ಅಪಘಾತದಲ್ಲಿ ಗಾಯಾಳುಗಳನ್ನು ರಕ್ಷಣೆ ಮಾಡಿದ್ರೆ ಸಿಗಲಿದೆ ಭಾರೀ ಬಹುಮಾನ..

By Praveen Sannamani

ಅಪಘಾತಗಳ ಸಂದರ್ಭದಲ್ಲಿ ಬಹುತೇಕ ಜನ ಗಾಯಾಳುಗಳ ನೆರವಿಗೆ ಬರಲು ಹಿಂದೇಟು ಹಾಕುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಕ್ಕೆ ಕಾರಣ, ಎಲ್ಲಿ ನಮ್ಮ ವಿರುದ್ಧ ಕೇಸ್ ದಾಖಲಾಗುತ್ತದೆಯೋ, ಎಲ್ಲಿ ಕೋರ್ಟ್, ಕಚೇರಿ ಎಂದು ತಿರುಗಾಡುವ ಪ್ರಸಂಗಗಳು ಎದುರಾಗುತ್ತವೆಯೋ ಎಂದು ಎಷ್ಟೋ ಮಂದಿ ಸಂತ್ರಸ್ತರ ನೆರವಿಗೆ ಹೋಗದೇ ಇರುವುದನ್ನು ಪ್ರತೀ ನಿತ್ಯ ನೋಡುತ್ತಿರುತ್ತೇವೆ. ಆದ್ರೆ ಇದೀಗ ಆ ಭಯ ಬೇಡವೇ ಬೇಡ.

ಅಪಘಾತದಲ್ಲಿ ಗಾಯಾಳುಗಳನ್ನು ರಕ್ಷಣೆ ಮಾಡಿದ್ರೆ ಸಿಗಲಿದೆ ಭಾರೀ ಬಹುಮಾನ..

ಕಳೆದ ವರ್ಷವೇ ಸುಪ್ರೀಂಕೋರ್ಟ್ ಅಪಘಾತದಲ್ಲಿ ಸಂತ್ರಸ್ತರಿಗೆ ನೆರವಾಗುವ ಆಪತ್ಭಾಂದವರಿಗೆ ಬೆಂಬಲ ಸೂಚಿಸಿ ಹೊಸ ನಿಯಮಾವಳಿಗಳನ್ನು ಪ್ರಕಟಿಸಿದ್ದಲ್ಲದೇ, ಅಪಘಾತಗಳು ಸಂಭವಿಸಿದಾಗ ಯಾರು ಬೇಕಾದರು ಭಯವಿಲ್ಲದೆಯೇ ಸಂತ್ರಸ್ತರಿಗೆ ನೆರವಾಗಬಹುದು ಎಂದು ಹೇಳಿತ್ತು. ಅಂತೆಯೇ ಹೊಸ ನಿಯಮ ಜಾರಿ ಮಾಡಿದ್ದ ಕೇಂದ್ರ ಸರ್ಕಾರವು ಸಹ ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಅಪಘಾತದಲ್ಲಿ ಸಂತ್ರಸ್ತರಿಗೆ ನೆರವಾಗುವ ಆಪತ್ಭಾಂದವರಿಗೆ ವಿಶೇಷ ಬಹುಮಾನ ನೀಡಲು ಮುಂದಾಗಿದೆ.

ಅಪಘಾತದಲ್ಲಿ ಗಾಯಾಳುಗಳನ್ನು ರಕ್ಷಣೆ ಮಾಡಿದ್ರೆ ಸಿಗಲಿದೆ ಭಾರೀ ಬಹುಮಾನ..

ಹೌದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರೇ ಈ ವಿಚಾರವನ್ನ ಪ್ರಸ್ತಾಪಿಸಿದ್ದು, ಗೃಹ ಇಲಾಖೆಯ ಅನುಮೊದನೆ ನಂತರ ಈ ಬಗ್ಗೆ ಅಧಿಕೃತವಾಗಿ ಹೊಸ ಯೋಜನೆಯನ್ನು ಜಾರಿಯಾಗಲಿದೆ ಎಂದಿದ್ದಾರೆ.

ಅಪಘಾತದಲ್ಲಿ ಗಾಯಾಳುಗಳನ್ನು ರಕ್ಷಣೆ ಮಾಡಿದ್ರೆ ಸಿಗಲಿದೆ ಭಾರೀ ಬಹುಮಾನ..

'ಜೀವನ್ ರಕ್ಷಾ ಪದಕ್'

ಅಪಘಾತದಲ್ಲಿ ಗಾಯಾಳುಗಳ ನೆರವಿಗೆ ಧಾವಿಸಿ ಪ್ರಾಣ ಉಳಿಸಲು ನೆರವಾಗುವ ಆಪತ್ಭಾಂದವರಿಗೆ ಕೇಂದ್ರ ಸರ್ಕಾರವು ಜೀವನ್ ರಕ್ಷಾ ಪದಕ್ ನೀಡಲಿದ್ದು, ಅಪಘಾತದಲ್ಲಿ ಸಿಲುಕಿ ಪ್ರಾಣಕಳೆದಕೊಳ್ಳುವವರ ಸಂಖ್ಯೆಯನ್ನ ತಡೆಯಲು ಇದು ನೆರವಾಗಲಿದೆ ಎನ್ನಲಾಗಿದೆ.

ಅಪಘಾತದಲ್ಲಿ ಗಾಯಾಳುಗಳನ್ನು ರಕ್ಷಣೆ ಮಾಡಿದ್ರೆ ಸಿಗಲಿದೆ ಭಾರೀ ಬಹುಮಾನ..

ಇದಕ್ಕಾಗಿಯೇ ಕೆಲವು ಮಾನದಂಡಗಳನ್ನ ತರುತ್ತಿರುವ ಕೇಂದ್ರ ಸರ್ಕಾರವು, ಅಪಘಾತವಾದ ತಕ್ಷಣವೇ ಗಾಯಾಳುಗಳ ರಕ್ಷಣೆ ಧಾವಿಸಿ ಅಗತ್ಯ ವೈದ್ಯಕೀಯ ಸೌಲಭ್ಯಕ್ಕೆ ನೆರವಾಗುವಂತಹ ವ್ಯಕ್ತಿಗಳಿಗೆ 'ಜೀವನ್ ರಕ್ಷಾ ಪದಕ್' ನೀಡಿ ಗೌರವಿಸುವುದರ ಜೊತೆಗೆ ನಗದು ಬಹುಮಾನವನ್ನು ಸಹ ನೀಡಲು ಚಿಂತನೆ ನಡೆಸಿದೆ.

ಅಪಘಾತದಲ್ಲಿ ಗಾಯಾಳುಗಳನ್ನು ರಕ್ಷಣೆ ಮಾಡಿದ್ರೆ ಸಿಗಲಿದೆ ಭಾರೀ ಬಹುಮಾನ..

ಸದ್ಯ ಕೇಂದ್ರ ಗೃಹ ಇಲಾಖೆಯ ಜೊತೆ ಮಾತುಕತೆ ನಡೆಸಿರುವ ಕೇಂದ್ರ ಸಾರಿಗೆ ಇಲಾಖೆಯು ಹೊಸ ಯೋಜನೆಯ ಅನುಮೋದನೆಗಾಗಿ ಎದುರು ನೋಡುತ್ತಿದ್ದು, ಅಪಘಾತದಲ್ಲಿ ಸಂತ್ರಸ್ತರಿಗೆ ನೆರವಾಗುವ ಆಪತ್ಭಾಂದವರಿಗೆ ನಗದು ಬಹುಮಾನ ನೀಡುವ ಸಂಬಂಧ ಹಣಕಾಸು ಇಲಾಖೆಯ ಸಹಾಯವು ಸಹ ಇಲ್ಲಿ ಕೋರಲಾಗಿದೆ.

ಅಪಘಾತದಲ್ಲಿ ಗಾಯಾಳುಗಳನ್ನು ರಕ್ಷಣೆ ಮಾಡಿದ್ರೆ ಸಿಗಲಿದೆ ಭಾರೀ ಬಹುಮಾನ..

ಅಪಘಾತಗಳಲ್ಲಿ ಸಾವನ್ನಪ್ಪುವರರ ಸಂಖ್ಯೆಯನ್ನ ತಡೆಯುವ ಸಂಬಂಧ ಈ ಯೋಜನೆಗೆ ಅನುಮೊದನೆ ಸಿಗುವುದು ಬಹುತೇಕ ಖಚಿತವಾಗಿದ್ದು,ಮುಂದಿನ ಕೆಲವೇ ತಿಂಗಳಲ್ಲಿ ಈ ಮಹತ್ವದ ಯೋಜನೆ ಜಾರಿಯಾಗಲಿದೆ ಎಂದು ಸಚಿವ ನಿತಿನ್ ಗಡ್ಕರಿಯವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಪಘಾತದಲ್ಲಿ ಗಾಯಾಳುಗಳನ್ನು ರಕ್ಷಣೆ ಮಾಡಿದ್ರೆ ಸಿಗಲಿದೆ ಭಾರೀ ಬಹುಮಾನ..

ಹೀಗಾಗಿ ಈ ಯೋಜನೆಯು ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆಯನ್ನ ತಗ್ಗಿಸಲು ನೆರವಾಗಲಿದ್ದು, ಅಪಘಾತವಾದಾಗ ಗಾಯಾಳುಗಳ ನೆರವಿಗೆ ಹಿಂದೇಟು ಹಾಕುವವರನ್ನು ಇದು ಬೆಂಬಲಿಸಲು ಸಹಕಾರಿಯಾಗಲಿದೆ ಎನ್ನಬಹುದು.

ಅಪಘಾತದಲ್ಲಿ ಗಾಯಾಳುಗಳನ್ನು ರಕ್ಷಣೆ ಮಾಡಿದ್ರೆ ಸಿಗಲಿದೆ ಭಾರೀ ಬಹುಮಾನ..

ಇನ್ನು ಈ ಹಿಂದೆ ಸುಪ್ರೀಂ ಹೊರಡಿಸಿರುವ ಹೊಸ ನಿಯಮಾವಳಿಯ ಪ್ರಕಾರ, ಅಪಘಾತ ಸಂಭವಿಸಿದ ನಂತರ ಸಂತ್ರಸ್ತನ ನೆರವಿಗೆ ಬರುವ ವ್ಯಕ್ತಿಯನ್ನು ಪೊಲೀಸರು ಹೆಸರು ಮತ್ತು ಸಂಪರ್ಕ ಕುರಿತ ಮಾಹಿತಿಯನ್ನು ಬಹಿರಂಗಗೊಳಿಸುವಂತೆ ಬಲವಂತೆ ಮಾಡುವಂತಿಲ್ಲ ನಿಯಮವು ಈಗಾಗಲೇ ಜಾರಿಯಲ್ಲಿದೆ.

ಅಪಘಾತದಲ್ಲಿ ಗಾಯಾಳುಗಳನ್ನು ರಕ್ಷಣೆ ಮಾಡಿದ್ರೆ ಸಿಗಲಿದೆ ಭಾರೀ ಬಹುಮಾನ..

ಇದಲ್ಲದೇ ಒಂದು ವೇಳೆ ಸ್ವಯಂಪ್ರೇರಿತರಾಗಿ ಹೆಸರು ಮತ್ತು ಸಂಪರ್ಕ ಮಾಹಿತಿಯನ್ನು ಪೊಲೀಸರಿಗೆ ನೀಡಿದರೆ, ಪೊಲೀಸರು ಒಂದೇ ಬಾರಿಗೆ ವಿಚಾರಣೆ ಪ್ರಕ್ರಿಯೆನ್ನು ಮುಗಿಸಬೇಕು. ವ್ಯಕ್ತಿಯನ್ನು ಪದೇಪದೇ ನ್ಯಾಯಾಲಯ, ಪೊಲೀಸ್ ಠಾಣೆಯೆಂದು ಅಲೆಸುವಂತಿಲ್ಲ ಎಂದು ಹೇಳಿದೆ. ಹೀಗಾಗಿ ಅಪಘಾತದಲ್ಲಿ ಗಾಯಾಳುಗಳಿಗೆ ನೀವು ಯಾವುದೇ ಭಯವಿಲ್ಲದೇ ನೆರವಿಗೆ ಧಾವಿಸಿ ಜೀವವನ್ನು ಉಳಿಸಬಹುದಾಗಿದೆ.

ಅಪಘಾತದಲ್ಲಿ ಗಾಯಾಳುಗಳನ್ನು ರಕ್ಷಣೆ ಮಾಡಿದ್ರೆ ಸಿಗಲಿದೆ ಭಾರೀ ಬಹುಮಾನ..

ಪರಿಹಾರದ ಮೊತ್ತದಲ್ಲೂ ದುಪ್ಪಟ್ಟು..!

ಅಪಘಾತದಲ್ಲಿ ಸಾವನ್ನಪ್ಪಿದ ಮತ್ತು ಗಂಭೀರವಾಗಿ ಗಾಯಗೊಂಡ ಸಂತ್ರಸ್ತರಿಗೆ ಇದುವರೆಗೆ ಒದಗಿಸಲಾಗುತ್ತಿದ್ದ ಪರಿಹಾರದ ಮೊತ್ತವನ್ನು ಇದೀಗ ಹತ್ತು ಪಟ್ಟು ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರವು ಮೃತರ ಕುಟುಂಬಗಳ ನೆರವಿಗೆ ಧಾವಿಸಿದೆ.

ಅಪಘಾತದಲ್ಲಿ ಗಾಯಾಳುಗಳನ್ನು ರಕ್ಷಣೆ ಮಾಡಿದ್ರೆ ಸಿಗಲಿದೆ ಭಾರೀ ಬಹುಮಾನ..

ಸದ್ಯ ಅಪಘಾತದಲ್ಲಿ ಮೃತರ ಕುಟುಂಬಗಳಿಗೆ ಕೇಂದ್ರ ಸರ್ಕಾರವು ರೂ. 50 ಸಾವಿರ ಪರಿಹಾರ ನೀಡುತ್ತಿದ್ದು, ಅಪಘಾತಗಳಲ್ಲಿ ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಸಂತ್ರಸ್ತರಿಗೆ ರೂ.25 ಸಾವಿರ ಪರಿಹಾರ ಒದಗಿಸುತ್ತಿದೆ.

ಅಪಘಾತದಲ್ಲಿ ಗಾಯಾಳುಗಳನ್ನು ರಕ್ಷಣೆ ಮಾಡಿದ್ರೆ ಸಿಗಲಿದೆ ಭಾರೀ ಬಹುಮಾನ..

ಆದ್ರೆ ಅಲ್ಪ ಪ್ರಮಾಣದ ಪರಿಹಾರದ ಮೊತ್ತದಿಂದ ಕೆಲವು ಕುಟುಂಬಗಳು ಆರ್ಥಿಕವಾಗಿ ಪರದಾಡುವಂತಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರವು ಪರಿಹಾರ ಮೊತ್ತವನ್ನು 50 ಸಾವಿರದಿಂದ 5 ಲಕ್ಷ ಹೆಚ್ಚಿಸಿದ್ದು, ಗಾಯಾಳುಗಳಿಗೆ 25 ಸಾವಿರದಿಂದ 2.5 ಲಕ್ಷ ಪರಿಹಾರ ಒದಗಿಸುವ ಸುತ್ತೋಲೆಗೆ ಸಹಿ ಹಾಕಿದೆ.

ಅಪಘಾತದಲ್ಲಿ ಗಾಯಾಳುಗಳನ್ನು ರಕ್ಷಣೆ ಮಾಡಿದ್ರೆ ಸಿಗಲಿದೆ ಭಾರೀ ಬಹುಮಾನ..

ಕೇಂದ್ರ ಸರ್ಕಾರ ಹೊಸ ನಿಯಮದಂತೆ, ಅಪಘಾತದಲ್ಲಿ ಮೃತಪಟ್ಟ ಪ್ರತಿಯೊಬ್ಬರು 5 ಲಕ್ಷ ಪರಿಹಾರಕ್ಕೆ ಅರ್ಹರಾಗಿದ್ದು, ಕೆಲವು ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತರ ಕುಟುಂಬಗಳು ಇನ್ನು ಹೆಚ್ಚಿನ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಸಹ ಅವಕಾಶ ನೀಡಿದೆ.

Kannada
Read more on auto facts accident
English summary
Jeevan Raksha Padak Award for those who Help Road Accident Victims.
Story first published: Thursday, August 23, 2018, 13:30 [IST]

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more