7 ಸಾವಿರ ಕೋಟಿ ವೆಚ್ಚದಲ್ಲಿ ತಲೆಎತ್ತಿದ ಕಿಯಾ ಮೋಟಾರ್ಸ್ ಮೊದಲ ಕಾರು ಉತ್ಪಾದನಾ ಘಟಕ
ದಕ್ಷಿಣ ಕೊರಿಯಾ ಮೂಲದ ಕಿಯಾ ಮೋಟಾರ್ಸ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಭಾರತೀಯ ಆಟೋ ಉದ್ಯಮದಲ್ಲಿ ಬಹುದೊಡ್ಡ ಬದಲಾವಣೆ ತರಲಿರುವ ಬಹುನೀರಿಕ್ಷಿತ ಕಾರು ಉತ್ಪಾದನಾ ಸಂಸ್ಥೆ ಅಂದ್ರೆ ತಪ್ಪಾಗುದಿಲ್ಲ. ಈಗಾಗಲೇ ಭಾರತದಲ್ಲಿ ಮೊದಲ ಹಂತವಾಗಿ ಬಿಡುಗಡೆಯಾಗುವ ತನ್ನ ಹೊಸ ಕಾರು ಉತ್ಪನ್ನಗಳ ಬಗ್ಗೆ ಮಾಹಿತಿ ಹೊರಹಾಕಿರುವ ಕಿಯಾ ಸಂಸ್ಥೆಯು ಸದ್ಯದಲ್ಲೇ ಮಾರುಕಟ್ಟೆಗೆ ಪ್ರವೇಶಿಸುವ ತವಕದಲ್ಲಿದೆ.

ಜಗತ್ತಿನ 8ನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಭಾರತದಲ್ಲಿ ಇದೇ ಮೊದಲ ಬಾರಿಗೆ ತನ್ನ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿನ ಬೇಡಿಕೆ ಅನುಗುಣವಾಗಿ ಹತ್ತುಕ್ಕೂ ಹೆಚ್ಚು ಕಾರು ಮಾದರಿಗಳನ್ನು ಅಭಿವೃದ್ದಿ ಮಾಡಿ ಮಾರಾಟಗೊಳಿಸುವ ಯೋಜನೆಯಲ್ಲಿದೆ.

ಕಿಯಾ ಮೋಟಾರ್ಸ್ ಸಂಸ್ಥೆಯು ಸದ್ಯಕ್ಕೆ ಭಾರತದಲ್ಲಿ ಮೊದಲ ಕಾರು ಉತ್ಪಾದನಾ ಘಟಕವನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಪೆನುಕೊಂಡದ ಬಳಿ ನಿರ್ಮಾಣ ಮಾಡಿದ್ದು, ಬರೋಬ್ಬರಿ 540 ಎಕರೆ ವಿಸ್ತಿರಣದಲ್ಲಿ ವಿಶ್ವದರ್ಜೆ ಸೌಲಭ್ಯಗಳೊಂದಿಗೆ ಈ ಘಟಕವನ್ನು ಸಿದ್ದಗೊಳಿಸಲಾಗಿದೆ.

ಬಿಡಿಭಾಗಗಳು, ಎಂಜಿನ್ ಅಭಿವೃದ್ಧಿ, ಸಂಶೋಧನೆ ಸೇರಿದಂತೆ ವಿವಿಧ ತಾಂತ್ರಿಕ ಅಂಶಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ವಿಭಾಗಗಳನ್ನು ಹೊಂದಿರುವ ಕಿಯಾ ಇಂಡಿಯಾ ಸಂಸ್ಥೆಯು ಇದಕ್ಕಾಗಿ ಈಗಾಗಲೇ 7 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದೆ.

ಶೇ.90 ರಷ್ಟು ಕಾರು ಉತ್ಪಾದನಾ ಘಟಕ ನಿರ್ಮಾಣದ ಕಾರ್ಯಗಳು ಈಗಾಗಲೇ ಪೂರ್ಣಗೊಂಡಿದ್ದು, ಜನವರಿ ವೇಳೆಗೆ ಶೇ.100 ರಷ್ಟು ಇತರೆ ಕಾರ್ಯಗಳು ಪೂರ್ಣಗೊಳ್ಳಲಿವೆಯೆಂತೆ. ಈ ಬಗ್ಗೆ ಘಟಕದ ವಿಕ್ಷಣೆಗಾಗಿ ತೆರಳಿದ್ದ ಡ್ರೈವ್‌ಸ್ಪಾರ್ಕ್ ತಂಡದೊಂದಿಗೆ ಮಾತನಾಡಿದ ಕಿಯಾ ಇಂಡಿಯಾ ಅಧಿಕಾರಿಗಳು, ಅಗಸ್ಟ್ ವೇಳೆಗೆ ಭಾರತದಲ್ಲಿ ಕಿಯಾ ಅಸಲಿ ಆಟ ಶುರುವಾಗಲಿದೆ ಎಂದಿದ್ದಾರೆ.

ಜೊತೆಗೆ ಕಿಯಾ ಮೋಟಾರ್ಸ್ ಸಂಸ್ಥೆಯು ಹೊಸ ಕಾರು ಉತ್ಪಾದನಾ ಘಟಕದಲ್ಲಿ ಶೇ. 90ರಷ್ಟು ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ನೀಡುವ ಭರವಸೆ ನೀಡಿದ್ದು, ಈಗಾಗಲೇ 10 ಸಾವಿರ ಉದ್ಯೋಗಿಗಳನ್ನು ನೇಮಕಗೊಳಿಸಿ ಉದ್ಯೋಗ ಕೌಶಲ್ಯ ಅಭಿವೃದ್ದಿ ಕಾರ್ಯಗಾರವನ್ನು ಸಹ ಕೈಗೊಂಡಿದೆ.

ಸದ್ಯ ಕಿಯಾ ಸಂಸ್ಥೆಯು ನಿರ್ಮಾಣಗೊಳಿಸಿರುವ ಕಾರು ಉತ್ಪಾದನಾ ಘಟಕದಲ್ಲಿ ವರ್ಷಕ್ಕೆ ಮೂರು ಲಕ್ಷ ಕಾರುಗಳನ್ನು ಅಭಿವೃದ್ಧಿಗೊಳಿಸಬಹುದಾದಷ್ಟು ಸಾಮರ್ಥ್ಯವನ್ನು ಹೊಂದಿದ್ದು, ಮೂರು ಹಂತದ ಪಾಳೆಯಲ್ಲಿ ಕಾರು ಉತ್ಪಾದನಾ ಕಾರ್ಯ ನಡಲಿಯಲಿದೆ.

ಇನ್ನು ಯುರೋಪ್ ಮತ್ತು ಅಮೆರಿಕ ಮಾರುಕಟ್ಟೆಗಳಲ್ಲಿ ಈಗಾಗಲೇ ಭಾರೀ ಜನಪ್ರಿಯತೆ ಸಾಧಿಸಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಇದೇ ಮೊದಲ ಬಾರಿಗೆ ಭಾರತದಲ್ಲಿ ತನ್ನ ವಾಣಿಜ್ಯ ಚಟುವಟಿಕೆಗೆ ಚಾಲನೆ ನೀಡಿದ್ದು, ಕೈಗೆಟುಕುವ ಬೆಲೆಗಳಲ್ಲಿ ಹಲವು ಜನಪ್ರಿಯ ಕಾರುಗಳನ್ನು ಪರಿಚಯಿಸುವ ಸುಳಿವು ನೀಡಿದೆ.

ಕಿಯಾ ಮೋಟಾರ್ಸ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಎಸ್‌ಯುವಿ, ಸೆಡಾನ್ ಮತ್ತು ಐಷಾರಾಮಿ ಕಾರುಗಳನ್ನು ಸಿದ್ದಗೊಳಿಸಿದ್ದು, ಇನೋವಾ ಕ್ರಿಸ್ಟಾ ಕಾರುಗಳ ಪ್ರತಿಸ್ಪರ್ಧಿಯಾಗಿರುವ ಗ್ರ್ಯಾಂಡ್ ಕಾರ್ನಿವಾಲ್ ಕಾರಿನ ಭಾರೀ ನೀರಿಕ್ಷೆ ಇಟ್ಟುಕೊಳ್ಳಲಾಗಿದೆ.

2019ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ತನ್ನ ಮೊದಲ ಎಸ್‌ಪಿ ಕಾನ್ಸೆಪ್ಟ್ ಕಾರನ್ನು ಬಿಡುಗಡೆ ಮಾಡಲಿರುವ ಕಿಯಾ ಸಂಸ್ಥೆಯು ತದನಂತರ ಸೊರೆಂಟೊ, ಸ್ಟೊನಿಕ್ ಕ್ರಾಸ್ ಓವರ್ ಎಸ್‌ಯುವಿ ಮತ್ತು ಗ್ರ್ಯಾಂಡ್ ಕಾರ್ನಿವಾಲ್ ಕಾರನ್ನು ಬಿಡುಗಡೆ ಮಾಡುವ ಯೋಜನೆ ರೂಪಿಸಿದೆ.
MOST READ: ಭಾರತದಲ್ಲಿ ಓಮ್ನಿ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ ಮಾರುತಿ..!

ಇದರಲ್ಲಿ ಟೊಯೊಟಾ ಇನೋವಾ ಕ್ರಿಸ್ಟಾಗೆ ಪೈಪೋಟಿ ನೀಡುವ ಉದ್ದೇಶದಿಂದ ಗ್ರ್ಯಾಂಡ್ ಕಾರ್ನಿವಾಲ್ ಅಭಿವೃದ್ಧಿ ಮಾಡಲಾಗುತ್ತಿದ್ದು, ಇದು 7 ಸೀಟರ್, 9 ಸೀಟರ್ ಮತ್ತು 11 ಸೀಟರ್ ವೈಶಿಷ್ಟ್ಯತೆಯನ್ನು ಹೊಂದಿಯಂತೆ. ಹೀಗಾಗಿ ಈ ಕಾರು ಟೂರಿಸ್ಟ್ ಬಳಕೆಯ ವಾಹನ ವಿಭಾಗದಲ್ಲಿ ಹೊಸ ಸಂಚಲನ ಸೃಷ್ಠಿಸುವ ಸಾಧ್ಯತೆಯಿದೆ.

ಸದ್ಯ ಇದೇ ಮಾದರಿಯ ಕಾರು ಉತ್ತರ ಅಮೆರಿಕದ ಪ್ರಮುಖ ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿದ್ದು, ಸೆಡೊನಾ ಹೆಸರಿನಲ್ಲಿ ಜನಪ್ರಿಯತೆ ಪಡೆದಿದೆ. ಐದು ಬಾಗಿಲು ವಿನ್ಯಾಸವನ್ನು ಹೊಂದಿರುವ ಈ ಕಾರು ಪವರ್ ಸ್ಲಿಡಿಂಗ್ ಡೋರ್ ಸಿಸ್ಟಂ ಪಡೆದುಕೊಂಡಿದೆ.
MOST READ: ದೀಪಾವಳಿ ಹಬ್ಬಕ್ಕಾಗಿ ಉದ್ಯೋಗಿಗಳಿಗೆ 1600 ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ..!

ಕೇವಲ ಬಟನ್ ಪುಶ್ ಮಾಡುವ ಮೂಲಕ ಡೋರ್ ಎಳೆದುಕೊಳ್ಳಬಹುದಾದ ವ್ಯವಸ್ಥೆಯಿದ್ದು, ಇದರ ಜೊತೆಗೆ ಡ್ಯುಯಲ್ ಸನ್‌ರೂಫ್, ತ್ರಿ ಜೋನ್ ಏರ್ ಕಂಡಿಷನ್ ಸಿಸ್ಟಂ ಸೇರಿದಂತೆ ಹಲವು ವಿಶ್ವದರ್ಜೆ ಸೌಲಭ್ಯವನ್ನು ಪಡೆದಿರುವುದು ಐಷಾರಾಮಿ ಎಂಪಿವಿ ಪ್ರಿಯರ ಆಕರ್ಷಣೆಗೆ ಕಾರಣವಾಗಲಿದೆ.

ಎಂಜಿನ್ ಸಾಮರ್ಥ್ಯ
ಸದ್ಯ ಮಾರುಕಟ್ಟೆಯಲ್ಲಿರುವ ಗ್ರ್ಯಾಂಡ್ ಕಾರ್ನಿವಾಲ್ ಕಾರುಗಳು 2.2 -ಲೀಟರ್ ಡಿಸೇಲ್ ಎಂಜಿನ್‌ನೊಂದಿಗೆ ಮಾರಾಟವಾಗುತ್ತಿದ್ದು, 6-ಸ್ಪೀಡ್ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ವಿನ್ಯಾಸ ಹೊಂದಿವೆ. ಹಾಗೆಯೇ ಕ್ರಾಸ್ಓವರ್ ಸ್ಟೊನಿಕ್ ಕಾರುಗಳು 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.6-ಲೀಟರ್ ಡಿಸೇಲ್ ಎಂಜಿನ್ ಪಡೆದುಕೊಂಡಿವೆ.
MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಕಿಯಾ ನಿರ್ಮಾಣದ ಗ್ರ್ಯಾಂಡ್ ಕಾರ್ನಿವಾಲ್ ಕಾರುಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 7 ಸೀಟರ್, 9 ಸೀಟರ್ ಮತ್ತು 11 ಸೀಟರ್ ಮಾದರಿಗಳನ್ನು ಮಾರಾಟ ಮಾಡುತ್ತಿರುವ ಕಿಯಾ ಸಂಸ್ಥೆಯು ಭಾರತದಲ್ಲಿ ಯಾವ ಮಾದರಿಯನ್ನು ಬಿಡುಗಡೆ ಮಾಡಲಿದೆ ಎನ್ನುವುದು ಇನ್ನು ಸ್ಪಷ್ಟವಾಗಿಲ್ಲ.

ಒಟ್ಟಿನಲ್ಲಿ ಕಿಯಾ ಬಿಡುಗಡೆ ಮಾಡಲಿರುವ ಗ್ರ್ಯಾಂಡ್ ಕಾರ್ನಿವಾಲ್ ಕಾರುಗಳು ಇನೋವಾ ಕ್ರಿಸ್ಟಾ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದ್ದು, ಸ್ಟೊನಿಕ್ ಕಾರಿನ ಬೆಲೆಯು 14 ಲಕ್ಷದಿಂದ 18 ಲಕ್ಷ ಮತ್ತು ಗ್ರ್ಯಾಂಡ್ ಕಾರ್ನಿವಾಲ್ ಕಾರುಗಳ ಬೆಲೆಯು 17 ಲಕ್ಷದಿಂದ 21 ಲಕ್ಷದ ತನಕ ಇರಬಹುದೆಂದು ಅಂದಾಜಿಸಲಾಗಿದೆ.

ಇದರಿಂದ ಕಿಯಾ ಮೋಟಾರ್ಸ್ ಸಂಸ್ಥೆಯು ಮಾರುತಿ ಸುಜುಕಿ, ಹ್ಯುಂಡೈ, ಟೊಯೊಟಾ ಮತ್ತು ಟಾಟಾ ಮೋಟಾರ್ಸ್ ನಿರ್ಮಾಣದ ಕಾರುಗಳಿಗೆ ಭಾರೀ ಪೈಪೋಟಿ ನೀಡುವುದು ಸ್ಪಷ್ಟವಾಗಿದ್ದು, ಗ್ರಾಹಕರನ್ನು ಸೆಳೆಯಲು ಕಿಯಾ ಕೈಗೊಳ್ಳುವ ಮುಂದಿನ ಯೋಜನೆಗಳ ಬಗ್ಗೆ ಮತ್ತಷ್ಟು ಕುತೂಹಲವಿದೆ ಎನ್ನಬಹುದು.


Click it and Unblock the Notifications








