ಹೊಸ ವಿನ್ಯಾಸದ ಜೀಪ್ ಕಂಪಾಸ್ ಬೆಡ್‌ರಾಕ್ ಎಡಿಷನ್ ಬಿಡುಗಡೆ

ಜೀಪ್ ಸಂಸ್ಥೆಯು ಕಂಪಾಸ್ ಎಸ್‌ಯುವಿ ಕಾರುಗಳ ಸರಣಿಯಲ್ಲಿ ಬೆಡ್‌ರಾಕ್ ಎನ್ನುವ ಲಿಮಿಟೆಡ್ ಎಡಿಷನ್ ಮಾದರಿಯೊಂದನ್ನು ಬಿಡುಗಡೆ ಮಾಡಿದೆ.

By Praveen Sannamani

ಜೀಪ್ ಸಂಸ್ಥೆಯು ಕಂಪಾಸ್ ಎಸ್‌ಯುವಿ ಕಾರುಗಳ ಸರಣಿಯಲ್ಲಿ ಬೆಡ್‌ರಾಕ್ ಎನ್ನುವ ಲಿಮಿಟೆಡ್ ಎಡಿಷನ್ ಮಾದರಿಯೊಂದನ್ನು ಬಿಡುಗಡೆ ಮಾಡಿದ್ದು, ವಿಶೇಷ ಬಣ್ಣದ ಆಯ್ಕೆ ಮತ್ತು ಹೊಸ ಫೀಚರ್ಸ್‌ಗಳನ್ನು ಹೊತ್ತು ಬಂದಿರುವ ಈ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 17.53 ಲಕ್ಷಕ್ಕೆ ನಿಗದಿ ಮಾಡಲಾಗಿದೆ.

ಹೊಸ ವಿನ್ಯಾಸದ ಜೀಪ್ ಕಂಪಾಸ್ ಬೆಡ್‌ರಾಕ್ ಎಡಿಷನ್ ಬಿಡುಗಡೆ

ಸ್ಪೋರ್ಟಿ ವಿನ್ಯಾಸಗಳನ್ನು ಹೊತ್ತು ಬಂದಿರುವ ಬೆಡ್‌ರಾಕ್ ಎಡಿಷನ್ ಕಾರುಗಳು ಜೀಪ್ ಕಂಪಾಸ್ ಸ್ಪೆಷಲ್ ಎಡಿಷನ್‌ಗಳಲ್ಲೇ ವಿಶೇಷ ಎನ್ನಿಸಲಿದ್ದು, ನ್ಯೂ ಜನರೇಷನ್ ಜೀಪ್ ಕಂಪಾಸ್ ಎಸ್‌ಯುವಿ ಕಾರುಗಳು ಭಾರತದಲ್ಲಿ ಇದುವರೆಗೆ 25 ಸಾವಿರ ಕಾರುಗಳು ಮಾರಾಟಗೊಂಡ ಹಿನ್ನೆಲೆಯಲ್ಲಿ ಬೆಡ್‌ರಾಕ್ ಎಡಿಷನ್ ಕಾರನ್ನು ಹೊರತಂದಿದೆ ಎನ್ನಲಾಗಿದೆ.

ಹೊಸ ವಿನ್ಯಾಸದ ಜೀಪ್ ಕಂಪಾಸ್ ಬೆಡ್‌ರಾಕ್ ಎಡಿಷನ್ ಬಿಡುಗಡೆ

ಜೀಪ್ ಕಂಪಾಸ್ ಬೆಡ್‌ರಾಕ್ ಎಡಿಷನ್ ಕಾರುಗಳು ವೊಕಲ್ ವೈಟ್, ಮಿನಿಮಲ್ ಗ್ರೇ ಮತ್ತು ಎಕ್ಸೊಟಿಕಾ ರೆಡ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, 16-ಇಂಚಿನ ಅಲಾಯ್ ವೀಲ್ಹ್‌ಗಳು, ರೂಫ್ ರೈಲ್ಸ್ ಹಾಗೂ ಕಾರಿನ ಬಾಗಿಲುಗಳ ಮೇಲೆ ಸ್ಪೆಷಲ್ ಎಡಿಷನ್ ಬ್ಯಾಡ್ಜ್ ಒದಗಿಸಲಾಗಿದೆ.

ಹೊಸ ವಿನ್ಯಾಸದ ಜೀಪ್ ಕಂಪಾಸ್ ಬೆಡ್‌ರಾಕ್ ಎಡಿಷನ್ ಬಿಡುಗಡೆ

ಇನ್ನು ಕಾರಿನ ಒಳಭಾಗದ ವಿನ್ಯಾಸಗಳನ್ನು ಗಮನಿಸಿದ್ದಲ್ಲಿ, ಕಾರಿನ ಸೀಟುಗಳಲ್ಲೂ ಬೆಡ್‌ರಾಕ್ ಎಡಿಷನ್ ಹೆಸರಿಸಲಾಗಿದ್ದು, ಡೈಮಾನಿಕ್ ಗೈಡ್‌ಲೆನ್ಸ್‌ಗಾಗಿ ಐದು ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ರಿವರ್ಸ್ ಕ್ಯಾಮೆರಾ, ನ್ಯೂ ಫ್ಲೋರ್ ಮ್ಯಾಟ್ ಇರಲಿದೆ.

ಹೊಸ ವಿನ್ಯಾಸದ ಜೀಪ್ ಕಂಪಾಸ್ ಬೆಡ್‌ರಾಕ್ ಎಡಿಷನ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಜೀಪ್ ಕಂಪಾಸ್ ಮೂಲ ಮಾದರಿಯ ಸ್ಪೋರ್ಟ್ ಮತ್ತು ಲ್ಯಾಂಗಿಟ್ಯೂಡ್ ಆವೃತ್ತಿಗಳ ಮಧ್ಯದ ಕಾರು ಮಾದರಿಯಾಗಿರುವ ಬೆಡ್‌ರಾಕ್ ಎಡಿಷನ್ ಕಾರುಗಳು 2.0-ಲೀಟರ್ ಟರ್ಬೋ ಡಿಸೇಲ್ ಎಂಜಿನ್ ಹೊಂದಿರಲಿದ್ದು, 173-ಬಿಎಚ್‌ಪಿ ಉತ್ಪಾದನೆಯೊಂದಿಗೆ ಫ್ರಂಟ್ ವೀಲ್ಹ್ ಪವರ್ ಟೆಕ್ನಾಲಜಿ ಮತ್ತು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ.

ಹೊಸ ವಿನ್ಯಾಸದ ಜೀಪ್ ಕಂಪಾಸ್ ಬೆಡ್‌ರಾಕ್ ಎಡಿಷನ್ ಬಿಡುಗಡೆ

ಸುರಕ್ಷಾ ಸೌಲಭ್ಯಗಳು

ಡ್ಯುಯಲ್ ಏರ್‍‌ಬ್ಯಾಗ್, ಎಬಿಎಸ್, ಇಬಿಡಿ, ಸ್ಟ್ಯಾಬಿಲಿಟಿ ಕಂಟ್ರೊಲರ್, ಟ್ರಾಕ್ಷನ್ ಕಂಟ್ರೊಲರ್, ನಾಲ್ಕು ಚಕ್ರಗಳಿಗೂ ಡಿಸ್ಕ್ ಬ್ರೇಕ್, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಫ್ಲೋಡಿಂಗ್ ಒಆರ್‌ವಿಎಂಎಸ್ ಸೌಲಭ್ಯಗಳು ಈ ಕಾರಿನಲ್ಲಿವೆ.

ಹೊಸ ವಿನ್ಯಾಸದ ಜೀಪ್ ಕಂಪಾಸ್ ಬೆಡ್‌ರಾಕ್ ಎಡಿಷನ್ ಬಿಡುಗಡೆ

ಇನ್ನು ಈ ಹೊಸ ಎಡಿಷನ್ ಕಾರುಗಳು ಈ ಹಿಂದಿನ ಜೀಪ್ ಕಂಪಾಸ್ ಸಾಮಾನ್ಯ ಮಾದರಿಯಂತೆಯೇ ಉಳಿದೆಲ್ಲಾ ಸೌಲಭ್ಯಗಳನ್ನು ಪಡೆದುಕೊಂಡಿರಲಿದ್ದು, ಸೀಮಿತ ಅವಧಿಗೆ ಮಾತ್ರ ಜೀಪ್ ಸಂಸ್ಥೆಯು ಬೆಡ್‌ರಾಕ್ ಎಡಿಷನ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹೀಗಾಗಿ ಹೊಸ ಕಾರುಗಳ ಮುಂದಿನ ಕೆಲವೇ ದಿನಗಳ ಅವಧಿಗೆ ಖರೀದಿ ಮಾಡಬಹುದು.

ಹೊಸ ವಿನ್ಯಾಸದ ಜೀಪ್ ಕಂಪಾಸ್ ಬೆಡ್‌ರಾಕ್ ಎಡಿಷನ್ ಬಿಡುಗಡೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಈ ಹಿಂದೆ ಕಂಪಾಸ್ ಎಸ್‌ಯುವಿ ಕಾರುಗಳು 20 ಸಾವಿರ ಮಾರಾಟ ಸಂಖ್ಯೆ ದಾಟಿದ್ದ ವೇಳೆ ಸ್ಪೆಷಲ್ ಎಡಿಷನ್ ಪರಿಚಯಿಸಿದ್ದ ಜೀಪ್ ಸಂಸ್ಥೆಯು ಇದೀಗ 25 ಸಾವಿರ ಮಾರಾಟ ಸಂಖ್ಯೆ ದಾಟಿದ ಬೆನ್ನಲ್ಲೇ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಬೆಡ್‌ರಾಕ್ ಎಡಿಷನ್ ಹೊರತಂದಿದೆ.

ಹೊಸ ವಿನ್ಯಾಸದ ಜೀಪ್ ಕಂಪಾಸ್ ಬೆಡ್‌ರಾಕ್ ಎಡಿಷನ್ ಬಿಡುಗಡೆ

ಸ್ಪೋರ್ಟಿ ಲುಕ್ ಎಸ್‌ಯುವಿ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ಇದೊಂದು ಉತ್ತಮ ಅವಕಾಶ ಎನ್ನಬಹುದಾಗಿದ್ದು, ಈ ಹೊಸ ಕಾರು ಮಾರುಕಟ್ಟೆಯಲ್ಲಿನ ಮಹೀಂದ್ರಾ ಎಕ್ಸ್‌ಯುವಿ500 ಫೇಸ್‌ಲಿಫ್ಟ್, ಟಾಟಾ ಹೆಕ್ಸಾ ಮತ್ತು ಹ್ಯುಂಡೈ ಟಕ್ಸನ್ ಕಾರುಗಳಿಗೆ ಪೈಪೋಟಿ ನೀಡುವ ಗುಣಲಕ್ಷಣಗಳನ್ನು ಹೊಂದಿದೆ.

Article Published On: Monday, June 18, 2018, 20:30 [IST]
English summary
Jeep Compass Bedrock Edition Launched In India — Priced At Rs 17.53 Lakh.
Read more on jeep suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+