ಕರ್ನಾಟಕ ಬಜೆಟ್ 2018: ಎಲೆಕ್ಟ್ರಿಕ್ ಕಾರುಗಳ ಬಳಕೆದಾರರಿಗೆ ಭರ್ಜರಿ ಗಿಫ್ಟ್

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದು, ಹಿಂದಿನ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳ ಜೊತೆಗೆ ಜೊತೆ ಹಲವು ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದಾರೆ.

By Praveen Sannamani

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದು, ಹಿಂದಿನ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳ ಜೊತೆಗೆ ಜೊತೆ ಹಲವು ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಬೆಂಗಳೂರಿನ ಜನತೆಗೆ ತಲೆನೋವಾಗಿರುವ ಮಾಲಿನ್ಯ ಹೆಚ್ಚಳಕ್ಕೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರವು ಹಲವು ಜನಪರ ಯೋಜನೆಗಳನ್ನು ಜಾರಿಗೆ ಮಾಡಿದೆ.

ಕರ್ನಾಟಕ ಬಜೆಟ್ 2018: ಎಲೆಕ್ಟ್ರಿಕ್ ಕಾರುಗಳ ಬಳಕೆದಾರರಿಗೆ ಭರ್ಜರಿ ಗಿಫ್ಟ್

ಹೆಚ್ಚುತ್ತಿರುವ ವಾಹನಗಳಿಂದ ಮಾಲಿನ್ಯ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದ್ದು, ಇದಕ್ಕೆ ಕಡಿವಾಣ ಹಾಕುವ ಉದ್ದೇಶದೊಂದಿಗೆ ಹೊಸ ಸರ್ಕಾರವು ಎಲೆಕ್ಟ್ರಿಕ್ ಕಾರುಗಳನ್ನು ಉತ್ತೇಜಿಸಲು ಮುಂದಾಗಿದೆ. ಜೊತೆಗೆ ರಾಜ್ಯ ಸರ್ಕಾರವೇ ಬೆಂಗಳೂರಿನ ಪ್ರಮುಖ ಕಡೆಗಳಲ್ಲಿ ಬರೋಬ್ಬರಿ 100 ಚಾರ್ಜಿಂಗ್ ಸ್ಟೆಷನ್‌ಗಳನ್ನು ನಿರ್ಮಾಣ ಮಾಡಲು ಯೋಜನೆ ಅಸ್ತು ಎಂದಿದೆ.

ಕರ್ನಾಟಕ ಬಜೆಟ್ 2018: ಎಲೆಕ್ಟ್ರಿಕ್ ಕಾರುಗಳ ಬಳಕೆದಾರರಿಗೆ ಭರ್ಜರಿ ಗಿಫ್ಟ್

ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣಕ್ಕಾಗಿ 4 ಕೋಟಿ ವೆಚ್ಚ

ಹೌದು, ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪ್ರೋತ್ಸಾಹಿಸಲು ಮುಂದಾಗಿರುವ ರಾಜ್ಯ ಸರ್ಕಾರವು ಬರೋಬ್ಬರಿ 4 ಕೋಟಿ ರೂಪಾಯಿ ವೆಚ್ಚದಲ್ಲಿ 100 ಚಾರ್ಜಿಂಗ್ ಸ್ಟೆಷನ್‌ಗಳನ್ನು ನಿರ್ಮಾಣಕ್ಕೆ ಮುಂದಾಗಿದೆ.

ಕರ್ನಾಟಕ ಬಜೆಟ್ 2018: ಎಲೆಕ್ಟ್ರಿಕ್ ಕಾರುಗಳ ಬಳಕೆದಾರರಿಗೆ ಭರ್ಜರಿ ಗಿಫ್ಟ್

ಬೆಂಗಳೂರಿನ ಪ್ರಮುಖ ಕಡೆಗಳಲ್ಲಿ ನಿರ್ಮಾಣವಾಗುವ 100 ಚಾರ್ಜಿಂಗ್ ಸ್ಟೆಷನ್‌ಗಳು ರಾಜ್ಯ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ನಿರ್ವಹಣೆ ಮಾಡಲಿದ್ದು, ಅಗತ್ಯ ವಿದ್ಯುತ್ ಪೂರೈಕೆಗೂ ಇಂಧನ ಇಲಾಖೆಯು ಕೈ ಜೋಡಿಸಲಿದೆ.

ಕರ್ನಾಟಕ ಬಜೆಟ್ 2018: ಎಲೆಕ್ಟ್ರಿಕ್ ಕಾರುಗಳ ಬಳಕೆದಾರರಿಗೆ ಭರ್ಜರಿ ಗಿಫ್ಟ್

ಇದರಲ್ಲಿ ಮೊದಲ ಹಂತವಾಗಿ 30ರಿಂದ 40 ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೆಷನ್‌ಗಳು ತಲೆಎತ್ತಲಿದ್ದು, ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಯೋಜಿಸಲಾಗಿರುವ ಎಲ್ಲಾ ಚಾರ್ಜಿಂಗ್ ಸ್ಟೆಷನ್‌ಗಳ ಸಹ ಕಾರ್ಯನಿರ್ವಹಣೆ ಮಾಡಲಿವೆ ಎನ್ನಲಾಗಿದೆ.

ಕರ್ನಾಟಕ ಬಜೆಟ್ 2018: ಎಲೆಕ್ಟ್ರಿಕ್ ಕಾರುಗಳ ಬಳಕೆದಾರರಿಗೆ ಭರ್ಜರಿ ಗಿಫ್ಟ್

ಎಲೆಕ್ಟ್ರಿಕ್ ಬಸ್ ಖರೀದಿಗೆ 100 ಕೋಟಿ

ಸಿಲಿಕಾನ್ ಸಿಟಿ ಜನತೆಗೆ ಮತ್ತೊಂದು ಖುಷಿಯ ವಿಚಾರ ಅಂದ್ರೆ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗೆ ಈ ಬಾರಿಯ ಬಜೆಟ್‌ನಲ್ಲಿ ಭಾರೀ ಮೊತ್ತದ ಅನುದಾನ ನೀಡಲಾಗಿದೆ. 80 ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ಬರೋಬ್ಬರಿ 100 ಕೋಟಿ ಅನುದಾನ ಘೋಷಣೆ ಮಾಡಿರುವ ರಾಜ್ಯ ಸರ್ಕಾರವು ಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿದೆ.

ಕರ್ನಾಟಕ ಬಜೆಟ್ 2018: ಎಲೆಕ್ಟ್ರಿಕ್ ಕಾರುಗಳ ಬಳಕೆದಾರರಿಗೆ ಭರ್ಜರಿ ಗಿಫ್ಟ್

ರಾಜ್ಯ ಸರ್ಕಾರವು ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ಘೋಷಣೆ ಮಾಡಲಾಗಿರುವ 100 ಕೋಟಿ ಅನುದಾನದಲ್ಲಿ 80 ಎಲೆಕ್ಟ್ರಿಕ್ ಬಸ್‌ಗಳು ಸೇರಿದಂತೆ ಅಗತ್ಯವಿರುವ ಕಡೆಗಳಲ್ಲಿ ಚಾರ್ಜಿಂಗ್ ಸ್ಟೆಷನ್‌ಗಳನ್ನು ಇದೇ ಅನುದಾನದಲ್ಲಿ ನಿರ್ಮಾಣ ಮಾಡಲಿದೆ.

ಕರ್ನಾಟಕ ಬಜೆಟ್ 2018: ಎಲೆಕ್ಟ್ರಿಕ್ ಕಾರುಗಳ ಬಳಕೆದಾರರಿಗೆ ಭರ್ಜರಿ ಗಿಫ್ಟ್

ಇನ್ಮುಂದೆ ಹೊಸ ವಾಹನ ಖರೀದಿ ಕಷ್ಟ ಕಷ್ಟ

ದೊಸ್ತಿ ಸರ್ಕಾರವು ಹಲವು ಜನಪರ ಯೋಜನೆಗಳನ್ನು ಜಾರಿಗೆ ಮಾಡಿದೆ. ಆದ್ರೆ ಆ್ಯಯವ್ಯಯ ಸರಿದೂಗಿಸಲು ಹೊಸ ವಾಹನ ಮೇಲಿನ ತೆರಿಗೆಯಲ್ಲಿ ಭಾರೀ ಹೆಚ್ಚಳ ಮಾಡಿದೆ.

ಕರ್ನಾಟಕ ಬಜೆಟ್ 2018: ಎಲೆಕ್ಟ್ರಿಕ್ ಕಾರುಗಳ ಬಳಕೆದಾರರಿಗೆ ಭರ್ಜರಿ ಗಿಫ್ಟ್

ಆರ್ಥಿಕ ಹೊರೆ ತಪ್ಪಿಸಲು ವಾಹನಗಳ ಖರೀದಿ ಮೇಲೆ ರಾಜ್ಯ ಸರ್ಕಾರವು ಶೇ.50 ತೆರಿಗೆ ಹೆಚ್ಚಳ ಮಾಡಿದ್ದು, ಒಂದು ಲಕ್ಷ ಮೌಲ್ಯದ ವಾಹನ ಖರೀದಿಸುವುದಾದರೇ ಅದಕ್ಕೆ ಬರೋಬ್ಬರಿ 17 ರಿಂದ 19 ಸಾವಿರ ತೆರಿಗೆ ಪಾವತಿಸಬೇಕಾಗುತ್ತದೆ.

ಕರ್ನಾಟಕ ಬಜೆಟ್ 2018: ಎಲೆಕ್ಟ್ರಿಕ್ ಕಾರುಗಳ ಬಳಕೆದಾರರಿಗೆ ಭರ್ಜರಿ ಗಿಫ್ಟ್

ಟ್ರಾಫಿಕ್ ಸಮಸ್ಯೆ ತಗ್ಗಿಸಲು ಮೆಟ್ರೊ 3 ಹಂತ ವಿಸ್ತರಣೆ

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿದ ಒಟ್ಟು 2,13,734 ಲಕ್ಷ ಕೋಟಿ ಬಜೆಟ್‌ನಲ್ಲಿ ಒಂದು ಸಾವಿರ ಕೋಟಿ ಕೇವಲ ನಮ್ಮ ಮೆಟ್ರೋ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಟ್ರಾಫಿಕ್ ಸಮಸ್ಯೆ ತಗ್ಗಿಸಲು ನಮ್ಮ ಮೆಟ್ರೊ 3ನೇ ಹಂತದ ವಿಸ್ತರಣೆಗೆ ಅನುಮೊದನೆ ನೀಡಿದೆ.

ಕರ್ನಾಟಕ ಬಜೆಟ್ 2018: ಎಲೆಕ್ಟ್ರಿಕ್ ಕಾರುಗಳ ಬಳಕೆದಾರರಿಗೆ ಭರ್ಜರಿ ಗಿಫ್ಟ್

ನಮ್ಮ ಮೆಟ್ರೋದಿಂದ ಲಕ್ಷಾಂತರ ಪ್ರಯಾಣಿಕರಿಗೆ ಅನುಕೂಲವಾಗುತ್ತಿದ್ದು, ಟ್ರಾಫಿಕ್ ಸಮಸ್ಯೆಯು ಸ್ವಲ್ಪ ಮಟ್ಟಿಗೆ ದೂರವಾಗಿದೆ ಎನ್ನಬಹುದು. ಈಗಾಗಲೇ ನಮ್ಮ ಮೆಟ್ರೋ ಮೊದಲ 42.3 ಕಿ.ಮೀ ಹಂತದ ಕಾಮಗಾರಿ ಮುಕ್ತಾಯವಾಗಿದ್ದು, ಆ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಿದೆ. ಇನ್ನು ಎರಡನೇ ಹಂತದ ಕಾಮಗಾರಿ 2019ರಲ್ಲಿ ಮುಗಿಯಲಿದೆ.

ಕರ್ನಾಟಕ ಬಜೆಟ್ 2018: ಎಲೆಕ್ಟ್ರಿಕ್ ಕಾರುಗಳ ಬಳಕೆದಾರರಿಗೆ ಭರ್ಜರಿ ಗಿಫ್ಟ್

ಇದೀಗ ರಾಜ್ಯ ಬಜೆಟ್‌ನಲ್ಲಿ ಸಿಂಹಪಾಲನ್ನು ಬೆಂಗಳೂರಿಗೆ ಮೀಸಲಿರಿಸಲಾಗಿದ್ದು, ನಮ್ಮ ಮೆಟ್ರೋ ಅಭಿವೃದ್ಧಿ ಹಾಗೂ ಮೂರನೇ ಹಂತದ ಕಾಮಗಾರಿಗೆ ಒಂದು ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಮೆಟ್ರೋ ಮೂರನೇ ಹಂತದಲ್ಲಿ ಜೆಪಿನಗರದಿಂದ ಕೆಆರ್‌ ಪುರಂಗೆ 42 ಕಿ.ಮೀ ಮೆಟ್ರೋ ಮಾರ್ಗ ನಿರ್ಮಾಣವಾಗಿದೆ.

More from DriveSpark

Article Published On: Thursday, July 5, 2018, 14:06 [IST]
English summary
Karnataka Chief Minister HD Kumaraswamy presented his first budget. HDK allots 100 electric charging station for namma bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+