ದೇಶಿಯ ಮಾರುಕಟ್ಟೆಯಲ್ಲಿ ಶೀಘ್ರವೇ ಬಿಡುಗಡೆಯಾಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳಿವು

ಪ್ರಸ್ತುತ ಮಾರುಕಟ್ಟೆಯಲ್ಲಿ ಬೆರಳು ಸಂಖ್ಯೆಯಷ್ಟು ಎಲೆಕ್ಟ್ರಿಕ್ ಕಾರುಗಳು ಮಾರಾಟವಾಗುತ್ತಿದೆ ಅಂತಾನೇ ಹೇಳ್ಬೋದು, ಅವುಗಳು ಟಾಟಾ ಟಿಗೋರ್ ಇವಿ, ಮಹೀಂದ್ರಾ ಇ ವೆರಿಟೋ ಮತ್ತು ಮಹೀಂದ್ರಾ ಇ20ಪ್ಲಸ್. ಆದರೆ ಮುಂದಿನ ಕೆಲವೇದಿನಗಳಲ್ಲಿ ದೇಶಿಯ ಆಟೋಮೊಬೈಲ್ ಉದ್ಯಮದ್ಲಲಿ ಬಹುದೊಡ್ಡ ಬದಲಾವಣೆಯಾಗಲಿದ್ದು, ಇನ್ನಿತರೆ ವಾಹನ ತಯಾರಕ ಸಂಸ್ಥೆಗಳು ತಮ್ಮ ಮೊದಲ ಎಲೆಕ್ಟ್ರಿಕ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದ್ದಾರೆ.

ದೇಶಿಯ ಮಾರುಕಟ್ಟೆಯಲ್ಲಿ ಶೀಘ್ರವೇ ಬಿಡುಗಡೆಯಾಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳಿವು

ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‍‍ರವ ನೇತೃತ್ವದಲ್ಲಿ ಮೂಡಿಬಂದ 2019-20ರ ಬಡ್ಜೆಟ್‍ನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಕೇವಲ ಎಲೆಕ್ಟ್ರಿಕ್ ವಾಹನಗಳ ಹವಾ ಜೋರಾಗಿರಬೇಕೆಂದು ಹೊಸ ಯೋಜನೆಗಳನ್ನು ಮಾಡಿರುವುದರ ಬಗ್ಗೆ ನಾವೀಗಾಗಲೇ ತಿಳಿದಿದ್ದೇವೆ. ಈ ಬದಲಾವಣೆಯು ಕೇವಲ ಮುಂಡಿನ 12 ತಿಂಗಳಿನಲ್ಲಿ ನಡೆಯಲಿದ್ದು, ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಮತ್ತು ಟಾಟಾ ಮೋಟಾರ್ಸ್ ಹಾಗು ಇನ್ನಿತರೆ ಸಂಸ್ಥೆಗಳಾದ ಹ್ಯುಂಡೈ, ಎಂಜಿ ಮೋಟಾರ್ಸ್ ಮತ್ತು ಆಡಿ ಸಂಸ್ಥೆಗಳು ತಮ್ಮ ಮೊದಲ ಎಲೆಕ್ಟ್ರಿಕ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಿದ್ದಾರೆ.

ದೇಶಿಯ ಮಾರುಕಟ್ಟೆಯಲ್ಲಿ ಶೀಘ್ರವೇ ಬಿಡುಗಡೆಯಾಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳಿವು

ಇವಿ ಖರೀದಿ ಮೇಲೆ ತೆರಿಗೆ ವಿನಾಯ್ತಿ..! ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ತೆರಿಗೆ ವಿನಾಯ್ತಿ ನೀಡಿದ್ದು, ಬರೋಬ್ಬರಿ 1.5 ಲಕ್ಷದವರೆಗೆ ತೆರಿಗೆ ವಿನಾಯ್ತಿಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಈ ಹಿಂದಿನ ಫೇಮ್ 2 ಯೋಜನೆ ಅಡಿಯಲ್ಲಿ ಘೋಷಣೆ ಮಾಡಲಾಗಿರುವ ಸಬ್ಸಡಿ ಯೋಜನೆಯನ್ನು ಸಹ ಮುಂದುವರಿಸಲಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಶೀಘ್ರವೇ ಬಿಡುಗಡೆಯಾಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳಿವು

ಜಾಗತಿಕ ಮಾರುಕಟ್ಟೆಗಳಲ್ಲಿರುವ ವಾಹನಗಳ ಬೇಡಿಕೆಗಿಂತಲೂ ದೇಶಿಯ ಮಾರುಕಟ್ಟೆಯಲ್ಲಿ ಇರುವ ಬೇಡಿಕೆಯು ಹೆಚ್ಚಿದೆ ಅಂತಾನೇ ಹೇಳ್ಬೋದು, ಹಾಗೆಯೆ ಇನ್ನೇನು ದೇಶದೆಲ್ಲೆಡೆ ಎಲೆಕ್ಟ್ರಿಕ್ ವಾಹನಮಯವಾಗುವ ಸಲುವಾಗಿ ವಾಹನ ತಯಾರಕ ಸಂಸ್ಥೆಗಳು ತಮ ಇವಿ ವಾಹನಗಳನ್ನು ಬಿಡುಗಡೆ ಮಾಡಲಿದ್ದು, ಅವುಗಳಲ್ಲಿ ಶೀಘ್ರವೇ ಬಿಡುಗಡೆಯಾಗಲಿರುವ ಟಾಪ್ 5 ಬಹು ನಿರೀಕ್ಷಿತ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಿದ್ದೇವೆ.

ದೇಶಿಯ ಮಾರುಕಟ್ಟೆಯಲ್ಲಿ ಶೀಘ್ರವೇ ಬಿಡುಗಡೆಯಾಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳಿವು

ಹ್ಯುಂಡೈ ಕೋನಾ

ಹ್ಯುಂಡೈ ಸಂಸ್ಥೆಯು ತಮ್ಮ ಮೊದಲ ಎಲೆಕ್ಟ್ರಿಕ್ ಎಸ್‍ಯುವಿ ಕಾರನ್ನು ದೇಶಿಯ ಮಾರಕಟ್ಟೆಯಲ್ಲಿ ಇದೇ ಜುಲೈ 9 ರಂದು ಕೋನಾ ಇವಿ ಕಾರನ್ನು ಬಿಡುಗಡೆ ಮಾಡಲಿದ್ದು, ಈ ಕಾರು ಮುಚ್ಚಲಾದ ಫ್ರಂಟ್ ಗ್ರಿಲ್, ಟ್ವಿನ್ ಹೆಡ್‍ಲೈಟ್ ವಿನ್ಯಾಸ ಮತ್ತು ಡಿಆರ್‍ಎಲ್‍, ಎಲ್ಇಡಿ ರಿಯರ್ ಲ್ಯಾಂಪ್ಸ್ ಮತ್ತು 17 ಇಂಚಿನ ಅಲಾಯ್ ವ್ಹೀಲ್ಸ್ ಪಡೆದು ಸ್ಪೋರ್ಟಿ ಲುಕ್ ಅನ್ನು ಈ ಕರು ಹೊಂದಿದೆ.

ದೇಶಿಯ ಮಾರುಕಟ್ಟೆಯಲ್ಲಿ ಶೀಘ್ರವೇ ಬಿಡುಗಡೆಯಾಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳಿವು

ಕೇವಲ ವಿನ್ಯಾಸದಲ್ಲಿ ಮಾತ್ರವಲ್ಲದೆಯೆ ತಾಂತ್ರಿಕತೆಯಲ್ಲಿಯು ಸಹ ಗ್ರಾಹಕರನ್ನು ಸೆಳೆಯಲಿದ್ದು, ಈ ಕಾರಿನಲ್ಲಿ 39.2 ಕಿಲೋಮ್ಯಾಟ್ಸ್ ಮತ್ತು 64.0 ಕಿಲೋಬ್ಯಾಟ್ಸ್ ಎಂಬ ಎರಡು ಬ್ಯಾಟರಿ ಆಯ್ಕೆಯಲ್ಲಿ ಲಭ್ಯವಿರಲಿದೆ. ಈ ಕಾರಿನಲ್ಲಿರುವ ಸ್ಟ್ಯಾಂಡರ್ಡ್ ಮಾದರಿಯು ಒಂದು ಬಾರಿಯ ಚಾರ್ಜ್‍ಗೆ ಸುಮಾರು 312 ಕಿಲೋಮೀಟರ್ ರೇಂಜ್ ಅನ್ನು ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ಈ ಕಾರು ಎಕ್ಸ್ ಶೋರುಂ ಪ್ರಕಾರ ರೂ. 25 ಲಕ್ಷದ ಬೆಲೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ದೇಶಿಯ ಮಾರುಕಟ್ಟೆಯಲ್ಲಿ ಶೀಘ್ರವೇ ಬಿಡುಗಡೆಯಾಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳಿವು

ಆಡಿ ಇ-ಟ್ರಾನ್

ಐಷಾರಾಮಿ ವಾಹನ ತಯಾರಕ ಸಂಸ್ಥೆಯಾದ ಆಡಿ, ಎಲೆಕ್ಟ್ರಿಕ್ ಆಧರಿತ ಇ-ಟ್ರಾನ್ ಎಸ್‍ಯುವಿ ಕಾರನ್ನು ಬಿಡುಗಡೆ ಮಾಡಲಿದೆ. ಈ ಎಲೆಕ್ಟ್ರಿಕ್ ಕಾರು ಎರಡು ಎಲೆಕ್ಟ್ರಿಕ್ ಮೋಟಾರ್ಸ್ ಅನ್ನು ಹೊಂದಿರಲಿದ್ದು, ಆಲ್ ವ್ಹೀಲ್ ಸಿಸ್ಟಂ ಅನ್ನು ಪಡೆದುಕೊಂಡಿರಲಿದೆ. ಇದರಲಿನ ಒಂದು ಬ್ಯಾಟರಿಯು 170 ಬಿಹೆಚ್‍ಪಿಯನ್ನು ಉತ್ಪಾದಿಸಲಿದ್ದು, ಮತ್ತೊಂದು ಬ್ಯಾಟರಿಯು 190ಬಿಹೆಚ್‍ಪಿ ಶಕ್ತಿಯನ್ನು ಹೊರಕಾಹುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಶೀಘ್ರವೇ ಬಿಡುಗಡೆಯಾಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳಿವು

ಒಟ್ಟಾರೆಯಾಗಿ ಸುಮಾರು 360 ಬಿಹೆಚ್‍ಪಿ ಸಾಮರ್ಥ್ಯವನ್ನು ಹೊರಹಾಕಲಿರುವ ಈ ಕಾರು, 561ಎನ್ಎಂ ಟಾರ್ಕ್ ಅನು ಉತ್ಪಾದಿಸುವ ಗುಣವನ್ನು ಹೊಂದಿದೆ. ಹಾಗೆಯೆ ಬೂಸ್ಟ್ ಮೋಡ್‍ನಲ್ಲಿ408 ಬಿಹೆಚ್‍ಪಿ ಮತ್ತು 6664ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದೆ. ಈ ಕಾರು ಗಂಟೆಗೆ ಸುಮಾರು 200 ಕಿಲೋಮೀಟರ್ ವೇಗದಲ್ಲಿ ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ಪಡೆದಿದ್ದು, ದೇಶಿಯ ಮಾರಕಟ್ಟೆಗೆ ಸಿಬಿಯು ಮಾರ್ಗದಿಂದ ಆಮದು ಮಾಡಿಕೊಳ್ಳಲಾಗುತ್ತದೆ, ಹಾಗೆಯೆ ಈ ಕಾರು ಸುಮಾರು 1.15 ಕೋಟಿಯ ಬೆಲೆಯಲ್ಲಿ ಬಿಡೆಯಾಗಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಶೀಘ್ರವೇ ಬಿಡುಗಡೆಯಾಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳಿವು

ಎಂಜಿನ್ ಇಜೆಡ್‍ಎಸ್

ಎಂಜಿ ಮೋಟಾರ್ಸ್ ಸಂಸ್ಥೆಯು ತಮ್ಮ ಎಂಜಿ ಹೆಕ್ಟರ್ ಎಸ್‍ಯುವಿ ಕಾರನ್ನು ಬಿಡುಗಡೆ ಮಾಡುವ ಮೂಲಕ ದೇಶಿಯ ಮಾರುಕಟ್ಟೆಗೆ ಕಾಲಿಟ್ಟಿದ್ದು, ತಮ್ಮ ಎರಡನೆಯ ವಾಹನವನ್ನಾಗಿ ಎಂಜಿ ಇಜೆಡ್ಎಸ್ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲಿದೆ. 5 ಸೀಟರ್ ಮಾದರಿಯಲ್ಲಿ ಬಿಡಗಡೆಯಾಗಲಿರುವ ಈ ಕಾರು ಇದೇ ವರ್ಷದ ಡಿಸೆಂಬರ್‍‍ನಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ದೇಶಿಯ ಮಾರುಕಟ್ಟೆಯಲ್ಲಿ ಶೀಘ್ರವೇ ಬಿಡುಗಡೆಯಾಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳಿವು

ಎಂಜಿ ಮೋಟಾರ್ಸ್ ಫಿನ್‍ಲ್ಯಾಂಡ್ ಮೂಲದ ಕ್ಲೀನ್ ಎನರ್ಜಿ ಫರ್ಮ್ ಆದ ಫಾರ್‍‍ಟಮ್ ಸಂಸ್ಥೆಯಿಂಡ 50 ಕಿಲೋವ್ಯಾಟ್ ಡಿಸಿ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‍ಗಳನ್ನ್ ಸಹ ಇನ್ಸ್ಟಾಲ್ ಮಾಡಲಿದ್ದು, ಮೊದಲಿಗೆ ಈ ಕಾರನ್ನು ದೇಶದ ಪ್ರಮುಖ ನಗರಗಳಾದ, ದೆಹಲಿ-ಎನ್‍ಸಿಆರ್, ಹೈದೆರಾಬಾದ್, ಮುಂಬೈ, ಬೆಂಗಳೂರು ಮತ್ತು ಅಹ್ಮದಾಬಾದ್‍ನಲ್ಲಿ ಬಿಡುಗಡೆ ಮಾಡಲಿದಿ. ಹಾಗೆಯೆ ಈ ಕಾರನ್ನು ಗುಜರಾತ್‍ನಲ್ಲಿನ ಸಂಸ್ಥೆಯ ಪ್ಲಾಂಟ್‍ನಲ್ಲಿ ಉತ್ಪಾದನೆ ಮಾಡಲಾಗುತ್ತದೆ.

ದೇಶಿಯ ಮಾರುಕಟ್ಟೆಯಲ್ಲಿ ಶೀಘ್ರವೇ ಬಿಡುಗಡೆಯಾಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳಿವು

ಟಾಟಾ ಆಲ್‍ಟ್ರೋಜ್ ಇವಿ

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ತಮ್ಮ ಆಲ್‍ಟ್ರೋಜ್ ಇವಿ ಕಾರನ್ನು ಬಿಡುಗಡೆ ಮಾಡುವ ಯೋಜನೆಯಲಿದ್ದು, ಈ ಕಾರಿನ ವಿನ್ಯಾಸವವು ಸಂಸ್ಥೆಯು ಆಲ್ಫಾ (ಯಾಗಿಲ್ ಲೈಟ್ ಪ್ಲೆಕ್ಸಿಬಲ್ ಅಡ್ವಾನ್ಸ್ಡ್) ಎಂಬ ಆರ್ಕಿಟೆಕ್ಚುರ್ ಅನ್ನು ಆಧರಿಸಲಿದ್ದು, ಎಸಿ ಮೋಟಾರ್ ಮತ್ತು ಸಿಂಗಲ್ ಸ್ಪೀಡ್ ಗೇರ್‍‍‍ಬಾಕ್ಸ್ ಜೋಡಣೆಯನ್ನು ಹೊಂದಿರಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಶೀಘ್ರವೇ ಬಿಡುಗಡೆಯಾಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳಿವು

ಟಾಟಾ ಮೋಟಾರ್ಸ್ ಪ್ರಕಾರ ಈ ಆಲ್‍ಟ್ರೋಜ್ ಕಾರು 60ನಿಮಿಷದಲ್ಲಿ ಚಾರ್ಜ್ ಆಗುವ ಬ್ಯಾಟರಿಯನ್ನು ಹೊಂದಿರಲಿದ್ದು, ಈ ಬ್ಯಾಟರಿಯು ಸುಮಾರು 250-300 ಕಿಲೋಮೀಟರ್‍‍ನ ರೇಂಜ್ ಅನ್ನು ನೀಡುವ ಹಾಗೆ ಅಭಿವೃದ್ಧಿ ಮಾಡಲಾಗುತ್ತಿದೆ. ಈ ಕಾರು 3988ಎಂಎಂ ಉದ್ದ, 1754ಎಂಎಂ ಅಗಲ, 1505ಎಂಎಂ ಎತ್ತರ ಮತ್ತು 2501ಎಂಎಂನ ವ್ಹೀಲ್‍ಬೇಸ್ ಅನ್ನು ಹೊಂದಿರಲಿದೆ. ಈ ಕಾರು ಎಕ್ಸ್ ಶೋರುಂ ಪ್ರಕಾರ ರೂ. 10 ಲಕ್ಷದ ಬೆಲೆಯನ್ನು ಪಡೆಯಲಿದೆ.

ದೇಶಿಯ ಮಾರುಕಟ್ಟೆಯಲ್ಲಿ ಶೀಘ್ರವೇ ಬಿಡುಗಡೆಯಾಗಲಿರುವ ಟಾಪ್ 5 ಎಲೆಕ್ಟ್ರಿಕ್ ಕಾರುಗಳಿವು

ಮಾರುತಿ ಸುಜುಕಿ ವ್ಯಾಗನ್ ಆರ್ ಇವಿ

ಪ್ರತೋ ತಿಂಗಳು ತಮ್ಮ ಪ್ಯಾಸೆಂಜರ್ ವಾಹನಗಳಿಂದ ಟಾಪ್ 10 ಕಾರು ಮಾರಾಟದ ಪಟ್ಟಿಯಲ್ಲಿ ಮುನ್ನುಗ್ಗುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಜನಪ್ರಿಯ ವ್ಯಾಗನ್ ಆರ್ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು ಬಿಡುಗಡೆ ಮಾಡಲಿದ್ದು, ಈಗಾಗಲೇ ಹಲವಾರು ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದೆ. ಈ ಕಾರಿನಲ್ಲಿ ನೀಡಲಾದ ಬ್ಯಾಟರಿಯ ಬಗ್ಗೆ ಇನ್ನು ಸ್ಪಷ್ಠವಾದ ಮಾಹಿತಿ ಲಭ್ಯವಾಗಿಲ್ಲವಾದರೂ, ಒಂದು ಬಾರಿಯ ಚಾರ್ಜ್‍ಗೆ ಸುಮಾರು 150 ರಿಂದ 200 ಕಿಲೋಮೀಟರ್ ರೇಂಜ್ ನೀಡುವ ಸಮರ್ಥಯವನ್ನು ಪಡೆದುಕೊಂಡಿರಲಿದೆ. ಹಾಗೆಯೆ ಸುಮಾರು 10 ಲಕ್ಷದ ಬೆಲೆಯನ್ನು ಈ ಕಾರು ಪಡೆಯಲಿದೆ ಎಂಬ ಮಾಹಿತಿಯು ಲಭ್ಯವಾಗಿದೆ.

Most Read Articles

Kannada
English summary
Top 5 Upcoming Electric Cars India. Read In Kannada
Story first published: Saturday, July 6, 2019, 12:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X