ಅನಾವರಣಗೊಂಡ ಜಾಗ್ವಾರ್ ಐ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿ ಕಾರು..
ಬ್ರಿಟಿಷ್ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಜಾಗ್ವಾರ್ ತನ್ನ ಹೊಸ ಐ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿ ಕಾರು ಮಾದರಿಯನ್ನು ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದೆ.
ಬ್ರಿಟಿಷ್ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಜಾಗ್ವಾರ್ ತನ್ನ ಹೊಸ ಐ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿ ಕಾರು ಮಾದರಿಯನ್ನು ಬಿಡುಗಡೆಗೊಳಿಸುವ ಬಗ್ಗೆ ಸುಳಿವು ನೀಡಿದ್ದು, ಇದೀಗ ಉತ್ಪಾದನಾ ಹಂತದಲ್ಲಿರುವ ಹೊಸ ಕಾರನ್ನು ಅನಾವರಣಗೊಳಿಸುವ ಮೂಲಕ ಕುತೂಹಲ ಹುಟ್ಟುಹಾಕಿದೆ.

ಜಾಗ್ವಾರ್ ಸಾಂಸ್ಥೆಯು ಹೊಸ ಐ-ಪೇಸ್ ಎಲೆಕ್ಟ್ರಿಕ್ ಎಸ್‍ಯುವಿ ಕಾರಿನ ವಿನ್ಯಾಸವನ್ನು ಭೌತಶಾಸ್ತ್ರದ ತತ್ವದಡಿ ಅಭಿವೃದ್ಧಿಪಡಿಸಿದ್ದು, ವಾಯುಬಲ ವೈಜ್ಞಾನಿಕ ದಕ್ಷತೆಯನ್ನು ಹೆಚ್ಚಿಸಲು ಬ್ಯಾನೆಟ್‍ಗಳನ್ನು ಚಿಕ್ಕದಾಗಿ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಕಾರಿನ ಮುಂಭಾಗದ ವಿನ್ಯಾಸವು ಸ್ಲೋಪಿಂಗ್ ಬ್ಯಾನೆಟ್, ಹನಿಕಾಂಬ್ ಗ್ರಿಲ್, ಸ್ಲೀಕ್ ಎಲ್ಇಡಿ ಹೆಡ್‍ಲೈಟ್ ಮತ್ತು ಅಗಲವಾದ ಏರ್ ಡ್ಯಾಮ್ ಅನ್ನು ಪಡೆದಿದೆ.

ಇದರೊಂದಿಗೆ ಐ-ಪೇಸ್ ಎಲೆಕ್ಟ್ರಿಕ್ ಕಾರು ಎಲ್ಇಡಿ ಡಿಎಸ್‍ಎಲ್, ಹೊಸದಾಗಿ ವಿನ್ಯಾಸಗೊಂಡ ಅಲಾಯ್ ವೀಲ್ಸ್ ಮರು ಒಆರ್‍ವಿಎಂ ಒಳಗೊಂಡಿರುವ ಟರ್ನ್ ಸಿಗ್ನಲ್ ಲೈಟ್‍ಗಳನ್ನು ಪಡೆದಿವೆ.

ಜಾಗ್ವಾರ್ ಐ-ಪೇಸ್ ಕಠಿಣ ಭೂಪ್ರದೇಶಗಳಲ್ಲೂ ಮತ್ತು -40 ಡಿಗ್ರಿಗಳಿಂದ 40 ಡಿಗ್ರಿ ಉಷ್ಣಾಂಶದಲ್ಲೂ ಹೊಂದಿಕೊಳ್ಳಬಹುದಾದ ಗುಣ ಹೊಂದಿದ್ದು, ಆಫ್ ರೋಡಿಂಗ್ ಕೌಶಲ್ಯಕ್ಕೂ ಹೇಳಿ ಮಾಡಿಸಿದಂತಿದೆ.

ಇನ್ನು ಕಾರಿನ ಒಳಭಾಗವು ವಿಶಾಲವಾದ ಸ್ಥಳವನ್ನು ಹೊಂದಿದ್ದು, ಇನ್‌ಕಂಟ್ರೋಲ್ ಟಚ್ ಪ್ರೋ ಡ್ಯು ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆದಿದ್ದು, ರೇಂಜ್ ರೋವರ್ ವೋಗ್ ಮಾದರಿಯಲ್ಲೂ ಇದೇ ವ್ಯವಸ್ಥೆಯನ್ನೇ ಬಳಕೆ ಮಾಡಲಾಗಿದೆ.

ಇದಲ್ಲದೆ ಅಲೆಕ್ಸ್ ಸ್ಕಿಲ್ ಒಳಗೊಂಡಂತಹ ಇನ್‍ಕಂಟ್ರೋಲ್ ರಿಮೋಟ್ ಆಪ್ ಹೊಂದಿದ್ದು, ಇದರಿಂದ ಕಾರು ಚಾಲಕನು ಕಾರಿನ ಚಾರ್ಜಿಂಗ್ ಲೆವೆಲ್ ಅನ್ನು ತಿಳಿಯಬಹುದಾಗಿದೆ. ಜೊತೆಗೆ 4ಜಿ ವೈ-ಫೈ ಹಾಟ್‍ಸ್ಪಾಟ್, ಮೂರು 12 ವಾಲ್ಟ್ಸ್ ಸಾಕೆಟ್ಸ್, ಆರು ಯುಎಸ್‍ಬಿ ಪೋರ್ಟ್ಸ್ ಮತ್ತು ಒಂದು ಹೆಚ್‍ಡಿಎಂಐ/ಹೆಚ್‍ಎಂಎಲ್ ಪೋರ್ಟ್‍ಗಳನ್ನು ಹೊಂದಿದೆ.

ಎಂಜಿನ್ ಸಾಮರ್ಥ್ಯ
ಐ-ಪೇಸ್ ಎಲೆಕ್ಟ್ರಿಕ್ ಕಾರಿನಲ್ಲಿ ಎರಡು ಎಲೆಕ್ಟ್ರಿಕ್ ಮೋಟಾರ್‍ಗಳನ್ನು ಬಳಸಲಾಗಿದ್ದು, ಇದು 395 ಬಿಹೆಚ್‍ಪಿ ಮತ್ತು 696 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಇದರೊಂದಿಗೆ ಆಲ್ ವೀಲ್ ಡ್ರೈವ್ ಸಿಸ್ಟಂ ಇದ್ದು, ಇದು 4.5 ಸೆಕೆಂಡಿಗೆ 0-100 ಕಿಲೋಮೀಟರ್ ಚಲಿಸಬಲ್ಲದು.

90 ಕಿಲೋವ್ಯಾಟ್ಸ್ ಲಿಥಿಯಂ-ಐಯಾನ್ ಬ್ಯಾಟರಿ ಬಳಸಲಾಗಿದ್ದು, ಒಂದು ಬಾರಿ ಚಾರ್ಜ್‌ಗೆ 480 ಕಿಲೋಮೀಟರ್ ಚಲಿಸಬಲ್ಲದು ಎನ್ನಲಾಗಿದ್ದು, 45 ನಿಮಿಷದಲ್ಲಿ ಶೇಕಡಾ 80 ರಷ್ಟು 100 ಕಿಲೋವ್ಯಾಟ್ಸ್ ವೇಗದಲ್ಲಿ ಚಾರ್ಜ್ ಕೂಡಾ ಆಗಲಿದೆ.

ಆಸ್ಟ್ರಿಯಾದ ಮ್ಯಾಗ್ನಾ ಸ್ಟೇಯರ್ ಉತ್ಪಾದನಾ ಕೇಂದ್ರದಲ್ಲಿ 2018 ರ ಜಗ್ವಾರ್ ಐ-ಪೇಸ್ ಕಾರಿನ ಉತ್ಪಾದನೆಯು ಆರಂಭವಾಗಲಿದ್ದು, ಸುಧಾರಿತ ಮಾದರಿಯ ಸೌಕರ್ಯ ಹೊಂದಿರುವ ಈ ಕೇಂದ್ರದಲ್ಲಿ ಒಂದು ಐ-ಪೇಸ್ ಕಾರು ತಯಾರಿಸಲು ಕೇವಲ ಎಂಟು ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಿದೆಯಂತೆ.

ಜಾಗ್ವಾರ್ ಸಂಸ್ಥೆಯ ಹೊಸ ಐ-ಪೇಸ್ ಕಾರು ಬೇರೆಲ್ಲಾ ಜಾಗ್ವಾರ್ ಕಾರುಗಳ ಮಾದರಿಯ ವಿನ್ಯಾಸವನ್ನು ಪಡೆದಿದ್ದು, ತಾಂತ್ರಿಕವಾಗಿ ಮುಂದುವರೆದ ಎಲೆಕ್ಟ್ರಿಕ್ ಮೋಟಾರ್ ವೈಶಿಷ್ಟ್ಯಗಳನ್ನು ಪಡಿದಿದೆ. ಇನ್ನು ಈ ಕಾರು ಭಾರತಕ್ಕೆ ಬರಲಿವೆಯೆ? ಎಂಬುದನ್ನು ತಿಳಿಯಲು ಜಾಗ್ವಾರ್ ಸಂಸ್ಥೆಯ ಮುಂದಿನ ಆದೇಶವರೆಗೂ ಕಾಯ್ದುನೋಡಬೇಕಾಗಿದೆ.


Click it and Unblock the Notifications








