವಿ8 ಅಥವಾ ವಿ12 ಎಂಜಿನ್ ಪ್ರೇರಿತ ವೀಟೆಂಜ್ ಎಎಂಆರ್ ಸೂಪರ್ ಕಾರುಗಳನ್ನು ಖರೀದಿ ಮಾಡಬಹುದು.

ಇದೀಗ ಬೆಂಗಳೂರಿನಲ್ಲಿ ರಸ್ತೆಗಳಲ್ಲಿ ವಾಹನ ಸವಾರರನ್ನು ಮೋಡಿ ಮಾಡುತ್ತಿರುವ ವೀಟೆಂಜ್ ಎಎಂಆರ್ ಸೂಪರ್ ಕಾರು ಮಾದರಿಯು ವಿ12 ಎಂಜಿನ್ ಹೊಂದಿದ್ದು, ದುಬಾರಿ ಬೆಲೆಯ ಜಾಫ್ರೆ ಬ್ಲ್ಯೂ ಜೊತೆ ಸ್ಪೀಡ್ ರೆಡ್ ಗ್ರಾಫಿಕ್ಸ್ ಪೇಂಟಿಂಗ್ ಸೌಲಭ್ಯ ನೀಡಲಾಗಿದೆ.

ಎಂಜಿನ್ ಸಾಮರ್ಥ್ಯ
ವಿ12 ವೀಟೆಂಜ್ ಎಎಂಆರ್ ಸೂಪರ್ ಕಾರುಗಳು 6.0-ಲೀಟರ್ ವಿ12 ಎಂಜಿನ್ ಹೊಂದಿದ್ದು, ಆಟೋಮ್ಯಾಟಿಕ್ ಪೆಡಲ್ ಶಿಫ್ಟ್ ಗೇರ್‌ಬಾಕ್ಸ್‌ನೊಂದಿಗೆ 595-ಬಿಎಚ್‌ಪಿ ಉತ್ಪಾದಿಸಬಲ್ಲದು. ಜೊತೆಗೆ ಬಲಿಷ್ಠ ಎಂಜಿನ್ ಸಾಮರ್ಥ್ಯದೊಂದಿಗೆ ಕೇವಲ 3.6 ಸೇಕೆಂಡುಗಳಲ್ಲಿ ಸೊನ್ನೆಯಿಂದ 100 ಕಿ.ಮಿ ವೇಗ ಪಡೆದುಕೊಳ್ಳಬಲ್ಲದು.

ವಿ12 ವೀಟೆಂಜ್ ಎಎಂಆರ್ ಡಿಸೈನ್‌ಗಳು
ಸುಧಾರಿತ ತಂತ್ರಜ್ಞಾನ ಪ್ರೇರಿತ ಎಎಂಆರ್ ಆರಿಯೋ ಕಿಟ್ ಸೌಲಭ್ಯ ಹೊಂದಿರುವ ವಿ12 ವೀಟೆಂಜ್ ಎಎಂಆರ್ ಕಾರುಗಳಲ್ಲಿ ಕಾರ್ಬನ್ ಫೈಬರ್ ಜೋಡಣೆಯಿದ್ದು, ಫ್ರಂಟ್ ಸ್ಪ್ಲಿಟ್ಟರ್, ಡ್ರೈವ್ ಪ್ಲೇನ್ಸ್, ಫಿಕ್ಸ್ ರಿಯರ್ ಸ್ಪಾಯ್ಲರ್, ಅಲ್ಯುಮಿನಿಯಂ ವೀಲ್ಹ್‌ಗಳು ಮತ್ತು ಟೈಟಾನಿಯಂ ಎಕ್ಸಾಸ್ಟ್ ಪಡೆದುಕೊಂಡಿದೆ.

ಜೊತೆಗೆ ವಿಶ್ವದರ್ಜೆಯ ವಿನ್ಯಾಸಗಳನ್ನು ಹೊಂದಿರುವ ವಿ12 ವೀಟೆಂಜ್ ಎಎಂಆರ್ ಕಾರುಗಳು 2017ರ ಜಿನೇವಾ ಆಟೋ ಮೇಳ ಪ್ರದರ್ಶನಗೊಂಡಿದ್ದಲ್ಲದೇ ಜನಪ್ರಿಯ FIA ವರ್ಲ್ಡ್ ಎಂಡ್ಯೂರೆನ್ಸ್ ಚಾಂಪಿಯನ್‌ಶಿಪ್‌ನಲ್ಲೂ ಅದ್ಭುತ ಪರ್ಫಾಮೆನ್ಸ್ ತೋರುವ ಮೂಲಕ ಸೂಪರ್ ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಇನ್ನು ಬೆಂಗಳೂರು ಮೂಲದ ಸೂಪರ್ ಕಾರ್ಸ್ ಗ್ಯಾರೆಜ್ ಒಂದರಲ್ಲಿ ಕಾಣಿಸಿಕೊಂಡಿರುವ ವಿ12 ವೀಟೆಂಜ್ ಎಎಂಆರ್ ಕಾರುಗಳು ಸದ್ಯ ಭಾರೀ ಆಕರ್ಷಣೆಯಾಗಿದ್ದು, ಇದೇ ಗ್ಯಾರೇಜ್‌ನಲ್ಲಿ ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಅವೆಂಟ್‌ಡೋರ್ ಎಸ್‌ವಿ, ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ-ಆರ್, ಲ್ಯಾಂಬೋರ್ಗಿನಿ ಹುರ್ಕಾನ್, ಪೋರ್ಷೆ 911 ಜಿಟಿ3, ಬಾಕ್ಸ್‌ಸ್ಟರ್ ಎಸ್, ಖಯೆನಿ ಟರ್ಬೋ ಮತ್ತು ರೇಂಜ್ ರೋವರ್ ಎಸ್‌ವಿಆರ್ ಸ್ಥಾನ ಪಡೆದಿವೆ.


Click it and Unblock the Notifications








